ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Highwaist Pant Fashion 2025: ವಿಂಟರ್‌ಗೆ ಮರಳಿದ ಹೈವೇಸ್ಟ್ ಪ್ಯಾಂಟ್ ಫ್ಯಾಷನ್

Highwaist Pant Fashion 2025: ಈ ಚಳಿಗಾಲದಲ್ಲಿ ಹೈ ವೇಸ್ಟ್ ಫ್ಯಾಷನ್ ಮರಳಿದೆ. ಯಾವ್ಯಾವ ಬಗೆಯವು ಟ್ರೆಂಡ್‌ನಲ್ಲಿವೆ? ಯಾರೆಲ್ಲಾ ಹೇಗೆಲ್ಲಾ ಧರಿಸಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ವಿವರಿಸಿದ್ದಾರೆ.

Highwaist Pant Fashion 2025: ವಿಂಟರ್‌ಗೆ ಮರಳಿದ ಹೈವೇಸ್ಟ್ ಪ್ಯಾಂಟ್ ಫ್ಯಾಷನ್

ಚಿತ್ರಕೃಪೆ: ಪಿಕ್ಸೆಲ್

Profile Siddalinga Swamy Jan 17, 2025 9:22 PM

-ಶೀಲಾ ಸಿ. ಶೆಟ್ಟಿ, ಫ್ಯಾಷನ್‌ ಪತ್ರಕರ್ತೆ

ಬೆಂಗಳೂರು, ಜ. 17, 2025: ಈ ಬಾರಿಯ ವಿಂಟರ್‌ಗೆ ಹೈ ವೇಸ್ಟ್ ಪ್ಯಾಂಟ್ ಫ್ಯಾಷನ್ ಮರಳಿದೆ. ಹೌದು, ರೆಟ್ರೊ ಸ್ಟೈಲ್‌ನಲ್ಲಿದ್ದ, ನಾನಾ ಬಗೆಯ ಹೈ ವೇಸ್ಟ್ ಪ್ಯಾಂಟ್ (Highwaist Pant Fashion 2025) ಸ್ಟೈಲ್‌ ಸ್ಟೇಟ್‌ಮೆಂಟ್ ಇದೀಗ ಹುಡುಗಿಯರನ್ನು ಸೆಳೆದಿದೆ.

ಏನಿದು ಹೈ ವೇಸ್ಟ್ ಪ್ಯಾಂಟ್ ಫ್ಯಾಷನ್?

ಬೆಲ್ಲಿಯ ಮೇಲೆ ಸ್ಟಿಫ್ಫಾಗಿ ಕೂರುವ ಪ್ಯಾಂಟು, ಅದಕ್ಕೊಂದು ಕ್ರಾಪ್ಟಾಪ್, ಇಲ್ಲವೇ, ಟೈಯಿಂಗ್ ಸ್ಲಿವ್ಲೆಸ್ ಶರ್ಟ್ ಅಥವಾ ಸ್ಲಿವ್‌ಫುಲ್ ಶರ್ಟ್ಅಥವಾ ಟೀ ಶರ್ಟ್. ಅದರ ಮೇಲೊಂದು ಜಾಕೆಟ್. ಇದು ಈ ಚಳಿಗಾಲದಲ್ಲಿ ಕಂಡುಬರುತ್ತಿರುವ ಹೈ ವೇಸ್ಟ್ ಪ್ಯಾಂಟ್‌ನ ಪಾಪುಲರ್ ಸ್ಟೈಲ್ ಸ್ಟೇಟ್‌ಮೆಂಟ್‌ಗಳಿವು.

1

ಟ್ರೆಂಡಿಯಾಗಿರುವ ಹೈ ವೇಸ್ಟ್ ಪ್ಯಾಂಟ್‌ಗಳಿವು

ಫಂಕಿ ಲುಕ್‌ ನೀಡುವ ಪ್ರಿಂಟೆಡ್ ಸ್ಟ್ರೇಟ್‌ಲೆಗ್ ಹೈ ವೇಸ್ಟ್‌ ಪ್ಯಾಂಟ್, ಬೂಟ್‌ಕಟ್, ವೈಡ್ಲೆಗ್, ವೇಸ್ಟೇಡ್ ಬ್ಯಾಗಿ, ರಿಪ್ಡ್, ಹೈ ರೈಸ್ ಸ್ಕಿನ್ನಿ, ಡಬ್ಬಲ್ ಲೇಯರ್‌ನ ಟೊರ್ನ್ ಪ್ರಿಂಟೆಡ್ ಶೀರ್‌ ಶೈಲಿಯ ಹೈ ವೇಸ್ಟ್‌ ಪ್ಯಾಂಟ್‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿವೆ. ನೋಡಲು ಡಬ್ಬಲ್, ತ್ರಿಬಲ್ ಹಾಗೂ ಮಲ್ಟಿ ಶೇಡ್ಸ್‌ನ ಪೇಂಟಿಂಗ್‌ನಂತೆ ಭಾಸವಾಗುವ ಮೇಟಿರಿಯಲ್‌ನ ಹಾಗೂ ಪ್ಯಾಚ್‌ವರ್ಕ್ ಇರುವಂತಹ ಹೈ ವೇಸ್ಟ್‌ ಪ್ಯಾಂಟ್‌ಗಳು ಹುಡುಗಿಯರನ್ನು ಸವಾರಿ ಮಾಡುತ್ತಿವೆ. ಇನ್ನು, ನ್ಯಾರೋ ಹಾಗೂ ಪಲಾಜ್ಹೂ ಪ್ಯಾಂಟ್ ರೀತಿಯವು ಚಾಲ್ತಿಯಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಜೀನತ್.

