Amla Tea: ನಿತ್ಯ ಆಮ್ಲ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?
ಟೀ ಸೇವಿಸುವುದನ್ನು ಅತಿಯಾಗಿ ಕೆಲವರು ಇಷ್ಟ ಪಡುತ್ತಾರೆ. ಆದರೆ ಖಾಲಿ ಟೀ ಸೇವಿಸುವ ಬದಲು ಆಮ್ಲ ಟೀ ಸೇವಿಸುವುದರಿಂದ ನಿಮ್ಮ ದೇಹದ ಆರೋಗ್ಯ ಸುಧಾರಿಸುವ ನೆಲೆಯಲ್ಲಿ ಹಲವು ರೀತಿಯ ಆರೋಗ್ಯ ಪ್ರಯೋಜನ ದೊರೆಯಲಿದೆ. ನೆಲ್ಲಿಕಾಯಿ ಚಹಾದಲ್ಲಿ ಔಷಧೀಯ ಸತ್ವ ಇದ್ದು ಇದರ ಸೇವನೆ ಮಾಡಿದಷ್ಟು ನಿಮ್ಮ ಆರೋಗ್ಯ ವೃದ್ಧಿಯಾಗುವುದು. ಹಾಗಾಗಿ ಬೆಳಗ್ಗಿನ ಸಮಯದಲ್ಲಿ ಚಹಾ ಬದಲು ಈ ಆರೋಗ್ಯಕರ ಪಾನೀಯ ಸೇವಿಸಿ.


ನವದೆಹಲಿ: ಕೆಲವರಿಗಂತೂ ನಿತ್ಯ ಆರಂಭ ಆಗೋದೆ ಒಂದು ಕಪ್ ಚಹಾ ಸೇವನೆ ಮೂಲಕ ಬೆಳಗ್ಗೆ ಎದ್ದ ಕೂಡಲೇ, ತಿಂಡಿ ತಿನ್ನುವಾಗ, ಪುನಃ ಸಂಜೆ ಹೀಗೆ ಬಹುತೇಕರು ದಿನಕ್ಕೆ 3-4 ಬಾರಿಯಾದರೂ ಟೀ ಸೇವಿಸುವುದನ್ನು ಅತಿಯಾಗಿ ಇಷ್ಟ ಪಡುತ್ತಾರೆ. ಆದರೆ ಖಾಲಿ ಟೀ ಸೇವಿಸುವ ಬದಲು ಆಮ್ಲ ಟೀ (Amla Tea) ಸೇವಿಸುವುದರಿಂದ ನಿಮ್ಮ ದೇಹದ ಆರೋಗ್ಯ ಸುಧಾರಿಸುವ ನೆಲೆಯಲ್ಲಿ ಹಲವು ರೀತಿಯ ಆರೋಗ್ಯ ಪ್ರಯೋಜನ ದೊರೆಯಲಿದೆ. ನೆಲ್ಲಿಕಾಯಿ ಚಹಾದಲ್ಲಿ ಔಷಧೀಯ ಸತ್ವ ಇದ್ದು ಇದರ ಸೇವನೆ ಮಾಡಿದಷ್ಟು ನಿಮ್ಮ ಆರೋಗ್ಯ ವೃದ್ಧಿಯಾಗುವುದು. ಹಾಗಾಗಿ ಬೆಳಗ್ಗಿನ ಸಮಯದಲ್ಲಿ ಚಹಾ ಬದಲು ಈ ಆರೋಗ್ಯಕರ ಪಾನೀಯ ಸೇವಿಸಿ.
ನೆಲ್ಲಿ ಕಾಯಿಯಲ್ಲಿ ಖನಿಜ, ಜೀವ ಸತ್ವ ಮತ್ತು ಪೋಷಕಾಂಶ ಹೇರಳವಾಗಿದ್ದು ಕೂದಲು , ಕಣ್ಣು ಮತ್ತು ಚರ್ಮದ ಆರೈಕೆಗೆ ಬಹಳ ಮುಖ್ಯ ಪಾತ್ರ ವಹಿಸಲಿದೆ. ಹಾಗಾಗಿ ನೆಲ್ಲಿಕಾಯಿ ಹಾಗೇ ತಿಂದರೂ ಉತ್ತಮ ಆದರೆ ಅದನ್ನು ನೇರವಾಗಿ ಸೇವಿಸಲು ಕಷ್ಟ ಎನ್ನುವವರು ನೆಲ್ಲಿ ಕಾಯಿಯಿಂದ ತಯಾರಿಸುವ ಉಪ್ಪಿನಕಾಯಿ, ಟೀ ಅಂತಹ ಪಾನೀಯ ಸೇವನೆ ಮಾಡಬಹುದು. ನೆಲ್ಲಿಕಾಯಿ ಬಳಸಿ ಟೀ ಮಾಡಿ ಕುಡಿದರೆ ಆಯುರ್ವೇದದ ಔಷಧದಂತೆ ದೇಹದ ಆರೋಗ್ಯ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ.
