ಬೆಂಗಳೂರು: ಇವತ್ತು ನಮ್ಮಲ್ಲಿ ತಿನ್ನಲೇಬೇಕು ಎನ್ನುವ ಹಂಬಲ ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಹೈ ಕ್ಯಾಲೋರಿ ಆಹಾರಗಳು (High calorie food). ಇವುಗಳನ್ನು ಎಷ್ಟು ತಿಂದರೂ ತೃಪ್ತಿ ಕೊಡುವುದಿಲ್ಲ. ಹೀಗಾಗಿ ಪದೇ ಪದೆ ಜಂಕ್ ಆಹಾರ ಸೇವಿಸಬೇಕು, ಆರೋಗ್ಯಪೂರ್ಣ ಸಪ್ಪೆ ಆಹಾರಗಳು ಬೇಡವೇ ಬೇಡ ಎನಿಸುತ್ತದೆ ಎನ್ನುತ್ತಾರೆ ಮೈಸೂರು ವಿವಿಯ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸುತ್ತೂರು ಮಾಲಿನಿ (Dr. Suttur Malini). ವಿಶ್ವವಾಣಿ ಹೆಲ್ತ್ (Vishwavani Health) ಯುಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.
ಇವತ್ತು ಎಲ್ಲರೂ ಒಂದು ತಗೊಂಡ್ರೆ ಇನ್ನೊಂದು ಉಚಿತ ಎನ್ನುವ ಸ್ಕ್ರೀಮ್‌ಗೆ ಅಡಿಕ್ಟ್ ಆಗಿದ್ದೇವೆ. ಇದನ್ನು ನಾವು ನಮ್ಮ ಆಹಾರದಲ್ಲೂ ಪಾಲಿಸುತ್ತಿದ್ದೇವೆ. ಜಂಕ್ ಆಹಾರಗಳು ಸಿಕ್ಕಾಗ ಅದು ಮತ್ತೆ ನಾಳೆ ಸಿಗೋದಿಲ್ಲ ಎನ್ನುವ ಬಯಕೆಯಿಂದ ಹೆಚ್ಚು ಹೆಚ್ಚು ಸೇವಿಸುತ್ತೇವೆ. ಇದು ನಮ್ಮಲ್ಲಿ ಅತೃಪ್ತಿಯನ್ನು ಹೆಚ್ಚಿಸಿದೆ ಎನ್ನುತ್ತಾರೆ ಅವರು.
ಡಾ. ಸುತ್ತೂರು ಮಾಲಿನಿ ಅವರೊಂದಿಗಿನ ಸಂದರ್ಶನ ಇಲ್ಲಿದೆ:
ವೈಜ್ಞಾನಿಕವಾಗಿ ಪಿಜ್ಜಾ, ಬರ್ಗರ್ ಸೇರಿ ಜಂಕ್ ಆಹಾರಗಳು ಕೇವಲ ಆಸೆ ಅಲ್ಲ. ಅದು ನಮ್ಮ ಮೆದುಳು, ಹಾರ್ಮೋನ್, ಗಟ್ ಮೈಕ್ರೊಪ್‌ಗಳ ಸಮ್ಮಿಲನದಿಂದ ಉಂಟಾಗುವ ರಾಸಾಯನಿಕ ಪ್ರಕ್ರಿಯೆ. ಇವತ್ತು ಎಲ್ಲರಿಗೂ ಹೈ ಕ್ಯಾಲೋರಿ ಡಯಟ್ ಖುಷಿ ಕೊಡುತ್ತಿದೆ. ಅದನ್ನೇ ಸಾಧನೆ ಎನ್ನುವಂತೆ ಮಾಡುತ್ತಿದೆ. ಆದರೆ ಇದು ನಮ್ಮ ಆರೋಗ್ಯವನ್ನು ಕೆಡಿಸುತ್ತಿದೆ ಎಂದು ಅವರು ಹೇಳಿದರು.