ಪರ್ಸನಾಲಿಟಿಗೆ ತಕ್ಕಂತಿರಲಿ

ಹೈ ವೇಸ್ಟ್‌ ಪ್ಯಾಂಟ್‌ಗಳು ಎಲ್ಲರಿಗೂ ನಾಟ್ ಓಕೆ. ಅವರವರ ಬಾಡಿ ಮಾಸ್ ಇಂಡೆಕ್ಸ್‌ಗೆ ತಕ್ಕಂತೆ ಧರಿಸಿ ಟಾಪ್‌ನೊಂದಿಗೆ ಪರ್ಫೆಕ್ಟ್ ಮ್ಯಾಚ್ ಮಾಡಿದಲ್ಲಿ ಮಾತ್ರ ಹೊಂದುತ್ತವೆ. ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ಡಿಫರೆಂಟ್ ಲುಕ್ ನೀಡಲು ಇವನ್ನು ಪ್ರಯೋಗ ಮಾಡಬಹುದು ಎನ್ನುತ್ತಾರೆ ಫ್ಯಾಷನಿಸ್ಟಾ ರಿಚಾ.

2

ಪ್ಲಂಪಿ ಇರುವವರಿಗೆ ನಾಟ್ ಓಕೆ

ದಪ್ಪಗಿರುವವರಿಗೆ ಈ ಪ್ಯಾಂಟ್ ಅಷ್ಟಾಗಿ ಮ್ಯಾಚ್ ಆಗದು. ಹೊಟ್ಟೆಯ ಭಾಗ ಮತ್ತಷ್ಟುಅಗಲವಾಗಿ ಕಾಣಬಹುದು. ಹವರ್‌ ಗ್ಲಾಸ್ ಶೇಪ್ ಹೊಂದಿರುವವರಿಗೆ ಓಕೆ. ಸ್ಲಿಮ್ ಆಗಿರುವವರಿಗೆ ಇದು ಹೇಳಿ ಮಾಡಿಸಿದ ಪ್ಯಾಂಟ್‌ಗಳಿವು. ಫ್ಲಾಟ್ ಟಮ್ಮಿ ಇರುವವರಿಗಂತೂ ಬೆಸ್ಟ್ ಚಾಯ್ಸ್ ಎನ್ನಬಹುದು. ಕುಳ್ಳಗಿರುವವರು ಇದರಲ್ಲಿ ಮತ್ತಷ್ಟು ಕುಳ್ಳಗೆ ಕಾಣಿಸುತ್ತಾರೆ. ಹಾಗಾಗಿ ಅವರವರ ಪರ್ಸನಾಲಿಟಿಗೆ ಹೊಂದುವಂತಹ ಹೈ ವೇಸ್ಟ್‌ ಪ್ಯಾಂಟ್‌ ಧರಿಸುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಈ ಸುದ್ದಿಯನ್ನೂ ಓದಿ | Winter Fashion 2025: ಚಳಿಗಾಲಕ್ಕೆ ಬಂತು ಫುಲ್ ಸ್ಲೀವ್ ಕ್ರಾಪ್ ಟಾಪ್ಸ್

ಹೈ ವೇಸ್ಟ್ ಪ್ಯಾಂಟ್ ಮೇಕೋವರ್

* ಹೈ ವೇಸ್ಟ್‌ ಪ್ಯಾಂಟ್‌ಗಳಿಗೆ ಇನ್ನರ್ ಧರಿಸಿರುವ ಶೀರ್ ಶರ್ಟ್‌ ಸಖತ್ತಾಗಿ ಕಾಣುತ್ತದೆ.

* ಟೀ ಶರ್ಟ್‌ ದರಿಸುವುದಿದ್ದರೇ ಬಟನ್ಲೆಸ್/ಬಟನ್ ಇರುವುದಾ ಎಂದು ಗಮನಿಸಿ. ಧರಿಸಿ.

* ಶಾರ್ಟ್‌ ಸ್ಲೀವ್‌ಗಿಂತ ಲಾಂಗ್‌ ಸ್ಲೀವ್‌ನದ್ದು ಆಯ್ಕೆ ಮಾಡಿ. ಸ್ಟೋಲ್‌ ಬಳಸಬೇಡಿ. ಬಿಗ್‌ ಬೆಲ್ಟ್ಸ್‌ ಧರಿಸಬಹುದು. ಸ್ಟ್ರಾಪ್‌ಹಿಲ್ಸ್ ಅಥವಾ ಶೂ ಗಳನ್ನು ಧರಿಸಬಹುದು.

* ಗೀಕಿ ಸ್ಟೈಲ್‌ ಮಿಕ್ಸ್‌ ಮ್ಯಾಚ್‌ ಮಾಡಿದಲ್ಲಿ ಟ್ರೆಂಡಿಯಾಗಿರುವ ಹಾಲಿವುಡ್‌ ರೆಟ್ರೊ ಫ್ಯಾಷನ್‌ನಂತೆ ಕಾಣಿಸುತ್ತದೆ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)