ಬೆಂಗಳೂರು, ಜೂ. 8: ಸಣ್ಣಪುಟ್ಟ ಕಾರಣಗಳಿಗಾಗಿ ಮನೆಯಲ್ಲಿ ಪತಿ, ಪತ್ನಿಯ ನಡುವೆ ನಡೆಯುವ ಜಗಳಗಳು ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಕೋರ್ಟ್ ಮೆಟ್ಟಿಲೇರುತ್ತವೆ. ಇವು ಕೊನೆಗೆ ವಿಚ್ಛೇದನದ ಹಂತವನ್ನು ತಲುಪುತ್ತವೆ. ಇದಕ್ಕೆ ಮುಖ್ಯ ಕಾರಣ ಅವರಲ್ಲಿರುವ ಹಾರ್ಮೋನ್‌ಗಳು ಮತ್ತು ಈಗಿನ ಎಡಿಟೆಡ್ ಜಗತ್ತು ಎನ್ನುತ್ತಾರೆ ಮೈಸೂರು ವಿಶ್ವವಿದ್ಯಾನಿಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ. ಸುತ್ತೂರು ಮಾಲಿನಿ (Dr. Suttur Malini). ʼವಿಶ್ವವಾಣಿ ಹೆಲ್ತ್ʼ (Vishwavani health) ಯೂಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಪುರುಷ ಮತ್ತು ಮಹಿಳೆ ವಿವಾಹವಾಗುವ ಮೊದಲು ದಾಂಪತ್ಯ ಎಂದರೇನು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಸಾಮಾನ್ಯವಾಗಿ ಪುರುಷ ಏಕಾಂತ ಬಯಸುತ್ತಾನೆ. ಮಹಿಳೆ ಸುರಕ್ಷತೆಯನ್ನು ಬಯಸುತ್ತಾಳೆ. ಇದು ಸರಿಯಾಗಿ ಸಿಗದೇ ಇದ್ದಾಗಲೇ ಜಗಳಗಳು ಪ್ರಾರಂಭವಾಗುತ್ತದೆ. ಮದುವೆಯಾಗುವ ಮೊದಲು ಪ್ರತಿಯೊಬ್ಬರೂ ಜಾನ್ ಗ್ರೇ ಬರೆದಿರುವ 'Men Are from Mars, Women Are from Venus' ಪುಸ್ತಕವನ್ನು ಓದಬೇಕು ಎಂದು ಹೇಳಿದ್ದಾರೆ.
ವಿಡಿಯೊ ಇಲ್ಲಿದೆ:
ಈ ಪುಸ್ತಕ ಹೇಳುವುದೇನೆಂದರೆ ಮಹಿಳೆ ಮತ್ತು ಪುರುಷನ ಆಲೋಚನೆ, ತರ್ಕ, ಅಭಿರುಚಿ ಸಂಪೂರ್ಣ ಭಿನ್ನವಾಗಿರುತ್ತದೆ. ಇದನ್ನು ಇಬ್ಬರೂ ಅರ್ಥ ಮಾಡಿಕೊಳ್ಳಬೇಕು. ಪರಸ್ಪರರ ವ್ಯತ್ಯಾಸಗಳನ್ನು ಅರ್ಥ ಮಾಡಿಕೊಂಡು ಹೊಂದಿಕೊಂಡು ಹೋಗಬೇಕು ಆಗಲೇ ದಾಂಪತ್ಯ ಜೀವನ ಸುಖವಾಗಿರಲು ಸಾಧ್ಯ ಎಂದು ತಿಳಿಸಿದ್ದಾರೆ.
ಎಲ್ಲರೂ ಮನುಷ್ಯರೇ. ಪುರುಷರಲ್ಲಿ ಟೆಸ್ಟೋಸ್ಟಿರಾನ್ ಹಾರ್ಮೋನ್ ಹೆಚ್ಚಾಗಿದ್ದು, ಅದು ಅವರ ಅಗ್ರೆಸಿವ್ ಬಿಹೇವಿಯರ್ ಗೆ ಕಾರಣವಾಗಿರುತ್ತದೆ. ಅವರಲ್ಲಿ ರಿಸ್ಕ್ ಟೇಕಿಂಗ್ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಅದೇ ರೀತಿ ಮಹಿಳೆಯರಲ್ಲಿ ಈಸ್ಟೋಜನ್, ಆಕ್ಸಿಟೊಸಿನ್ ಹೆಚ್ಚಾಗಿದ್ದು, ಇದು ನಂಬಿಕೆ, ಪ್ರೀತಿ, ಆಪ್ತತೆ, ಸುರಕ್ಷತೆಯನ್ನು ಬಯಸುವಂತೆ ಮಾಡುತ್ತದೆ. ಇದು ಹಾರ್ಮೋನ್ ಗಳ ವ್ಯತ್ಯಾಸದಿಂದ ಆಗುವಂತದ್ದು ಎಂಬುದನ್ನು ಮೊದಲು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು ಎಂದು ವಿವರಿಸಿದ್ದಾರೆ.
ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಬೇಗ ಮಾತಾಡ್ತಾರೆ? ಏನಂತಾರೆ ತಜ್ಞರು?
