ಏನನ್ನು ಕಲಿಯಬೇಕೆಂದು ಯೋಚಿಸಿ ಸುಸ್ತಾಗಿದ್ದೀರಾ? ನಿಮ್ಮ ವೃತ್ತಿಜೀವನದಲ್ಲಿ ಮಿಂಚಲು ಅಗತ್ಯವಿರುವ 5 ಕೌಶಲ ಗುಂಪುಗಳ ಮಾಹಿತಿ ಇಲ್ಲಿವೆ: ಲಿಂಕ್ಡ್ ಇನ್
ಅನೇಕ ಯುವ ವೃತ್ತಿಪರರಿಗೆ, ಉದ್ಯೋಗ ಹುಡುಕಾಟದ ಸಂದರ್ಭದಲ್ಲಿನ ಅತ್ಯಂತ ಕಷ್ಟಕರ ವಾದ ಭಾಗವೆಂದರೆ ಮುಂದೆ ಏನನ್ನು ಕಲಿಯಬೇಕು ಎಂದು ತಿಳಿದುಕೊಳ್ಳುವುದು. ಲಿಂಕ್ಡ್ ಇನ್‌ನ ಹೊಸ ದತ್ತಾಂಶದ ಪ್ರಕಾರ, ಶೇ. 38ರಷ್ಟು ಭಾರತೀಯ ಉದ್ಯೋಗಾ ಕಾಂಕ್ಷಿಗಳು ಇಂದಿನ ಕಾಲದ ಉದ್ಯೋಗಗಳಿಗೆ ಅಗತ್ಯವಿರುವ ಕೌಶಲಗಳಿಗೆ ತಕ್ಕಂತೆ ತಂತ್ರಜ್ಞಾನವು ಬಹಳ ವೇಗವಾಗಿ ಬದಲಾಗುತ್ತಿರುವುದರಿಂದ ತಾವು ಇನ್ನೂ ಸಿದ್ಧರಾಗಿಲ್ಲ ಎಂದೇ ಅನಿಸುತ್ತದೆ
-
ಲಿಂಕ್ಡ್ ಇನ್ ನ 'ಸ್ಕಿಲ್ಸ್ ಆನ್ ದಿ ರೈಸ್ 2026' ವರದಿಯ ಪ್ರಕಾರ, ಎಐ ಮತ್ತು ಆಟೋ ಮೇಷನ್, ಡೇಟಾ ಮತ್ತು ಅನಾಲಿಟಿಕ್ಸ್, ಐಟಿ ಮತ್ತು ಸೈಬರ್ ಸೆಕ್ಯೂರಿಟಿ, ಬಿಸಿನೆಸ್ ಮತ್ತು ಗ್ರೋತ್, ಹಾಗೂ ಪೀಪಲ್ ಮತ್ತು ಲೀಡರ್ ಶಿಪ್ ಕೌಶಲಗಳು ನೀವು ಸ್ಪರ್ಧಾತ್ಮಕವಾಗಿ ಉಳಿಯಲು ಸಹಾಯ ಮಾಡುತ್ತವೆ.
ಅನೇಕ ಯುವ ವೃತ್ತಿಪರರಿಗೆ, ಉದ್ಯೋಗ ಹುಡುಕಾಟದ ಸಂದರ್ಭದಲ್ಲಿನ ಅತ್ಯಂತ ಕಷ್ಟಕರ ವಾದ ಭಾಗವೆಂದರೆ ಮುಂದೆ ಏನನ್ನು ಕಲಿಯಬೇಕು ಎಂದು ತಿಳಿದುಕೊಳ್ಳು ವುದು. ಲಿಂಕ್ಡ್ ಇನ್‌ನ ಹೊಸ ದತ್ತಾಂಶದ ಪ್ರಕಾರ, ಶೇ. 38ರಷ್ಟು ಭಾರತೀಯ ಉದ್ಯೋಗಾ ಕಾಂಕ್ಷಿಗಳು ಇಂದಿನ ಕಾಲದ ಉದ್ಯೋಗಗಳಿಗೆ ಅಗತ್ಯವಿರುವ ಕೌಶಲಗಳಿಗೆ ತಕ್ಕಂತೆ ತಂತ್ರಜ್ಞಾನವು ಬಹಳ ವೇಗವಾಗಿ ಬದಲಾಗುತ್ತಿರುವುದರಿಂದ ತಾವು ಇನ್ನೂ ಸಿದ್ಧರಾಗಿಲ್ಲ ಎಂದೇ ಅನಿಸುತ್ತದೆ ಎಂದು ಹೇಳುತ್ತಾರೆ.
