ನವದೆಹಲಿ,ಸೆ.29: ಪ್ರತಿಯೊಂದು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಸಾಂಬಾರು ಪದಾರ್ಥ ಅಂದ್ರೆ ಅದು ಏಲಕ್ಕಿ. ಕೇವಲ ಸುವಾಸನೆಯನ್ನು ಹೆಚ್ಚು ಮಾಡುವುದಲ್ಲದೆ ಔಷಧೀಯ ಗುಣಗಳನ್ನು ಹೇರಳವಾಗಿ ಹೊಂದಿದೆ. ಉತ್ಕರ್ಷಣ ನಿರೋಧಕಗಳು, ಉರಿಯೂತ ನಿವಾರಕ ಗುಣಗಳನ್ನು ಹೊಂದಿರುವ ಏಲಕ್ಕಿ (Elaichi Benifits) ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಟಮಿನ್ ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಸತು, ಮ್ಯಾಂಗನೀಸ್‌ನಂತ ಅನೇಕ ಅಗತ್ಯ ಪೋಷಕಾಂಶಗಳು ಇವೆ.
ದೇಹದ ಕಲ್ಮಶ ಹೊರಹಾಕಲು ಸಹಾಯ ಮಾಡುತ್ತದೆ:
ಏಲಕ್ಕಿಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಅಧಿಕವಾಗಿದ್ದು ಇದು ನೈಸರ್ಗಿಕ ಡಿಟಾಕ್ಸಿಫೈಯರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿದ್ದ ತ್ಯಾಜ್ಯ ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕಿ ದೇಹವನ್ನು ಆ್ಯಕ್ಟೀವ್ ಆಗಿ ಇರಿಸುತ್ತದೆ
ಜೀರ್ಣಕ್ರಿಯೆ ವೃದ್ಧಿ:
ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಸಮಸ್ಯೆ ಇರುವವರು ಏಲಕ್ಕಿ ಪುಡಿ ಮತ್ತು ಶುಂಠಿ ರಸವನ್ನು ಉಗುರುಬೆಚ್ಚಗಿನ ನೀರಿನಲ್ಲಿ ಮಿಕ್ಸ್ ಮಾಡಿ ಕುಡಿದರೆ ಉತ್ತಮ. ಇದರಿಂದ ದೇಹಕ್ಕೆ ರಿಪ್ರೆಶ್ ಅನುಭವ ಸಿಗುತ್ತದೆ.
ಸ್ನಾಯು ಸೆಳೆತ ಮತ್ತು ಬಿಕ್ಕಳಿಕೆಗೆ ಪರಿಹಾರ:
ಏಲಕ್ಕಿಯಲ್ಲಿ 'ಆಂಟಿಸ್ಪಾಸ್ಮೊಡಿಕ್' ಗುಣಗಳಿದ್ದು, ಸ್ನಾಯುಗಳ ಒತ್ತಡವನ್ನು ನಿವಾರಣೆ ಮಾಡುತ್ತದೆ. ಇದರಿಂದ ಹೊಟ್ಟೆನೋವು, ಸ್ನಾಯು ಸೆಳೆತ ಮತ್ತು ನಿರಂತರವಾಗಿ ಬರುವ ಬಿಕ್ಕಳಿಕೆಯನ್ನು ತಡೆಯಬಹುದು.
Vishwavani health: ಮದುವೆ ಬಳಿಕ ಮಹಿಳೆ ದಪ್ಪಗಾಗಲು ಕಾರಣವೇನು? ಹೇಗೆ ಇದನ್ನು ನಿಯಂತ್ರಿಸುವುದು? ಇಲ್ಲಿದೆ ಟಿಪ್ಸ್
ಸಣ್ಣ ಸೋಂಕುಗಳಿಗೆ ಚಿಕಿತ್ಸೆ ನೀಡಲು ಸಹಕಾರಿ:
ನಿಮ್ಮ ಆಹಾರದಲ್ಲಿ ಏಲಕ್ಕಿ ಸೇರಿಸಿಕೊಳ್ಳುವುದರಿಂದ ಶೀತ ಮತ್ತು ಜ್ವರದಂತಹ ಸಾಮಾನ್ಯ ಸೋಂಕುಗಳನ್ನು ತಡೆಯಲು ಸಹಕಾರಿಯಾಗುತ್ತದೆ. ಅನಾರೋಗ್ಯಕರ ಸಮಯದಲ್ಲಿ ಬೆಚ್ಚಗಿನ ಏಲಕ್ಕಿ ಚಹಾವನ್ನು ಕುಡಿಯುವುದು ಹಿತಕರಿಯಾಗಿದೆ.
ವಯಸ್ಸಾಗುವಿಕೆಯನ್ನು ತಡೆಯುತ್ತದೆ:
ಇದರಲ್ಲಿರುವ ಅಧಿಕ ಆಂಟಿ-ಆಕ್ಸಿಡೆಂಟ್‌ಗಳು ರಕ್ತದಲ್ಲಿರುವ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಟವನ್ನು ನಡೆಸುತ್ತದೆ. ಇದು ಕೋಶಗಳ ಹಾನಿಯನ್ನು ತಡೆದು ಚರ್ಮದ ಕಾಂತಿಯನ್ನು ಕಾಪಾಡುತ್ತದೆ.
ಶೀತ ಮತ್ತು ಕೆಮ್ಮಿಗೆ ಮನೆಮದ್ದು:
ಏಲಕ್ಕಿಯಲ್ಲಿ ಶ್ವಾಸಕೋಶವನ್ನು ಸರಿಪಡಿಸುವ ಅಂಶಗಳಿವೆ. ಶೀತ, ಕೆಮ್ಮು ಮತ್ತು ಉಸಿರಾಟದ ತೊಂದರೆ ಇದ್ದಾಗ ಬಿಸಿ ಏಲಕ್ಕಿ ಚಹಾ ಅಥವಾ ನೀರನ್ನು ಕುಡಿಯುವುದರಿಂದ ಗಂಟಲಿಗೆ ಆರಾಮ ಸಿಗುತ್ತದೆ.
ಬಳಸುವ ಸರಿಯಾದ ವಿಧಾನ ಹೇಗೆ?
ಏಲಕ್ಕಿಗಳನ್ನು ಜಜ್ಜಿ ಒಂದು ಲೋಟ ನೀರಿನಲ್ಲಿ ಕುದಿಸಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉತ್ತಮ. ಅಥವಾ ಯಾವುದೇ ಉಪಹಾರ, ಸಿಹಿ ಖಾದ್ಯಗಳಲ್ಲಿ ಬಳಸಿ ಸೇವಿಸಬಹುದು