ನವದೆಹಲಿ,ಜೂ.4: ಈ ಬೇಸಿಗೆಯ ಬಿಸಿಲಿಗೆ ದೇಹವನ್ನು ತಂಪಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹೊರಗಿನ ಬಿಸಿಯ ವಾತಾವರಣಕ್ಕೆ ನಮ್ಮ ದೇಹದ ಮುಕ್ಕಾಲು ಭಾಗದಷ್ಟು ನೀರಿನ ಅಂಶ ದೇಹದಿಂದ ಮಾಯವಾಗುತ್ತದೆ. ಹಾಗಾಗಿ ಸರಿಯಾದ ಪ್ರಮಾಣದಲ್ಲಿ ನೀರು ತರಕಾರಿ ಹಾಗೂ ಹಣ್ಣುಗಳ ಸೇವನೆ ಅಗತ್ಯವಾಗಿ ಬೇಕು. ಇನ್ನು ರಸ್ತೆ ಬದಿಯಲ್ಲಿ ಸಿಗುವ ಒಂದು ಗ್ಲಾಸ್ ತಣ್ಣನೆಯ ಕಬ್ಬಿನ ಹಾಲಂತು (Sugarcane) ಬಾಯಾರಿಕೆ ಮಾತ್ರವಲ್ಲ ನಮ್ಮ ದಣಿವನ್ನು ಕೂಡ ನಿವಾರಣೆ ಮಾಡುತ್ತದೆ. ದೇಹವನ್ನು ತಂಪಾಗಿಸುವ ಜೊತೆಗೆ ಆಯಾಸವನ್ನು ಕಡಿಮೆ ಮಾಡುತ್ತದೆ. ಹಾಗಿದ್ರೆ ಕಬ್ಬಿನ ಹಾಲು ದೇಹಕ್ಕೆ ಹಿತವೇ?
ಕಬ್ಬಿನ ಹಾಲಿನಲ್ಲಿ ಕ್ಯಾಲ್ಸಿಯಂ, ತಾಮ್ರ, ಮೆಗ್ನೀಸಿಯಮ್, ಕಬ್ಬಿಣದಂತಹ ಅನೇಕ ಪೋಷಕಾಂಶಗಳಿವೆ. ಕಬ್ಬಿನ ರಸವು ನೈಸರ್ಗಿಕವಾಗಿ ಸಿಹಿಯಾಗಿದ್ದು ಮಧ್ಯಮ ಗಾತ್ರದ ಗ್ಲಾಸ್ ನ ಕಬ್ಬಿನ ಹಾಲಿನಲ್ಲಿ ಸುಮಾರು 25ರಿಂದ 30 ಗ್ರಾಂ ನೈಸರ್ಗಿಕ ಸಕ್ಕರೆ ಪ್ರಮಾಣವು ಇರುತ್ತದೆ. ಇದರಲ್ಲಿ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಕಡಿಮೆ ಪ್ರಮಾಣದಲ್ಲಿರುತ್ತದೆ.
Health Tips: ನಿದ್ದೆಯಲ್ಲಿ ನಡೆಯುವ ಅಭ್ಯಾಸ ಇದೆಯೇ? ಇದಕ್ಕೆ ಕಾರಣವೇನು?
ಕಬ್ಬಿನ ಹಾಲಿನಿಂದಾಗುವ ಪ್ರಯೋಜನಗಳು:
ದೇಹಕ್ಕೆ ಶಕ್ತಿ ನೀಡುತ್ತದೆ:
ಕಬ್ಬಿನ ರಸದ ಸೇವನೆಯೂ ಅದರಲ್ಲಿರುವ ಸಕ್ಕರೆ ಅಂಶವು ದೇಹಕ್ಕೆ ತಕ್ಷಣವೇ ಹೊಸ ಚೈತನ್ಯವನ್ನು ಒದಗಿಸುತ್ತದೆ. ಇದು ನೈಸರ್ಗಿಕ ಸಕ್ಕರೆ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಹೊಂದಿದ್ದು ಆಯಾಸವನ್ನು ದೂರ ಮಾಡುತ್ತದೆ.
ದೇಹದ ದ್ರವ ಸಮತೋಲನ:
ಇದರಲ್ಲಿ ಅಲ್ಪ ಪ್ರಮಾಣದಲ್ಲಿ ಪೊಟ್ಯಾಸಿಯಮ್ ಇದ್ದು, ಇದು ದೇಹದಲ್ಲಿನ ದ್ರವದ ಪ್ರಮಾಣವನ್ನು ಸರಿಯಾಗಿ ಇರಿಸುವಂತೆ ಸಹಾಯ ಮಾಡುತ್ತದೆ.
ರೋಗನಿರೋಧಕ ಹೆಚ್ಚಿಸುತ್ತದೆ:
ಪಾಲಿಫಿನಾಲ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳು ಇದರಲ್ಲಿದ್ದು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆ ಸುಧಾರಣೆ:
ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಪ್ರತಿದಿನ ಕುಡಿದರೆ ಕಾದಿದೆ ಅಪಾಯ!
ಕಬ್ಬಿನ ಹಾಲು ರಿಫ್ರೆಶಿಂಗ್ ಆಗಿದ್ದರೂ, ಇದನ್ನು ಪ್ರತಿದಿನ ಕುಡಿಯುವುದು ಆರೋಗ್ಯಕ್ಕೆ ಒಳಿತಲ್ಲ ಎಂದು ತಜ್ಞರು ಕೂಡ ಎಚ್ಚರಿಕೆಯನ್ನು ನೀಡಿದ್ದಾರೆ. ಕಬ್ಬಿನ ಹಾಲು ಕುಡಿದ ತಕ್ಷಣ ರಕ್ತದಲ್ಲಿ ಸಕ್ಕರೆಯ ಮಟ್ಟ ದಿಢೀರನೆ ಏರುತ್ತದೆ. ಹಾಗಾಗಿ ಮಧುಮೇಹ ಇನ್ಸುಲಿನ್ ಸಮಸ್ಯೆ ಇರುವವರು ಕಬ್ಬಿನ ಹಾಲನ್ನು ನಿಯಮಿತವಾಗಿ ಸೇವನೆ ಮಾಡಬೇಕು.