ಈ ಕಾರಣಕ್ಕೆ ಉದ್ಯೋಗಾಕಾಂಕ್ಷಿಗಳು ತಮ್ಮ ಉದ್ಯೋಗಾವಕಾಶವನ್ನು ನಿಜವಾಗಿಯೂ ಸುಧಾರಿಸುವ ವಿಷಯಗಳ ಮೇಲೆ ಗಮನ ಹರಿಸಲು ಸಹಾಯ ಮಾಡಲು, ಲಿಂಕ್ಡ್ ಇನ್ ತನ್ನ 'ಸ್ಕಿಲ್ಸ್ ಆನ್ ದಿ ರೈಸ್ 2026' ವರದಿಯಲ್ಲಿ ವಿವಿಧ ಸಂಸ್ಥೆಗಳು ಮತ್ತು ಉದ್ಯಮ ಗಳಾದ್ಯಂತ ವೇಗವಾಗಿ ಬೆಳೆಯುತ್ತಿರುವ ಐದು ಅವಶ್ಯ ಕೌಶಲ ಗುಂಪುಗಳನ್ನು ಗುರುತಿಸಿದೆ- ಅವುಗಳೆಂದರೆ ಎಐ ಮತ್ತು ಆಟೋಮೇಷನ್, ಡೇಟಾ ಮತ್ತು ಅನಾಲಿಟಿಕ್ಸ್, ಐಟಿ ಮತ್ತು ಸೈಬರ್ ಸೆಕ್ಯೂರಿಟಿ, ಬಿಸಿನೆಸ್ ಮತ್ತು ಗ್ರೋತ್, ಹಾಗೂ ಪೀಪಲ್ ಮತ್ತು ಲೀಡರ್ ಶಿಪ್.
ಜಗತ್ತಿನಾದ್ಯಂತ ಶೇ. 46 ರಷ್ಟು ನೇಮಕಾತಿದಾರರು ಈಗ ಉದ್ಯೋಗಗಳನ್ನು ಭರ್ತಿ ಮಾಡಲು ಕೌಶಲಗಳ ಮಾಹಿತಿಯನ್ನು ಅವಲಂಬಿಸಿದ್ದಾರೆ ಎಂದು ಲಿಂಕ್ಡ್ ಇನ್ ದತ್ತಾಂಶ ತೋರಿಸುತ್ತದೆ. ಆದರೂ, ಭಾರತದ ಶೇ. 74 ರಷ್ಟು ನೇಮಕಾತಿದಾರರು ಅರ್ಹ ಪ್ರತಿಭೆಗಳನ್ನು ಹುಡುಕುವುದು ಹಿಂದೆಂದಿಗಿಂತಲೂ ಕಷ್ಟಕರವಾಗಿದೆ ಎಂದೇ ಹೇಳುತ್ತಾರೆ.
ಇದನ್ನೂ ಓದಿ: T20 world Cup 2026: ಶ್ರೀಲಂಕಾ ತಂಡದ ವೈಫಲ್ಯದ ಬಗ್ಗೆ ಕುಮಾರ ಸಂಗಕ್ಕಾರ ದೊಡ್ಡ ಹೇಳಿಕೆ!
ಎಐ ಪರಿಕರಗಳೊಂದಿಗೆ ಕೆಲಸ ಮಾಡುವ, ಡೇಟಾವನ್ನು ವಿಶ್ಲೇಷಿಸುವ ಮತ್ತು ಅನ್ವಯಿ ಸುವ, ಡಿಜಿಟಲ್ ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ ವೃತ್ತಿಪರರಿಗೆ ಎಲ್ಲಾ ಉದ್ಯಮಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಆದರೆ ತಾಂತ್ರಿಕ ಸಾಮರ್ಥ್ಯವೊಂದೇ ಇಲ್ಲಿ ಮುಖ್ಯವಾಗಿರುವುದಿಲ್ಲ. ತಂಡಗಳು ಹೆಚ್ಚು ಕ್ರಿಯಾತ್ಮಕ ಮತ್ತು ಎಐ-ಚಾಲಿತವಾಗುತ್ತಿದ್ದಂತೆ, ಸಹಯೋಗ, ಸ್ಟೇಕ್ ಹೋಲ್ಡರ್ ಮ್ಯಾನೇಜ್‌ಮೆಂಟ್ ಮತ್ತು ಪ್ರಾಜೆಕ್ಟ್ ಲೀಡರ್ ಶಿಪ್ ಗಳು ತಾಂತ್ರಿಕ ಜ್ಞಾನದ ಜೊತೆ ಹೆಚ್ಚು ಪ್ರಭಾವಶಾಲಿಯಾದ 'ಪೀಪಲ್ ಸ್ಕಿಲ್ಸ್' ಆಗಿ ಹೊರಹೊಮ್ಮುತ್ತಿವೆ.
