ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr N Someshwara Column: ಎರಡು ಹುಚ್ಚುನಾಯಿಗಳು ಹಾಗೂ ಅವುಗಳ ನಿಯಂತ್ರಣ !

ಒಂದು ಹುಚ್ಚು ನಾಯಿ ಅಟ್ಟಿಸಿಕೊಂಡು ಬಂದಿತು ಎಂದು ಭಾವಿಸೋಣ. ಅದು ಎಲ್ಲಿ ಕಚ್ಚಿ ಬಿಡುತ್ತದೆ ಯೋ ಎಂಬ ಭಯವು ನಮ್ಮನ್ನು ಕಾಡುತ್ತದೆ. ಈಗ ನಮ್ಮ ಮುಂದೆ ಇರುವುದು ಎರಡೇ ದಾರಿ. ಒಂದು ಕೆಳಗೆ ಬಿದ್ದಿರುವ ಕಲ್ಲನ್ನು ಕೈಗೆ ತೆಗೆದುಕೊಂಡು, ಧೈರ್ಯವಾಗಿ ನಾಯಿಯನ್ನು ಎದುರಿಸ ಬೇಕು. ಇಲ್ಲವೇ ನಾಯಿಯ ಬಾಯಿಗೆ ಸಿಗದ ಹಾಗೆ ಮಿಂಚಿನ ವೇಗದಲ್ಲಿ ಓಡಿ ಹೋಗಬೇಕು. ನಮ್ಮ ನಿರ್ಧಾರವನ್ನು ಕಾರ್ಯರೂಪಕ್ಕೆ ತರಬೇಕಾದರೆ ನಮ್ಮ ದೇಹದಲ್ಲಿ ಅಗತ್ಯ ಸಿದ್ಧತೆ ಗಳು ನಡೆಯಬೇಕಾಗುತ್ತದೆ.

ಹಿಂದಿರುಗಿ ನೋಡಿದಾಗ

ಅಡ್ರಿನಲಿನ್ ಹಾರ್ಮೋನ್ ನಮ್ಮ ದೇಹವನ್ನು ಓಡು-ಹೋರಾಡು ಸ್ಥಿತಿಗೆ ಸಿದ್ಧಪಡಿಸುತ್ತದೆ. ಹುಚ್ಚು ನಾಯಿಯ ಜೊತೆ ಹೋರಾಡಲು ಇಲ್ಲವೇ ಓಡಿ ಪಾರಾಗಲು ಇಡೀ ದೇಹವನ್ನು ಸಿದ್ಧಗೊಳಿಸಲು ಅಪಾರ ಒತ್ತಡದಲ್ಲಿರುತ್ತದೆ. ಅದರ ಪರಿಣಾಮ ಏನು ಗೊತ್ತೆ?

ಒಂದು ಹುಚ್ಚು ನಾಯಿ ಅಟ್ಟಿಸಿಕೊಂಡು ಬಂದಿತು ಎಂದು ಭಾವಿಸೋಣ. ಅದು ಎಲ್ಲಿ ಕಚ್ಚಿ ಬಿಡುತ್ತದೆಯೋ ಎಂಬ ಭಯವು ನಮ್ಮನ್ನು ಕಾಡುತ್ತದೆ. ಈಗ ನಮ್ಮ ಮುಂದೆ ಇರುವುದು ಎರಡೇ ದಾರಿ. ಒಂದು ಕೆಳಗೆ ಬಿದ್ದಿರುವ ಕಲ್ಲನ್ನು ಕೈಗೆ ತೆಗೆದುಕೊಂಡು, ಧೈರ್ಯವಾಗಿ ನಾಯಿಯನ್ನು ಎದುರಿಸ ಬೇಕು. ಇಲ್ಲವೇ ನಾಯಿಯ ಬಾಯಿಗೆ ಸಿಗದ ಹಾಗೆ ಮಿಂಚಿನ ವೇಗದಲ್ಲಿ ಓಡಿ ಹೋಗ ಬೇಕು. ನಮ್ಮ ನಿರ್ಧಾರವನ್ನು ಕಾರ್ಯರೂಪಕ್ಕೆ ತರಬೇಕಾದರೆ ನಮ್ಮ ದೇಹದಲ್ಲಿ ಅಗತ್ಯ ಸಿದ್ಧತೆ ಗಳು ನಡೆಯಬೇಕಾಗುತ್ತದೆ.

ನಾಯಿಗೆ ಕಲ್ಲಿನಿಂದ ಹೊಡೆಯಲು ಇಲ್ಲವೇ ಓಡಿ ಹೋಗಲು ಶಕ್ತಿ ಬೇಕಾಗುತ್ತದೆ. ನಮ್ಮ ಯಕೃತ್ತಿ ನಲ್ಲಿ ಗ್ಲೈಕೋಜನ್ ದಾಸ್ತಾನಿದ್ದು, ಅದನ್ನು ಗ್ಲೂಕೋಸ್ ಆಗಿ ಪರಿವರ್ತಿಸಿ ರಕ್ತಪ್ರವಾಹದಲ್ಲಿ ಹರಿಸುತ್ತದೆ. ಗ್ಲೂಕೋಸನ್ನು ಉರಿಸಿ ಶಕ್ತಿಯನ್ನು ಬಿಡುಗಡೆ ಮಾಡಲು ಆಕ್ಸಿಜನ್ ಬೇಕಾಗುತ್ತದೆ. ಅದಕ್ಕಾಗಿ ಉಸಿರಾಟದ ಪ್ರಮಾಣ ಹೆಚ್ಚುತ್ತದೆ. ಗ್ಲೂಕೋಸ್ ಹಾಗೂ ಅಕ್ಸಿಜನ್ ಇರುವ ರಕ್ತವು ದೇಹದಾದ್ಯಂತ ಇರುವ ಎಲ್ಲ ಜೀವ ಕೊಶಗಳಿಗೆ ರವಾನೆಯಾಗಬೇಕು. ಇದಕ್ಕಾಗಿ ರಕ್ತ ದೊತ್ತಡ ಹೆಚ್ಚುತ್ತದೆ. ಹೃದಯವು ರಕ್ತವನ್ನು ಬೇಗ ಬೇಗ ಪಂಪ್ ಮಾಡುತ್ತದೆ. ಜೀರ್ಣಕ್ರಿಯೆಯು ನಿಲ್ಲುತ್ತದೆ.