ಉತ್ತಮ ಜೀರ್ಣಕ್ರಿಯೆ:
ಆಮ್ಲ ಚಹಾ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗಿರಲಿದೆ. ಹೊಟ್ಟೆ ಸಮಸ್ಯೆ, ಉದಿದಂತೆ ಭಾಸವಾಗುವುದು, ಅಜೀರ್ಣ, ಮಲಬದ್ಧತೆ ಇಂತಹ ಸಮಸ್ಯೆಗೆ ಆಮ್ಲ ಟೀ ಮಾಡಿ ಕುಡಿದರೆ ಪರಿಹಾರವಾಗಲಿದೆ. ಹೊಟ್ಟೆ ಸಂಬಂಧಿತ ಸಮಸ್ಯೆ ನಿರ್ಮೂಲನೆ ಮಾಡು ವ ಜೊತೆಗೆ ಆರೋಗ್ಯ ಯುಕ್ತವಾಗಿರಲು ಆಮ್ಲ ಟೀ ಆಯುರ್ವೇದಿಕ್ ಔಷಧದಂತೆ ಕಾರ್ಯ ನಿರ್ವಹಿಸುತ್ತದೆ.
ತೂಕ ಇಳಿಕೆ:
ಬಹುತೇಕರಿಗೆ ಕಾಡುವ ಅತೀ ದೊಡ್ಡ ಸಮಸ್ಯೆ ಎಂದರೆ ತೂಕ ಏರಿಕೆ, ಅತಿಯಾಗಿ ಹಸಿವಾದಾಗ ಸಿಕ್ಕ ಸಿಕ್ಕ ಜಂಕ್ ಫುಡ್ ತಿಂದು ಅನಗತ್ಯ ಕೊಬ್ಬನ್ನು ನಮ್ಮ ದೇಹದಲ್ಲಿ ಸಂಗ್ರಹ ಮಾಡಿ ಬಿಡುತ್ತೇವೆ. ಅಂತಹ ಸಂದರ್ಭದಲ್ಲಿ ಆಮ್ಲ ಟೀ ಕುಡಿದರೆ ಹಸಿವು ಇಂಗುವ ಜೊತೆಗೆ ಬೊಜ್ಜು ಬರದಂತೆ ತಡೆಹಿಡಿದಂತಾಗುವುದು. ಬೇಡದ ಕೊಲೆಸ್ಟ್ರಾಲ್ ಶಮನ ಆಗುವ ಜೊತೆಗೆ ದೇಹದ ತೂಕ ಕಡಿಮೆ ಆಗುವುದು ಮಾತ್ರವಲ್ಲದೆ ಹೃದ್ರೋಗ, ಕಿಡ್ನಿ ಸ್ಟೋನ್ ಇತರ ಸಮಸ್ಯೆಗೆ ಗುರಿಯಾಗದಂತೆ ನಮ್ಮ ದೇಹವನ್ನು ಕಾಪಾಡಲಿದೆ.
ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ:
ನೆಲ್ಲಿಕಾಯಿಯಲ್ಲಿ ಕಿತ್ತಳೆ ಹಣ್ಣಿಗಿಂತಲೂ 20 ಶೇಕಡ ಅಧಿಕ ವಿಟಮಿನ್ ಸಿ ಅಂಶವಿದೆ. ವಿಟಮಿನ್ ಸಿ ಯಿಂದಾಗಿ ಬಿಳಿರಕ್ತ ಕಣದ ಪ್ರಮಾಣ ಹೆಚ್ಚಾಗುವ ಕಾರಣ ರೋಗಗಳು, ಸೋಂಕುಗಳು ಬಾರದಂತೆ ತಡೆ ಹಿಡಿದಂತಾಗುದು. ಅಷ್ಟು ಮಾತ್ರವಲ್ಲದೆ ಸಕ್ಕರೆ ಮಟ್ಟ ನಿಯಂತ್ರ ಣದಲ್ಲಿ ಇಡಲು ಕೂಡ ಆಮ್ಲ ಟೀ ಸೇವನೆ ಪ್ರಧಾನ ಪಾತ್ರ ವಹಿಸಲಿದೆ.