ಈ ಕುರಿತು ಮಾತನಾಡಿದ ಲಿಂಕ್ಡ್ ಇನ್ ಕೆರಿಯರ್ ಎಕ್ಸ್ ಪರ್ಟ್ ಮತ್ತು ಇಂಡಿಯಾ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ಆದ ನಿರಜಿತಾ ಬ್ಯಾನರ್ಜಿ ಅವರು, "ಹಲವು ವರ್ಷ ಗಳಿಂದ ಯುವ ವೃತ್ತಿಪರರಿಗೆ ಯಾವುದಾದರೂ ಒಂದು ವಿಷಯದಲ್ಲಿ ಪರಿಣತಿ ಹೊಂದಲು ಹೇಳಲಾಗುತ್ತಿತ್ತು. ಆದರೆ 2026ರಲ್ಲಿ ಆ ನಿಯಮ ಬದಲಾಗುತ್ತಿದೆ. ಇಂದು ಗಮನ ಸೆಳೆಯುತ್ತಿರುವ ಅಭ್ಯರ್ಥಿಗಳು ಕೇವಲ ಸ್ಪೆಷಲಿಸ್ಟ್ ಗಳು ಮಾತ್ರವೇ ಅಲ್ಲ, ಅವರು 'ಸ್ಕಿಲ್ ಸ್ಟ್ಯಾಕರ್ಸ್' ಆಗಿದ್ದಾರೆ. ಅವರಿಗೆ ಎಐ ಜೊತೆಗೆ ಕೆಲಸ ಮಾಡುವುದರ ಜೊತೆಗೆ ದತ್ತಾಂಶವನ್ನು ಅರ್ಥೈಸಿಕೊಳ್ಳುವುದು, ಕೆಲಸದ ವಿಧಾನವನ್ನು ಸುಧಾರಿಸುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ವಿವಿಧ ತಂಡಗಳೊಂದಿಗೆ ಸಹಕರಿಸುವುದು ತಿಳಿದಿದೆ. ಈ ಕೌಶಲ ಗಳ ಸಂಯೋಜನೆಯು ನಿಮ್ಮ ಹೊಂದಿಕೊಳ್ಳುವಿಕೆಯ ಗುಣವನ್ನು ತೋರಿಸುತ್ತದೆ.
ಬಹಳ ವೇಗವಾಗಿ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ, ಈ ಹೊಂದಿಕೊಳ್ಳು ವಿಕೆಯ ಗುಣವೇ ನಿಮಗೆ ಕೆಲಸ ಮತ್ತು ಬಡ್ತಿಯನ್ನು ಕೊಡಿಸುತ್ತದೆ. ಈ ಮಾರುಕಟ್ಟೆಯಲ್ಲಿ ನಿಮ್ಮ ಅವಕಾಶಗಳನ್ನು ಉತ್ತಮಪಡಿಸಿಕೊಳ್ಳಲು ನೀವು ಬಯಸುವುದಾದರೆ, ಕೇವಲ ಕೆಲವೇ ಕೌಶಲಗಳ ಹಿಂದೆ ಹೋಗುವುದನ್ನು ನಿಲ್ಲಿಸಿ; ನಿಮ್ಮದೇ ಆದ ವಿಶಿಷ್ಟ ಕೌಶಲಗಳ ಗುಂಪನ್ನು ನಿಮ್ಮದಾಗಿಸಿಕೊಳ್ಳಿ ಮತ್ತು ಅದನ್ನೇ ನಿಮ್ಮ ಸ್ಪರ್ಧಾತ್ಮಕ ಶಕ್ತಿಯನ್ನಾಗಿ ಮಾಡಿ ಕೊಳ್ಳಿ" ಎಂದು ಹೇಳಿದರು.
