ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತಡವಾಗಿ ಮಲಗುತ್ತಿದ್ದೀರಾ? ಹಾಗಾದರೆ ಈ ಸಮಸ್ಯೆ ಕಾಡುವುದು ನಿಶ್ಚಿತ

Health Tips: ಇತ್ತೀಚೆಗೆ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಸಂಖ್ಯೆ ಹೆಚ್ಚಾಗಿದೆ.‌ ಬಿಡುವಿಲ್ಲದ ಕೆಲಸ, ಜೀವನ ಶೈಲಿ, ಆಹಾರ ಇತ್ಯಾದಿಯಿಂದ ನಿದ್ರಾಹೀನತೆ ಸಮಸ್ಯೆ ಉಂಟಾಗುತ್ತಿದೆ. ಈ ರೀತಿ ನಿದ್ದೆಯ ಅವಧಿ ಕಡಿಮೆಯಾಗುವುದು ಮೆದುಳಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹಾಗಾಗಿ ಸರಿಯಾಗಿ ನಿದ್ದೆ ಬರದಿರಲು ಕಾರಣವೇನು? ಯಾವ ರೀತಿಯ ಪರಿಹಾರ ಇದಕ್ಕಿದೆ? ಎಂದು ಪ್ರೊ. ಸುತ್ತೂರು ಮಾಲಿನಿ ʼವಿಶ್ವವಾಣಿ ಹೆಲ್ತ್‌ʼ ಯೂಟ್ಯೂಬ್‌ ಚಾನೆಲ್‌ಗೆ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ. 9: ಇತ್ತೀಚೆಗೆ ಯುವ ಜನತೆ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.‌ ಬಿಡುವಿಲ್ಲದ ಕೆಲಸ, ಜೀವನ ಶೈಲಿ, ಆಹಾರ ಇತ್ಯಾದಿಯಿಂದ ನಿದ್ರಾಹೀನತೆ (Sleeping for body) ಸಮಸ್ಯೆ ಉಂಟಾಗುತ್ತಿದೆ.ಈ ರೀತಿ ನಿದ್ದೆಯ ಅವಧಿ ಕಡಿಮೆಯಾಗುವುದು ಮೆದುಳಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹಾಗಂತ ಈ ಸಮಸ್ಯೆಯ ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನದಲ್ಲಿ ದೀರ್ಘಕಾಲದ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಸರಿಯಾಗಿ ನಿದ್ದೆ ಬರದಿರಲು ಕಾರಣವೇನು? ಯಾವ ರೀತಿಯ ಪರಿಹಾರ ಇದಕ್ಕಿದೆ ಎಂದು ಪ್ರೊ. ಸುತ್ತೂರು ಮಾಲಿನಿ ʼವಿಶ್ವವಾಣಿ ಹೆಲ್ತ್‌ʼ ಚಾನೆಲ್‌ಗೆ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ಆರೋಗ್ಯವಾಗಿ ಜೀವನ ನಡೆಸಲು ಪ್ರತಿನಿತ್ಯ ಎಂಟು ಗಂಟೆಗಳ ನಿದ್ರೆ ಅತ್ಯವಶ್ಯಕ ಎಂದು ಅವರು ಹೇಳಿದ್ದಾರೆ.‌ ನಿದ್ರೆ ಸರಿಯಾಗಿ ಅಗದಿರುವುದು ನಮ್ಮಲ್ಲಿ ಅಲಸ್ಯ, ಸಿಟ್ಟು, ಕೋಪಕ್ಕೆ ಕಾರಣವಾಗಿ ಯಾವುದೇ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯ ಆಗುವುದಿಲ್ಲ. ಅದರಲ್ಲೂ ನಿದ್ರಾಹೀನತೆಯಿಂದ ಬಳಲುತ್ತಿರುವ ಜನರು ಮಾನಸಿಕ ಯೋಚನೆ, ಕಿರಿಕಿರಿಯನ್ನು ಅನುಭವಿಸುತ್ತಾರೆ.

ವಿಡಿಯೊ ನೋಡಿ:



ಹಿಂದಿನ ಕಾಲದಲ್ಲಿ ಪೂರ್ವಜರು ಅನುಸರಿಸುತ್ತಿದ್ದ ನಿಯಮಗಳಲ್ಲಿ ಇಂದು ಬದಲಾವಣೆಯಾಗಿದೆ. ಹಿಂದಿನ ಕಾಲದಲ್ಲಿ ರಾತ್ರಿ ಬೇಗ ಮಲಗಿ ಮುಂಜಾನೆ ಸಮಯದಲ್ಲಿ ಬೇಗನೆ ಏಳುತ್ತಿದ್ದರು. ಆದರೆ ಇತ್ತೀಚೆಗೆ ರಾತ್ರಿಯ ಹೊತ್ತು ಗಂಟಗಟ್ಟಲೇ ಮೊಬೈಲ್ ಫೋನ್, ಸಿನಿಮಾ, ಸೀರಿಯಲ್ ಅಂತ ಕುಳಿತುಕೊಳ್ಳುತ್ತಾರೆ. ಇದರಿಂದ ನಿದ್ರಿಸುವ ಅವಧಿಯ ಮೇಲೆಯೂ ಪರಿಣಾಮ ಆಗುತ್ತದೆ.

ಚಳಿಗಾಲದಲ್ಲಿ ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ?

ಅದರಲ್ಲೂ ಇತ್ತೀಚೆಗೆ ಅಲ್ಝೈಮರ್ ಕಾಯಿಲೆಗೆ (ಮರೆವು) ಒಳಗಾಗುವವರ ಸಂಖ್ಯೆ ಶೇಕಡಾ 80ರಷ್ಟು ಹೆಚ್ಚಾಗಿದೆ. ಸಾಮಾನ್ಯವಾಗಿ 60 ವರ್ಷ ವಯಸ್ಸಿನ ನಂತರ ಆಲ್ಝೈಮರ್ಸ್ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.‌ ಹಾಗಾಗಿ ಮೆದುಳಿನ ಆರೋಗ್ಯದ ಬಗ್ಗೆ ಈ ಮೊದಲೇ ಜಾಗೃತರಾಗಬೇಕಾಗುತ್ತದೆ. ನಿದ್ರೆ ಕಡಿಮೆ ಆಗುವುದು ಅಧಿಕ ರಕ್ತದೊತ್ತಡ ಮತ್ತು ಹೃದಯದ ಆರೋಗ್ಯ ಸಮಸ್ಯೆಯಂತ ಗಂಭೀರ ಕಾಯಿಲೆ ಉಂಟು ಮಾಡಬಹುದು.

ಅದೇ ರೀತಿ ತಡವಾಗಿ ಮಲಗುವವರ ಚರ್ಮ, ಮುಖ ಸುಕ್ಕುಗಟ್ಟುವಿಕೆ ಜಾಸ್ತಿಯಾಗಿ ಮುಖ ವಯಸ್ಸು ಆದ್ದಂತೆ ಕಾಣುತ್ತದೆ. ಹಾಗಾಗಿ ನಿಮ್ಮ ಬಾಹ್ಯ ಸೌಂದರ್ಯ ಹಾಗೂ ಅಂತರಿಕ ಆರೋಗ್ಯಕ್ಕು ನಿದ್ದೆ ಅನ್ನೋದು ಬಹಳ ಅವಶ್ಯಕ ಎಂದು ಪ್ರೊ. ಸುತ್ತೂರು ಮಾಲಿನಿ ಹೇಳಿದ್ದಾರೆ.