ಬಿಳಿ ಕೂದಲನ್ನು ಕಪ್ಪು ಮಾಡುತ್ತೆ ಈ ಒಂದು ಮ್ಯಾಜಿಕ್ ಸೊಪ್ಪು; ವಿಡಿಯೊ ನೋಡಿ
ಆಹಾರ ಸೇವನೆಗೂ ಮೊದಲು ನಾವು ಹಸಿವು ಮತ್ತು ತೃಪ್ತಿಯನ್ನು ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಇಲ್ಲಿ ನಮ್ಮ ಹಾರ್ಮೋನ್‌ಗಳ ಕಾರುಬಾರು ಇರುತ್ತದೆ. ಇದನ್ನು ನಾವು ನಿಯಂತ್ರಿಸಬಹುದು. ಅದಕ್ಕಾಗಿ ಮೊದಲು ಮನಸ್ಸನ್ನು ಗೆಲ್ಲಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಹಸಿವನ್ನು ಉಂಟು ಮಾಡುವುದು ಗ್ರೆಲಿನ್ ಎನ್ನುವ ಹಾರ್ಮೋನ್. ಇದು ಹೊಟ್ಟೆಯಲ್ಲಿ ಬಿಡುಗಡೆಯಾಗುತ್ತದೆ. ಗ್ರೆಲಿನ್ ಮೆದುಳಿಗೆ ಸಂದೇಶ ಕಳುಹಿಸಿ ಕೊಡುತ್ತದೆ. ಬಗೆ ಬಗೆಯ ಆಹಾರ ಎದುರಲ್ಲಿದ್ದಾಗ ಹೈ ಕ್ಯಾಲೋರಿ ಆಹಾರಗಳೇ ನಮ್ಮನ್ನು ಸೆಳೆಯುತ್ತದೆ. ಅದಕ್ಕೆ ಮುಖ್ಯ ಕಾರಣ ಅದರ ಪರಿಮಳ. ಇದು ರುಚಿಯ ಹಿಂದಿನ ಅನುಭವಗಳನ್ನು ನೆನಪಿಸುತ್ತದೆ. ಆಗ ನಾವು ಅದನ್ನೇ ತಿನ್ನುತ್ತೇವೆ. ಇದರಿಂದ ಡೊಕೋಮೈನ್ ಬಿಡುಗಡೆಯಾಗುತ್ತದೆ. ಒಂದು ಬಾರಿ ಡೊಕೋಮೈನ್ ಬಿಡುಗಡೆ ಆದರೆ ಆಗ ಹೊಟ್ಟೆ ತುಂಬಿದೆ ಎಂದರ್ಥ. ಆದರೆ ಜಂಕ್ ಆಹಾರಗಳು ತೃಪ್ತಿ ಕೊಡುವುದಿಲ್ಲ. ಯಾಕೆಂದರೆ ಇವುಗಳು ತೃಪ್ತಿಯನ್ನು ಕೊಡುವ ಹಾರ್ಮೋನ್ ಬಿಡುಗಡೆ ಮಾಡುವುದಿಲ್ಲ ಎಂದು ಡಾ. ಮಾಲಿನಿ ಹೇಳಿದರು.
ಲೆಫ್ಟಿನ್ ಹಾರ್ಮೋನ್ ತೃಪ್ತಿಯನ್ನು ಕೊಡುತ್ತದೆ. ಇದನ್ನು ಬಿಡುಗಡೆ ಮಾಡುವುದು ಕೊಬ್ಬಿನ ಜೀವಕೋಶಗಳು. ಫೈಬರ್ ಹೆಚ್ಚಿರುವ ಆಹಾರ ಸೇವನೆ ಮಾಡಿದಾಗ ಅದು ಬೇಗ ಲೆಪ್ಟಿನ್ ಬಿಡುಗಡೆ ಮಾಡುತ್ತದೆ ಮತ್ತು ಫೈಬರ್ ಹೆಚ್ಚಿರುವ ಆಹಾರ ಜೀರ್ಣವಾಗಲು ಸಾಕಷ್ಟು ಸಮಯ ಬೇಕಾಗುವುದರಿಂದ ದೀರ್ಘಕಾಲದವರೆಗೆ ಇದು ಹೊಟ್ಟೆಯಲ್ಲಿರುತ್ತದೆ. ಹೀಗಾಗಿ ಹಸಿವು ಕಡಿಮೆಯಾಗುತ್ತದೆ. ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ಕೊಡುತ್ತದೆ ಎಂದರು.
