ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

EMRS Recruitment 2025: ಏಕಲವ್ಯ ಮಾಡೆಲ್‌ ರೆಸಿಡೆಯ್ಶಿಯಲ್‌ ಸ್ಕೂಲ್‌ನಲ್ಲಿದೆ 7,267 ಹುದ್ದೆ; ಎಸ್‌ಎಸ್‌ಎಲ್‌ಸಿ ಪಾಸಾದವರು ಅಪ್ಲೈ ಮಾಡಿ

Job Guide: ಏಕಲವ್ಯ ಮಾಡೆಲ್‌ ರೆಸಿಡೆಯ್ಶಿಯಲ್‌ ಸ್ಕೂಲ್‌ ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 7,267 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ ಪದವಿ, ಸ್ನಾತಕೋತ್ತರ, ದ್ವಿತೀಯ ಪಿಯುಸಿ, ಎಸ್‌ಎಸ್‌ಎಲ್‌ ಪಾಸಾದವರು ಅಪ್ಲೈ ಮಾಡಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಅಕ್ಟೋಬರ್‌ 23.

ಏಕಲವ್ಯ ಮಾಡೆಲ್‌ ರೆಸಿಡೆಯ್ಶಿಯಲ್‌ ಸ್ಕೂಲ್‌ನಲ್ಲಿದೆ 7,267 ಹುದ್ದೆ

ಎಐ ಚಿತ್ರ -

Ramesh B Ramesh B Sep 20, 2025 4:46 PM

ದೆಹಲಿ: ಒಂದೊಳ್ಳೆ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುತ್ತಿರುವವರಿಗೆ ಸಿಹಿ ಸುದ್ದಿ ಹೊರ ಬಿದ್ದಿದೆ. ಏಕಲವ್ಯ ಮಾಡೆಲ್‌ ರೆಸಿಡೆಯ್ಶಿಯಲ್‌ ಸ್ಕೂಲ್‌ (Eklavya Model Residential School) ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 7,267 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (EMRS Recruitment 2025). ಟ್ರೈನ್ಡ್‌ ಗ್ರಾಜ್ಯುವೇಟ್‌ ಟೀಚರ್‌, ಪೋಸ್ಟ್‌ ಗ್ರಾಜ್ಯುವೇಟ್‌ ಟೀಚರ್‌ ಸೇರಿದಂತೆ ವಿವಿಧ ಹುದ್ದೆಗಳಿದ್ದು, ಪದವಿ, ಸ್ನಾತಕೋತ್ತರ, ದ್ವಿತೀಯ ಪಿಯುಸಿ, ಎಸ್‌ಎಸ್‌ಎಲ್‌ ಪಾಸಾದವರು ಅಪ್ಲೈ ಮಾಡಬಹುದು (Job Guide). ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಅಕ್ಟೋಬರ್‌ 23.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಪ್ರಾಂಶುಪಾಲ-225 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಎಡ್‌, ಸ್ನಾತಕೋತ್ತರ ಪದವಿ, ಎಂ.ಎಡ್‌.

ಪಿಜಿಟಿ (Post Graduate Teacher)-1,460 ಹುದ್ದೆ, ವಿದ್ಯಾರ್ಹತೆ: ಬಿ.ಎಡ್‌, ಸ್ನಾತಕೋತ್ತರ ಪದವಿ, ಎಂ.ಎಡ್‌, ಎಂ.ಇ ಅಥವಾ ಎಂ.ಟೆಕ್‌, ಎಂ.ಎಸ್‌ಸಿ, ಎಂಸಿಎ.

ಟಿಜಿಟಿ (Trained Graduate Teacher)-3,962 ಹುದ್ದೆ, ವಿದ್ಯಾರ್ಹತೆ: ಪದವಿ, ಬಿಸಿಎ, ಬಿ.ಇ ಅಥವಾ ಬಿ.ಟೆಕ್‌, ಬಿ.ಎಲ್‌ಐಎಸ್‌, ಪದವಿ, ಬಿ.ಎಡ್‌, ಸ್ನಾತಕೋತ್ತರ ಪದವಿ, ಎಂ.ಎಡ್‌, ಎಂ.ಎಲ್‌ಐಎಸ್‌.

ಮಹಿಳಾ ಸ್ಟಾಫ್‌ ನರ್ಸ್‌-550 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ.

ಹಾಸ್ಟೆಲ್‌ ವಾರ್ಡನ್‌-635 ಹುದ್ದೆ, ವಿದ್ಯಾರ್ಹತೆ: ಪದವಿ.

ಅಕೌಂಟೆಂಟ್‌-61 ಹುದ್ದೆ, ವಿದ್ಯಾರ್ಹತೆ: ಪದವಿ.

ಜೂನಿಯರ್‌ ಸೆಕ್ರಟರಿಯೇಟ್‌ ಅಸಿಸ್ಟಂಟ್‌-228 ಹುದ್ದೆ, ವಿದ್ಯಾರ್ಹತೆ: ದ್ವಿತೀಯ ಪಿಯುಸಿ.

ಲ್ಯಾಬ್‌ ಅಟಂಡೆಂಟ್‌-146 ಹುದ್ದೆ, ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ.

ವಯೋಮಿತಿ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ 30-50 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10ರಿಂದ 15 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಮಹಿಳಾ/ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಇನ್ನುಳಿದಂತೆ ಎಲ್ಲ ಅಭ್ಯರ್ಥಿಗಳು ಪ್ರಾಂಶುಪಾಲ ಹುದ್ದೆಗೆ 2,000 ರೂ., ಪಿಜಿಟಿ ಮತ್ತು ಟಿಜಿಟಿ ಹುದ್ದೆಗೆ 1,500 ರೂ., ನಾನ್‌ ಟೀಚಿಂಗ್‌ ಸ್ಟಾಫ್‌ ಹುದ್ದೆಗೆ 1,000 ರೂ. ಅರ್ಜಿ ಸಲ್ಲಿಸಬೇಕು. ಇನ್ನು ಪ್ರೊಸೆಸಿಂಗ್‌ ಫೀಸ್‌ ಆಗಿ ಎಲ್ಲ ಅಭ್ಯರ್ಥಿಗಳು 500 ರೂ. ಆನ್‌ಲೈನ್‌ ಮೂಲಕ ಪಾವತಿಸಬೇಕು.

ಈ ಸುದ್ದಿಯನ್ನೂ ಓದಿ: WCD Dakshina Kannada Recruitment 2025: ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿಯಲ್ಲಿದೆ 277 ಹುದ್ದೆ; ಎಸ್‌ಎಸ್‌ಎಲ್‌ಸಿ ಪಾಸಾದವರು ಅಪ್ಲೈ ಮಾಡಿ

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಒಎಂಆರ್‌ ಆಧಾರಿತ ಪರೀಕ್ಷೆ, ಸ್ಕಿಲ್‌ ಟೆಸ್ಟ್‌, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಅಭ್ಯರ್ತಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳಿಗೆ ಅನುಗುಣವಾಗಿ 18000 ರೂ. - 2,09,200 ರೂ. ಮಾಸಿಕ ವೇತನ ದೊರೆಯಲಿದೆ.

EMRS Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ ವಿಳಾಸ: nests.tribal.gov.inಗೆ ಭೇಟಿ ನೀಡಿ.