ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Trains cancelled: ಬೆಂಗಳೂರು- ಕರಾವಳಿ ನಡುವೆ 5 ತಿಂಗಳು ಈ ರೈಲುಗಳ ಸಂಚಾರ ರದ್ದು

Trains Cancelled: ರೈಲ್ವೆ ಕಾಮಗಾರಿ ಹಿನ್ನೆಲೆ ಬೆಂಗಳೂರು - ಮಂಗಳೂರು, ಬೆಂಗಳೂರು - ಕಾರವಾರ ನಡುವೆ ಸಂಚಾರ ನಡೆಸುತ್ತಿದ್ದ 6 ರೈಲುಗಳು ಮುಂದಿನ 5 ತಿಂಗಳು ರದ್ದಾಗುತ್ತಿವೆ. ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌, ಕಾರವಾರ ಎಕ್ಸ್‌ಪ್ರೆಸ್‌, ಮಂಗಳೂರು ಸೆಂಟ್ರಲ್‌ ವಾರದ ವಿಶೇಷ ಎಕ್ಸ್‌ಪ್ರೆಸ್‌ ಮುಂದಿನ 5 ತಿಂಗಳು ರದ್ದಾಗಲಿವೆ.

ಬೆಂಗಳೂರು- ಕರಾವಳಿ ನಡುವೆ 5 ತಿಂಗಳು ಈ ರೈಲುಗಳ ಸಂಚಾರ ರದ್ದು

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ May 26, 2025 11:56 AM

ದಕ್ಷಿಣ ಕನ್ನಡ: ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ(Sakaleshpur- Subrahmanya Route) ಸುರಕ್ಷತೆ ಮತ್ತು ವಿದ್ಯುದ್ದೀಕರಣ ಕಾಮಗಾರಿ ನಡೆಯಲಿರುವ ಕಾರಣ, ಜೂನ್ 1ರಿಂದ ನವೆಂಬರ್ 1ರವರೆಗೆ ಬೆಂಗಳೂರು-ಮಂಗಳೂರು (Bengaluru- mangaluru) ಮತ್ತು ಬೆಂಗಳೂರು-ಕಾರವಾರ ನಡುವಿನ ಆರು ರೈಲುಗಳ (Trains cancelled) ಹಗಲು ಸಂಚಾರ ರದ್ದುಗೊಳಿಸಲಾಗಿದೆ. ನೈರುತ್ಯ ರೈಲ್ವೆ ಇಲಾಖೆಯು ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಯಾಣಿಕರು ಸಹಕರಿಸಬೇಕೆಂದು ಕೋರಿದೆ.

ರೈಲ್ವೆ ಕಾಮಗಾರಿ ಹಿನ್ನೆಲೆ ಬೆಂಗಳೂರು - ಮಂಗಳೂರು, ಬೆಂಗಳೂರು - ಕಾರವಾರ ನಡುವೆ ಸಂಚಾರ ನಡೆಸುತ್ತಿದ್ದ 6 ರೈಲುಗಳು ಮುಂದಿನ 5 ತಿಂಗಳು ರದ್ದಾಗುತ್ತಿವೆ. ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌, ಕಾರವಾರ ಎಕ್ಸ್‌ಪ್ರೆಸ್‌, ಮಂಗಳೂರು ಸೆಂಟ್ರಲ್‌ ವಾರದ ವಿಶೇಷ ಎಕ್ಸ್‌ಪ್ರೆಸ್‌ ಮುಂದಿನ 5 ತಿಂಗಳು ರದ್ದಾಗಲಿವೆ. ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ ಸಂಚಾರ ನಡೆಸುವ 12 ರೈಲುಗಳ ಪೈಕಿ 6 ರೈಲುಗಳು ಸಂಪೂರ್ಣ ರದ್ದಾಗುತ್ತಿವೆ.

ಯಾವುದೆಲ್ಲಾ ರದ್ದು?

ಮೇ 31 ರಿಂದ ನವೆಂಬರ್ 1 ರವರೆಗೆ ಶನಿವಾರಗಳಂದು ಸಂಚರಿಸುವ ಯಶವಂತಪುರ - ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16539) ರದ್ದು.

ಜೂನ್ 1 ರಿಂದ ನವೆಂಬರ್ 2 ರವರೆಗೆ ಭಾನುವಾರಗಳಂದು ಸಂಚರಿಸುವ ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16540) ರದ್ದು.

ಜೂನ್ 1 ರಿಂದ ಅಕ್ಟೋಬರ್ 30 ರವರೆಗೆ ಮಂಗಳವಾರ, ಗುರುವಾರ ಮತ್ತು ಭಾನುವಾರಗಳಂದು ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16575) ರದ್ದು.

ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಸಂಚರಿಸುವ ಮಂಗಳೂರು-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16576) ರದ್ದು.

ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಸಂಚರಿಸುವ ಯಶವಂತಪುರ-ಕಾರವಾರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16515) ರದ್ದು.

ಜೂನ್ 3 ರಿಂದ ನವೆಂಬರ್ 1 ರವರೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರಗಳಂದು ಸಂಚರಿಸುವ ಕಾರವಾರ-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16516) ರೈಲು ರದ್ದು.

ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌, ಕಾರವಾರ ಎಕ್ಸ್‌ಪ್ರೆಸ್‌, ಮಂಗಳೂರು ಸೆಂಟ್ರಲ್‌ ವಾರದ ವಿಶೇಷ ಎಕ್ಸ್‌ಪ್ರೆಸ್‌ ಮುಂದಿನ 5 ತಿಂಗಳು ರದ್ದಾಗಲಿವೆ. ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ ಸಂಚಾರ ನಡೆಸುವ 12 ರೈಲುಗಳ ಪೈಕಿ 6 ರೈಲುಗಳು ಸಂಪೂರ್ಣ ರದ್ದಾಗುತ್ತಿವೆ. ಈ ಮೂಲಕ ಪ್ರಯಾಣಿಕರು ಬದಲಿ ಮಾರ್ಗ ಆಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ.

ಇದನ್ನೂ ಓದಿ: Viral Video: ಭಾರತದಲ್ಲಿ ರೈಲು ಪ್ರಯಾಣ ನಂತರ ಅಮೆರಿಕ ಪ್ರವಾಸಿಗನಿಗೆ ಆಗಿದ್ದೇನು? ಈತ ಬದುಕುಳಿದ್ದಿದ್ದೇ ಪವಾಡ ಅಂತೆ!