ಉಂಗುರ ಸ್ನಾಯುಗಳು ಸಡಿಲವಾಗುವ ಕಾರಣ, ಮಲಮೂತ್ರಗಳು ಹೊರಹರಿಯಬಹುದು. ಅಕಸ್ಮಾತ್ ನಾಯಿ ಕಚ್ಚಿದರೆ ವಿಪರೀತ ರಕ್ತಸ್ರಾವವಾಗಬಹುದು. ಅದಕ್ಕಾಗಿ ನಮ್ಮ ರಕ್ತವು ಮಂದವಾಗುತ್ತದೆ. ರಕ್ತಸ್ರಾವ ವಾದರೆ ಬದುಕುವುದು ಕಷ್ಟವಾಗಬಹುದು.

ಸಂಗಾತಿ-ಬಾಸ್: ನಮ್ಮ ನಗರಗಳಲ್ಲಿ ನಿಜವಾದ ಎರಡು ಹುಚ್ಚು ನಾಯಿಗಳಿವೆ. ಒಂದು ಸಂಗಾತಿ ಎಂಬ ಹುಚ್ಚು ನಾಯಿ ಹಾಗೂ ಎರಡನೆಯದು ನಮ್ಮ ಬಾಸ್ ಎಂಬ ಹುಚ್ಚು ನಾಯಿ! ಇವೆರಡು ದಿನಕ್ಕೆ ನಾಲ್ಕಾರು ಸಲವಾದರೂ ನಮ್ಮನ್ನು ಹೆದರಿಸುತ್ತವೆ. ಹಾಗಾಗಿ ರಕ್ತದಲ್ಲಿ ಏರಿದ ಗ್ಲೂಕೋಸ್ ಏರುಮಟ್ಟದ ಉಳಿಯುತ್ತದೆ. ಏರಿದ ರಕ್ತದೊತ್ತಡಕ್ಕೆ ಇಳಿಯಲು ಅವಕಾಶವೇ ದೊರೆಯುವುದಿಲ್ಲ. ಏದುಸಿರು ತಹಬಂದಿಗೆ ಬರುವುದೇ ಇಲ್ಲ. ರಕ್ತ ಮಂದವಾಗುವ ಕಾರಣ, ಏನಾದರೂ ಸಣ್ಣಪುಟ್ಟ ರಕ್ತಗರಣೆಯು (ಕ್ಲಾಟ್) ಮಿದುಳಿನಲ್ಲಿ ಅಡಚಿಕೊಂಡರೆ ಲಕ್ವ, ಹೃದಯದಲ್ಲಿ ಅಡಚಿಕೊಂಡರೆ ಹೃದಯಾಘಾತವಾಗುವ ಸಾಧ್ಯತೆಯನ್ನು ತಳ್ಳಿ ಹಾಕಲು ಕಷ್ಟ.

ಇದನ್ನೂ ಓದಿ: Dr N Someshwara Column: ನಮ್ಮ ನಿಮ್ಮ ಸಂಸ್ಕೃತಿಯು ಕಟ್ಟಿಕೊಡುವ ಕಾಯಿಲೆಗಳು

ಇವೆಲ್ಲಕ್ಕೂ ಪ್ರಮುಖ ಕಾರಣ ಅಡ್ರಿನಲಿನ್ ಎಂಬ ಹಾರ್ಮೋನ್. ನಮ್ಮ ಮೂತ್ರಪಿಂಡಗಳ ಮೇಲೆ ಟೊಪ್ಪಿಗೆಯಾಕಾರದ ಗ್ರಂಥಿಗಳಿವೆ. ಇವೇ ಅಡ್ರಿನಲ್ ಗ್ರಂಥಿಗಳು. ಇವು ಹಲವು ಜೀವರಕ್ಷಕ ಹಾರ್ಮೋನುಗಳನ್ನು ಉತ್ಪಾದಿಸುತ್ತವೆ. ಅವುಗಳಲ್ಲಿ ಅಡ್ರಿನಲಿನ್ ಮತ್ತು ನಾರ್-ಅಡ್ರಿನಲಿನ್ ಮುಖ್ಯವಾದವು.