ಫೈಬರ್ ಕೊರತೆ
ಪಿಜ್ಜಾ, ಬರ್ಗರ್‌ನಲ್ಲಿ ಫೈಬರ್ ಅಂಶ ಇರುವುದಿಲ್ಲ. ಹೀಗಾಗಿ ಇದು ಬೇಗ ಜೀರ್ಣವಾಗುತ್ತದೆ. ಇದರಿಂದ ಮತ್ತೆ ಮತ್ತೆ ಗ್ರೆಲಿನ್ ಬಿಡುಗಡೆಯಾಗುತ್ತದೆ. ಪದೇ ಪದೆ ಜಂಕ್ ಆಹಾರ ಸೇವಿಸುವುದರಿಂದ ಬೇರೆ ಆಹಾರ ಸೇವನೆ ಮಾಡಬೇಕು ಎನಿಸುವುದಿಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿ ಲೆಪ್ಟಿನ್ ಹಾರ್ಮೋನ್ ಬಿಡುಗಡೆ ಕಡಿಮೆ ಆಗುವುದು ಎಂದು ಹೇಳಿದರು.
ನಮ್ಮ ಮೆದುಳು ಜಂಕ್ ಆಹಾರವೆಂದರೆ ಅಪರೂಪದ ಆಹಾರ ಎಂದುಕೊಳ್ಳುತ್ತದೆ. ಆಗ ಅದು ಎಷ್ಟು ಸಾಧ್ಯವೋ ಅಷ್ಟನ್ನು ಒಂದೇ ಬಾರಿ ಹೆಚ್ಚು ತಿನ್ನುವಂತೆ ಮಾಡುತ್ತದೆ. ಇದು ನಮ್ಮ ದೇಹದಲ್ಲೇ ಇರುವ ಜಿನ್‌ಗಳ ಪರಿಣಾಮ. ನಾವು ನಮಗದು ಬೇಕೋ ಬೇಡವೋ ಎಂಬುದನ್ನು ಯೋಚಿಸಲು ಕೂಡ ಹೋಗದೆ ಹೆಚ್ಚು ಹೆಚ್ಚು ಸೇವಿಸುತ್ತ ಹೋಗುತ್ತೇವೆ. ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ಮೆದುಳಿನಲ್ಲಿರುವ ರಿವಾರ್ಡಿಂಗ್ ಸಿಸ್ಟಮ್. ಇದು ನರಗಳಲ್ಲಿ ಉಂಟಾಗುವ ರಾಸಾಯನಿಕ ಪ್ರಕಿಯೆಯ ಪರಿಣಾಮ ಎಂದರು.
ಬೆಳಗ್ಗಿನ ಉಪಾಹಾರ ಸೇವಿಸಿದ ನಂತರವೂ ಹಸಿವಾಗುತ್ತಿದೆಯೇ?
ಇವತ್ತು ಒಬಿಸಿಟಿ, ಮಧುಮೇಹ, ರಕ್ತದೊತ್ತಡ ಸೇರಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚು ಆಹಾರ ಸೇವನೆಯ ಮುಖ್ಯ ಕಾರಣ. ಇದರಿಂದ ದೇಹದಲ್ಲಿ ಲೆಪ್ಟಿನ್ ರೆಸಿಸ್ಟೆನ್ಸ್ ಕಡಿಮೆಯಾಗುತ್ತದೆ. ಲೆಪ್ಟಿನ್ ರೆಸಿಸ್ಟೆನ್ಸ್ ಚೆನ್ನಾಗಿ ಆಗಬೇಕಾದರೆ ದೇಹಕ್ಕೆ ಏನು ಬೇಕು, ಏನು ಬೇಡ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇದಕ್ಕೆ ನಮ್ಮ ದೇಹ ಕೊಡುವ ಸೂಚನೆಗಳನ್ನು ಗಮನಿಸಬೇಕು. ಇಷ್ಟವಿಲ್ಲದೇ ಇದ್ದರೂ ತಿನ್ನುವ ಅಭ್ಯಾಸವನ್ನು ಬಿಡಬೇಕು. ದಿನಕ್ಕೆ ಎರಡು ಹೊತ್ತಿನ ಊಟ ಧಾರಾಳವಾಗಿ ಸಾಕಾಗುತ್ತದೆ. ಆದರೂ ನಾವು ಹೆಚ್ಚು ಸೇವಿಸುತ್ತಿದ್ದೇವೆ. ಆಹಾರದಲ್ಲಿ ನಿಯಂತ್ರಣ ಮಾಡಿಕೊಂಡರೆ ಎಲ್ಲವೂ ಸರಿಯಾಗಿರುತ್ತದೆ ಎಂದು ಡಾ. ಮಾಲಿನಿ ತಿಳಿಸಿದರು.