ಇದಲ್ಲದೇ ಮೆದುಳಿನಲ್ಲಿರುವ ವ್ಯತ್ಯಾಸಗಳು. ಮಹಿಳೆಯರು ಏಕ ಕಾಲಕ್ಕೆ ಹಲವು ಕಾರ್ಯಗಳು ಮಾಡಬಲ್ಲರು. ಆದರೆ ಪುರುಷರಿಗೆ ಇದು ಸಾಧ್ಯವಿಲ್ಲ. ಯಾಕೆಂದರೆ ಮಹಿಳೆಯರ ಮೆದುಳಿನ ಮಧ್ಯ ಭಾಗದಲ್ಲಿರುವ ಪದರವು ಎರಡು ಬದಿ ಮೆದುಳನ್ನು ಸಂಪರ್ಕಿಸುವಂತೆ ಮಾಡುತ್ತದೆ. ಆದರೆ ಇದು ಪುರುಷನ ಮೆದುಳಿನಲ್ಲಿಲ್ಲ. ಹೀಗಾಗಿ ಆತ ಏಕ ಕಾಲಕ್ಕೆ ಹಲವು ಕೆಲಸಗಳನ್ನು ಮಾಡುವುದು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಇನ್ನು ಹೆಂಗಸರ ಮೆದುಳಿನಲ್ಲಿರುವ ಅಮೆಕೆಡೆಲ್ಲ ಸಣ್ಣದು, ಪುರುಷರಲ್ಲಿ ದೊಡ್ಡದು. ಇದು ರಿಸ್ಕ್ ಟೇಕಿಂಗ್‌ಗೆ ಪ್ರೇರಣೆ ನೀಡುವಂತದ್ದು. ಪುರುಷರಲ್ಲಿ ಹಿಪೊಕೋಪಸ್ ಎಂಬುದಿಲ್ಲ. ಇದರಿಂದ ಅವರಿಗೆ ಎಮೋಷನಲ್ ಮೆಮೊರಿ ಇರುವುದಿಲ್ಲ. ಇದು ಇಲ್ಲದೇ ಇರುವುದೇ ಹಲವು ಬಾರಿ ಜಗಳಕ್ಕೆ ಕಾರಣವಾಗುತ್ತದೆ ಎಂದು ಪ್ರೊ. ಮಾಲಿನಿ ಮಾಹಿತಿ ನೀಡಿದ್ದಾರೆ.
ಪುರುಷ ಏಕಾಂತ ಬಯಸುತ್ತಾನೆ. ಆದರೆ ಮಹಿಳೆ ಇದನ್ನು ಬಯಸುವುದಿಲ್ಲ. ಹೆಣ್ಣು ಮಕ್ಕಳಲ್ಲಿ ಮಾತು ಜಾಸ್ತಿ ಇರುತ್ತದೆ. ಆದರೆ ಗಂಡಸರಿಗೆ ಕುಟುಂಬವನ್ನು ಸಲಹಬೇಕು ಎನ್ನುವುದಿರುತ್ತದೆ. ಸ್ತ್ರೀ ಮತ್ತು ಪುರುಷರಿಬ್ಬರ ಆಲೋಚನೆಗಳು ಸಂಪೂರ್ಣ ಭಿನ್ನವಾಗಿರುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಮಹಿಳೆಯರಲ್ಲಿ ಸುರಕ್ಷತೆಯನ್ನು ಬಯಸುವಂತೆ, ಪುರುಷರು ಏಕಾಂತವನ್ನು ಬಯಸುತ್ತಾರೆ. ಪುರುಷರಿಗೆ ಏನು ಬೇಕು ಎಂಬುದು ಕೂಡ ಅವರಿಗೆ ಗೊತ್ತಿರುವುದಿಲ್ಲ. ಹೀಗಾಗಿ ಪರಸ್ಪರ ಮಾತಾಡಿಕೊಳ್ಳಿ. ವಿಚ್ಛೇದನಕ್ಕೆ ಕಾರಣವಾಗವ ಸಣ್ಣ ಸಣ್ಣ ವಿಚಾರಗಳು ಏನು ಎಂಬುದನ್ನು ತಿಳಿದುಕೊಳ್ಳಿ. ದೌರ್ಬಲ್ಯಗಳನ್ನು ಒಪ್ಪಿಕೊಂಡು ಅರ್ಥ ಮಾಡಿಕೊಂಡು ಜೀವನ ನಡೆಸಬೇಕು ಎಂಬುದನ್ನು ಅವರು ಹೇಳಿದ್ದಾರೆ..
ಮನುಷ್ಯನ ಮೂಲ ಎಲ್ಲಿದೆ, ಅವನ ಉಗಮವಾಗಿದ್ದು ಹೇಗೆ ಗೊತ್ತೇ?
ಪುರುಷರು ಏಕಾಂತವನ್ನು ಬಯಸಿದಾಗ ಮಹಿಳೆಯರು ತಾಳ್ಮೆಯಿಂದ ಕಾಯಿರಿ. ಅದೇ ರೀತಿ ಪುರುಷರು ಏಕ ಕಾಲಕ್ಕೆ ಹಲವು ಕೆಲಸ ಮಾಡಲಾಗುವುದಿಲ್ಲ ಎಂಬುದನ್ನು ಅರಿಯಿರಿ. ಮಹಿಳೆಯರಿಗೆ ಸುರಕ್ಷತೆ ಬೇಕು ಎಂಬುದನ್ನು ಪುರುಷರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.