ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Blood Purification: ರಕ್ತ ಶುದ್ಧಿ ಎಂದರೇನು? ಮೊಡವೆ ನಿವಾರಣೆಗೂ ಸಹಕಾರಿಯೇ?

ರಕ್ತವು ನಮ್ಮ ದೇಹದ ಸಪ್ತ ಧಾತುಗಳಲ್ಲಿ ಒಂದಾಗಿದ್ದು ಅತ್ಯಂತ ಮಹತ್ವ ಹೊಂದಿರುವ ಧಾತುವಾಗಿದೆ. ದೇಹವನ್ನು ಧಾರಣೆ ಮಾಡುವುದೇ ಧಾತುಗಳ ಕೆಲಸ ಅದರಲ್ಲೂ ಜೀವನ ಕರ್ಮವೇ ರಕ್ತ ಧಾತುವಿನ ಮುಖ್ಯ ಕೆಲಸ ಪ್ರಾಣವನ್ನು ದೇಹದ ಮೂಲೆ ಮೂಲೆಗೂ ತಲುಪಿಸಿ ಜೀವನ ಧಾರಣೆ ಮಾಡುವುದು ರಕ್ತ.

ರಕ್ತವು ನಮ್ಮ ದೇಹದ ಸಪ್ತ ಧಾತುಗಳಲ್ಲಿ ಒಂದಾಗಿದ್ದು ಅತ್ಯಂತ ಮಹತ್ವ ಹೊಂದಿರುವ ಧಾತುವಾಗಿದೆ. ದೇಹವನ್ನು ಧಾರಣೆ ಮಾಡುವುದೇ ಧಾತುಗಳ ಕೆಲಸ ಅದರಲ್ಲೂ ಜೀವನ ಕರ್ಮವೇ ರಕ್ತ ಧಾತುವಿನ ಮುಖ್ಯ ಕೆಲಸ ಪ್ರಾಣವನ್ನು ದೇಹದ ಮೂಲೆ ಮೂಲೆಗೂ ತಲುಪಿಸಿ ಜೀವನ ಧಾರಣೆ ಮಾಡುವುದು ರಕ್ತ.

ರಕ್ತವು ತನ್ನ ನೈಸರ್ಗಿಕ ಸ್ವಭಾವ ಹಾಗು ಗುಣಗಳನ್ನು ಹೊಂದಿರುವುದು ಅತ್ಯಾವಶ್ಯಕ ಕೆಲವೊಮ್ಮೆ ನಮ್ಮ ಆಹಾರಗಳಿಂದಾಗಿ ಹಾಗು ವಿಹಾರಗಳಿಂದಾಗಿ ರಕ್ತದ ಗುಣದಲ್ಲಿ ವ್ಯತ್ಯಾಸ ಕಂಡು ಬಂದಾಗ ರಕ್ತ ದುಷ್ಟವಾಗಿದೆ ಅಥವಾ ಕಲುಷಿತವಾಗಿದೆ ಎಂದು ತಿಳಿಯಬಹುದು.

ರಕ್ತದ ಗುಣಗಳಲ್ಲಾಗುವ ವ್ಯತ್ಯಾಸದಿಂದ ಸಣ್ಣ ಬಾಯಿ ಹುಣ್ಣಿನಿಂದ ಹಿಡಿದು ಅತೀ ಗಂಭೀರವಾದ ಕ್ಯಾನ್ಸರ್ ನಂತಹ ಸಮಸ್ಯೆಗಳೂ ಬರಬಹುದು. ದೇಹದ ಮೇಲೆ ಮೂಡುವ ಮೊಡವೆಗಳಿಗೂ ರಕ್ತ ಅಶುದ್ಧಿ ಒಂದು ಕಾರಣ.

ಇದನ್ನೂ ಓದಿ: Belagavi Blood Donation Camps: ನಾಳೆ ಬೆಳಗಾವಿ ಜಿಲ್ಲೆಯ 22 ಸ್ಥಳಗಳಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ; ಜಿಪಂನಿಂದ ಆಯೋಜನೆ

ರಕ್ತ ಅಶುದ್ಧಿಗೆ ಕಾರಣಗಳೇನು?

