ಶಿವಮೊಗ್ಗ, ಜ.28: ಚಿತ್ರದುರ್ಗದ ಬಳಿ ನಡೆದ ಭೀಕರ ಬಸ್ ದುರಂತ (Sleeper Bus Accident) ನೆನಪಿನಿಂದ ಮಾಸುವ ಮುನ್ನವೇ ಮತ್ತೊಂದು ಅಂತಹದೇ ಅವಘಡ ನಡೆದಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡಿದ್ದ ಬೆಂಕಿಯಿಂದ ಖಾಸಗಿ ಸ್ಲೀಪರ್ ಬಸ್ಸೊಂದು ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗಿರುವ (Sleeper Bus fire Accident) ಘಟನೆ ಶಿವಮೊಗ್ಗ (Shivamogga) ಜಿಲ್ಲೆ ಹೊಸನಗರ ತಾಲೂಕಿನ ಸೂಡೂರು ಬಳಿ ನಡೆದಿದೆ. ಘಟನೆಯಲ್ಲಿ 4-5 ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ನಿಟ್ಟೂರಿಂದ ಬೆಂಗಳೂರಿಗೆ ಹೊರಟಿದ್ದ ಅನ್ನಪೂರ್ಣೇಶ್ವೇರಿ ಟ್ರಾವಲ್ಸ್ಗೆ ಸೇರಿದ ಖಾಸಗಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಬಸ್ ನಿಲ್ಲಿಸಲು ಚಾಲಕ ಮುಂದಾದಾಗ ಮರಕ್ಕೆ ಡಿಕ್ಕಿಯಾಗಿದೆ. ಬಸ್ನಲ್ಲಿದ್ದ 36 ಪ್ರಯಾಣಿಕರು ಕೂಡಲೇ ಕೆಳಗಿಳಿದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದೆ.
ಸರ್ಕಾರ ಖಡಕ್ ಸೂಚನೆ
ಸ್ಲೀಪರ್ ಬಸ್‌ಗಳಲ್ಲಿ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪಾಲಿಸಲಾಗುತ್ತಿಲ್ಲ, ಪ್ರಯಾಣಿಕರೊಂದಿಗೆ ಲಗೇಜ್ ಅನ್ನೂ ಹೇರಲಾಗುತ್ತಿದೆ ಎಂದು ಆರೋಪ ಆಕ್ರೋಶಗಳು ಕೇಳಿಬಂದಿವೆ. ಚಿತ್ರದುರ್ಗ ಖಾಸಗಿ ಬಸ್ ಅಗ್ನಿದುರಂತದ ಬಳಿಕ ಎಚ್ಚೆತ್ತಿರುವ ರಾಜ್ಯ ಸರ್ಕಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆ ಹಿನ್ನೆಲೆಯಲ್ಲಿ, 8 ನಿಯಮಗಳ ಕಡ್ಡಾಯ ಪಾಲನೆ ಮಾಡುವಂತೆ ಬಸ್ ಮಾಲಿಕರಿಗೆ ಖಡಕ್ ಸೂಚನೆ ನೀಡಿದೆ.
Chitradurga Bus Accident: ಚಿತ್ರದುರ್ಗ ಬಸ್ ಅಪಘಾತದಲ್ಲಿ ಇಬ್ಬರು ಮಹಿಳಾ ಟೆಕ್ಕಿಗಳು ಕಣ್ಮರೆ
ಸ್ಲೀಪರ್ ಬಸ್ ಗಳಿಗೆ 8 ನಿಯಮ ಪಾಲನೆ ಕಡ್ಡಾಯ
ಸ್ಲೀಪರ್ ಬಸ್‌ಗಳಲ್ಲಿ ಚಾಲಕರ ಹಿಂಬದಿ ಡೋರ್ ತೆಗೆಯಬೇಕು.
