ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗ್ಯಾಸ್ಟ್ರಿಕ್‌ ಸಣ್ಣ ಆರೋಗ್ಯ ಸಮಸ್ಯೆಯೆಂದು ನಿರ್ಲಕ್ಷ್ಯ ಮಾಡಬೇಡಿ: ಈ ಬಗ್ಗೆ ವೈದ್ಯರು ಹೇಳೋದೇನು?

Health Tips: ಆಧುನಿಕ ಆಹಾರ ಪದ್ಧತಿಯಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಪ್ರತಿಯೊಬ್ಬರನ್ನು ಕಾಡಲು ಶುರು ಮಾಡಿದೆ. ಏನೇ ತಿಂದರೂ ಕೆಲವರಿಗೆ ಹೊಟ್ಟೆ ಉಬ್ಬರಿಸಿಕೊಳ್ಳುವುದು, ಜಡತ್ವ, ಗ್ಯಾಸ್, ತೇಗು ಹೀಗೆ ಹಲವು ಸಮಸ್ಯೆ ಕಂಡುಬರುತ್ತದೆ. ಗ್ಯಾಸ್ಟ್ರಿಕ್‌ನಿಂದ ಯಾವೆಲ್ಲ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ? ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು? ಗ್ಯಾಸ್ಟ್ರಿಕ್‌ ನಿರ್ಲಕ್ಷ್ಯ ಮಾಡಿದ್ರೆ ಎಂತಹ ಸಮಸ್ಯೆಗಳನ್ನು ಎದುರಿಸಬೇಕಾಗುವುದು? ಮುಂತಾದ ಸಂದೇಹಗಳಿಗೆ ʼವಿಶ್ವವಾಣಿ ಹೆಲ್ತ್‌ʼ ಚಾನೆಲ್‌ನ ಆಯುರ್ವೇದ ತಜ್ಞ ಡಾ. ಮಲ್ಲಿಕಾರ್ಜುನ್‌ ಡಂಬಳ ಉತ್ತರ ನೀಡಿದ್ದಾರೆ.

ಆಯುರ್ವೇದ ತಜ್ಞ ಡಾ. ಮಲ್ಲಿಕಾರ್ಜುನ್‌ ಡಂಬಳ

ಬೆಂಗಳೂರು, ಮಾ. 11: ಪ್ರತಿಯೊಂದು ಆರೋಗ್ಯ ಸಮಸ್ಯೆಗೆ ಪ್ರಮುಖ ಕಾರಣವೇ ಗ್ಯಾಸ್ಟ್ರಿಕ್‌ (Gastric Problems). ಗ್ಯಾಸ್ಟ್ರಿಕ್‌ನಿಂದ ಯಾವೆಲ್ಲ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ? ಅವುಗಳಿಗೆ ಯಾವ ರೀತಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು? ಗ್ಯಾಸ್ಟ್ರಿಕ್‌ ನಿರ್ಲಕ್ಷ್ಯ ಮಾಡಿದ್ರೆ ಎಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ? ಮುಂತಾದ ಪ್ರಶ್ನೆಗಳಿಗೆ ಆಯುರ್ವೇದ ತಜ್ಞ ಡಾ. ಮಲ್ಲಿಕಾರ್ಜುನ್‌ ಡಂಬಳ ʼವಿಶ್ವವಾಣಿ ಹೆಲ್ತ್‌ʼ ಚಾನೆಲ್‌ನ ಉತ್ತರಿಸಿದ್ದಾರೆ.