ಅಡ್ರಿನಲಿನ್ ಹಾರ್ಮೋನ್ ನಮ್ಮ ದೇಹವನ್ನು ಓಡು- ಹೋರಾಡು ಸ್ಥಿತಿಗೆ ಸಿದ್ಧಪಡಿಸುತ್ತದೆ. ಹುಚ್ಚು ನಾಯಿಯ ಜೊತೆ ಹೋರಾಡಲು ಇಲ್ಲವೇ ಓಡಿ ಪಾರಾಗಲು ಇಡೀ ದೇಹವನ್ನು ಸಿದ್ಧಗೊ ಳಿಸಲು ಅಪಾರ ಒತ್ತಡದಲ್ಲಿರುತ್ತದೆ (ಸ್ಟ್ರೆಸ್). ಹುಚ್ಚುನಾಯಿಗಳೆರಡೂ ಪ್ರತಿದಿನ ಕಾಡಲಾರಂಭಿಸಿ ದರೆ, ಒಂದಷ್ಟು ತಿಂಗಳು ಇಲ್ಲವೇ ವರ್ಷಗಳಲ್ಲಿ ಮಧುಮೇಹ, ರಕ್ತ ಏರೊತ್ತಡ, ಆಸಿಡಿಟಿ, ಹೃದಯಾ ಘಾತ ಇಲ್ಲವೇ ಲಕ್ವ, ಟೆನ್ಷನ್ ಹೆಡ್‌ಏಕ್, ಪದೇ ಪದೆ ಮಲಮೂತ್ರ ವಿಸರ್ಜನೆಗೆ ಹೋಗುವ ಅಭ್ಯಾಸವು ಅಧಿಕವಾಗುತ್ತದೆ.

ಅಧಿವೃಕ್ಕ: 1564ರಲ್ಲಿ ಇಟಲಿಯ ಅಂಗರಚನಾಶಾಸ್ತ್ರಜ್ಞ ಬಾರ್ತೊಲೊಮಿಯೊ ಯೂಸ್ಟಾಕಿ (1500-1574) ಮೂತ್ರಪಿಂಡಗಳ ಮೇಲಿರುವ ಸಣ್ಣ ಗ್ರಂಥಿಗಳ ಬಗ್ಗೆ ಮೊದಲ ಬಾರಿಗೆ ವಿವರಿಸಿದರು. ಅವುಗಳಿಗೆ ಸುಪ್ರಾ ರೀನಲ್ ಗ್ಲಾಂಡ್ ಅಥವ ಅಡ್ರಿನಲ್ ಗ್ಲಾಂಡ್ ಎಂಬ ಹೆಸರನ್ನು ನೀಡಿದರು. ಕನ್ನಡದಲ್ಲಿ ಇವನ್ನು ಅಧಿವೃಕ್ಕ ಗ್ರಂಥಿಗಳು ಎನ್ನಬಹುದು. ಆದರೆ ಸುಮಾರು ಮೂರು ಶತಮಾನ ಗಳವರೆಗೆ ಅವುಗಳ ನಿಜವಾದ ಕೆಲಸ ಏನೆಂಬುದು ತಿಳಿದಿರಲಿಲ್ಲ.

ಜಾರ್ಜ್ ಆಲಿವರ್ ಮತ್ತು ಎಡ್ವರ್ಡ್ ಶೇಫರ್: 1894ರ ಲಂಡನ್ ನಗರ. ಜಾರ್ಜ್ ಆಲಿವರ್ (1841-1915) ಎಂಬ ವೈದ್ಯರು ಮತ್ತು ಎಡ್ವರ್ಡ್ ಶೇಫರ್ (1850-1935) ಎಂಬ ಅಂಗಕ್ರಿಯಾ ಶಾಸ್ತ್ರಜ್ಞರು ಸೇರಿ ಒಂದು ಕುತೂಹಲಕಾರಿ ಪ್ರಯೋಗ ಮಾಡಿದರು. ಆಲಿವರ್ ಅವರು ಪ್ರಾಣಿಗಳ ಅಧಿವೃಕ್ಕ ಗ್ರಂಥಿಯ ಸಾರವನ್ನು ತಮ್ಮ ಮನೆಯ ತಯಾರಿಸಿದರು. ಅದನ್ನು ತಮ್ಮ ಸ್ವಂತ ಮಗನಿಗೆ ಕುಡಿಸಿ, ರಕ್ತನಾಳಗಳ ಮೇಲೆ ಉಂಟಾ ಗುವ ಪರಿಣಾಮವನ್ನು ಪರೀಕ್ಷಿಸುತ್ತಿದ್ದರು!

ನಂತರ ಅವರು ಪ್ರೊಫೆಸರ್ ಶೇಫರ್ ಅವರ ಪ್ರಯೋಗಾಲಯಕ್ಕೆ ತೆರಳಿ, ಈ ಗ್ರಂಥಿಯ ಸಾರವನ್ನು ಪ್ರಾಣಿಗಳ ರಕ್ತಕ್ಕೆ ಚುಚ್ಚಿದರು. ಅಚ್ಚರಿಯೆಂದರೆ, ಈ ಸಾರವನ್ನು ಚುಚ್ಚಿದ ತಕ್ಷಣ ಪ್ರಾಣಿಗಳ ರಕ್ತನಾಳಗಳು ತೀವ್ರವಾಗಿ ಸಂಕುಚಿತಗೊಂಡವು ಮತ್ತು ರಕ್ತದೊತ್ತಡ ಗಗನಕ್ಕೇರಿತು. ಈ ಪ್ರಯೋಗ ದಿಂದ ಅಧಿವೃಕ್ಕ ಗ್ರಂಥಿಗಳಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುವ ಮತ್ತು ಹೃದಯ ಬಡಿತವನ್ನು ನಿಯಂತ್ರಿಸುವ ಕೆಲವು ಶಕ್ತಿಶಾಲಿ ರಾಸಾಯನಿಕಗಳಿವೆ ಎಂಬ ಪ್ರಮುಖ ಸುಳಿವು ದೊರೆಯಿತು.