ಕೂದಲ ಆರೈಕೆ:
ಇತ್ತೀಚಿನ ಬಹುತೇಕ ಶ್ಯಾಂಪು ಮತ್ತು ಎಣ್ಣೆಯಲ್ಲಿ ನೆಲ್ಲಿಕಾಯಿ ಇದೆ ಎಂಬ ಲೇಬಲ್ ಓದಿರಬಹುದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹಾಗೂ ಆ್ಯಂಟಿಆಕ್ಸಿಡೆಂಟ್ ಗುಣವಿದ್ದು ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸೀಳು ಕೂದಲು, ತಲೆ ಹೊಟ್ಟು ಸಮಸ್ಯೆ, ಕೂದಲು ಉದುರುವಿಕೆ, ಬಿಳಿ ಕೂದಲಿನ ಸಮಸ್ಯೆ ಇತ್ಯಾದಿ ಗಳಿಗೆ ಆಮ್ಲ ಎಣ್ಣೆ ಹಚ್ಚುವ ಜೊತೆಗೆ ಆಮ್ಲ ಟೀ ಕುಡಿದರೆ ದೇಹದ ಒಳಗಿನಿಂದಲೇ ಬೇಕಾದ ಪೌಷ್ಟಿಕಾಂಶ ಒದಗಿಸಿದಂತಾಗಲಿದೆ.
ಚರ್ಮದ ಆರೋಗ್ಯ:
ಚರ್ಮದ ಅಲರ್ಜಿ, ಒಣ ತ್ವಚೆ, ಮೊಡವೇ , ವಯಸ್ಸಾದ ಮೇಲೆ ಬರುವ ಸುಕ್ಕು ಎಲ್ಲ ಸಮಸ್ಯೆಗಳ ನಿವಾರಣೆಗೆ ಆಮ್ಲ ಟೀ ದಿ ಬೇಸ್ಟ್ ಮೆಡಿಸಿನ್ ನಂತೆ ಕಾರ್ಯ ನಿರ್ವಹಿಸಲಿದೆ. ದೇಹದಲ್ಲಿ ರೋಗ ನಿರೋಧಕ ಪ್ರಮಾಣ ಅಧಿಕವಿರುವ ಜೊತೆಗೆ ಚರ್ಮ ಹೆಚ್ಚು ಕಾಂತಿಯುಕ್ತವಾಗಿರಲಿದೆ.
ಇದನ್ನು ಓದಿ: Health Tips: ಕಣ್ತುಂಬ ನಿದ್ದೆ ಮಾಡಬೇಕೇ?: ಕುಂಬಳಬೀಜ ತಿನ್ನಿ
ಕಣ್ಣಿಗೂ ಆರೋಗ್ಯಕರ:
ನೆಲ್ಲಿಯಿಂದ ಮಾಡುವ ಟೀ ಸೇವನೆ ಮಾಡಿದರೆ ಕಣ್ಣಿನ ಸಮಸ್ಯೆ ಬರದಂತೆ ತಡೆಹಿಡಿಯಬಹುದು. ಕಣ್ಣಿನ ಪೊರೆ, ದೃಷ್ಟಿ ಸಮಸ್ಯೆ, ಡ್ರೈ ಕಣ್ಣು, ಕಣ್ಣಿನ ತುರಿಕೆ ಇತ್ಯಾದಿಗಳು ಬರದಂತೆ ದೇಹಕ್ಕೆ ಚೈತನ್ಯ ಒದಗಿಸುವ ಆಮ್ಲ ಟೀಯನ್ನು ನಿತ್ಯ ಸೇವನೆ ಮಾಡಬೇಕು. ಒಟ್ಟಿನಲ್ಲಿ ಆಮ್ಲದಲ್ಲಿರುವ ನೈಸರ್ಗಿಕ ಪೋಷಕಾಂಶ ದೇಹದ ಆರೋಗ್ಯ ಸುಧಾರಿಸಲಿದ್ದು ಆಮ್ಲ ಟೀ ಸೇವನೆ ಹವ್ಯಾಸವಾಗಿ ಮಾರ್ಪಟ್ಟರೆ ಆರೋಗ್ಯ ಸಮಸ್ಯೆ ಬಾರದಂತೆ ಮೊದಲೇ ತಡೆಹಿಡಿಯಬಹುದು.
ಹೀಗೆ ತಯಾರಿಸಿ:
ಈ ಟೀ ಮಾಡುವುದು ಬಹಳ ಸುಲಭವಾಗಿದೆ. ಒಂದು ಲೋಟ ನೀರಿಗೆ ಒಂದು ಚಮಚ ಆಮ್ಲ (ನೆಲ್ಲಿ ಕಾಯಿ) ಪುಡಿ ಬೆರೆಸಬೇಕು. ಅದನ್ನು ಕುದಿಸುವಾಗ ಚಿಟಿಕೆಯಷ್ಟು ಜೀರಿಗೆ , ಸಣ್ಣ ತುಂಡು ಶುಂಠಿ, ತುಳಸಿ ಎಲೆ ಹಾಕಿ ಚೆನ್ನಾಗಿ ಕುದಿಸಬೇಕು. ಬಳಿಕ ಇದಕ್ಕೆ ನಿಂಬೆ ರಸ ಬೆರೆಸಿ, ಸ್ವಲ್ಪ ಜೇನುತುಪ್ಪ ಹಾಕಿದರೆ ಆಮ್ಲ ಟೀ ಸವಿಯಲು ಸಿದ್ಧವಾಗಲಿದೆ.