ಅತಿಯಾದ ಹುಳಿ, ಉಪ್ಪು, ಖಾರಗಳ ಸೇವನೆ, ಉದ್ದಿನಿಂದ ಮಾಡಿದ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಬೇಕರಿ ಪದಾರ್ಥಗಳು, ನಿತ್ಯ, ಅದರಲ್ಲೂ ರಾತ್ರಿ ಸಮಯದಲ್ಲಿ ಮೊಸರು ಬಳಕೆ, ಮದ್ಯ ಸೇವನೆ ಪ್ರಮುಖ ಕಾರಣಗಳು ಎಂದು ಆಯುರ್ವೇದ ಹೇಳುತ್ತದೆ. ಇದರ ಜೊತೆಗೆ

ಊಟ ಮಾಡಿದ ನಂತರ ಹಗಲಿನಲ್ಲಿ ಮಲಗುವುದು, ಬಿಸಿಲಿನಲ್ಲಿ ಕೆಲಸ ಮಾಡುವುದು, ಅತಿಯಾದ ಸಿಟ್ಟು, ಅಜೀರ್ಣವಿದ್ದಾಗ ಊಟ ಮಾಡುವುದು ಹೀಗೆ ನಮ್ಮ ಆಹಾರ ಪದ್ದತಿಯಿಂದ ಹಿಡಿದು ಅನೇಕ ಕಾರಣಗಳಿಂದ ರಕ್ತದ ಗುಣದಲ್ಲಿ ಬದಲಾವಣೆ ಆಗುತ್ತದೆ.

ಇದರಿಂದಾಗಿ ಹಲವು ಆರೋಗ್ಯ ಸಮಸ್ಯೆಗಳು ಬರಬಹುದು. ಹೀಗೆ ಹದ ತಪ್ಪಿದ ರಕ್ತವನ್ನು ದುಷ್ಟ ರಕ್ತ ಅಥವಾ ಕಲುಷಿತ ರಕ್ತ ಎಂದು ಹೇಳಲಾಗುತ್ತದೆ.

ಪರಿಹಾರವೇನು?

ರಕ್ತ ದುಷ್ಟಿಯ ಪ್ರಮಾಣ ನೋಡಿ ಚಿಕಿತ್ಸೆ ನಿರ್ಧಾರಿತವಾಗಿರುತ್ತದೆ. ಕೆಲವೊಮ್ಮೆ ಮೇಲೆ ಹೇಳಿದ ಆಹಾರ ಸೇವನೆಯನ್ನು ನಿಯಂತ್ರಿಸುವುದರಿಂದಲೂ ರಕ್ತ ಸ್ವಾಭಾವಿಕವಾಗಿ ಸರಿ ಹೋಗುತ್ತದೆ. ಕೆಲವೊಮ್ಮೆ ಔಷಧಗಳ ಸಹಾಯ ಪಡೆಯಬೇಕಾಗುತ್ತದೆ .ಕೆಲವು ಸಂದರ್ಭಗಳಲ್ಲಿ ಪಂಚಕರ್ಮಾದಿ ಚಿಕಿತ್ಸೆಯಿಂದ ರಕ್ತ ಶುದ್ಧಿ ಆಗುತ್ತದೆ.

ರಕ್ತ ಮೋಕ್ಷಣ: ದುಷ್ಟ ರಕ್ತವನ್ನು ಹೊರತೆಗೆಯಲು ಆಯುರ್ವೇದದಲ್ಲಿ ಹೇಳಿರುವ ಇನ್ನೊಂದು ಚಿಕಿತ್ಸಾ ವಿಧಾನವೆಂದರೆ ರಕ್ತ ಮೋಕ್ಷಣ. ಸಾಮಾನ್ಯವಾಗಿ ಮೊಡವೆಗಳಿಂದ ಶೀಘ್ರ ಉಪಶಮನ ಕ್ಕಾಗಿ ಜಲೌಕವಾಚರಣ ಎಂಬ ರಕ್ತ ಮೋಕ್ಷಣ ವಿಧಾನ ಅತ್ಯಂತ ಪರಿಣಾಮಕಾರಿ. ಈ ವಿಧಾನದಲ್ಲಿ ನಿರ್ವಿಷವಾದ ಜಲೌಕ ( leech) ಗಳ ಸಹಾಯದಿಂದ ಕೆಟ್ಟ ರಕ್ತವನ್ನು ಆ ಪ್ರದೇಶದಿಂದ ತೆಗೆಯುವ ಕ್ರಮ.

ಕುಂಬಳಕಾಯಿ, ಹಾಗಲಕಾಯಿ, ಸೋರೆಕಾಯಿ ಇವುಗಳನ್ನು ಬಳಸಿ ಮಾಡಿದ ಅಡುಗೆ ರಕ್ತ ಶುದ್ಧಿಯಾಗಲು ಸಹಕಾರಿ.

ರಕ್ತ ಶುದ್ಧಿಯಿಂದ ಸ್ವಾಭಾವಿಕವಾಗಿಯೇ ಮೊಡವೆಗಳು ಕಡಿಮೆಯಾಗುತ್ತವೆ.

ಡಾ॥ ಸುಹಾಸ್ ಹೆಚ್ ಡಿ

ಮುಖ್ಯ ವೈದ್ಯಾಧಿಕಾರಿ

ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆ, ಶೃಂಗೇರಿ