ಇದನ್ನು 1894ರಲ್ಲಿ ಆಲಿವರ್ ಮತ್ತು ಶಾಫರ್ ತಮ್ಮ ಫಲಿತಾಂಶಗಳನ್ನು ವರದಿ ಮಾಡಿದರು. ರಕ್ತನಾಳಗಳ ಸಂಕುಚನ ಮತ್ತು ತೀವ್ರ ರಕ್ತದೊತ್ತಡ ಏರಿಕೆಗೆ ಕಾರಣವಾಗಿರುವ ಸಕ್ರಿಯ ವಸ್ತು ಗ್ರಂಥಿಯ ಹೊರಪದರ ವಾದ ತೊಗಟೆಯಲ್ಲಿ (ಕಾರ್ಟೆಕ್ಸ್) ಇಲ್ಲ; ಅದು ಗ್ರಂಥಿಯ ಮಧ್ಯಭಾಗವಾದ ತಿರುಳಿನಲ್ಲಿ (ಮೆಡು) ಇದೆ ಎನ್ನುವುದನ್ನು ತೋರಿದರು. ಇದು ಇಡೀ ವೈಜ್ಞಾನಿಕ ಲೋಕದ ಗಮನ ಸೆಳೆಯಿತು. ಆದರೆ ರಕ್ತದೊತ್ತಡ ಏರಿಕೆಗೆ ಕಾರಣವಾದ ಪಟು ರಾಸಾಯನಿಕವು ಯಾವುದು ಎನ್ನುವ ಕುತೂಹಲವು ಬೆಳೆಯಿತು.

ಎಪಿನೆಫ್ರಿನ್: ಅಮೆರಿಕದ ಔಷಧಶಾಸ್ತ್ರಜ್ಞ ಜಾನ್ ಜೇಕಬ್ ಏಬಲ್ (1857-1938) ಅಧಿವೃಕ್ಕ ಗ್ರಂಥಿ ಯಿಂದ ಒಂದು ಪದಾರ್ಥವನ್ನು ಬೇರ್ಪಡಿಸಿ ಅದಕ್ಕೆ ಎಪಿನೆಫ್ರಿನ್ ಎಂದು ಹೆಸರಿಟ್ಟನು. ‘ಎಪಿ’ ಎಂದರೆ ಮೇಲೆ ಮತ್ತು ‘ನೆಫ್ರೋಸ್’ ಎಂದರೆ ಮೂತ್ರಪಿಂಡ. ಅಂದರೆ, ‘ಮೂತ್ರಪಿಂಡದ ಮೇಲಿರುವ ಗ್ರಂಥಿಯಿಂದ ಬಂದ ವಸ್ತು’ ಎಂಬ ಅರ್ಥದ ಎಪಿನೆಫ್ರಿನ್ ಎಂದು ನಾಮಕರಣವನ್ನು ಮಾಡಿದನು. ಆದರೆ ಏಬಲ್ ಪಡೆದ ಪದಾರ್ಥ ಸಂಪೂರ್ಣ ಶುದ್ಧವಾಗಿರಲಿಲ್ಲ.

ಜೋಕಿಚಿ ಟಕಾಮೈನ್ (1901): ಆಲಿವರ್ ಮತ್ತು ಶೇಫರ್ ಅವರು ಸಾರವನ್ನು ಕಂಡುಹಿಡಿದರೂ, ಅದ ರಲ್ಲಿ ನೂರಾರು ಕಲ್ಮಶಗಳಿದ್ದವು. ಆ ಸಾರವನ್ನು ಸಂಪೂರ್ಣವಾಗಿ ಶುದ್ಧೀಕರಿಸಿ, ಅದರ ಅಡಿಯಲ್ಲಿರುವ ನಿಜವಾದ ರಾಸಾಯನಿಕವನ್ನು ಹೊರತೆಗೆಯುವ ಸಾಹಸ ಮಾಡಿದವರು ಜಪಾನೀಸ್-ಅಮೆರಿಕನ್ ರಸಾಯನಶಾಸ್ತ್ರಜ್ಞ ಜೋಕಿಚಿ ಟಕಾಮೈನ್ (1854-1922).

1901ರಲ್ಲಿ, ಟಕಾಮೈನ್ ಅವರು ಪ್ರಾಣಿಗಳ (ವಿಶೇಷವಾಗಿ ಕುರಿ ಮತ್ತು ದನಗಳ) ಅಧಿವೃಕ್ಕ ಗ್ರಂಥಿಗಳಿಂದ ಒಂದು ರಾಸಾಯನಿಕವನ್ನು ಶುದ್ಧ ಸ್ಫಟಿಕದ ರೂಪದಲ್ಲಿ ಯಶಸ್ವಿಯಾಗಿ ಬೇರ್ಪಡಿಸಿದರು. ಇದು ವಿಜ್ಞಾನದ ಇತಿಹಾಸದಲ್ಲಿಯೇ ಒಂದು ಹಾರ್ಮೋನನ್ನು ಅದರ ಶುದ್ಧ ರೂಪದಲ್ಲಿ ಬೇರ್ಪಡಿಸಿದ ಮೊದಲ ನಿದರ್ಶನವಾಗಿದೆ!

