ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chitradurga Bus Accident: ಚಿತ್ರದುರ್ಗ ಬಸ್‌ ಅಪಘಾತದಲ್ಲಿ ಇಬ್ಬರು ಮಹಿಳಾ ಟೆಕ್ಕಿಗಳು ಕಣ್ಮರೆ

ಚನ್ನರಾಯಪಟ್ಟಣ ತಾಲೂಕಿನ ಅಂಕನಹಳ್ಳಿಯ ನವ್ಯ ಹಾಗೂ ಚನ್ನರಾಯಪಟ್ಟಣ ನಗರದ ಮಾನಸ ಕಣ್ಮರೆಯಾಗಿದ್ದಾರೆ. ಇಬ್ಬರು ಹಾಸನ ನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಟ್ಟಿಗೆ ಇಂಜಿನಿಯರಿಂಗ್ ಮುಗಿಸಿದ್ದರು. ಬಳಿಕ ಬೆಂಗಳೂರಿನಲ್ಲಿ ಎಂಟೆಕ್ ಮುಗಿಸಿ, ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಇವರ ದೇಹದ ಅವಶೇಷಗಳಿಗಾಗಿ ಹುಡುಕಾಟ ನಡೆದಿದೆ.

ಚಿತ್ರದುರ್ಗ ಬಸ್‌ ಅಪಘಾತದಲ್ಲಿ ಇಬ್ಬರು ಮಹಿಳಾ ಟೆಕ್ಕಿಗಳು ಕಣ್ಮರೆ

ಕಣ್ಮರೆಯಾದ ನವ್ಯ, ಮಾನಸ -

ಹರೀಶ್‌ ಕೇರ
ಹರೀಶ್‌ ಕೇರ Dec 25, 2025 1:56 PM

ಹಾಸನ, ಡಿ.25: ಚಿತ್ರದುರ್ಗದ ಹಿರಿಯೂರು ಬಳಿ (Chitradurga Bus Accident) ಲಾರಿ ಹಾಗೂ ಖಾಸಗಿ ಬಸ್ ನಡುವೆ ಭೀಕರವಾದ ಅಪಘಾತ ಸಂಭವಿಸಿ 9 ಜನ ಸಜೀವ ದಹನಗೊಂಡಿದ್ದಾರೆ. ಈ ಭೀಕರ ಬಸ್ ಅಪಘಾತದಲ್ಲಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್ಸ್‌ ಆಗಿದ್ದ ಹಾಸನದ ಚನ್ನರಾಯಪಟ್ಟಣ ಮೂಲದ ಇಬ್ಬರು ಯುವತಿಯರು ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಚನ್ನರಾಯಪಟ್ಟಣ ತಾಲೂಕಿನ ಅಂಕನಹಳ್ಳಿಯ ನವ್ಯ ಹಾಗೂ ಚನ್ನರಾಯಪಟ್ಟಣ ನಗರದ ಮಾನಸ ಕಣ್ಮರೆಯಾಗಿದ್ದಾರೆ. ಇಬ್ಬರು ಹಾಸನ ನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಟ್ಟಿಗೆ ಇಂಜಿನಿಯರಿಂಗ್ ಮುಗಿಸಿದ್ದರು. ಬಳಿಕ ಬೆಂಗಳೂರಿನಲ್ಲಿ ಎಂಟೆಕ್ ಮುಗಿಸಿ, ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಇವರ ದೇಹದ ಅವಶೇಷಗಳಿಗಾಗಿ ಹುಡುಕಾಟ ನಡೆದಿದೆ.

ಘಟನೆಯ ವಿವರ

ಅಪಘಾತಕ್ಕೆ ಲಾರಿ ಚಾಲಕನ ಅಜಾಗರೂಕ, ನಿರ್ಲಕ್ಷ್ಯ ಚಾಲನೆಯೇ ಕಾರಣ ಎಂದು ಗೊತ್ತಾಗಿದೆ. ಇದುವರೆಗೆ 9 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ತೀವ್ರವಾಗಿ ಗಾಯಗೊಂಡವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವಿನ ಸಂಖ್ಯೆ ಏರುವ ಭೀತಿಯಿದೆ. ಕಂಟೈನರ್ ವಾಹನವು ಡಿವೈಡರ್ ದಾಟಿ ಎದುರುಗಡೆಯಿಂದ ಬರುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್‌ಗೆ ಅಪ್ಪಳಿಸಿದ ಪರಿಣಾಮ ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಬಸ್‌ಲ್ಲಿದ್ದ 29 ಪ್ರಯಾಣಿಕರಲ್ಲಿ 9 ಮಂದಿ ಸಜೀವ ದಹನವಾಗಿದ್ದಾರೆ. ಇನ್ನುಳಿದವರಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Chitradurga Bus Accident: ಡೀಸೆಲ್ ಟ್ಯಾಂಕ್‌ಗೆ ಲಾರಿ ಡಿಕ್ಕಿ ಹೊಡೆದು ಸ್ಫೋಟ, ಬಸ್‌ ಪ್ರಯಾಣಿಕರ ಪಟ್ಟಿ ಇಲ್ಲಿದೆ

ಪ್ರಯಾಣಿಕರು ಯಾರ್ಯಾರು?