ಎಐ ಮತ್ತು ಆಟೋಮೇಷನ್: ಉತ್ಪಾದಕತೆಯೇ ಹೊಸ ಭದ್ರ ಅಡಿಪಾಯ
ದೈನಂದಿನ ಕೆಲಸದಲ್ಲಿ ಎಐ ಅನ್ನು ಸಂಯೋಜಿಸಬಲ್ಲ ವೃತ್ತಿಪರರು ಹೆಚ್ಚಿನ ವೇಗ ಮತ್ತು ದೊಡ್ಡ ಪ್ರಮಾಣದ ಫಲಿತಾಂಶ ನೀಡಲು ಸಮರ್ಥರಾಗಿರುತ್ತಾರೆ. ವರ್ಕ್ ಫ್ಲೋ ಆಟೋ ಮೇಷನ್, ಎಲ್ಎಲ್ಎಂಓಪಿಎಸ್, ಆಟೋಎಂಎಲ್ ಮತ್ತು ಎಪಿಐ ಇಂಟಿಗ್ರೇಷನ್ ನಂತಹ ಕೌಶಲಗಳು ಇಂಜಿನಿಯರಿಂಗ್ ಮತ್ತು ಐಟಿ ಹುದ್ದೆಗಳಲ್ಲಿ ಜನಪ್ರಿಯವಾಗಿದ್ದರೆ, ಪ್ರಾಂಪ್ಟ್ ಇಂಜಿನಿಯರಿಂಗ್ ಈಗ ಎಚ್ ಆರ್, ಮಾರ್ಕೆಟಿಂಗ್, ಸೇಲ್ಸ್ ಮತ್ತು ಕನ್ಸಲ್ಟಿಂಗ್ ಕ್ಷೇತ್ರಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದೆ. ಇದು ಎಐ ಪ್ರಾವೀಣ್ಯತೆಯು ಕೇವಲ ತಾಂತ್ರಿಕ ಕ್ಷೇತ್ರಕ್ಕೆ ಸೀಮಿತವಾಗದೆ, ವ್ಯವಹಾರದ ಪ್ರಮುಖ ಕಾರ್ಯಚಟುವಟಿಕೆಗಳ ಭಾಗವಾಗುತ್ತಿದೆ ಎನ್ನುವುದ ನ್ನು ಸೂಚಿಸುತ್ತದೆ.
ಡೇಟಾ ಮತ್ತು ಅನಾಲಿಟಿಕ್ಸ್: ಒಳನೋಟವು ಕ್ರಿಯೆಯಾಗಿ ಬದಲಾಗಬೇಕು
ಉದ್ಯೋಗ ದಾತರು ಕೇವಲ ದತ್ತಾಂಶ ವಿಶ್ಲೇಷಣೆ ಮಾಡುವುದಕ್ಕಿಂತ ಹೆಚ್ಚಾಗಿ, ಆ ದತ್ತಾಂಶ ದಿಂದ ಒಳನೋಟಗಳನ್ನು ಹೊರತೆಗೆಯುವ, ಅದನ್ನು ಸ್ಪಷ್ಟವಾಗಿ ತಿಳಿಸುವ ಮತ್ತು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಳಸುವ ವೃತ್ತಿಪರರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಡೇಟಾ ಸಾಮರ್ಥ್ಯವು ಇಂಜಿನಿಯರಿಂಗ್ ವಿಭಾಗದಲ್ಲಿ 'ಕ್ವೆರಿಯಿಂಗ್' ರೂಪದಲ್ಲಿ ಪ್ರಮುಖವಾಗಿ ಕಂಡುಬರುತ್ತಿದೆ. ಐಟಿ ಕ್ಷೇತ್ರದಲ್ಲಿ 'ಡೇಟಾ ಸ್ಟೋರಿಟೆಲ್ಲಿಂಗ್'ಗೆ ಹೆಚ್ಚಿನ ಬೇಡಿಕೆಯಿದೆ. ಇದರೊಂದಿಗೆ, ಡೇಟಾ-ಚಾಲಿತ ನಿರ್ಧಾರ ತೆಗೆದುಕೊಳ್ಳುವುದು ಈಗ ಬಿಸಿನೆಸ್ ಡೆವಲಪ್ ಮೆಂಟ್, ಸೇಲ್ಸ್, ಕನ್ಸಲ್ಟಿಂಗ್, ಎಚ್ ಆರ್, ಶಿಕ್ಷಣ ಮತ್ತು ಮಾರ್ಕೆಟಿಂಗ್ ನಂತಹ ತಾಂತ್ರಿಕವಲ್ಲದ ಕ್ಷೇತ್ರಗಳಲ್ಲೂ ಬೇಕಾಗುವ ಒಂದು ಪ್ರಮುಖ ಕೌಶಲವಾಗಿದೆ.