ಟಕಾಮೈನ್ ಅವರು ಇದಕ್ಕೆ ಅಡ್ರಿನಲಿನ್ ಎಂಬ ಹೆಸರನ್ನು ನೀಡಿದರು (ಲ್ಯಾಟಿನ್ ಭಾಷೆಯಲ್ಲಿ ‘ಅಡ್’ ಅಂದರೆ ಹತ್ತಿರ ಮತ್ತು ‘ರೆನೆಸ್’ ಅಂದರೆ ಮೂತ್ರಪಿಂಡ ಎಂದರ್ಥ). ಏಬಲ್ ಮತ್ತು ಟಕಾಮಿನೆಯ ನಡುವೆ ಸಂಶೋಧನೆಗಳ ಆದ್ಯತೆ, ಶುದ್ಧತೆ ಮತ್ತು ಹೆಸರಿನ ವಿಚಾರಗಳು ಮುಂದೆ ವೈಜ್ಞಾನಿಕ ಚರ್ಚೆಗೆ ಕಾರಣವಾದವು. ಟಕಾಮಿನೆ ತಮ್ಮ ಸಂಶೋಧನೆಗೆ ಪೇಟೆಂಟ್ ಪಡೆದರು. ಅಡ್ರಿನಲಿನ್ ಔಷಧವನ್ನು ಯಾವ ಯಾವ ಅನಾರೋಗ್ಯಗಳಲ್ಲಿ ಬಳಸಬಹುದು ಎನ್ನುವ ಬಗ್ಗೆ ಔಷಧ ಕಂಪನಿ ಪಾರ್ಕ್-ಡೇವಿಸ್ ಸಂಸ್ಥೆಯು ವೈದ್ಯರಿಗೆ ಮಾರ್ಗದರ್ಶನವನ್ನು ನೀಡಿತು.

ನೈಸರ್ಗಿಕವಾಗಿ ದೇಹದಲ್ಲಿರುವ ವಸ್ತುವಿಗೆ ಪೇಟೆಂಟ್ ನೀಡಬಹುದೇ ಎಂಬ ಪ್ರಶ್ನೆಯೂ ಆಗ ಎದ್ದಿತು. ಟಕಾಮಿನೆಗೆ ನೈಸರ್ಗಿಕ ಹಾರ್ಮೋನ್‌ನನ್ನು ಕಂಡು ಹಿಡಿದದ್ದಕ್ಕೆ ಪೇಟೆಂಟ್ ದೊರೆಯ ಲಿಲ್ಲ. ಆದರೆ ಅದನ್ನು ಶುದ್ಧೀಕರಿಸುವ ಮತ್ತು ಸ್ಫಟಿಕೀಕರಿಸುವ ವಿಧಾನಗಳಿಗೆ ಪೇಟೆಂಟ್ ದೊರೆಯಿತು.

ಅಡ್ರೆನಲಿನ್-ಎಪಿನೆಫ್ರಿನ್: ಅಮೆರಿಕದವರು ಏಬಲ್ ನೀಡಿದ ಎಪಿನೆಫ್ರಿನ್ ಎಂಬ ಹೆಸರನ್ನು ಬಳಸಲಾರಂಭಿಸಿದರು. ಆದರೆ ಭಾರತವನ್ನೂ ಒಳಗೊಂಡಂತೆ ಎಲ್ಲ ಯೂರೋಪಿಯನ್ ದೇಶಗಳಲ್ಲಿ ಅಡ್ರಿನಲಿನ್ ಎಂಬ ಹೆಸರೇ ಜನಪ್ರಿಯವಾಗಿದೆ. ಇವತ್ತಿಗೂ ಒಂದೇ ಔಷಧಕ್ಕೆ ಬೇರೆ ಬೇರೆ ಹೆಸರುಗಳನ್ನು ನೀಡಿರುವ ಒಂದು ಅಪರೂಪದ ಉದಾಹರಣೆಯಾಗಿದೆ. 1904ರಲ್ಲಿ ಜರ್ಮನ್ ರಸಾಯನಶಾಸ್ತ್ರಜ್ಞ ಫ್ರಿಡ್ರಿಕ್ ಸ್ಟೋಲ್ಸ್ (1860-1936) ಮತ್ತು ಬ್ರಿಟಿಷ್ ರಸಾಯನಶಾಸ್ತ್ರಜ್ಞ ಹೆನ್ರಿ ಡ್ರೈಸ್ಡೇಲ್ ಡಾಕಿನ್ (1880-1952) ಸ್ವತಂತ್ರವಾಗಿ ಪ್ರಯೋಗಾಲಯದಲ್ಲಿ ಈ ವಸ್ತುವಿನ ಸಂಶ್ಲೇಷಣೆ ಯನ್ನು (ಸಿಂಥೆಸಿಸ್) ವಿಧಿವಿಧಾನಗಳನ್ನು ರೂಪಿಸಿದರು. ಅಡ್ರೆನಲಿನ್ ಶುದ್ಧೀಕರಣ ಮತ್ತು ಸಂಶ್ಲೇಷಣೆ ಜೀವಶಾಸ್ತ್ರ, ರಸಾಯನಶಾಸ್ತ್ರ ಮತ್ತು ಔಷಧಶಾಸ್ತ್ರವನ್ನು ಒಂದೇ ವೇದಿಕೆಯಲ್ಲಿ ಸೇರಿಸಿದ ಮಹತ್ವದ ಘಟನೆಗಳಾದವು.

