ನವದೆಹಲಿ,ಸೆ.13: ಭಾರತೀಯ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ಆಹಾರ ಪದಾರ್ಥಗಳಲ್ಲಿ ಅರಶಿನ (Turmeric for Health) ಕೂಡ ಒಂದಾಗಿದೆ. ಕೇವಲ ಆಹಾರದ ರುಚಿ ಹೆಚ್ಚು ಮಾಡುವುದಲ್ಲದೆ ವೈದ್ಯಕೀಯ ಬಳಕೆಯಲ್ಲೂ ಮುಂದಿದೆ. ಹಿಂದಿನ ಹಿರಿಯರ ಕಾಲ ದಿಂದಲೂ ಮಹತ್ವದ ಸ್ಥಾನ ಪಡೆದಿರುವ ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದ್ದು ಇದು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕಗಳಿಗೆ ಹೆಸರುವಾಸಿಯಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಚರ್ಮದ ಆರೋಗ್ಯ ಕಾಪಾಡುವ ವರೆಗೆ ಪ್ರಮುಖ ಪಾತ್ರವಹಿಸುತ್ತದೆ.
ಉರಿಯೂತ ಶಮನಕಾರಿ ಗುಣಗಳು ಇವೆ:
ದೀರ್ಘಕಾಲದ ಉರಿಯೂತವು ಹೃದ್ರೋಗ, ಸಂಧಿವಾತ ಮತ್ತು ಮಧುಮೇಹ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ನೈಸರ್ಗಿಕವಾಗಿ ಉರಿಯೂತವನ್ನು ಕಡಿಮೆ ಮಾಡಿ ಆರೋಗ್ಯ ರಕ್ಷಣೆ ಮಾಡುತ್ತದೆ.
ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ:
ಅರಿಶಿನವು ದೇಹದಲ್ಲಿ ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಇದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಿ ಯಾವುದೇ ರೋಗ ಬರದಂತೆ ತಡೆಯುತ್ತದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಅರಶಿನವನ್ನು ದಿನನಿತ್ಯದಲ್ಲಿ ಬಳಕೆ ಮಾಡಲು ಪ್ರಯತ್ನಿಸಿ.
ಕೀಲುಗಳ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ:
ಕೀಲುಗಳಲ್ಲಿನ ಊತ ಮತ್ತು ನೋವನ್ನು ಕಡಿಮೆ ಮಾಡುವ ಮೂಲಕ ಅರಶಿನವು ಬೆಂಬಲಿಸುತ್ತದೆ. ಹಾಗಾಗಿ ಸಂಧಿವಾತ ದಿಂದ ಬಳಲುತ್ತಿರುವ ಜನರು ಅರಿಶಿನದ ಮೂಲಕ ಪರಿಹಾರ ಪಡೆಯಬಹುದು.
Health Tips: ಆರೋಗ್ಯಪೂರ್ಣ ಜೀವನ ಸಾಗಿಸಬೇಕೆ? ಬೆಳಗಿನ ಉಪಾಹಾರ ಹೀಗಿರಲಿ
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:
ಅರಿಶಿನವು ಜೀರ್ಣಕ್ರಿಯೆಯನ್ನು ಸುಧಾರಿಸಲು ಮುಖ್ಯವಾದ ಆಹಾರ ಪದಾರ್ಥವಾಗಿದೆ. ಇದು ಪಿತ್ತರಸದ ಉತ್ಪಾದನೆಯನ್ನು ಉತ್ತೇಜಿಸಿ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ:
ಅರಿಶಿನದಲ್ಲಿ ಬ್ಯಾಕ್ಟೀರಿಯಾ ನಿರೋಧಕ, ವೈರಸ್ ನಿರೋಧಕ ಅಂಶಗಳಿವೆ. ಪ್ರತಿದಿನ ಉಗುರುಬೆಚ್ಚಗಿನ ಅರಿಶಿನ ನೀರನ್ನು ಸೇವಿಸುವುದರಿಂದ ಸೋಂಕುಗಳ ವಿರುದ್ಧ ಹೋರಾಡಲು ಸಹಾಯವಾಗುತ್ತದೆ.
ಹೃದಯದ ಆರೋಗ್ಯವನ್ನು ಕಾಪಾಡುತ್ತದೆ:
ಕರ್ಕ್ಯುಮಿನ್ ಅಂಶವು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ತಡೆದು ರಕ್ತನಾಳಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ:
ಅರಿಶಿನಬು ಮೊಡವೆಗಳನ್ನು ಕಡಿಮೆ ಮಾಡಲು, ಮತ್ತು ಚರ್ಮದ ತೇವಾಂಶ ಕಡಿಮೆ ಮಾಡಲು ಬಳಸಬಹುದು. ನಿಯಮಿತವಾಗಿ ಸೇವಿಸದರೆ ಚರ್ಮದ ಕಿರಿಕಿರಿಯನ್ನು ಶಮನಗೊಳಿಸಬಹುದು.
ಹೇಗೆ ಸೇವನೆ ಮಾಡಬೇಕು?
- ಸ್ಮೂಥಿ ಅಥವಾ ಜ್ಯೂಸ್‌ಗಳಲ್ಲಿ ಒಂದು ಚಿಟಿಕೆ ಬಳಸಿ.
- ಹಾಲಿನ ಜೊತೆಗೆ ಅರಶಿನ ಬೆರೆಸಿ ಸೇವಿಸಿ.
- ಹುರಿದ ತರಕಾರಿಗಳ ಮೇಲೆ ಸಿಂಪಡಿಸಿ ಸೇವಿಸಬಹುದು.
- ಬಿಸಿನೀರಿಗೆ ಅರಶಿನ ಹಾಕಿ ಸೇವಿಸಬಹುದು.