ಡಿಸೆಂಬರ್ 24, 2025 ರಂದು ರಾತ್ರಿ 8:25ಕ್ಕೆ ಬೆಂಗಳೂರಿನ ಗಾಂಧಿನಗರದಿಂದ ಹೊರಟಿದ್ದ ಸೀಬರ್ಡ್ ಈ ಬಸ್‌ನಲ್ಲಿ ಒಟ್ಟು 29 ಪ್ರಯಾಣಿಕರು ಮತ್ತು 3 ಜನ ಬಸ್ ಸಿಬ್ಬಂದಿ ಇದ್ದರು. ಈ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 25 ಜನ ಪ್ರಯಾಣಿಕರು ಗೋಕರ್ಣಕ್ಕೆ ಟಿಕೆಟ್ ಬುಕ್ ಮಾಡಿದ್ದರು. ಇನ್ನುಳಿದವರಲ್ಲಿ ಇಬ್ಬರು ಶಿವಮೊಗ್ಗಕ್ಕೆ ಮತ್ತು ಇಬ್ಬರು ಕುಮಟಾಗೆ ಪ್ರಯಾಣ ಬೆಳೆಸುತ್ತಿದ್ದರು.

ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ 28 ಪ್ರಯಾಣಿಕರ ಪಟ್ಟಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ರೆಡ್ ಬಸ್ (RedBus) ಮೂಲಕ 19 ಹಾಗೂ ಅಭಿ ಬಸ್ (AbhiBus) ಮೂಲಕ 9 ಸೀಟುಗಳನ್ನು ಪ್ರಯಾಣಿಕರು ಬುಕ್ ಮಾಡಿದ್ದರು. ಬೆಂಗಳೂರಿನಿಂದ ಹೊರಟಿದ್ದವರಲ್ಲಿ ಹೆಚ್ಚಿನವರು ಗೋಕರ್ಣಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದರು.

Chitradurga Bus Accident: ಚಿತ್ರದುರ್ಗ ಬಸ್‌ ದುರಂತ: ಪಿಎಂ, ಸಿಎಂ, ಡಿಸಿಎಂ ಸಂತಾಪ; ಸಂತ್ರಸ್ತರಿಗೆ ಮೋದಿ 2 ಲಕ್ಷ ರೂ. ಪರಿಹಾರ

ಗೋಕರ್ಣಕ್ಕೆ ಹೊರಟಿದ್ದ ಪ್ರಯಾಣಿಕರ ಪಟ್ಟಿ ಹೀಗಿದೆ: ಮಂಜುನಾಥ್, ಸಂಧ್ಯಾ ಎಚ್, ಶಶಾಂಕ್ ಹೆಚ್ ವಿ, ದಿಲೀಪ್, ಪ್ರೀತಿಸ್ವರನ್, ಬಿಂದು ವಿ, ಕವಿತಾ ಕೆ, ಅನಿರುದ್ಧ್ ಬ್ಯಾನರ್ಜಿ, ಅಮೃತಾ, ಈಶಾ, ಶಶಿಕಾಂತ್ ಎಂ, ನವ್ಯಾ, ಅಭಿಷೇಕ್, ಕಿರಣ್ ಪಾಲ್ ಎಚ್, ಕೀರ್ತನ್ ಎಂ, ನಂದಿತಾ ಜಿ ಬಿ, ದೇವಿಕಾ ಎಚ್, ಗಗನಶ್ರೀ ಎಸ್, ರಸ್ಮಿ ಮಹಲೆ, ರಕ್ಷಿತಾ ಆರ್, ಸೂರಜ್, ಮಾನಸ, ಮಲ್ಲಣ್ಣ ಮತ್ತು ಹೇಮರಾಜ್ ಕುಮಾರ್. ಇವರೆಲ್ಲರೂ ಒಟ್ಟು 24 ಮಂದಿ.

ಕುಮಟಾಕ್ಕೆ ಹೊರಟಿದ್ದವರು ಇಬ್ಬರು: ಮೇಘರಾಜ್, ವಿಜಯ್ ಭಂಡಾರಿ. ಶಿವಮೊಗ್ಗಕ್ಕೆ ಹೊರಟಿದ್ದವರು ಇಬ್ಬರು: ಮಸ್ರತುನ್ನಿಸಾ ಎಸ್ ಎನ್, ಸೈಯದ್ ಜಮೀರ್ ಗೌಸ್