ವಾಲ್ಟರ್ ಬ್ರಾಡ್ ಫರ್ಡ್ ಕ್ಯಾನನ್: ಅಡ್ರಿನಾಲಿನ್ ಕೇವಲ ರಕ್ತದೊತ್ತಡವನ್ನು ಹೆಚ್ಚಿಸುವ ರಾಸಾಯನಿಕ ಮಾತ್ರವಲ್ಲ, ಅದು ನಮ್ಮ ಭಾವನೆಗಳಿಗೂ ದೇಹದ ಪ್ರತಿಕ್ರಿಯೆಗೂ ಮಧ್ಯೆ ಇರುವ ಸೇತುವೆ ಎಂದು ನಿರೂಪಿಸಿದವರು ಹಾರ್ವರ್ಡ್ ವಿಶ್ವವಿದ್ಯಾಲಯದ ಶರೀರಶಾಸ್ತ್ರಜ್ಞ ವಾಲ್ಟರ್ ಬ್ರಾಡ್-ರ್ಡ್ ಕೆನಾನ್ (1871-1945). ಹಾರ್ವರ್ಡ್ ವೈದ್ಯಕೀಯ ಶಾಲೆಯ ಶರೀರಕ್ರಿಯಾ ಶಾಸ್ತ್ರಜ್ಞ ನಾಗಿದ್ದ ಕೆನಾನ್ ಪ್ರಾಣಿಗಳಲ್ಲಿ ಭಯ, ಕೋಪ ಮತ್ತು ಒತ್ತಡದ ಸಂದರ್ಭಗಳಲ್ಲಿ ಉಂಟಾಗುವ ದೈಹಿಕ ಬದಲಾವಣೆಗಳನ್ನು ಅಧ್ಯಯನ ಮಾಡಿದರು. ಅವರು ಅಡ್ರಿನಲಿನ್ ಹಾರ್ಮೋನ್ ದೇಹದ ಮೇಲೆ ಯಾವ ಯಾವ ಪ್ರಭಾವವನ್ನು ಬೀರಬಲ್ಲುದು ಎಂಬ ವಿಚಾರಕ್ಕೆ ಸಂಬಂಧಿಸಿದ ಪ್ರಯೋಗಗಳಲ್ಲಿ ಬೆಕ್ಕುಗಳು ಮತ್ತು ಇತರ ಪ್ರಾಣಿಗಳ ಮೇಲೆ ನಡೆಸಿದರು.

ಕೊನೆಗೆ 1915ರಲ್ಲಿ ಪ್ರಕಟವಾದ ‘ಬಾಡಿಲಿ ಚೇಂಜಸ್ ಇನ್ ಹಂಗರ್, ಪೇಯ್ನ್, ಫಿಯರ್ ಆಂಡ್ ರೇಜ್’ ಎಂಬ ಕೃತಿಯನ್ನು ಬರೆದರು. ಇವನ ಅಧ್ಯಯನವು ಮುಂದೆ ಓಡು ಇಲ್ಲವೇ ಹೋರಾಡು (ಫೈಟ್ ಆರ್ ಫ್ಲೈಟ್ ಪ್ರತಿಕ್ರಿಯೆ) ಎಂಬ ವೈದ್ಯಕೀಯ ನುಡಿಗಟ್ಟು ರೂಪುಗೊಳ್ಳಲು ಕಾರಣ ವಾಯಿತು.

ಹುಚ್ಚುನಾಯಿ: ಅಪಾಯ ಎದುರಾದಾಗ ಅಡ್ರಿನಲಿನ್ ಬಿಡುಗಡೆಯಾಗುತ್ತದೆ. ಅದು ಹೃದಯ ಬಡಿತ ವನ್ನು ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ಅಧಿಕಗೊಳಿಸುತ್ತದೆ. ಶ್ವಾಸನಾಳಗಳನ್ನು ವಿಸ್ತರಿಸು ತ್ತದೆ. ಯಕೃತ್ತಿನಿಂದ ಗ್ಲೂಕೋಸನ್ನು ಬಿಡುಗಡೆ ಮಾಡುತ್ತದೆ. ಸ್ನಾಯುಗಳಿಗೆ ಅಧಿಕ ರಕ್ತವನ್ನು ಪೂರೈಸುತ್ತದೆ. ಚರ್ಮ ಮತ್ತು ಜೀರ್ಣಾಂಗಗಳ ಸಹಜ ರಕ್ತಪ್ರವಾಹವನ್ನು ಕಡಿತಗೊಳಿಸುತ್ತದೆ.

ಕಣ್ಣಿನ ಪಾಪೆಯನ್ನು ವಿಸ್ತರಿಸಿ ಹುಚ್ಚು ನಾಯಿಯ ಪ್ರತಿಯೊಂದು ಚಲನವಲನವನ್ನು ದಾಖಲಿಸಿ, ಓಡಬೇಕೆ ಇಲ್ಲವೇ ಪಲಾಯನ ಮಾಡಬೇಕೆ ಎನ್ನುವ ತೀರ್ಮಾನವನ್ನು ತೆಗೆದುಕೊಳ್ಳಲು ಕಾರಣ ವಾಗುತ್ತದೆ. ಈ ಎಲ್ಲ ಬದಲಾವಣೆಗಳು ದೇಹಕ್ಕೆ ತಕ್ಷಣ ಹೋರಾಡಲು ಅಥವಾ ಅಪಾಯದಿಂದ ತಪ್ಪಿಸಿಕೊಳ್ಳಲು ಬೇಕಾದ ಶಕ್ತಿ ಒದಗಿಸುತ್ತವೆ.

