ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಎಷ್ಟೆಲ್ಲ ಪ್ರಯೋಜನ ಇದೆ ಗೊತ್ತೆ?

Brahmimuhurtha: ಬ್ರಾಹ್ಮಿ ಮುಹೂರ್ತ ಎಂದರೆ ಸಾಮಾನ್ಯವಾಗಿ ಬೆಳಗ್ಗೆ 4ರಿಂದ 5ರವರೆಗಿನ ಸಮಯ. ಅಂದರೆ ಸೂರ್ಯೋದಯಕ್ಕೂ ಮುನ್ನ. ಈ ಸಮಯದಲ್ಲಿ ಎದ್ದೇಳುವುದರಿಂದ ಆರೋಗ್ಯದಲ್ಲಿ ಒಂದಷ್ಟು ಧನಾ ತ್ಮಕ ಬದಲಾವಣೆ ಗಳು ಉಂಟಾಗುತ್ತವೆ. ವೈಜ್ಞಾನಿಕವಾಗಿ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಣೆ ಆಗುವುದರ ಜತೆಗೆ ಒಂದಷ್ಟು ಧನಾತ್ಮಕ ಶಕ್ತಿಯ ಆಕರ್ಷಣೆಯು ಆಗುತ್ತದೆ. ಈ ಕುರಿತಾದ ವಿವರ ಇಲ್ಲಿದೆ.

ಪ್ರೊ. ಸುತ್ತೂರು ಮಾಲಿನಿ

ಬೆಂಗಳೂರು, ಫೆ. 19: ಬ್ರಾಹ್ಮಿ ಮುಹೂರ್ತ (Brahmi Muhurta) ಎಂದರೆ ಸಾಮಾನ್ಯವಾಗಿ ಮುಂಜಾನೆ 4ರಿಂದ 5ರವರೆಗಿನ ಸಮಯ. ಅಂದರೆ ಸೂರ್ಯೋದಯಕ್ಕೂ ಮುನ್ನ. ಈ ಸಮಯದಲ್ಲಿ ಎದ್ದೇಳುವುದರಿಂದ ಆರೋಗ್ಯದಲ್ಲಿ ಒಂದಷ್ಟು ಧನಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ವೈಜ್ಞಾನಿಕವಾಗಿ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಣೆ ಆಗುವುದರ ಜತೆಗೆ ಒಂದಷ್ಟು ಧನಾತ್ಮಕ ಶಕ್ತಿಯ ಆಕರ್ಷಣೆ ಆಗುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಯಾವೆಲ್ಲ ಬದಲಾವಣೆ ಉಂಟಾಗುತ್ತದೆ? ವ್ಯಕ್ತಿಯ ಜೀವನವೇ ಹೇಗೆ ಉಜ್ವಲವಾಗುತ್ತದೆ? ಬ್ರಾಹ್ಮಿ ಮುಹೂರ್ತದ ಮಹತ್ವ ಏನು? ಎನ್ನುವ ಸಂಗತಿಗಳ ಕುರಿತು ಪ್ರೊ. ಸುತ್ತೂರು ಮಾಲಿನಿ ವಿಶ್ವವಾಣಿ ಹೆಲ್ತ್‌ ಯೂಟ್ಯೂಬ್‌ ಚಾನೆಲ್‌ಗೆ ತಿಳಿಸಿದ್ದಾರೆ.

ನಾವು ತಾಂತ್ರಿಕ ಯುಗದಲ್ಲಿ ಇದ್ದೇವೆ. ಹಾಗಾಗಿ ಒತ್ತಡ, ಕೆಲಸ, ಹಣ, ವ್ಯವಹಾರ ಇದರಲ್ಲೇ ಬ್ಯುಸಿ ಇರುತ್ತೇವೆ. ಆದರೆ ನಮ್ಮ ಪೂರ್ವಜರು ಅನುಕರಣೆ ಮಾಡುತ್ತಿದ್ದ ಕೆಲವು ಹವ್ಯಾಸಗಳನ್ನು ಬೆಳೆಸಿಕೊಂಡಾಗ ಜೀವನದಲ್ಲಿ ಹಲವು ಬದಲಾವಣೆಗಳು ಸಾಧ್ಯ. ಅದರಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಕೆಲಸ ಮಾಡುವ ಅಭ್ಯಾಸ ಆರೋಗ್ಯಕ್ಕೆ ಬಹಳ ಲಾಭ ನೀಡಲಿದೆ.