ಆಧುನಿಕ ಆಹಾರ ಪದ್ಧತಿಯಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಪ್ರತಿಯೊಬ್ಬರನ್ನು ಕಾಡಲು ಶುರು ಮಾಡಿದೆ. ಏನೇ ತಿಂದರೂ ಹೊಟ್ಟೆ ಉಬ್ಬರಿಸಿಕೊಳ್ಳುವುದು, ಜಡತ್ವ, ಗ್ಯಾಸ್, ತೇಗು ಹೀಗೆ ಹಲವು ಸಮಸ್ಯೆಗೆ ಉಂಟಾಗುತ್ತದೆ. ಗ್ಯಾಸ್ಟ್ರಿಕ್‌ ಅನ್ನೋದು ಎಲ್ಲ ಕಾಯಿಲೆಗಳ ಬೇರು. ಹಾಗಾಗಿ ಮೊದಲೇ ಇದಕ್ಕೆ ಪರಿಹಾರ ಕಂಡುಕೊಂಡರೆ ಹಲವು ಆರೋಗ್ಯ ಸಮಸ್ಯೆ ಬರದಂತೆ ತಡೆಯಬಹುದು ಎಂದರು.

ವಿಡಿಯೊ ನೋಡಿ:



ಹೊಟ್ಟೆಯ ಮೇಲ್ಭಾಗದಲ್ಲಿ, ಅಂದರೆ ಜಠರ ಅಥವಾ ದೊಡ್ಡ ಕರುಳಿನಲ್ಲಿ ಜೀರ್ಣಕ್ರಿಯೆಗೆ ಅಗತ್ಯವಾದ ಹೈಡ್ರೋಕ್ಲೋರಿಕ್ ಆಮ್ಲ ಹೆಚ್ಚಾದಾಗ ಹೊಟ್ಟೆಯ ಒಳಪದರದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದು ಹೆಚ್ಚಾಗಿ ಎದೆ ಹಾಗೂ ಹೊಟ್ಟೆಯಲ್ಲಿ ಉರಿ, ನೋವು ಹಾಗೂ ಹೊಟ್ಟೆಯಲ್ಲಿ ಭಾರವಾದಂತೆ ಅನುಭವವಾಗುತ್ತದೆ. ಇದನ್ನು ಗ್ಯಾಸ್ಟ್ರಿಕ್ ಎಂದು ಕರೆಯಲಾಗುತ್ತದೆ ಎಂದರು.

ಇಂತಹ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಆಧುನಿಕ ಆಹಾರ ಪದ್ಧತಿ, ಒತ್ತಡದ ಜೀವನ ಶೈಲಿ ಮತ್ತು ದೈಹಿಕ ವ್ಯಾಯಾಮದ ಕೊರತೆಯಿಂದಾಗಿ ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳು ಜಾಸ್ತಿಯಾಗುತ್ತವೆ.‌ ಇದರಿಂದ ಹೃದಯ ಕಾಯಿಲೆ, ರಕ್ತಹೀನತೆ, ಹೊಟ್ಟೆ ಹುಣ್ಣಿನಂತ ಅನೇಕ ಗಂಭೀರ ಕಾಯಿಲೆಗಳಿಗೆ ಕಾಣಿಸಿಕೊಳ್ಳುತ್ತವೆ. ಹಾಗಾಗಿ ಸಣ್ಣ ಕಾಯಿಲೆಯಿಂದಲೇ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಅಗತ್ಯ ಎಂದು ಅವರು ಸಲಹೆ ನೀಡಿದರು.

ಪರಿಹಾರವೇನು?

  • ಗ್ಯಾಸ್ಟ್ರಿಕ್‌ಗೆ ಕಾರಣವೇನು ಎಂಬುದನ್ನು ಮೊದಲು ವೈದ್ಯರ ಬಳಿ ಪರೀಕ್ಷಿಸಿ.
  • ಮಸಾಲೆಯುಕ್ತ, ಎಣ್ಣೆಯುಕ್ತ ಆಹಾರ ಬಳಕೆ ಕಡಿಮೆ ಮಾಡಿ.
  • ಸರಿಯಾದ ಸಮಯಕ್ಕೆ ಊಟ, ತಿಂಡಿ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.
  • ಚಹಾ ಹಾಗೂ ಕಾಫಿಯನ್ನು ಮಿತವಾಗಿ ಕುಡಿಯಿರಿ.
  • ಮದ್ಯಪಾನ ತಪ್ಪಿಸಿ.