‘ಅಡ್ರಿನಲಿನ್ ರಷ್’: ಅಡ್ರಿನಲಿನ್ ಪ್ರಯೋಗಾಲಯದಿಂದ ಹೊರಬಂದು ಜನಸಂಸ್ಕೃತಿಯ ಪದವೂ ಆಯಿತು. ವೇಗದ ವಾಹನಚಾಲನೆ, ಪರ್ವತಾರೋಹಣ, ಸಾಹಸಕ್ರೀಡೆ, ರೋಲರ್ ಕೋಸ್ಟರ್, ವೇದಿಕೆಯ ಮೇಲಿನ ಭಾಷಣ ಮತ್ತು ಪಂದ್ಯಗಳ ಅಂತಿಮ ಕ್ಷಣಗಳನ್ನು ಜನರು ‘ಅಡ್ರಿನಲಿನ್ ರಷ್’ ಎಂದು ಕರೆಯುತ್ತಾರೆ.

ಭಗವದ್ಗೀತೆ ಅಧ್ಯಾಯ 29-30ರ ಶ್ಲೋಕಗಳನ್ನು ಪರಿಶೀಲಿಸೋಣ. ಅರ್ಜುನನಿಗೆ ಅಡ್ರಿನಲಿನ್ ಎಂಬ ಹಾರ್ಮೋನಿನ ಬಗ್ಗೆ ತಿಳಿದಿತ್ತೋ ಇಲ್ಲವೋ ನಮಗೆ ಗೊತ್ತಿಲ್ಲ. ಆದರೆ ಕುರುಕ್ಷೇತ್ರದಲ್ಲಿ ಅರ್ಜುನನ ದೈಹಿಕ ಹಾಗೂ ಮಾನಸಿಕ ಸ್ಥಿತಿಯು, ಅಡ್ರಿನಲಿನ್ ಹಾರ್ಮೋನಿನ ಪ್ರಭಾವದಿಂದ ಅತೀವ ಒತ್ತಡದಲ್ಲಿರುವುದು ಸ್ಪಷ್ಟವಾಗಿ ನಮಗೆ ತಿಳಿಯುತ್ತದೆ.

ಸೀದಂತಿ ಮಮ ಗಾತ್ರಾಣಿ ಮುಖಂ ಚ

ಪರಿಶುಷ್ಯತಿ|

ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ

ಜಾಯತೇ || 29||

ಗಾಂಡೀವಂ ಸ್ರಂಸತೇ ಹಸ್ತಾತ್ ತ್ವಕ್ಬೈವ ಪರಿ

ದಹ್ಯತೇ |

ನ ಚ ಶಕ್ಯೋಮ್ಯವಸ್ಥಾತುಂ ಭ್ರಮತೀವ ಚ ಮೇ

ಮನ: || 30||

ನನ್ನ ಅಂಗಾಂಗಗಳು ತತ್ತರಿಸುತ್ತಿವೆ, ಬಾಯಿಯು ಒಣಗಿಹೋಗುತ್ತಿದೆ. ನನ್ನ ಶರೀರವು ನಡುಗುತ್ತಿದೆ ಮತ್ತು ಮೈಯ ರೋಮಗಳು ನಿಮಿರಿಕೊಳ್ಳುತ್ತಿವೆ (ಗಾಬರಿಯಿಂದ ನವಿರೇಳುತ್ತಿದೆ). ನನ್ನ ಕೈಯಿಂದ ಗಾಂಡೀವ (ಧನುಸ್ಸು) ಜಾರುತ್ತಿದೆ, ಚರ್ಮವು ಉರಿದಂತಾಗುತ್ತಿದೆ (ಸುಡುವ ಅನುಭವ). ನನಗೆ ನಿಲ್ಲಲು ಕೂಡ ಸಾಧ್ಯವಾಗುತ್ತಿಲ್ಲ, ನನ್ನ ಮನಸ್ಸು ತಿರುಗಿದಂತಿದೆ (ಭ್ರಮೆಯಾಗುತ್ತಿದೆ).

ಈ ಶ್ಲೋಕಗಳಲ್ಲಿ ಅರ್ಜುನನಿಗೆ ಉಂಟಾಗಿರುವ ದೈಹಿಕ ಲಕ್ಷಣಗಳು (ಬಾಯಿ ಒಣಗುವುದು, ಮೈ ನಡುಗುವುದು, ಕೈಯಿಂದ ಆಯುಧ ಜಾರುವುದು, ಚರ್ಮ ಉರಿಯುವುದು ಮತ್ತು ತಲೆ ಸುತ್ತಿದಂತೆ ಭಾಸವಾಗುವುದು) ಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿ ಅಡ್ರಿನಲಿನ್ ಬಿಡುಗಡೆಯಾದಾಗ ಮನುಷ್ಯನ ದೇಹದಲ್ಲಿ ಉಂಟಾಗುವ ನಿಖರವಾದ ಲಕ್ಷಣಗಳಾಗಿವೆ. ಇತಿಹಾಸದ ಮಹಾಕಾವ್ಯ ವೊಂದರಲ್ಲಿ ಹಾರ್ಮೋನಿನ ಈ ದೈಹಿಕ ಪರಿಣಾಮಗಳನ್ನು ಅಷ್ಟು ನಿಖರವಾಗಿ ವರ್ಣಿಸಿರುವುದು ನಿಜಕ್ಕೂ ಅದ್ಭುತ!

ವೈದ್ಯಕೀಯ ಬಳಕೆ: ಇಂದು ಅಡ್ರಿನಲಿನ್ ಕೇವಲ ರೋಮಾಂಚನದ ಹಾರ್ಮೋನು ಮಾತ್ರವಲ್ಲ, ಲಕ್ಷಾಂತರ ಜೀವಗಳನ್ನು ಉಳಿಸುವ ಪ್ರಮುಖ ಔಷಧಿಯಾಗಿದೆ. ಆಧುನಿಕ ವೈದ್ಯಕೀಯ ಲೋಕ ದಲ್ಲಿ ಇದು ಕ್ರಾಂತಿಯನ್ನೇ ಸೃಷ್ಟಿಸಿದೆ.

