Job Guide: ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್‌ನಲ್ಲಿದೆ 52 ಹುದ್ದೆ; ಪದವಿ ವಿದ್ಯಾರ್ಹತೆ ಹೊಂದಿದವರು ಅಪ್ಲೈ ಮಾಡಿ
Job Guide: ದಿಲ್ಲಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತೀಯ ಸಾರ್ವಜನಿಕ ವಲಯದ ಕಂಪನಿ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 52 ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿವೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಏ. 7.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಉತ್ತಮ ಉದ್ಯೋಗಕ್ಕಾಗಿ ಹುಡುಕಾಟ ನಡೆಸುವವರಿಗೆ ಇಲ್ಲಿದೆ ಗುಡ್‌ನ್ಯೂಸ್. ದಿಲ್ಲಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತೀಯ ಸಾರ್ವಜನಿಕ ವಲಯದ ಕಂಪನಿ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (Engineers India Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (EIL Recruitment 2025). ಒಟ್ಟು 52 ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿವೆ. ಬಿ.ಎಸ್‌ಸಿ, ಬಿ.ಇ ಅಥವಾ ಬಿ.ಟೆಕ್ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು (Job Guide). ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಏ. 7.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಕೆಮಿಕಲ್ - 12, ಮೆಕ್ಯಾನಿಕಲ್ - 14, ಸಿವಿಲ್ - 18 ಮತ್ತು ಎಲೆಕ್ಟ್ರಿಕಲ್ - 8 ಹುದ್ದೆಗಳಿವೆ. ದೇಶದ ಯಾವುದೇ ಅಂಗೀಕೃತ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ಬಿ.ಎಸ್‌ಸಿ. ಬಿ.ಇ ಅಥವಾ ಬಿ.ಟೆಕ್ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ
ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ಗರಿಷ್ಠ ವಯಸ್ಸು 25 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಡಿ (ಜನರಲ್) ಅಭ್ಯರ್ಥಿಗಳಿಗೆ 10 ವರ್ಷ, ಪಿಡಬ್ಲ್ಯುಡಿ (ಒಬಿಸಿ-ಎನ್‌ಸಿಎಲ್) ಅಭ್ಯರ್ಥಿಗಳಿಗೆ 13 ವರ್ಷ ಮತ್ತು ಪಿಡಬ್ಲ್ಯುಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳಿಗೆ 15 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಶಾರ್ಟ್ ಲಿಸ್ಟ್, ಗೇಟ್-2025 (GATE-2025)ಪರೀಕ್ಷೆ, ಗ್ರೂಪ್ ಡಿಸ್ಕಷನ್ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಈ ಸುದ್ದಿಯನ್ನೂ ಓದಿ: WCD Karnataka Recruitment 2025: ಅಂಗನವಾಡಿಯಲ್ಲಿದೆ ಬರೋಬ್ಬರಿ 2,500 ಹುದ್ದೆ; ಪರೀಕ್ಷೆ ಇಲ್ಲ, ನೇರ ನೇಮಕಾತಿ
ಮಾಸಿಕ ವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ 60,000 ರೂ.-1,80,000 ರೂ. ಮಾಸಿಕ ವೇತನ ದೊರೆಯಲಿದೆ. ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ಪ್ರಧಾನ ಕಚೇರಿ ದಿಲ್ಲಿಯ ಭಿಕಾಜಿ ಕಾಮಾ ಪ್ಲೇಸ್‌ನಲ್ಲಿದೆ. ಇಐಎಲ್ ಗುರಗಾಂವ್‌ನಲ್ಲಿ ಆರ್ & ಡಿ ಕಾಂಪ್ಲೆಕ್ಸ್, ಮುಂಬೈಯಲ್ಲಿ ಶಾಖಾ ಕಚೇರಿ, ಕೋಲ್ಕತ್ತಾ, ಚೆನ್ನೈ, ವಡೋದರಾದಲ್ಲಿ ಪ್ರಾದೇಶಿಕ ಕಚೇರಿಗಳು, ಭಾರತದ ಎಲ್ಲ ಪ್ರಮುಖ ಉಪಕರಣ ಉತ್ಪಾದನಾ ಸ್ಥಳಗಳಲ್ಲಿ ಪರಿಶೀಲನಾ ಕಚೇರಿಗಳು ಮತ್ತು ಲಂಡನ್ (ಇಂಗ್ಲೆಂಡ್), ಮಿಲನ್ (ಇಟಲಿ), ಶಾಂಘೈ (ಚೀನಾ), ಅಬುಧಾಬಿ (ಯುಎಇ)ಯಲ್ಲಿ ಸಾಗರೋತ್ತರ ಕಚೇರಿಗಳನ್ನು ಹೊಂದಿದೆ. ದೇಶದ ಎಲ್ಲಿ ಬೇಕಾದರೂ ಉದ್ಯೋಗ ನಿರ್ವಹಿಸಲು ತಯಾರಿರುವವರು ಅರ್ಜಿ ಸಲ್ಲಿಸಬಹುದು.
EIL Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
* ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
(https://recruitment.eil.co.in/mtrecNew/Initial.aspx?adv=%27HRD/RECTT./ADVT./2024-25/06%27)
* ಹೆಸರು ನೋಂದಾಯಿಸಿ, ಕಂಡುಬರುವ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
* ಅಗತ್ಯ ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ.
* ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
* ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್ ವಿಳಾಸ: engineersindia.comಗೆ ಭೇಟಿ ನೀಡಿ ಅಥವಾ ಫೋನ್ ನಂಬರ್: 011-26763297 / 26762336ಕ್ಕೆ ಭೇಟಿ ನೀಡಿ.