ಐಟಿ ಮತ್ತು ಸೈಬರ್ ಸೆಕ್ಯೂರಿಟಿ: ವ್ಯವಸ್ಥೆಯ ವಿಸ್ತರಣೆಗೆ ಸ್ಥಿರತೆ ಅಗತ್ಯ ಡಿಜಿಟಲ್ ಕಾರ್ಯಾ ಚರಣೆಗಳು ಬೆಳೆದಂತೆ, ತಂತ್ರಜ್ಞಾನ ಪರಿಸರವನ್ನು ಸುರಕ್ಷಿತಗೊಳಿಸುವ, ಮೇಲ್ವಿಚಾರಣೆ ಮಾಡುವ ಮತ್ತು ಬಲಪಡಿಸುವ ವೃತ್ತಿಪರರು ಸುಸ್ಥಿರ ಬೆಳವಣಿಗೆಗೆ ಅವಶ್ಯವಾಗಿ ಬೇಕಾಗು ತ್ತಿದ್ದಾರೆ. ಇಂಜಿನಿಯರಿಂಗ್ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯಗಳಿಗೆ ಸೈಬರ್ ಸೆಕ್ಯೂರಿಟಿ ಅತ್ಯಗತ್ಯವಾಗಿದೆ, ಹಾಗೆಯೇ ಎಂಟರ್ ಪ್ರೈಸ್ ಡಿಜಿಟಲ್ ರೂಪಾಂತರಕ್ಕೆ ಬೆಂಬಲ ನೀಡುವ ಕನ್ಸಲ್ಟಿಂಗ್ ಹುದ್ದೆಗಳಲ್ಲಿ ಕ್ಲೌಡ್ ಇನ್ಫ್ರಾಸ್ಟ್ರಕ್ಚರ್ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿದೆ. ಇದರ ಜೊತೆಗೆ, ಸಂಸ್ಥೆಗಳು ಎಐ ಮತ್ತು ಕ್ಲೌಡ್ ಪ್ಲಾಟ್ ಫಾರ್ಮ್ ಗಳನ್ನು ಬೆಳೆಯುತ್ತಿರುವಾಗ ಸಿಸ್ಟಮ್ ಸ್ಥಿರತೆಗೆ ಒತ್ತು ನೀಡುತ್ತಿರುವುದರಿಂದ, ಐಟಿ ಆಟೋಮೇಷನ್, ಇನ್ಸಿಡೆಂಟ್ ಮ್ಯಾನೇಜ್ ಮೆಂಟ್, ರಿಯಲ್ ಟೈಮ್ ಮಾನಿಟರಿಂಗ್ ಮತ್ತು ಥ್ರೆಟ್ ಡಿಟೆಕ್ಷನ್ ನಂತಹ ಕೌಶಲಗಳ ಬೇಡಿಕೆ ಹೆಚ್ಚಾಗಿದೆ.
ಬಿಸಿನೆಸ್ ಮತ್ತು ಗ್ರೋತ್: ದಕ್ಷತೆಯೇ ಸ್ಪರ್ಧಾತ್ಮಕ ಪ್ರಯೋಜನಕ್ಕೆ ಪ್ರೇರಕ ಕೆಲಸದ ವಿಧಾನ ವನ್ನು ಸುಧಾರಿಸುವ ಜೊತೆಗೆ ವ್ಯವಹಾರದ ಬೆಳವಣಿಗೆಯನ್ನು ಹೆಚ್ಚಿಸಬಲ್ಲ ವೃತ್ತಿಪರರಿಗೆ ಉದ್ಯೋಗದಾತರು ಆದ್ಯತೆ ನೀಡುತ್ತಿದ್ದಾರೆ. ಬಿಸಿನೆಸ್ ಡೆವಲ ಪ್‌ಮೆಂಟ್ ಮತ್ತು ಸೇಲ್ಸ್ ಕ್ಷೇತ್ರಗಳಲ್ಲಿ ರಿಲೇಶನ್‌ಶಿಪ್ ಮ್ಯಾನೇಜ್ ಮೆಂಟ್‌ಗೆ ಬೇಡಿಕೆ ಹೆಚ್ಚುತ್ತಿದ್ದರೆ, ಆದಾಯ-ಆಧಾರಿತ ಪಾತ್ರಗಳಲ್ಲಿ ನೆಗೋಷಿಯೇಷನ್ (ಸಂಧಾನ ಕೌಶಲ) ಇಂದಿಗೂ ಪ್ರಮುಖ ಕೌಶಲವಾಗಿ ಉಳಿದಿದೆ. ಬಿಸಿನೆಸ್ ಡೆವಲಪ್ ಮೆಂಟ್, ಸೇಲ್ಸ್, ಇಂಜಿನಿಯರಿಂಗ್, ಐಟಿ, ಕನ್ಸಲ್ಟಿಂಗ್ ಮತ್ತು ಫೈನಾನ್ಸ್ ವಿಭಾಗಗಳಲ್ಲಿ ಪ್ರೊಸೆಸ್ ಆಪ್ಟಿಮೈಸೇಷನ್ (ಕಾರ್ಯ ವಿಧಾನದ ದಕ್ಷತೆ ಹೆಚ್ಚಿಸುವುದು) ಬೇಡಿಕೆಯ ಕೌಶಲವಾಗಿ ಹೊರಹೊಮ್ಮುತ್ತಿದ್ದು, ಇದು ಕಾರ್ಯಾಚರಣೆಯ ದಕ್ಷತೆಯ ಕಡೆಗೆ ಉದ್ಯಮಗಳು ಬದಲಾಗುತ್ತಿರುವುದನ್ನು ಸೂಚಿಸುತ್ತದೆ. ಮಾರ್ಕೆಟಿಂಗ್, ಆರ್ಟ್ಸ್ ಮತ್ತು ಡಿಸೈನ್, ಶಿಕ್ಷಣ ಮತ್ತು ಬಿಸಿನೆಸ್ ಡೆವಲಪ್ ಮೆಂಟ್ ನಲ್ಲಿ ವಿಷುಯಲ್ ಸ್ಟೋರಿಟೆಲ್ಲಿಂಗ್ ಕೂಡ ಗಮನ ಸೆಳೆಯುತ್ತಿದೆ.
