ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

20 ವರ್ಷಗಳ ಬಳಿಕವೂ ಆರೋಗ್ಯದಿಂದಿರಬೇಕೆ? ನಿಮ್ಮ ಆಹಾರ ಕ್ರಮ ಹೀಗಿರಲಿ

Health Tips: ಆರೋಗ್ಯವಾಗಿರಬೇಕು ಎಂದು ಬಯಸಿದರೆ ನಮ್ಮ ಆಹಾರವೂ ಸರಿಯಾಗಿರಬೇಕು. ಇದಕ್ಕಾಗಿ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟಕ್ಕೆ ಏನು ಸೇವಿಸಬೇಕು ಎಂಬುದನ್ನು ಪ್ಲ್ಯಾನ್‌ ಮಾಡಲು ಪ್ರತಿದಿನ ಬೆಳಗ್ಗೆ 10 ನಿಮಿಷಗಳನ್ನು ಮೀಸಲಿಡುವಂತೆ ತಜ್ಞರು ಸಲಹೆ ನೀಡುತ್ತಾರೆ. ಈ ಸರಳ ಅಭ್ಯಾಸವು ದಿನವಿಡೀ ಸರಿಯಾದ ಆಹಾರ ಪದಾರ್ಥಗಳನ್ನು ಸೇವಿಸಲು ಅನಾರೋಗ್ಯಯುಕ್ತ ಆಹಾರ ಆಯ್ಕೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಪ್ರತಿಯೊಬ್ಬರು ತಾನು ಫಿಟ್ ಆಗಿರಬೇಕು, ಆರೋಗ್ಯವಾಗಿ ಇರಬೇಕೆಂದು ಬಯಸುವುದು ಸಾಮಾನ್ಯ. ಇದಕ್ಕಾಗಿ ಸೇವಿಸುವ ಆಹಾರದ ಬಗ್ಗೆಯೂ ಗಮನ ಹರಿಸಬೇಕು ಎಂದು ಪೌಷ್ಟಿಕ ತಜ್ಞರು ಸಲಹೆ ನೀಡುತ್ತಾರೆ. ಆರೋಗ್ಯಯುಕ್ತ ಆಹಾರ ಸೇವನೆ (Healthy Eating) ಎಂದರೆ ಕೇವಲ ತೂಕ ಇಳಿಸಿಕೊಳ್ಳುವುದು ಅಥವಾ ಡಯೆಟ್ ಅನುಸರಿಸುವುದು ಮಾತ್ರವಲ್ಲ. ನಾವು ಪ್ರತಿದಿನ ಆಯ್ಕೆ ಮಾಡುವ ಆಹಾರವು ವಯಸ್ಸಾದಂತೆ ನಾವು ಹೇಗೆ ಆರೋಗ್ಯವಾಗಿರುತ್ತೇವೆ ಎಂಬುದರ ಮೇಲೆ ಪ್ರಭಾವ ಬೀರುತ್ತದೆ ಎನ್ನುತ್ತಾರೆ.

ಮುಂದಿನ ಇಪ್ಪತ್ತು ವರ್ಷಗಳವರೆಗೂ ಆರೋಗ್ಯವಾಗಿರಬೇಕು ಎಂದು ಬಯಸಿದ್ದರೆ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟಕ್ಕೆ ಏನು ಸೇವಿಸಬೇಕು ಎಂಬುದನ್ನು ಪ್ಲ್ಯಾನ್‌ ಮಾಡಲು ಪ್ರತಿದಿನ ಬೆಳಗ್ಗೆ ಕೇವಲ 10 ನಿಮಿಷಗಳನ್ನು ಮೀಸಲಿಡುವಂತೆ ತಜ್ಞರು ಸಲಹೆ ನೀಡುತ್ತಾರೆ. ಈ ಸರಳ ಅಭ್ಯಾಸವು ದಿನವಿಡೀ ಸರಿಯಾದ ಆಹಾರ ಪದಾರ್ಥಗಳನ್ನು ಸೇವಿಸಲು ಅನಾರೋಗ್ಯಕರ ಆಹಾರ ಆಯ್ಕೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಬೆಳಗ್ಗಿನ ಆಹಾರ ಹೇಗಿರಬೇಕು?

ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಸಸ್ಯಾಹಾರಿಗಳು ಮೊಳಕೆ ಕಾಳುಗಳನ್ನು ಸೇವಿಸಿದರೆ ಮಾಂಸಾಹಾರಿಗಳು ದಿನಕ್ಕೊಂದು ಮೊಟ್ಟೆಯನ್ನು ಸೇವಿಸಬಹುದು. ಇದರ ಜತೆಗೆ ಫ್ರೆಶ್‌ ಜ್ಯೂಸ್ ಕುಡಿಯುವುದು ಉತ್ತಮ.

ಹಸಿ ಬೀಟ್ರೂಟ್ ಅಥವಾ ಬೇಯಿಸಿದ ಬೀಟ್ರೂಟ್: ಮೂತ್ರಪಿಂಡದ ಆರೋಗ್ಯಕ್ಕೆ ಯಾವುದು ಉತ್ತಮ?

​ಮಧ್ಯಾಹ್ನದ ಊಟ

ಮಧ್ಯಾಹ್ನದ ಊಟಕ್ಕೆ ಜೋಳದ ರೊಟ್ಟಿ ಅಥವಾ ರಾಗಿ ರೊಟ್ಟಿಯೊಂದಿಗೆ ತರಕಾರಿ ಪಲ್ಯ ಸೇರಿಸಿಕೊಳ್ಳಬಹುದು. ಮಾಂಸಾಹಾರಿಗಳಾಗಿದ್ದರೆ ಚಿಕನ್ ಅಥವಾ ಮೀನನ್ನು ಸೇವಿಸಬಹುದು. ಸಂಜೆ ವೇಳೆ ಸ್ವಲ್ಪ ಕಡಲೆಕಾಳು ಮತ್ತು ಗ್ರೀನ್ ಟೀ ಸೇವಿಸಿದರೆ ಉತ್ತಮ.

​ರಾತ್ರಿಯ ಊಟ

ರೊಟ್ಟಿ, ತರಕಾರಿ ಪಲ್ಯ, ದಾಲ್, ಸೂಪ್ ಹಾಗೂ ಸಲಾಡ್, ಮಾಂಸಾಹಾರಿಗಳಾದರೆ ಸೂಪ್ ಮತ್ತು ಸಲಾಡ್ ಜತೆ ಮೀನು ಅಥವಾ ಕೋಳಿಮಾಂಸ ಸೇವಿಸಬಹುದು. ಈ ರೀತಿ ಸರಿಯಾಗಿ ಯೋಜಿಸಿದ ಆಹಾರದಲ್ಲಿ ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ನಾರಿನಂಶ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳು ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ದೊರೆಯುತ್ತವೆ.

ಆರೋಗ್ಯ ಸಮಸ್ಯೆ ತಪ್ಪುತ್ತದೆ

ಸರಿಯಾದ ಆಹಾರ ಸೇವನೆಯು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡಲಿದ್ದು ದೇಹವನ್ನು ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತದೆ. ಮತ್ತೊಂದೆಡೆ, ಅನಾರೋಗ್ಯಕರ ಆಹಾರ ಪದ್ಧತಿಯು ಅಧಿಕ ರಕ್ತದೊತ್ತಡ, ಪೋಷಕಾಂಶಗಳ ಕೊರತೆ ಮತ್ತು ರೋಗನಿರೋಧಕ ಶಕ್ತಿಯ ಅಪಾಯವನ್ನು ಹೆಚ್ಚು ಮಾಡಬಹುದು. ಪ್ರಮುಖ ಜೀವಸತ್ವಗಳನ್ನು ಹೊಂದಿರುವ ಆಹಾರಗಳು ಉತ್ತಮ ಆರೋಗ್ಯಕ್ಕೆ ಪೂರಕ.