ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾದ ಟೆಕ್ ದೈತ್ಯ ಒರಾಕಲ್; 10,000 ಉದ್ಯೋಗಿಗಳ ಭವಿಷ್ಯ ಅತಂತ್ರ

Oracle Layoffs: ವರ್ಷದ ಆರಂಭದಿಂದಲೂ ಸುದ್ದಿಯಲ್ಲಿರುವ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಒರಾಕಲ್ ಮತ್ತಷ್ಟು ಉದ್ಯೋಗ ಕಡಿತಗೊಳಿಸಲು ಮುಂದಾಗಿದೆ ಎಂದು ಹೇಳಲಾಗಿದೆ. ಈ ಉದ್ಯೋಗ ಕಡಿತ ಎಷ್ಟು ದೊಡ್ಡ ಪ್ರಮಾಣದಲ್ಲಿರಲಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ಜಾಗತಿಕವಾಗಿ ಸುಮಾರು 7,000ದಿಂದ 10,000 ಉದ್ಯೋಗಗಳು ಕಡಿತಗೊಳ್ಳಬಹುದು ಎನ್ನಲಾಗಿದೆ. ಭಾರತೀಯರೂ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಆ. 1: ವರ್ಷದ ಆರಂಭದಿಂದಲೂ ಸುದ್ದಿಯಲ್ಲಿರುವ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಒರಾಕಲ್ ಮತ್ತಷ್ಟು ಉದ್ಯೋಗ ವಜಾಗೊಳಿಸಲು ಮುಂದಾಗಿದೆ ಎಂದು ಹೇಳಲಾಗಿದೆ (Oracle layoffs). ಕಂಪನಿಯ ಈ ನಿರ್ಧಾರವು ಭಾರತದಲ್ಲಿರುವ ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರಬಹುದು. ಕಂಪನಿಯು ಕ್ಲೌಡ್ ಮೂಲಸೌಕರ್ಯ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಗಳ ಮೇಲೆ ಭಾರಿ ಪ್ರಮಾಣದ ಹಣವನ್ನು ಹೂಡಿಕೆ ಮಾಡುತ್ತಿದ್ದರೂ ವೆಚ್ಚ ಕಡಿತದ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ಇದು ಸಾಮಾನ್ಯ ಪುನರ್ರಚನೆ ಅಲ್ಲ. ಈ ಬಾರಿಯ ಲೇಆಫ್ ಅತ್ಯಂತ ವ್ಯಾಪಕವಾಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ ಬಜೆಟ್ ಕಡಿತಗೊಳಿಸುವಂತೆ ಹಲವು ತಂಡಗಳು ಮತ್ತು ಮ್ಯಾನೇಜರ್‌ಗಳಿಗೆ ಸೂಚನೆ ನೀಡಲಾಗಿದೆ. ಈ ವೆಚ್ಚದ ಗುರಿಗಳನ್ನು ಪೂರೈಸಲು ಉದ್ಯೋಗ ಕಡಿತ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.

ಈ ಉದ್ಯೋಗ ಕಡಿತ ಎಷ್ಟು ದೊಡ್ಡ ಪ್ರಮಾಣದಲ್ಲಿರಲಿದೆ ಎಂಬುದು ತಿಳಿದು ಬಂದಿಲ್ಲ. ಅಂದಾಜಿನ ಪ್ರಕಾರ ಜಾಗತಿಕವಾಗಿ ಸುಮಾರು 7,000ದಿಂದ 10,000 ಉದ್ಯೋಗಗಳು ಕಡಿತಗೊಳ್ಳಬಹುದು ಎನ್ನಲಾಗಿದೆ. ಭಾರತವೂ ಇದಕ್ಕೆ ಹೊರತಲ್ಲ. ಆದರೆ ಭಾರತದಲ್ಲಿ ಎಷ್ಟು ಉದ್ಯೋಗ ನಷ್ಟವಾಗಲಿದೆ ಎಂಬುದರ ಕುರಿತು ಇದುವರೆಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 3 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್‌ಪಾಸ್‌

ಒರಾಕಲ್ ಉದ್ಯೋಗ ಕಡಿತಗೊಳಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಕಂಪನಿಯು ಸುಮಾರು 21,000 ಉದ್ಯೋಗ ಕಡಿತಗೊಳಿಸಿದೆ. ಇದು ಅದರ ಜಾಗತಿಕ ಉದ್ಯೋಗಿಗಳ ಸಂಖ್ಯೆಯನ್ನು ಶೇ. 13ರಷ್ಟು ಕಡಿಮೆ ಮಾಡಿ, ಒಟ್ಟು ಸಂಖ್ಯೆಯನ್ನು ಸುಮಾರು 1,41,000ಕ್ಕೆ ತಂದು ನಿಲ್ಲಿಸಿತ್ತು. ಅದಾಗ್ಯೂ ವಿಶ್ವದಾದ್ಯಂತ ಕಡಿತಗೊಂಡಿರುವ ಉದ್ಯೋಗಗಳ ನೈಜ ಸಂಖ್ಯೆ 30,000 ಹುದ್ದೆಗಳಿಗೆ ಹತ್ತಿರದಲ್ಲಿದೆ ಎನ್ನಲಾಗಿದೆ.

ಒರಾಕಲ್ ಸಂಸ್ಥೆಗೆ ಭಾರತವು ಅತ್ಯಂತ ಪ್ರಮುಖ ಹಬ್ ಆಗಿದ್ದು, ಇಲ್ಲಿ ದೊಡ್ಡ ಮಟ್ಟದ ಎಂಜಿನಿಯರಿಂಗ್, ಕ್ಲೌಡ್, ಗ್ರಾಹಕ ಬೆಂಬಲ ಮತ್ತು ತಂತ್ರಜ್ಞಾನ ಕಾರ್ಯಾಚರಣೆಗಳ ಕೇಂದ್ರಗಳಿವೆ. ಒಂದು ವೇಳೆ ಈ ಉದ್ಯೋಗ ಕಡಿತವು ವ್ಯಾಪಕವಾಗಿ ಜಾರಿಗೆ ಬಂದರೆ, ಭಾರತದ ಉದ್ಯೋಗಿಗಳಿಗೆ ಭಾರಿ ಹೊಡೆತ ಬೀಳುವ ಎಲ್ಲ ಲಕ್ಷಣಗಳಿವೆ. ಸೆಪ್ಟೆಂಬರ್ 11ರಂದು ಒರಾಕಲ್ ಸಂಸ್ಥೆಯ ಮುಂದಿನ ತ್ರೈಮಾಸಿಕ ಫಲಿತಾಂಶಗಳು ಪ್ರಕಟವಾಗಲಿದ್ದು, ಇದಕ್ಕೂ ಮುನ್ನ ಈ ವದಂತಿ ಹರಡುತ್ತಿವೆ.

ಇದುವರೆಗೆ, ಒರಾಕಲ್ ಸಂಸ್ಥೆಯು ಈ ಉದ್ಯೋಗ ಕಡಿತದ ಕುರಿತು ಸಾರ್ವಜನಿಕವಾಗಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆತಂಕಗೊಂಡಿರುವ ಉದ್ಯೋಗಿಗಳು ಮುಂದೆ ಏನಾಗಬಹುದು ಎಂಬ ಚಿಂತೆಯಲ್ಲೇ ಕಾಲ ಕಳೆಯುವಂತಾಗಿದೆ.