ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಲೆನೋವು ಬರುತ್ತಿದೆಯೇ? ನೀವು ಮಾಡುವ ಈ ತಪ್ಪುಗಳು ಕೂಡ ಕಾರಣವಾಗಿರಬಹುದು!

Health Tips: ಕೆಲವೊಮ್ಮೆ ಬಿಸಿಲಿಗೆ ಹೋದಾಗ, ಒತ್ತಡ ಇದ್ದಾಗ ಅಥವಾ ನೀವು ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸದಿದ್ದಾಗ ಕೂಡ ತಲೆನೋವು ಬರಬಹುದು. ಆದರೆ ಪದೇ ಪದೇ ತಲೆನೋವು ಬರುವುದು ಸಾಮಾನ್ಯವಾದ ಸಮಸ್ಯೆಯಲ್ಲ, ಇದರ ಬಗ್ಗೆ ಮೊದಲೇ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ. ಕೆಲವೊಮ್ಮೆ ನಮ್ಮ ದೈನಂದಿನ ಅಭ್ಯಾಸದಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ಸಂಗ್ರಹ ಚಿತ್ರ

ನವದೆಹಲಿ,ಆ. 4: ತಲೆನೋವು (Headaches) ಅನ್ನೋದು ಹೆಚ್ಚಿನ ಜನರಿಗೆ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಕೆಲವೊಮ್ಮೆ ಬಿಸಿಲಿಗೆ ಹೋದಾಗ, ಒತ್ತಡ ಇದ್ದಾಗ ಅಥವಾ ನೀವು ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸದಿದ್ದಾಗ ಕೂಡ ತಲೆನೋವು ಬರಬಹುದು. ಆದರೆ ಪದೇ ಪದೇ ತಲೆನೋವು ಬರುವುದು ಸಾಮಾನ್ಯವಾದ ಸಮಸ್ಯೆಯಲ್ಲ, ಇದರ ಬಗ್ಗೆ ಮೊದಲೇ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ. ಕೆಲವೊಮ್ಮೆ ನಮ್ಮ ದೈನಂದಿನ ಅಭ್ಯಾಸದಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ತಲೆನೋವಿಗೆ ಕಾರಣವಾಗುವ ದಿನನಿತ್ಯದ ಅಭ್ಯಾಸಗಳು:

ಊಟ ತಪ್ಪಿಸುವುದು:

ಒಬ್ಬ ವ್ಯಕ್ತಿಯು ಊಟ ತಪ್ಪಿಸಿದಾಗ ಅಥವಾ ಅನಿಯಮಿತ ಸಮಯದಲ್ಲಿ ಊಟ ಮಾಡಿದಾಗ ತಲೆನೋವಿಗೆ ಕಾರಣವಾಗಬಹುದು. ರಕ್ತದಲ್ಲಿನ ಸಕ್ಕರೆಯ ಮಟ್ಟ ಕುಸಿತವಾದಾಗ ವಿಶೇಷವಾಗಿ ಮೈಗ್ರೇನ್‌ಗೆ ಕಾರಣವಾಗುತ್ತದೆ. ಹಾಗಾಗಿ ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡಿ.

ಸಾಕಷ್ಟು ಪ್ರಮಾಣದ ನೀರು ಕುಡಿಯದಿರುವುದು:

ನೀರು ದೇಹಕ್ಕೆ ಬಹಳಷ್ಟು ಅಗತ್ಯವಾಗಿದೆ. ನಿರ್ಜಲೀಕರಣ ಉಂಟಾದಾಗಲೂ ತಲೆ ನೋವಿಗೆ ಕಾರಣವಾಗಬಹುದು. ದಿನವಿಡೀ ನಿಮ್ಮ ದೇಹಕ್ಕೆ ಸಾಕಷ್ಟು ದ್ರವಗಳನ್ನು ಒದಗಿಸುವುದು ಸೂಕ್ತವಾಗಿದೆ

Health Tips: ನೇರಳೆ ಹಣ್ಣು ತಿಂದ ತಕ್ಷಣ ಹಾಲು ಕುಡಿಯುತ್ತೀರಾ? ಹೊಟ್ಟೆ ಸಮಸ್ಯೆಗೆ ಕಾರಣವಾಗಬಹುದು!

ಕಳಪೆ ನಿದ್ರೆ:

ಅಸಮರ್ಪಕ ಅಥವಾ ಅತಿಯಾದ ನಿದ್ರೆ ತಲೆನೋವಿಗೆ ಕೂಡ ಕಾರಣವಾಗಬಹುದು.ರಾತ್ರಿ ಏಳರಿಂದ ಎಂಟು ಗಂಟೆಗಳ ನಿದ್ರೆಯ ದಿನಚರಿಯನ್ನು ಪಾಲಿಸುವುದು ಅಗತ್ಯ

ಮೊಬೈಲ್ ಬಳಕೆ;

ಕಂಪ್ಯೂಟರ್ ಅಥವಾ ಮೊಬೈಲ್ ನಲ್ಲಿ ಹೆಚ್ಚು ಸಮಯ ಇರುವುದರಿಂದ ಕಣ್ಣಿನ ಒತ್ತಡ ಉಂಟಾಗಬಹುದು. ಕುತ್ತಿಗೆಯಲ್ಲಿ ಸ್ನಾಯುಗಳ ಸೆಳೆತ ಹಾಗೂ ಒತ್ತಡದಿಂದ ತಲೆನೋವಿಗೆ ಕಾರಣವಾಗಬಹುದು.

ಅತಿಯಾದ ಕಾಫಿ/ಚಹಾ ಸೇವನೆ:

ಹೆಚ್ಚು ಕೆಫೀನ್ ಸೇವಿಸುವುದು ಅಥವಾ ದಿಢೀರನೆ ಚಹಾ ಕುಡಿಯುವುದನ್ನು ನಿಲ್ಲಿಸುವು ದರಿಂದಲೂ ತಲೆನೋವು ಹೆಚ್ಚಾಗಬಹುದು. ಆದರೆ ನಿಮ್ಮ ತಲೆನೋವಿಗೆ ವಾರಕ್ಕೆ ಎರಡು ಬಾರಿಗಿಂತ ಹೆಚ್ಚು ಕಾಣಿಸಿಕೊಂಡರೆ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.