ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕ್ರ್ಯಾಶ್ ಡಯೆಟ್ ಮಾಡುತ್ತಿದ್ದೀರಾ? ಈ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ಇರಲಿ!

Health Tips: ತೂಕ ಇಳಿಸಿಕೊಳ್ಳಲು ಕೆಲವರು ನಾನಾ ರೀತಿಯ ಹರಸಹಾಸ ಮಾಡುತ್ತಿರುತ್ತಾರೆ. ತೂಕ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಕೆಲವರು ಕ್ರ್ಯಾಶ್ ಡಯೆಟ್ ಅಂದ್ರೆ ತೀರಾ ಕಡಿಮೆ ಪ್ರಮಾಣದ ಆಹಾರ ಸೇವನೆ ಮಾಡುವುದು ಟ್ರೆಂಡ್ ಆಗಿ ಬಿಟ್ಟಿದೆ. ಆದರೆ ವೈಟ್ ಲಾಸ್ ಎಂದು ಕಡಿಮೆ ಪೋಷಕಾಂಶ ಇರುವ ಆಹಾರ ಸೇವನೆ ಮಾಡಿದರೆ ದೇಹ ಹಾಗೂ ಮೆದುಳಿನ ಮಟ್ಟ ಕುಸಿತಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇಂಟರ್ ನೆಟ್ ಚಿತ್ರ

ನವದೆಹಲಿ,ಆ.18: ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳಲು (Weight Loss) ಕೆಲವರು ನಾನಾ ರೀತಿಯ ಹರಸಹಾಸ ಮಾಡುತ್ತಿರುತ್ತಾರೆ. ತೂಕ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಕೆಲವರು ಕ್ರ್ಯಾಶ್ ಡಯೆಟ್ ಅಂದ್ರೆ ತೀರಾ ಕಡಿಮೆ ಪ್ರಮಾಣದ ಆಹಾರ ಸೇವನೆ ಮಾಡುವುದು ಟ್ರೆಂಡ್ ಆಗಿ ಬಿಟ್ಟಿದೆ. ಆದರೆ ವೈಟ್ ಲಾಸ್ ಎಂದು ಕಡಿಮೆ ಪೋಷಕಾಂಶ ಇರುವ ಆಹಾರ ಸೇವನೆ ಮಾಡಿದರೆ ದೇಹ ಹಾಗೂ ಮೆದುಳಿನ ಮಟ್ಟ ಕುಸಿತಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಈ ಕ್ರ್ಯಾಶ್ ಡಯಟ್‌ಗಳನ್ನು ಆಯ್ಕೆ ಮಾಡುವವರು ಆಯಾಸ, ಕಳಪೆ ಏಕಾಗ್ರತೆ, ಕಿರಿಕಿರಿ ಅನುಭವಿಸಿ ಒತ್ತಡಕ್ಕೆ ಒಳಗಾಗಬಹುದು ಎಂದಿದ್ದಾರೆ.

ಕ್ರ್ಯಾಶ್ ಡಯಟ್ ಎಂದರೇನು?

''ಕ್ರ್ಯಾಶ್ ಡಯಟ್' ಅಂದ್ರೆ ನಿಗದಿತ ಅವಧಿಯಲ್ಲಿ ಕಡಿಮೆ ಕ್ಯಾಲೋರಿ ತಿನ್ನುವ ಆಹಾರ ಕ್ರಮವಾಗಿದೆ. ಕಡಿಮೆ ಸಮಯದಲ್ಲಿ ಕ್ಯಾಲೊರಿಗಳನ್ನು ಕಡಿತಗೊಳಿಸುವ ಮೂಲಕ ತ್ವರಿವಾಗಿ ತೂಕ ಇಳಿಸುವುದು ಆಗಿದೆ. ಜರ್ನಲ್ ಆಫ್ ನ್ಯೂಟ್ರಿಷನ್, ಹೆಲ್ತ್ ಮತ್ತು ಏಜಿಂಗ್ ಪ್ರಕಾರ. ಒಬ್ಬ ವ್ಯಕ್ತಿಯು ಕ್ರ್ಯಾಶ್ ಡಯಟ್ ಅನ್ನು ಅನುಸರಿಸಿದಾಗ, ದೇಹವು ಪೌಷ್ಟಿಕಾಂಶದ ಕೊರತೆಯನ್ನು ಅನುಭವಿಸಬಹುದು. ಕ್ಯಾಲೋರಿಗಳು ದೇಹದ ಶಕ್ತಿಯ ಮೂಲವಾಗಿ ಕಾರ್ಯನಿರ್ವಹಿಸುತ್ತವೆ. ಅವು ಕೊರತೆಯಲ್ಲಿರುವಾಗ ಗ್ಲೂಕೋಸ್ ಮಟ್ಟ ಕಡಿಮೆ ಲಭ್ಯವಾಗುತ್ತದೆ.

ಕ್ರ್ಯಾಶ್ ಡೈಯೆಟ್‌ನಿಂದ ಎದುರಾಗುವ ತೊಂದರೆಗಳೇನು?