ಪೀಪಲ್ ಮತ್ತು ಲೀಡರ್ ಶಿಪ್: ಸಹಯೋಗವು ವ್ಯವಹಾರದ ಪರಿಣಾಮವನ್ನು ಹೆಚ್ಚಿಸುತ್ತದೆ
ಬಿಸಿನೆಸ್ ಡೆವಲಪ್ ಮೆಂಟ್, ಸೇಲ್ಸ್, ಇಂಜಿನಿಯರಿಂಗ್, ಶಿಕ್ಷಣ, ಆರ್ಟ್ಸ್ ಮತ್ತು ಡಿಸೈನ್, ಮಾಹಿತಿ ತಂತ್ರಜ್ಞಾನ, ಕನ್ಸಲ್ಟಿಂಗ್, ಎಚ್ ಆರ್, ಫೈನಾನ್ಸ್ ಮತ್ತು ಮಾರ್ಕೆಟಿಂಗ್‌ನಂತಹ ಎಲ್ಲಾ ಕ್ಷೇತ್ರಗಳಲ್ಲೂ 'ಸಹಯೋಗ' (ಕೊಲ್ಯಾಬೊರೇಷನ್) ಹೆಚ್ಚಾಗಿ ಕಂಡು ಬರುತ್ತಿದೆ. ಈ ವೈವಿಧ್ಯಮಯ ಉದ್ಯೋಗ ಕ್ಷೇತ್ರಗಳು ತಂಡಗಳು ಕೆಲಸ ಮಾಡುವ ವಿಧಾನದಲ್ಲಿನ ದೊಡ್ಡ ಬದಲಾವಣೆ ಆಗಿರುವುದನ್ನು ತೋರಿಸಿಕೊಟ್ಟಿವೆ. ಕೆಲಸವು ಹೆಚ್ಚು ಎಐ-ಚಾಲಿತ ಮತ್ತು ವಿವಿಧ ವಿಭಾಗಗಳ ನಡುವಿನ ಸಹಯೋಗವಾಗಿ ಬದಲಾಗುತ್ತಿರುವಾಗ, ಜನರನ್ನು ಒಗ್ಗೂಡಿಸುವ, ಸಂಕೀರ್ಣತೆಯನ್ನು ನಿರ್ವಹಿಸುವ ಮತ್ತು ಸಾಮೂಹಿಕವಾಗಿ ಫಲಿತಾಂಶ ಗಳನ್ನು ನೀಡುವ ಸಾಮರ್ಥ್ಯವು ಉದ್ಯೋಗ ಪಡೆಯಲು ಪ್ರಮುಖವಾಗುತ್ತಿದೆ.
ವೃತ್ತಿಪರರು ಈ ಬೇಡಿಕೆಯಲ್ಲಿರುವ ಕೌಶಲಗಳನ್ನು ಕಲಿಯಲು ಸಹಾಯ ಮಾಡಲು, ಲಿಂಕ್ಡ್ ಇನ್ ಕೆಲವು ಆಯ್ದ ಲಿಂಕ್ಡ್ ಇನ್ ಲರ್ನಿಂಗ್ ಕೋರ್ಸ್ ಗಳನ್ನು ಮಾರ್ಚ್ 31, 2026 ರವರೆಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಿದೆ. ಇದರಲ್ಲಿ ಸಾಮಾನ್ಯ ವೃತ್ತಿಪರರಿಗಾಗಿ ಎಐ ಏಜೆಂಟ್ ಗಳು, ಡೇಟಾ ಅನಾಲಿಟಿಕ್ಸ್ ಕಲಿಕೆ, ನಾಯಕರು ಮತ್ತು ಮ್ಯಾನೇಜರ್ ಗಳಿಗಾಗಿ ಸ್ಟೇಕ್ ಹೋಲ್ಡರ್ ಮ್ಯಾನೇಜ್ ಮೆಂಟ್ ಮತ್ತು ಇನ್ನು ಹೆಚ್ಚಿನ ಕೋರ್ಸ್ ಗಳನ್ನು ಒದಗಿಸುತ್ತಿದೆ.