ಅಪರಕ್ಷಣೆ ಅಥವ ಅನಾಫಿಲ್ಯಾಕ್ಸಿಸ್: ಕೆಲವರಿಗೆ ಕಣಜದ ಕಡಿತದಿಂದ, ಶೇಂಗಾ ತಿನ್ನುವುದರಿಂದ ಅಥವಾ ಕೆಲವು ಔಷಧಗಳಿಂದ ತೀವ್ರ ಸ್ವರೂಪದ ಮಾರಕ ಅಲರ್ಜಿ ಉಂಟಾಗಿ ಜೀವವು ಹೋಗಬ ಹುದು. ಅಂತಹ ತುರ್ತು ಸಂದರ್ಭದಲ್ಲಿ ಎಪಿನೆಫ್ರಿನ್ ಆಟೋ-ಇಂಜೆಕ್ಟರ್ (ಉದಾಹರಣೆಗೆ ಎಪಿಪೆನ್) ಜೀವ ಉಳಿಸುವ ರಾಮಬಾಣವಾಗಿದೆ.

ಹೃದಯ ಸ್ತಂಭನ (ಕಾರ್ಡಿಯಾಕ್ ಅರೆಸ್ಟ್): ಹೃದಯ ಬಡಿತ ನಿಂತುಹೋದ ರೋಗಿಗಳಿಗೆ ಮರು ಜೀವ ನೀಡಲು ಅಡ್ರಿನಲಿನ್ ಚುಚ್ಚಮದ್ದನ್ನು ನೀಡಲಾಗುತ್ತದೆ. ಇದು ಹೃದಯಕ್ಕೆ ಮತ್ತೆ ಚೈತನ್ಯ ತುಂಬುತ್ತದೆ.

ದಮ್ಮು (ಅಸ್ತಮ): ಉಸಿರಾಟದ ನಾಳಗಳು ಉಬ್ಬಿ ಕೊಂಡಾಗ ಅವುಗಳನ್ನು ಸಡಿಲಗೊಳಿಸಲು ಇದು ಮುಂಚೆ ವ್ಯಾಪಕವಾಗಿ ಬಳಕೆಯಾಗುತ್ತಿತ್ತು. ಈಗಲೂ ಅಪರೂಪಕ್ಕೆ ಬಳಸುವುದುಂಟು.

ಸ್ಥಳೀಯ ಅರಿವಳಿಕೆ (ಲೋಕಲ್ ಅನೆಸ್ತೀಷಿಯ): ದಂತವೈದ್ಯರ ಬಳಿ ಹಲ್ಲು ಕೀಳಿಸಿಕೊಳ್ಳುವಾಗ ಅಥವಾ ಸಣ್ಣಪುಟ್ಟ ಶಸ್ತ್ರಚಿಕಿತ್ಸೆಯನ್ನು ಮಾಡುವಾಗ ಬಳಸುವ ಅರಿವಳಿಕೆಯ ಔಷಧಿಯ ಜೊತೆ ಯಲ್ಲಿ (ಉದಾ: ಲಿಡೋಕೇಯ್ನ್) ಜೊತೆಗೆ ಅಡ್ರಿನಾಲಿನ್ ಬೆರೆಸುವುದುಂಟು. ಇದು ರಕ್ತನಾಳ ಗಳನ್ನು ಸಂಕುಚಿಸಿ, ಔಷಧಿಯ ಪರಿಣಾಮ ದೀರ್ಘಕಾಲ ಇರುವಂತೆ ಮಾಡುತ್ತದೆ.

ನಾರ್-ಅಡ್ರಿನಲಿನ್: ನಮ್ಮ ನಗರದ ಹುಚ್ಚು ನಾಯಿಗಳೆರಡು ಪದೇ ಪದೆ ಕಚ್ಚುತ್ತೇನೆ ಎಂದು ಬೊಗಳು ವಾಗ ನಮ್ಮ ದೇಹದಲ್ಲಿ ತುರ್ತು ಬದಲಾವಣೆಗಳಾಗಿ ಮಧುಮೇಹ, ರಕ್ತದ ಏರೊತ್ತಡ, ಹೃದಯಾ ಘಾತದಂತಹ ಕಾಯಿಲೆಗಳು ಬರುವ ಸಾಧ್ಯತೆಯು ಅಧಿಕವಾಗುತ್ತಾ ಹೋಗುತ್ತದೆ. ಅಡ್ರಿನಲಿನ್ ಹಾರ್ಮೋನಿನ ಎಲ್ಲ ಪ್ರಭಾವಗಳನ್ನು ತಿರುಗ ಮುರುಗ ಮಾಡುವ ನಾರ್-ಅಡ್ರಿನಲಿನ್ ಎಂಬ ಹಾರ್ಮೋನ್ ನಮ್ಮ ದೇಹದಲ್ಲಿದೆ. ಇದನ್ನು ಯೋಗ, ಪ್ರಾಣಾಯಾಮ ಹಾಗೂ ಧ್ಯಾನದಿಂದ ಜಾಗೃತಗೊಳಿಸಬಹುದು. ಆಧುನಿಕ ಜೀವನಶೈಲಿಯ ರೋಗಗಳಿಂದ ಪಾರಾಗಬಹುದು.

ಡಾ.ನಾ. ಸೋಮೇಶ್ವರ

View all posts by this author