ಸ್ಲೀಪರ್ ಬರ್ತ್‌ಗಳಲ್ಲಿ ಸ್ಲೈಡರ್ ತೆಗೆಯಬೇಕು
ಫೈರ್ ಡಿಟೆಕ್ಷನ್ ಅನ್ನು ತಿಂಗಳೊಳಗೆ ಅಳವಡಿಸಬೇಕು
10 ಕೆಜಿ ತೂಕದ ಅಗ್ನಿ ಶಾಮಕ ಸಾಧನ ಅಳವಡಿಕೆ ಕಡ್ಡಾಯ
ಚಾಸಿಸ್ ಅನಧಿಕೃತ ವಿಸ್ತರಣೆಗೆ ಬ್ರೇಕ್
ಅನುಮೋದಿತ ಟೆಸ್ಟಿಂಗ್ ಏಜೆನ್ಸಿಯಿಂದ ಪ್ರಮಾಣ ಪತ್ರ ಕಡ್ಡಾಯ
ಪ್ರಯಾಣಿಕರ ಸೇಫ್ಟಿ ಮಾನದಂಡ ಇದ್ದರೆ ಮಾತ್ರ ಎಫ್‌ಸಿ ಮಾಡಬೇಕು
ಬಸ್ ಕವಚ ನಿರ್ಮಾಣ ಸಂಸ್ಥೆ ಸಿಂಧುತ್ವ ಪರಿಶೀಲಿಸಿದ ನಂತರವೇ ನೋಂದಣಿ ಮಾಡಬೇಕು.
Chitradurga Bus Accident: ಬಸ್‌ಗಳ ರಾತ್ರಿ ಪ್ರಯಾಣಕ್ಕೆ ವಿರಾಮ: ಕೇಂದ್ರಕ್ಕೆ ಪತ್ರ ಬರೆಯಲು ರಾಜ್ಯ ಚಿಂತನೆ
ಪ್ರಯಾಣಿಕರಿಗೆ ಯಾವ ರೀತಿಯಲ್ಲಿ ಮಾಹಿತಿ ನೀಡಬೇಕು? ಫೈರ್ ಎಸ್ಟಿಂಗ್ ವಿಷರ್ ಗಳನ್ನು ಅಳವಡಿಸುವ ಬಗ್ಗೆ,ಎಮರ್ಜೆನ್ಸಿ ಎಕ್ಸಿಟ್ ಡೋರ್ ಗಳ ಬಳಿ ಯುವಕರು ಮತ್ತು ಮಧ್ಯ ವಯಸ್ಕರಿಗೆ ಸೀಟ್ ನೀಡಬೇಕು, ಎಸಿ ಬಸ್ಸುಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ಹೇಗೆ ನಂದಿಸಬೇಕು? ಹೊರಗೆ ಬರಲು ಗ್ಲಾಸ್ ಹೊಡೆಯಲು ಹ್ಯಾಮರ್ ಗಳನ್ನು ಇಡಬೇಕು? ಪ್ರಯಾಣಿಕರು ಡೋರ್ ಜಂಪ್ ಮಾಡಲು ಮೆಟ್ಟಿಲುಗಳ ವ್ಯವಸ್ಥೆ ಮಾಡಬೇಕು, ಬೆಂಕಿ ಕಾಣಿಸಿಕೊಂಡರೇ ಪ್ರಯಾಣಿಕರಿಗೆ ಡ್ರೈವರ್ ಅಲರಾಂ ನೀಡಬೇಕು. ಹೀಗೆ ಖಾಸಗಿ ಬಸ್ ಮಾಲೀಕರಿಗೆ ಮತ್ತು ಬಸ್ ಬಾಡಿ ಬಿಲ್ಡಿಂಗ್ ಮಾಡುವ ಕಂಪನಿಗಳಿಗೆ ಸಾರಿಗೆ ಸಚಿವರು ಸೂಚನೆಯ ಜೊತೆಗೆ ಎಚ್ಚರಿಕೆ ನೀಡಿದ್ದಾರೆ.