ಭಾರತದಲ್ಲಿ ಈ ವರ್ಷದ '5 ಸ್ಕಿಲ್ಸ್ ಗ್ರೂಪ್ಸ್ ಆನ್ ದಿ ರೈಸ್' (ವೇಗವಾಗಿ ಬೆಳೆಯುತ್ತಿರುವ 5 ಕೌಶಲ ಗುಂಪುಗಳು):
- ಎಐ ಮತ್ತು ಆಟೋಮೇಷನ್
- ಪ್ರಾಂಪ್ಟ್ ಇಂಜಿನಿಯರಿಂಗ್
- ವರ್ಕ್ ಫ್ಲೋ ಆಟೋಮೇಷನ್
- ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ ಆಪರೇಷನ್ಸ್ (ಎಲ್ಎಲ್ಎಂಓಪಿಎಸ್)
- ಆಟೋಮೇಟೆಡ್ ಮೆಷಿನ್ ಲರ್ನಿಂಗ್ (ಆಟೋಎಂಎಲ್)
- ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (ಎಪಿಐ)
- ಡೇಟಾ ಮತ್ತು ಅನಾಲಿಟಿಕ್ಸ್
- ಕ್ವೆರಿಯಿಂಗ್
- ಡೇಟಾಬೇಸ್ ಆಪ್ಟಿಮೈಸೇಷನ್
- ಡೇಟಾ ಅನಾಲಿಸಿಸ್
- ಡೇಟಾ ಸ್ಟೋರಿಟೆಲ್ಲಿಂಗ್
- ಡೇಟಾ ಎಥಿಕ್ಸ್
- ಐಟಿ ಮತ್ತು ಸೈಬರ್ ಸೆಕ್ಯೂರಿಟಿ
- ಕ್ಲೌಡ್ ಇನ್ಫ್ರಾಸ್ಟ್ರಕ್ಚರ್
- ಐಟಿ ಆಟೋಮೇಷನ್
- ಇನ್ಸಿಡೆಂಟ್ ಮ್ಯಾನೇಜ್‌ಮೆಂಟ್
- ರಿಯಲ್-ಟೈಮ್ ಮಾನಿಟರಿಂಗ್
- ಥ್ರೆಟ್ ಡಿಟೆಕ್ಷನ್
- ಬಿಸಿನೆಸ್ ಮತ್ತು ಗ್ರೋತ್
- ರಿಲೇಶನ್‌ಶಿಪ್ ಮ್ಯಾನೇಜ್ ಮೆಂಟ್
- ಜಿಟಿಎಂ ಮತ್ತು ಗ್ರೋತ್ ಸ್ಟ್ರಾಟೆಜಿ
- ಕಾರ್ಯಾಚರಣೆಯ ದಕ್ಷತೆ ಅಥವಾ ಪ್ರೊಸೆಸ್
- ನೆಗೋಷಿಯೇಷನ್ / ಸಂಧಾನ
- ವಿಷುಯಲ್ ಸ್ಟೋರಿಟೆಲ್ಲಿಂಗ್ ಮತ್ತು ಸಂವಹನ
- ಪೀಪಲ್ ಮತ್ತು ಲೀಡರ್ ಶಿಪ್
- ಸಹಯೋಗ
- ಟೀಮ್ ಮ್ಯೇಜ್ ಮೆಂಟ್
- ಸ್ಟೇಕ್ ಹೋಲ್ಡರ್ ಮ್ಯಾನೇಜ್ ಮೆಂಟ್
- ಬಜೆಟ್ ಮ್ಯಾನೆಜ್ ಮೆಂಟ್
- ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್
ವೃತ್ತಿಪರರು ಹೊಸ ಅವಕಾಶಗಳನ್ನು ಪಡೆದುಕೊಳ್ಳಲು ಲಿಂಕ್ಡ್ ಇನ್ ನ ವೃತ್ತಿ ತಜ್ಞರಾದ ನಿರಜಿತಾ ಬ್ಯಾನರ್ಜಿ ಅವರು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ:
● ನಿಮ್ಮ ಕೌಶಲಗಳ ಕುರಿತು ಸಮಗ್ರ ಒಳನೋಟ ಪಡೆಯಿರಿ: ನೀವು ಇದುವರೆಗೆ ಗಳಿಸಿಕೊಂಡಿರುವ ಎಲ್ಲಾ ಕೌಶಲಗಳ ಪಟ್ಟಿ ಮಾಡಿ. ನಿಮ್ಮ ಕೆಲಸದಿಂದ ಹಿಡಿದು ಸ್ವಯಂಸೇವಕ ಕಾರ್ಯಗಳವರೆಗೆ ಎಲ್ಲವನ್ನೂ ಪರಿಗಣಿಸಿ. ಮಾನವೀಯ ಕೌಶಲಗಳ ಮೌಲ್ಯ ಹೆಚ್ಚುತ್ತಿರುವುದರಿಂದ, ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಬೇಡಿಕೆಯ ಕೌಶಲಗಳನ್ನು ನೀವು ಹೊಂದಿರಬಹುದು. ನೀವು ಹೋಗಬಯಸುವ ಕ್ಷೇತ್ರದಲ್ಲಿ ಕೆಲವು ಕೌಶಲಗಳ ಕೊರತೆಯಿದ್ದರೆ, ಅವುಗಳನ್ನು ಕಲಿಯಲು ಯೋಜನೆಯನ್ನು ರೂಪಿಸಿ.
