ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BOB Recruitment 2025: ಬ್ಯಾಂಕ್‌ ಆಫ್‌ ಬರೋಡಾದಲ್ಲಿದೆ 146 ಹುದ್ದೆ; ಹೀಗೆ ಅಪ್ಲೈ ಮಾಡಿ

Job Guide: ದೇಶದ ಪ್ರತಿಷ್ಠಿತ ಬ್ಯಾಂಕ್‌ ಆಫ್‌ ಬರೋಡಾ ವಿವಿಧ ಆಫೀಸರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ ಒಟ್ಟು 146 ಸೀನಿಯರ್‌ ರಿಲೇಷನ್‌ಶಿಪ್‌ ಮ್ಯಾನೇಜರ್‌ ಪೋಸ್ಟ್‌ ಖಾಲಿ ಇದ್ದು, ಪದವಿ ಪೂರೈಸಿದ ಮತ್ತು ಕಾರ್ಯಾನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಏ. 15.

ಬ್ಯಾಂಕ್‌ ಆಫ್‌ ಬರೋಡಾದಲ್ಲಿದೆ 146 ಹುದ್ದೆ

ಸಾಂದರ್ಭಿಕ ಚಿತ್ರ.

Profile Ramesh B Mar 27, 2025 2:58 PM

ಬೆಂಗಳೂರು: ಬ್ಯಾಂಕ್‌ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ದೇಶದ ಪ್ರತಿಷ್ಠಿತ ಬ್ಯಾಂಕ್‌ ಆಫ್‌ ಬರೋಡಾ (Bank of Baroda) ವಿವಿಧ ಆಫೀಸರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (BOB Recruitment 2025). ದೇಶಾದ್ಯಂತ ಒಟ್ಟು 146 ಸೀನಿಯರ್‌ ರಿಲೇಷನ್‌ಶಿಪ್‌ ಮ್ಯಾನೇಜರ್‌ ಪೋಸ್ಟ್‌ ಖಾಲಿ ಇದ್ದು, ಪದವಿ ಪೂರೈಸಿದ ಮತ್ತು ಕಾರ್ಯಾನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು(Job Guide). ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಏ. 15.

ಹುದ್ದೆಗಳ ವಿವರ

ಡೆಪ್ಯುಟಿ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ - 1 ಹುದ್ದೆ, ವಯೋಮಿತಿ: ಗರಿಷ್ಠ 57 ವರ್ಷ

ಖಾಸಗಿ ಬ್ಯಾಂಕರ್ - 3 ಹುದ್ದೆ, ವಯೋಮಿತಿ: 33–50 ವರ್ಷ

ಗ್ರೂಪ್ ಹೆಡ್ - 4 ಹುದ್ದೆ, ವಯೋಮಿತಿ: 31–45 ವರ್ಷ

ಟೆರಿಟರಿ ಹೆಡ್ - 17 ಹುದ್ದೆ, ವಯೋಮಿತಿ: 27–40 ವರ್ಷ

ಸೀನಿಯರ್ ರಿಲೇಶನ್‌ಶಿಪ್‌ ಮ್ಯಾನೇಜರ್ - 101 ಹುದ್ದೆ, ವಯೋಮಿತಿ: 24–35 ವರ್ಷ

ವೆಲ್ತ್ ಸ್ಟ್ರಾಟಜಿಸ್ಟ್ (ಹೂಡಿಕೆ ಮತ್ತು ವಿಮೆ) - 18 ಹುದ್ದೆ, ವಯೋಮಿತಿ: 24 – 45 ವರ್ಷ

ಪ್ರೊಡಕ್ಟ್‌ ಹೆಡ್‌-ಪ್ರವೇಟ್‌ ಬ್ಯಾಂಕಿಂಗ್ - 1 ಹುದ್ದೆ, ವಯೋಮಿತಿ: 24 – 45 ವರ್ಷ

ಪೋರ್ಟ್‌ಫೋಲಿಯೊ ರಿಸರ್ಚ್ ಅನಾಲಿಸ್ಟ್ 1 ಹುದ್ದೆ, ವಯೋಮಿತಿ: 22 – 35 ವರ್ಷ

ಸಡಿಲಿಕೆ

ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10ರಿಂದ 15 ವರ್ಷಗಳವರೆಗೆ ರಿಯಾಯಿತಿ ಲಭ್ಯ.

ಈ ಸುದ್ದಿಯನ್ನೂ ಓದಿ: ADA Recruitment 2025: ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಏಜೆನ್ಸಿಯಲ್ಲಿದೆ 137 ಹುದ್ದೆ; ಹೀಗೆ ಅಪ್ಲೈ ಮಾಡಿ

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಅರ್ಜಿ ಶುಲ್ಕವಾಗಿ ಸಾಮಾನ್ಯ, ಒಬಿಸಿ, ಇಡಬ್ಲ್ಯುಎಸ್‌ ಅಭ್ಯರ್ಥಿಗಳು 600 ರೂ. ಮತ್ತು ಎಸ್‌ಸಿ/ಎಸ್‌ಟಿ, ಪಿಡಬ್ಲ್ಯುಡಿ, ಮಹಿಳಾ ಅಭ್ಯರ್ಥಿಗಳು100 ರೂ. ಆನ್‌ಲೈನ್‌ ಮೂಲಕ ಪಾವತಿಸಬೇಕು. ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

BOB Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

* ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
(https://www.bankofbaroda.in/career/current-opportunities/recruitment-of-professionals-on-contractual-basis-for-various-department)

* ಹೊಸ ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.

* ಈಗ ಕಂಡುಬರುವ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.

* ಅಗತ್ಯ ಡಾಕ್ಯುಮೆಂಟ್‌ ಅಪ್‌ಲೋಡ್‌ ಮಾಡಿ.

* ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.

* ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.

* ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ ವಿಳಾಸ: bankofbaroda.inಗೆ ಭೇಟಿ ನೀಡಿ.