Viral Video: ಭಾರತದಲ್ಲಿ ರೈಲು ಪ್ರಯಾಣ ನಂತರ ಅಮೆರಿಕ ಪ್ರವಾಸಿಗನಿಗೆ ಆಗಿದ್ದೇನು? ಈತ ಬದುಕುಳಿದ್ದಿದ್ದೇ ಪವಾಡ ಅಂತೆ!
ಅಮೆರಿಕದ ಕಂಟೆಂಟ್ ಕ್ರಿಯೇಟರ್ ನಿಕ್ ಮ್ಯಾಡಾಕ್ ವಾರಣಾಸಿಯಿಂದ ನ್ಯೂ ಜಲ್ಪೈಗುರಿಗೆ 15 ಗಂಟೆಗಳ ರೈಲು (3 ನೇ ದರ್ಜೆಯ ಎಸಿಯಲ್ಲಿ ಪ್ರಯಾಣ ಮಾಡಿ ಅಲ್ಲಿನ ಕಳಪೆ ಶೌಚಾಲಯದಿಂದಾಗಿ ತೀವ್ರ ಉಸಿರಾಟದ ಸೋಂಕಿಗೆ ಒಳಗಾಗಿ ಭೂತಾನ್‍ನ ಆಸ್ಪತ್ರೆಗೆ ದಾಖಲಾಗಿದ್ದಾನಂತೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.


ಲಖನೌ: ಅಮೆರಿಕದ ಕಂಟೆಂಟ್ ಕ್ರಿಯೇಟರ್ ನಿಕ್ ಮ್ಯಾಡಾಕ್ ಭಾರತದ ಪ್ರವಾಸದ ವೇಳೆ ತೀವ್ರ ಉಸಿರಾಟದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾನಂತೆ. ಆತನ ಆರು ವರ್ಷಗಳ ಪ್ರಯಾಣದಲ್ಲಿ ಇದೊಂದು ಅತ್ಯಂತ ಘೋರ ಅನುಭವಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಆಸ್ಪತ್ರೆಯಿಂದ ತನ್ನ ಹೇಳಿಕೆಯ ವಿಡಿಯೊವನ್ನು ಪೋಸ್ಟ್ ಮಾಡಿದ ನಿಕ್, ನಾನು ಭಾರತವನ್ನು ಪ್ರೀತಿಸುತ್ತೇನೆ. ಈ ದೇಶವು ಉದಾರ ಮನಸ್ಸಿನ ಜನರು, ರಮಣೀಯ ಸ್ಥಳಗಳು ಹಾಗೂ ಶ್ರೀಮಂತ ಮತ್ತು ಪವಿತ್ರ ಇತಿಹಾಸವನ್ನು ಹೊಂದಿದೆ. ವಾರಣಾಸಿಯಿಂದ ನ್ಯೂ ಜಲ್ಪೈಗುರಿಗೆ ನನ್ನ 15 ಗಂಟೆಗಳ ರೈಲು (3 ನೇ ದರ್ಜೆಯ ಎಸಿಯಲ್ಲಿ)ಪ್ರಯಾಣ ನನ್ನ 6 ವರ್ಷಗಳ ಪ್ರಯಾಣದಲ್ಲಿ ನಾನು ನೋಡಿದ ಅತ್ಯಂತ ಘೋರ ದಿನಗಳಲ್ಲಿ ಒಂದಾಗಿದೆ ಎಂದು ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾನೆ.
ನಿಕ್ ಪ್ರಸ್ತುತ ಭೂತಾನ್‍ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೂರು ದಿನಗಳ ನಂತರ, ಭೂತಾನ್‍ನಲ್ಲಿ ಆತನಿಗೆ ತೀವ್ರ ಉಸಿರಾಟದ ಸೋಂಕು ಇರುವುದು ಪತ್ತೆಯಾಗಿದ್ದು, ಆದರೆ ಈಗ ಆತ ಅದಕ್ಕೆ ಚಿಕಿತ್ಸೆ ಪಡೆದು ಚೇತರಿಸಿಕೊಳ‍್ಳುತ್ತಿದ್ದಾನೆ ಎಂಬುದಾಗಿ ವಿಡಿಯೊದಲ್ಲಿ ತಿಳಿಸಿದ್ದಾನೆ.
ಅಮೆರಿಕದ ಟ್ರಾವೆಲ್ ವ್ಲಾಗರ್ ವಿಡಿಯೊ ಇಲ್ಲಿದೆ ನೋಡಿ...
