ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜೀವನದ ಕಷ್ಟ ಉರುಳಿಸುವ ಶಕ್ತಿ ಉರುಳು ಸೇವೆಗಿದೆ! ಅದು ಹೇಗೆ ನೋಡಿ

Health Tips: ಜನರು ಭಕ್ತಿಯಿಂದ ಉರುಳು ಸೇವೆ ಮಾಡುತ್ತಾರೆ. ತಮ್ಮ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು, ಆರೋಗ್ಯ ವೃದ್ಧಿಗೆ, ಅಂದು ಕೊಂಡ ಕೆಲಸ ಕಾರ್ಯಗಳನ್ನು ಪೂರೈಸಲು ಉರುಳು ಸೇವೆಯನ್ನು ತನ್ನ ಇಷ್ಟದ ದೇವರಿಗೆ ಸಮರ್ಪಿಸುತ್ತಾರೆ. ಇದು ದೈಹಿಕವಾಗಿ ಆರೋಗ್ಯ ವೃದ್ದಿ ಮಾಡುವುದಲ್ಲದೆ ಮಾನಸಿಕವಾಗಿಯೂ ಹಲವು ಆರೋಗ್ಯ ಲಾಭ ಹೊಂದಿದೆ. ಈ ಸೇವೆಯಿಂದ ವ್ಯಕ್ತಿಯಲ್ಲಿ ಯಾವೆಲ್ಲ ಬದಲಾವಣೆ ಕಂಡುಬರುತ್ತದೆ ಎನ್ನುವ ಬಗ್ಗೆ ಪ್ರೊ. ಸುತ್ತೂರು ಮಾಲಿನಿ ʼವಿಶ್ವವಾಣಿ ಹೆಲ್ತ್‌ʼ ಯೂಟ್ಯೂಬ್‌ ಚಾನೆಲ್‌ನಲ್ಲಿ ವಿವರಿಸಿದ್ದಾರೆ.

ಪ್ರೊ. ಸುತ್ತೂರು ಮಾಲಿನಿ

ಬೆಂಗಳೂರು, ಏ. 3: ಉರುಳು ಸೇವೆ (Urulu Seva) ಕರಾವಳಿ ಭಾಗದಲ್ಲಿ ಕಂಡುಬರುವ ಪುರಾತನ ಹರಕೆ ಸೇವೆ. ಕಠಿಣ ಹರಕೆಯಲ್ಲಿ ಒಂದಾಗಿರುವ ಈ ಸೇವೆಯನ್ನು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಾಡುತ್ತಾರೆ. ಧಾರ್ಮಿಕ ಹಿನ್ನೆಲೆ ಹೊಂದಿರುವ ಈ ಆಚರಣೆಯ ಹಿಂದೆ ಸಾಕಷ್ಟು ವೈಜ್ಞಾನಿಕ ಕಾರಣವೂ ಇದೆ. ಈ ಸೇವೆಯಿಂದ ವ್ಯಕ್ತಿ ವೈಜ್ಞಾನಿಕವಾಗಿ ಯಾವೆಲ್ಲ ಬದಲಾವಣೆಯನ್ನು ಕಾಣುತ್ತಾನೆ? ಜೀವನದಲ್ಲಿ ಹೇಗೆ ಯಶಸ್ಸನ್ನು ಪಡೆಯುತ್ತಾನೆ? ಎನ್ನುವ ವಿಚಾರಗಳ ಕುರಿತು ʼವಿಶ್ವವಾಣಿ ಹೆಲ್ತ್‌ʼ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರೊ. ಸುತ್ತೂರು ಮಾಲಿನಿ ವಿವರಿಸಿದ್ದಾರೆ.

ಉರುಳು ಸೇವೆಯನ್ನು ಭಕ್ತರು ಭಕ್ತಿಯಿಂದ ನೆರವೇರಿಸುತ್ತಾರೆ. ತಮ್ಮ ಕಷ್ಟ ಪರಿಹಾರಕ್ಕೆ, ಆರೋಗ್ಯ ವೃದ್ಧಿಗೆ, ಅಂದುಕೊಂಡ ಕೆಲಸ ಕಾರ್ಯಗಳನ್ನು ಪೂರೈಸಲು ಉರುಳು ಸೇವೆಯನ್ನು ತಮ್ಮಿಷ್ಟದ ದೇವರಿಗೆ ಸಮರ್ಪಿಸುತ್ತಾರೆ. ಇದು ದೈಹಿಕವಾಗಿ ಆರೋಗ್ಯ ವೃದ್ದಿ ಮಾಡುವುದಲ್ಲದೆ ಮಾನಸಿಕವಾಗಿಯೂ ಹಲವು ಆರೋಗ್ಯ ಲಾಭ ಹೊಂದಿದೆ ಎಂದು ಪ್ರೊ. ಸುತ್ತೂರು ಮಾಲಿನಿ ಹೇಳಿದ್ದಾರೆ.

ವಿಡಿಯೊ ನೋಡಿ:



ಅದರಲ್ಲೂ ಹಿಂದಿನ‌ ಕಾಲದಿಂದಲೂ ಮಾಡುತ್ತಿರುವ ಆಚರಣೆಗಳು ಧಾರ್ಮಿಕವಾಗಿ ಅಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಮಹತ್ವಪೂರ್ಣವಾಗಿವೆ. ಹೀಗಾಗಿ ಹಿರಿಯರು ಇಂತಹ ಆಚರಣೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಅದರಲ್ಲಿ ಈ ಉರುಳು ಸೇವೆ ಪ್ರಮುಖವಾದುದು. ನಾವು ದೇವರಿಗೆ ಸಂಪೂರ್ಣವಾಗಿ ಶರಣಾಗುವುದರಿಂದ, ಎಲ್ಲ ಭಕ್ತರ ಎದುರು ಉರುಳು ಸೇವೆ ಮಾಡುವುದರಿಂದ ದೈನಂದಿನ ಜೀವನದ ಒತ್ತಡ, ಆತಂಕ ಮತ್ತು ದೂರವಾಗಿ ಮನಸ್ಸಿಗೆ ಖುಷಿ, ಸಂತೋಷ ಸಿಗುತ್ತದೆ.

ದೇಹದಲ್ಲಿ ಉತ್ತಮ ಕೊಬ್ಬು ಹೆಚ್ಚಿಸಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

ಮುಖ್ಯವಾಗಿ ಉರುಳು ಸೇವೆ ಮಾಡುವುದರಿಂದ ನಮ್ಮ ವೇಗಸ್ ನರ್ವ್ ಆ್ಯಕ್ಟೀವ್ ಆಗುತ್ತದೆ. ಇದರಿಂದ ಒಳ್ಳೆಯ ಅಲೋಚನೆ ಮೂಡುತ್ತದೆ. ಕ್ರಿಯಾತ್ಮಕ ಕೆಲಸಕ್ಕೆ ಮೆದುಳು ಸಕ್ರಿಯವಾಗಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ. ವೇಗಸ್ ನರಗಳ ಪ್ರಚೋದನೆಯು ಖಿನ್ನತೆ, ಆತಂಕ ಮೈಗ್ರೇನ್‌ನಂತ ಸಮಸ್ಯೆ ನಿವಾತೊಸುತ್ತದೆ.

ನೆಲದ ಮೇಲೆ ಉರುಳುವುದರಿಂದ ನಮ್ಮ ಅಹಂಕಾರ ಸ್ವಭಾವ ಆಹಂ ದೂರವಾಗಿ ವಿನಯತೆಯಿಂದ ವರ್ತಿಸುವ ಭಾವನೆ ನಮ್ನಲ್ಲಿ ಮೂಡುತ್ತದೆ. ಆಧ್ಯಾತ್ಮಿಕವಾದ ತೃಪ್ತಿ ನೀಡುವುದರ ಜೊತೆಗೆ ಮಾನಸಿಕ ಶಕ್ತಿಯೂ ನಮ್ಮಲ್ಲಿ ಹೆಚ್ಚುತ್ತದೆ.

ಆರೋಗ್ಯ ಪ್ರಯೋಜನಗಳೇನು?

  • ಉರುಳು ಸೇವೆ ಮಾಡುವುದರಿಂದ ನಮ್ಮ ದೇಹವು ಆ್ಯಕ್ಟೀವ್ ಆಗುತ್ತದೆ‌‌. ಇದರಿಂದ ಬೆನ್ನುಮೂಳೆ, ಕೈ ಕಾಲುಗಳೆ ಉತ್ತಮ ವ್ಯಾಯಾಮ ದೊರೆಯುತ್ತದೆ.
  • ಹಿಂದಿನ ಕಾಲದಲ್ಲಿ ಇಂತಹ ಆಚರಣೆ ಮಾಡಿರುವುದರಿಂದ ಬಿಪಿ, ಶುಗರ್‌ನಂತ ಸಮಸ್ಯೆಗಳು ಬರುತ್ತಿರಲಿಲ್ಲ. ಉರುಳು ಸೇವೆ ಮಾಡುವುದರಿಂದ ರಕ್ತದೊತ್ತ ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ದೂರ ಮಾಡಬಹುದು.
  • ದೈಹಿಕವಾಗಿ ದೇಹ ಸದೃಢಗೊಳ್ಳುವುದು ಅಲ್ಲದೆ ಮಾನಸಿಕ ಏಕಾಗ್ರತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.