ಶಕ್ತಿಯ ಕೊರತೆ ಮತ್ತು ಆಯಾಸ:

ಹೆಚ್ಚಿನ ಒತ್ತಡದ ವಾತಾವರಣದಲ್ಲಿ ಕಾರ್ಯನಿರ್ವಹಿಸುವವರಿಗೆ ಗುಣಮಟ್ಟದ ಕ್ಯಾಲೊರಿಗಳ ಅಗತ್ಯ ಇರುತ್ತದೆ. ಇದರ ಕೊರತೆಯಿರುವಾಗ, ಗ್ಲೂಕೋಸ್ ಕಡಿಮೆ ಲಭ್ಯವಾಗುತ್ತದೆ. ಹೋಗಾಗಿ ತೀವ್ರ ಆಯಾಸ, ತಲೆಸುತ್ತು ಹಾಗೂ ಆಲಸ್ಯತನ ಉಂಟಾಗುತ್ತದೆ.

Health Tips: ಜೀರ್ಣಕ್ರಿಯೆ ಹೆಚ್ಚಿಸಲು ಯಾವೆಲ್ಲ ಆಹಾರ ಸೇವಿಸಬೇಕು? ಕಾಂಬಿನೇಷನ್ ಹೇಗಿರಬೇಕು? ಇಲ್ಲಿದೆ ಸಂಪೂರ್ಣ ಗೈಡ್‌

ಮೆದುಳಿನ ಮೇಲೆ ಪರಿಣಾಮ ಬೀರುವ ಪೋಷಕಾಂಶಗಳ ಕೊರತೆ:

ಕೆಲವು ಪೋಷಕಾಂಶಗಳ ಕೊರತೆಗಳು ಕಾಡುವಾಗ ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಸರಿಯಾದ ಮೆದುಳಿನ ಕಾರ್ಯಕ್ಕೆ ಅಗತ್ಯವಾದ ಪೌಷ್ಟಿಕಾಂಶದ ಮೂಲವನ್ನು ನೀವು ಸೇವನೆ ಮಾಡಬೇಕಾಗುತ್ತದೆ.

ಮರೆವು ಹಾಗೂ ಬ್ರೈನ್ ಫಾಗ್‌:

ಮೆದುಳನ್ನು ಸಕ್ರಿಯ ಗೊಳಿಸಲು ಗ್ಲೂಕೋಸ್ ಅತ್ಯಂತ ಪ್ರಮುಖವಾಗಿದೆ. ಆಹಾರವನ್ನು ನೀವು ಕಡಿಮೆ ಸೇವನೆ ಮಾಡಿದಾಗ ಏಕಾಗ್ರತೆಯ ಸಮಸ್ಯೆ, ಆಲೋಚನಾ ಶಕ್ತಿ ಕಡಿಮೆಯಾಗುವುದು ಅಥವಾ ಕೆಲಸಕ್ಕೆ ಗಮನ ನೀಡಲು ಸಾಧ್ಯ ಆಗುವುದಿಲ್ಲ.

ವಿಟಮಿನ್ ಬಿ 12 ಕೊರತೆ:

ಈ ಅಗತ್ಯ ಪೋಷಕಾಂಶವು ನರಗಳ ಕಾರ್ಯ ಚಟುವಟಿಕೆ ಬೆಂಬಲಿಸಲು ಸಹಾಯ ಮಾಡುತ್ತದೆ‌. ಇದು ಮೆದುಳಿನ ಆರೋಗ್ಯಕ್ಕೆ ಅಗತ್ಯವಾಗಿರುತ್ತದೆ. ನೀವು ಕಡಿಮೆ ಪೋಷಕಾಂಶ ಇರುವ ಸೇವನೆ ಮಾಡುವಾಗ ಇದರ ಕೊರತೆಯೂ ಕಾಡಬಹುದು.

ಮೆಗ್ನೀಸಿಯಮ್ ಕೊರತೆ:

ದೇಹದಲ್ಲಿನ ಮೆಗ್ನೀಸಿಯಮ್ ಪ್ರಮಾಣ ಅತೀ ಅಗತ್ಯವಾಗಿ ಬೇಕಾಗುತ್ತದೆ. ಇದು ಜೀವರಾಸಾಯನಿಕ ಕ್ರಿಯೆಗಳ ನಿಯಂತ್ರಣಕ್ಕೆ ಕಾರಣವಾಗಿದೆ.ಮೆದುಳಿನ ಕಾರ್ಯ, ​​ಗಮನ, ಕಲಿಕೆ, ನರ ಸಂಕೇತ ಮತ್ತು ಮನಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ತಜ್ಞರ ಸಲಹೆ ಏನು?

*ದಿಢೀರನೆ ಊಟ ಬಿಟ್ಟು ಡಯಟ್ ನಲ್ಲಿ ಪಾಲ್ಗೊಳ್ಳುವುದು ಅಪಾಯಕಾರಿ

*ತೂಕ ಇಳಿಸಬೇಕೆಂದು ಇದ್ದರೂ ಪೋಷಕಾಂಶ, ಪ್ರೋಟೀನ್, ನಾರಿನಂಶ ಇರುವ ಆಹಾರ ತ್ಯಜಿಸಬೇಡಿ‌

*ದಿನನಿತ್ಯದ ವ್ಯಾಯಾಮ ಹಾಗೂ ಸರಿಯಾದ ನಿದ್ರೆ ಮಾಡಿ

*ಕಡಿಮೆ ಕ್ಯಾಲೋರಿ ಎಂದು ದೇಹಕ್ಕೆ ಅಗತ್ಯವಾದ ಆಹಾರಗಳನ್ನು ತ್ಯಜಿಸಬೇಡಿ