ದೆಹಲಿ,ಮೇ 29: ದೇಶದ ಹಲವು ಭಾಗದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಲೇ ಇದೆ. ತೀವ್ರ ಶಾಖವು (Summer Tips) ತಡೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ದೇಹದ ಮೇಲೆ ಪರಿಣಾಮ ಬೀರುತ್ತಿದೆ. ವಿಶೇಷವಾಗಿ 'ಹೀಟ್ ಸ್ಟ್ರೋಕ್' , ಚರ್ಮದ ಸಮಸ್ಯೆ ಮುಂತಾದ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹಾಗಾಗಿ ಈ ಸಮಯದಲ್ಲಿ ಆರೋಗ್ಯಕರ ಆಹಾರ ಸೇವನೆಗೂ ಒತ್ತು ನೀಡ ಬೇಕಾಗತ್ತದೆ. ಬೇಸಿಗೆಯ ತಿಂಗಳಿನಲ್ಲಿ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಶಾಖ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸುಲಭ ಮಾರ್ಗಗಳ ಬಗ್ಗೆ ತಜ್ಞ ರೊಬ್ಬರು ಸಲಹೆ ನೀಡಿದ್ದಾರೆ.
ನಿಮ್ಮ ದೇಹವು ಬೆವರು ಮತ್ತು ರಕ್ತದ ಹರಿವಿನ ಮೂಲಕ ಸ್ವಾಭಾವಿಕವಾಗಿ ತಣ್ಣಗಾಗುತ್ತದೆ, ಆದರೆ ಈ ತೀವ್ರ ಶಾಖದಿಂದ ನೀವು ನೀರು, ಸೋಡಿಯಂ ಮತ್ತು ಪೊಟ್ಯಾಸಿಯಮ್ ಅನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತೀರಿ. ಇದರಿಂದ ರಕ್ತದ ಪ್ರಮಾಣ ಕಡಿಮೆಯಾಗಿ, ಹೃದಯದ ಬಡಿತ ತೀವ್ರ ಗೊಳ್ಳಬಹುದು. ಇದರಿಂದ ಹಿಟ್ ಸ್ಟ್ರೋಕ್ ನಂತಹ ಸಮಸ್ಯೆ ಕಾಡಬಹುದು.
ಶಾಖವನ್ನು ತಡೆಗಟ್ಟುವ ಸರಳ ಮಾರ್ಗಗಳು:
ನಿಮ್ಮ ನೀರಿಗೆ ಎಲೆಕ್ಟ್ರೋಲೈಟ್‌ಗಳನ್ನು ಸೇರಿಸಿ:
ಕೇವಲ ನೀರನ್ನು ಕುಡಿಯುವ ಬದಲು ನೀವು ನೀರಿಗೆ ಎಲೆಕ್ಟ್ರೋಲೈಟ್‌ಗಳನ್ನು ಸೇರಿಸಿಕೊಳ್ಳಿ. ತೆಂಗಿನ ನೀರು, ನಿಂಬೆ ನೀರು, ಮಜ್ಜಿಗೆ, ಇದು ನೀವು ಬೆವರಿನ ಮೂಲಕ ಕಳೆದುಕೊಂಡದ್ದನ್ನು ಮತ್ತೆ ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ.
Health Tips: ಈ ಆಹಾರ ಅರಿವಿಲ್ಲದೆಯೇ ನಿಮ್ಮ ರಕ್ತದೊತ್ತಡ ಹೆಚ್ಚಿಸಬಹುದು; ಎಚ್ಚರ!
ನೀರಿನ ಅಂಶ ಇರುವ ಪದಾರ್ಥಗಳನ್ನು ಸೇವಿಸಿ:
ನಿಮ್ಮ ದೇಹವನ್ನು ನೈಸರ್ಗಿಕವಾಗಿ ಸಮತೋಲನಗೊಳಿಸಲು ಹೆಚ್ಚಿನ ದ್ರವ ಅಂಶವಿರುವ ಉತ್ಪನ್ನಗಳನ್ನು ಸವಿಯಿರಿ.. ಬೇಸಿಗೆ ಯಲ್ಲಿ ಕಲ್ಲಂಗಡಿ, ಕಸ್ತೂರಿ ಕಲ್ಲಂಗಡಿ, ಮೊಸರು, ಸೋರೆ ಕಾಯಿ ಮತ್ತು ಸೌತೆಕಾಯು ತಿನ್ನಿ.ಇವೆಲ್ಲವೂ ನಿಮ್ಮನ್ನು ಒಳಗಿನಿಂದ ಹೈಡ್ರೇಟ್ ಮಾಡುತ್ತದೆ.
ಹೊರಗೆ ಹೋಗುವುದನ್ನು ತಪ್ಪಿಸಿ:
ಮಧ್ಯಾಹ್ನ 12:00 ರಿಂದ ಸಂಜೆ 4:00 ರ ನಡುವೆ ಹೊರಗೆ ಹೋಗುವುದನ್ನು ತಪ್ಪಿಸಿ.. ನೀವು ಹೊರಗೆ ಹೋಗಬೇಕಾದರೆ, ನಿಮ್ಮ ದೇಹದ ಉಷ್ಣತೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಹೈಡ್ರೇಟಿಂಗ್ ಮತ್ತು ಕವರ್ ಅಪ್‌ನಂತಹ ಉಪಾಯಗಳನ್ನು ಮೊದಲೇ ಪಾಲಿಸಿ.
ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ತಪ್ಪಿಸಿ:
ಇತ್ತೀಚೆಗೆ ಹೆಚ್ಚಿನವರು ಮಸಾಲೆಯುಕ್ತ ಹೊರಗಿನ ಕರಿದ ಆಹಾರಗಳ ಸೇವನೆಗೆ ಆಸಕ್ತಿ ನೀಡುತ್ತಾರೆ. ಆದರೆ ಇಂತಹ ಆಹಾರಗಳು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.ಮಸಾಲೆಯುಕ್ತ ಆಹಾರಗಳು ನಿಮ್ಮ ದೇಹದಲ್ಲಿ ಶಾಖ ಹೆಚ್ಚಿಸಿ ಅವು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ.
ಊಟದ ನಡುವೆ ದೀರ್ಘಾವಧಿಯ ಗ್ಯಾಪ್ ನೀಡಬೇಡಿ:
ದೀರ್ಘಕಾಲದವರೆಗೆ ಉಪವಾಸವಿರುವುದು ಅಥವಾ ಊಟದ ನಡುವೆ ದೊಡ್ಡ ಗ್ಯಾಪ್ ಕೊಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಎಲೆಕ್ಟ್ರೋಲೈಟ್ ಮಟ್ಟ ದಿಢೀರನೆ ಕುಸಿಯಬಹುದು. ಇದರಿಂದ ಆಯಾಸ ಹಾಗೂ ಒತ್ತಡ ಹೆಚ್ಚಬಹುದು.