ಅಲ್ಲದೇ ಆತ ರೈಲಿನ ಶೌಚಾಲಯದ ವಿಡಿಯೊವನ್ನು ಹಂಚಿಕೊಂಡಿದ್ದಾನೆ ಮತ್ತು ಅದರಲ್ಲಿ ಶೌಚಾಲಯದ ಕಳಪೆ ಸ್ಥಿತಿ ಮತ್ತು ಸ್ವಚ್ಛತೆಯ ಕೊರತೆ ಎದ್ದು ತೋರುತ್ತಿದೆ. ಈ ರೈಲಿನಲ್ಲಿ ಪ್ರಯಾಣಿಸಿದ 72 ಗಂಟೆಗಳ ನಂತರ ಆತ ತೀವ್ರ ಉಸಿರಾಟದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬುದಾಗಿ ತಿಳಿಸಿದ್ದಾನೆ. ಅವನ ವಿಡಿಯೊ ಸೋಶಿಯಲ್ ಮೀಡಿಯದಲ್ಲಿ ಪೋಸ್ಟ್ ಮಾಡಿದ ಕೆಲವೇ ಸಮಯದಲ್ಲಿ ವೈರಲ್ ಆಗಿದೆ. ಕೆಲವರು ಅವನ ಬಗ್ಗೆ ಸಹಾನುಭೂತಿ ತೋರಿಸಿದರೆ, ಅನೇಕರು ಅವನ ಪ್ರಯಾಣದ ಆಯ್ಕೆಗಳ ಬಗ್ಗೆ ಟೀಕಿಸಿದ್ದಾರೆ ಮತ್ತು ಭಾರತವನ್ನು ಕೆಟ್ಟದಾಗಿ ತೋರಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
"ಹೆಚ್ಚಿನ ಪ್ರವಾಸಿಗರು ಏಷ್ಯಾದ ಎಲ್ಲಾ ದೇಶಗಳ ಬಡ ಮತ್ತು ಕೆಟ್ಟ ಪ್ರದೇಶಗಳಿಗೆ ಹೋಗಿ ನಂತರ ಇಡೀ ದೇಶವು ಹಾಗೆ ಇದೆ ಎಂದು ಘೋಷಿಸುತ್ತಾರೆ. ಏಕೆಂದರೆ ಈ ಪ್ರಯಾಣಿಕರು ಆರ್ಥಿಕವಾಗಿ ಶ್ರೀಮಂತ ಪ್ರದೇಶಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ, ನಂತರ ಗೊಣಗುತ್ತಾರೆ." ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಮುಂದಿನ ಬಾರಿ ನಿಮ್ಮ ಬಜೆಟ್ ಅನ್ನು ಹೆಚ್ಚಿಸಿ ಮತ್ತು 1 ನೇ ಕ್ಲಾಸ್ ಟಿಕೆಟ್ ಅನ್ನು ಕಾಯ್ದಿರಿಸಿ" ಎಂದು ಬರೆದಿದ್ದಾರೆ. "ವಿದೇಶಿಯರು ಭಾರತಕ್ಕೆ ಪ್ರಯಾಣಿಸುವಾಗ ದಿನಕ್ಕೆ 2 ಡಾಲರ್‌ಗಿಂತ ಹೆಚ್ಚು ಖರ್ಚು ಮಾಡುವುದನ್ನು ತಡೆಯುವ ಕಾನೂನು ಇದೆಯೇ?" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಬ್ಬರು, "ಖ್ಯಾತಿ ಬೇಕೇ? ನೀವು ಭೇಟಿ ನೀಡಿದಾಗ ಭಾರತವನ್ನು ದೂಷಿಸಿ! ಮಿಸ್ಟರ್ “ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ಸ್ಟಂಟ್ ಮಾಡಲು ಹೋಗಿ ಪ್ಯಾಂಟ್‍ಗೆ ಬೆಂಕಿ ಹಚ್ಚಿಕೊಂಡ ಭೂಪ; ಈ ವಿಡಿಯೊ ನೋಡಿ
ಇದಕ್ಕೂ ಮುನ್ನ ಅಕ್ಟೋಬರ್‌ನಲ್ಲಿ, ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಐರಿನಾ ಮೊರೆನೊ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಉದಯಪುರ ಸಿಟಿ-ಜೈಪುರ ಇಂಟರ್ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಸೆಕೆಂಡ್ ಕ್ಲಾಸ್‍ನಲ್ಲಿ ಪ್ರಯಾಣಿಸುವಾಗ ರೈಲಿನಲ್ಲಿದ್ದ ವೆಸ್ಟರ್ನ್ ಶೌಚಾಲಯದ ಕಳಪೆ ಸ್ಥಿತಿಯನ್ನು ತೋರಿಸುವ ವಿಡಿಯೊವನ್ನು ಹಂಚಿಕೊಂಡಿದ್ದಳು. ಇದು ಕೂಡ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು.