ದೆಹಲಿ, ಮಾ. 3: ದೇಶದ ಉನ್ನತ ನ್ಯಾಯಾಂಗ ಸಂಸ್ಥೆಯಾಗಿರುವ ಸುಪ್ರೀಂ ಕೋರ್ಟ್ನಲ್ಲಿ (Supreme Court) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 22 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಸೀನಿಯರ್ ಹಾಗೂ ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ (JCA post) ಅರ್ಜಿ ಆಹ್ವಾನಿಸಿದೆ. ನಿಮಗೂ ಸುಪ್ರೀಂ ಕೋರ್ಟ್ನಲ್ಲಿ ಕಾರ್ಯ ನಿರ್ವಹಿಸುವ ಇಚ್ಛೆ ಇದ್ದರೆ ಈ ಕೂಡಲೇ ಅರ್ಜಿ (Application) ಸಲ್ಲಿಸಬಹುದು. ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಹೆಚ್ಚಿನ ವಿವರಗಳಿಗೆ ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್ಸೈಟ್ಗೆ (Official Website) ಭೇಟಿ ನೀಡಿ ಪರಿಶೀಲಿಸಬಹುದು. https://www.sci.gov.in// ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ ಹಾಗೂ ಆಯ್ಕೆ ಸೇರಿದಂತೆ ಇತರೆ ಎಲ್ಲಾ ವಿವರಗಳು ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆಗಳ ವಿವರ
ಅಸಿಸ್ಟೆಂಟ್ ಎಡಿಟರ್ – 5, ಅಸಿಸ್ಟೆಂಟ್ ಡೈರೆಕ್ಟರ್ – 1, ಸೀನಿಯರ್ ಕೋರ್ಟ್ ಅಸಿಸ್ಟೆಂಟ್ – 2, ಅಸಿಸ್ಟೆಂಟ್ ಲೈಬ್ರರಿಯನ್ – 14 ಹುದ್ದೆಗಳಿವೆ. ಈ ಹುದ್ದೆಗಳು ನ್ಯಾಯಾಂಗದ ಆಡಳಿತ, ದಾಖಲೆ ಸಂಗ್ರಹ, ಸಂಪಾದಕೀಯ ಹಾಗೂ ಗ್ರಂಥಾಲಯ ವಿಭಾಗಗಳಿಗೆ ಸಂಬಂಧಿಸಿದ್ದಾಗಿದೆ.
ವಿದ್ಯಾರ್ಹತೆ ಮತ್ತು ಅನುಭವ
ಅಸಿಸ್ಟೆಂಟ್ ಎಡಿಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಕಾರ್ಯಾನುಭವ ಹೊಂದಿರಬೇಕು.
ಅಸಿಸ್ಟೆಂಟ್ ಡೈರೆಕ್ಟರ್ / ಸೀನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಅಸಿಸ್ಟೆಂಟ್ ಲೈಬ್ರರಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಲೈಬ್ರರಿ ಸೈನ್ಸ್‌ನಲ್ಲಿ ವಿಷಯದಲ್ಲಿ ಪದವಿ ಹಾಗೂ ಕನಿಷ್ಠ ಎರಡು ವರ್ಷದ ಅನುಭವ ಇರಬೇಕು.
ಬೆಸ್ಕಾಂನಲ್ಲಿದೆ ಉದ್ಯೋಗಾವಕಾಶ; ಬಿಇ, ಡಿಪ್ಲೊಮಾ, ಪದವೀಧರರು ಅಪ್ಲೈ ಮಾಡಿ
ವಯೋಮಿತಿ
- ಅಸಿಸ್ಟೆಂಟ್ ಎಡಿಟರ್ – 30ರಿಂದ 40 ವರ್ಷ
- ಅಸಿಸ್ಟೆಂಟ್ ಡೈರೆಕ್ಟರ್ – ಗರಿಷ್ಠ 35 ವರ್ಷ
- ಅಸಿಸ್ಟೆಂಟ್ ಲೈಬ್ರರಿಯನ್ – ಗರಿಷ್ಠ 30 ವರ್ಷ (ಸರ್ಕಾರಿ ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯೋಸಡಿಲಿಕೆ ಅನ್ವಯವಾಗಲಿದೆ.)
ಅರ್ಜಿ ಶುಲ್ಕ
ಸಾಮಾನ್ಯ / ಒಬಿಸಿ: 1,500 ರುಪಾಯಿ, ಪ.ಜಾ / ಪ.ಪಂ / ವಿಶೇಷಚೇತನ: 750 ರುಪಾಯಿ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ ಹೇಗೆ?
ಅಭ್ಯರ್ಥಿಗಳ ಆಯ್ಕೆ ಮೂರು ಹಂತಗಳಲ್ಲಿ ನಡೆಯಲಿದೆ:
- ಲಿಖಿತ ಪರೀಕ್ಷೆ
- ಕಂಪ್ಯೂಟರ್ ದಕ್ಷತಾ ಪರೀಕ್ಷೆ
- ವೈಯಕ್ತಿಕ ಸಂದರ್ಶನ
ಅಂತಿಮ ಆಯ್ಕೆ ಪಟ್ಟಿಯನ್ನು ಅರ್ಹತಾ ಅಂಕಗಳ ಆಧಾರದಲ್ಲಿ ಪ್ರಕಟಿಸಲಾಗುತ್ತದೆ.
ಮುಖ್ಯ ದಿನಾಂಕಗಳು
ಅರ್ಜಿ ಪ್ರಾರಂಭ: ಫೆಬ್ರವರಿ 23
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 8
ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ sci.gov.inಗೆ ಭೇಟಿ ನೀಡಿ ಸಂಪೂರ್ಣ ಅಧಿಸೂಚನೆ ಹಾಗೂ ಅರ್ಜಿ ಪ್ರಕ್ರಿಯೆ ಕುರಿತು ಹೆಚ್ಚಿನ ಮಾಹಿತಿ ಪಡೆಯಬಹುದು.