ವಿಡಿಯೊ ನೋಡಿ:



ಪ್ರಾಚೀನ ಕಾಲದಿಂದಲೂ ಬ್ರಾಹ್ಮಿ ಮುಹೂರ್ತಕ್ಕೆ ಬಹಳ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಸಾಮಾನ್ಯವಾಗಿ ಬೆಳಗ್ಗೆ 4ರಿಂದ 5ರವರೆಗಿನ ಸಮಯದಲ್ಲಿ ಎದ್ದು ಪುಸ್ತಕ ಓದುವುದು, ಧ್ಯಾನ ಮಾಡುವುದು, ಯೋಗಾಭ್ಯಾಸ ಇತ್ಯಾದಿ ಈ ಸಮಯದಲ್ಲಿ ಮಾಡಿದರೆ ಭಾರಿ ಒಳಿತಾಗುತ್ತದೆ. ಈ ಸಮಯದಲ್ಲಿ ಪರಿಸರದಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆ. ಅಂದರೆ ಪ್ರಶಾಂತವಾದ ವಾತಾವರಣ, ಹಕ್ಕಿಗಳ ಕೂಗು, ಕಲರವ ಇತ್ಯಾದಿ ಮನಸ್ಸಿಗೆ ಮುದ ನೀಡುತ್ತದೆ. ಹಾಗಾಗಿ ಈ ಸಮಯದಲ್ಲಿ ಮಾಡಿದ ಯಾವುದೇ ಕೆಲಸವು ಯಶಸ್ವಿಯಾಗುತ್ತದೆ. ಹಾಗೆಯೇ ಈ ಸಮಯದಲ್ಲಿ ಏಳುವುದರಿಂದ ದಿನವಿಡೀ ಚೈತನ್ಯದಿಂದ ಇರಲು ಮತ್ತು ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯವಾಗುತ್ತದೆ.

ಎದೆಯುರಿ-ಹುಳಿತೇಗು ಬರುತ್ತಾ? ಇಲ್ಲಿದೆ ಪರಿಹಾರ

ಈ ಸಮಯದಲ್ಲಿ ಬೇಗನೆ ಏಳುವುದರಿಂದ ಮನಸ್ಸು ಹೆಚ್ಚು ಸಕ್ರಿಯವಾಗಿರುತ್ತದೆ. ಇದರಿಂದ ಮೆಲಟೋನಿನ್ ಉತ್ಪಾದನೆಯಾಗಿ ಖುಷಿಯಾದ ಹಾರ್ಮೋನ್ ಉತ್ಪತ್ತಿಯಾಗಬಹುದು. ಇದರಿಂದ ಹೃದಯದ ಒತ್ತಡ, ಮಧುಮೇಹ, ಹಾರ್ಮೋನ್ ಬದಲಾವಣೆ ಇತ್ಯಾದಿ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವುದಿಲ್ಲ.

ಏನು ಬದಲಾವಣೆ ಇದೆ?

  • ಈ ಸಮಯದಲ್ಲಿ ಏಳುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸು ಶಾಂತವಾಗುತ್ತದೆ.
  • ರಕ್ತದ ಪಿಎಚ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ವಿದ್ಯಾರ್ಥಿಗಳು ಬೆಳಗ್ಗಿನ ಸಮಯ ಆಡುವುದು ಮತ್ತು ಓದುವುದನ್ನು ಮಾಡಿದರೆ ಒಳ್ಳೆಯದು
  • ಹೆಚ್ಚು ಆ್ಯಕ್ಟೀವ್ ಆಗಿ ಇರಲು ಮತ್ತು ಶಾಂತ ರೀತಿಯಲ್ಲಿ ಇರಲು ಸುಲಭವಾಗುತ್ತದೆ.
  • ಮಾನಸಿಕ ಮತ್ತು ದೈಹಿಕವಾಗಿ ಒಳ್ಳೆಯ ಆರೋಗ್ಯವನ್ನು ಪಡೆಯಬಹುದು.