● ಹುದ್ದೆಯ ಹೆಸರಿಗಿಂತ ಕೌಶಲಗಳನ್ನು ಅನುಸರಿಸಿ: ನಿಮ್ಮ ಕೌಶಲಗಳು ನೇಮಕಾತಿ ದಾರರ ಅಗತ್ಯಗಳಿಗೆ ಹೊಂದಿಕೆಯಾಗುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದರಿಂದ ನಿಮಗೆ ಅವಕಾಶಗಳು ದೊರೆಯುವ ಸಾಧ್ಯತೆ ಹೆಚ್ಚಿಸುತ್ತದೆ. ಲಿಂಕ್ಡ್ ಇನ್ ನ ಎಐ-ಚಾಲಿತ ಜಾಬ್ ಸರ್ಚ್ ಬಳಸಿ ನಿಮಗೆ ಬೇಕಾದುದನ್ನು ಸಾಮಾನ್ಯ ಭಾಷೆಯಲ್ಲಿ ವಿವರಿಸಿ ಮತ್ತು ನೀವು ಯಾವ ಕೆಲಸಕ್ಕೆ ಸೂಕ್ತವಾಗಿದ್ದೀರಿ ಎಂದು ತಿಳಿಯಲು 'ಜಾಬ್ ಮ್ಯಾಚ್' ವೈಶಿಷ್ಟ್ಯವನ್ನು ಬಳಸಿ.
● ಮಾಡಿ ತೋರಿಸಿ, ಬರಿ ಹೇಳಬೇಡಿ: ಕೇವಲ ಕೌಶಲಗಳ ಹೆಸರನ್ನು ಪಟ್ಟಿ ಮಾಡುವು ದಕ್ಕಿಂತ ಹೆಚ್ಚಾಗಿ, ಆ ಕೌಶಲಗಳನ್ನು ನೀವು ಹೇಗೆ ಬಳಸಿದ್ದೀರಿ, ಅದರಿಂದ ಉಂಟಾದ ಪ್ರಭಾವ ಮತ್ತು ನೀವು ಸಾಧಿಸಿದ ಫಲಿತಾಂಶಗಳನ್ನು ನಿಮ್ಮ ಲಿಂಕ್ಡ್ ಇನ್ ಪ್ರೊಫೈಲ್ ಹಾಗೂ ರೆಸ್ಯೂಮೆಯಲ್ಲಿ ವಿವರಿಸಿ.
● ಪ್ರೊಫೈಲ್ ಸಂಪೂರ್ಣವಾಗಿರುವಂತೆ ನೋಡಿಕೊಳ್ಳಿ: ನೇಮಕಾತಿದಾರರ ಕಣ್ಣಿಗೆ ಬೀಳಲು ನಿಮ್ಮ ಪ್ರೊಫೈಲ್ ನಲ್ಲಿ ಕನಿಷ್ಠ ಐದು ಸಂಬಂಧಿತ ಕೌಶಲಗಳನ್ನು ಅಪ್ ಡೇಟ್ ಮಾಡಿ. ಆಕರ್ಷಕವಾದ ಹೆಡ್‌ಲೈನ್ ಮತ್ತು ಅನುಭವದ ವಿಭಾಗಗಳನ್ನು ಬರೆಯಲು ಲಿಂಕ್ಡ್ ಇನ್ ನ ಎಐ ಸಲಹೆಗಳನ್ನು ಬಳಸಿ. ಫೋಟೋ ಸೇರಿಸುವುದು ಮತ್ತು ಮಾಹಿತಿ ಯನ್ನು ಪರಿಶೀಲಿಸುವುದು ನಂಬಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.