ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

E-Commerce: ಇ-ಕಾಮರ್ಸ್‌ ವೇದಿಕೆಗಳು ಎಪಿಎಂಸಿ ಆಡಳಿತಕ್ಕೆ: ವಿಧೇಯಕ ಅಂಗೀಕಾರ

ಈ ಮಸೂದೆ ಕಾನೂನು ಆಗಿ ಜಾರಿಗೆ ಬಂದರೆ ಅಮೆಜಾನ್, ಬಿಗ್ ಬ್ಯಾಸ್ಕೆಟ್, ಡಿ.ಮಾರ್ಟ್ ಸೇರಿದಂತೆ ಎಲ್ಲ ಇ–ಕಾಮರ್ಸ್‌ ವೇದಿಕೆಗಳು ಎಪಿಎಂಸಿ ನಿಯಂತ್ರಣಕ್ಕೆ ಬರಲಿವೆ. ಸೆಸ್ ಪಾವತಿಸದೆ ವ್ಯಾಪಾರ ಮಾಡುವುದನ್ನು ನಿಯಂತ್ರಿಸಲು ಈ ಕಾನೂನು ತರಲಾಗುತ್ತಿದೆ.

ಇ-ಕಾಮರ್ಸ್‌ ವೇದಿಕೆಗಳು ಎಪಿಎಂಸಿ ಆಡಳಿತಕ್ಕೆ: ವಿಧೇಯಕ ಅಂಗೀಕಾರ

ಹರೀಶ್‌ ಕೇರ ಹರೀಶ್‌ ಕೇರ Mar 11, 2025 7:23 AM

ಬೆಂಗಳೂರು: ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (APMC) ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ (bill) ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಇ– ಕಾಮರ್ಸ್‌ (E-commerce) ವೇದಿಕೆಗಳು ಇನ್ನು ಮುಂದೆ ಎಪಿಎಂಸಿ ನಿಯಂತ್ರಣಕ್ಕೆ ಬರಲಿವೆ. ಸೆಸ್ ಪಾವತಿಸದೆ ವ್ಯಾಪಾರ ಮಾಡುವುದನ್ನು ನಿಯಂತ್ರಿಸಲು ಈ ಕಾನೂನು ತರುತ್ತಿದ್ದೇವೆ ಎಂದು ರಾಜ್ಯ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ (Shivananda Patil) ಸದನಕ್ಕೆ ತಿಳಿಸಿದರು.

ಮಸೂದೆ ಮಂಡಿಸಿ ಸದನಕ್ಕೆ ವಿವರ ನೀಡಿದ ರಾಜ್ಯ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್, ಈ ಹಿಂದೆ ಸರ್ಕಾರ ಎಪಿಎಂಸಿ ಯಾರ್ಡ್‌ಗಳನ್ನು ಮಾತ್ರ ನಿಯಂತ್ರಿಸುತ್ತಿತ್ತು. ಆದರೆ ಈ ಮಸೂದೆ ಕಾನೂನು ಆಗಿ ಜಾರಿಗೆ ಬಂದರೆ ಅಮೆಜಾನ್, ಬಿಗ್ ಬ್ಯಾಸ್ಕೆಟ್, ಡಿ.ಮಾರ್ಟ್ ಸೇರಿದಂತೆ ಎಲ್ಲ ಇ–ಕಾಮರ್ಸ್‌ ವೇದಿಕೆಗಳು ಎಪಿಎಂಸಿ ನಿಯಂತ್ರಣಕ್ಕೆ ಬರಲಿವೆ. ಸೆಸ್ ಪಾವತಿಸದೆ ವ್ಯಾಪಾರ ಮಾಡುವುದನ್ನು ನಿಯಂತ್ರಿಸಲು ಈ ಕಾನೂನು ತರುತ್ತಿದ್ದೇವೆ ಎಂದು ಪಾಟೀಲ್ ಸದನಕ್ಕೆ ತಿಳಿಸಿದರು

ತಿದ್ದುಪಡಿ ಮಸೂದೆ ಪರಿಣಾಮವಾಗಿ ಉಗ್ರಾಣಗಳಲ್ಲಿ (ವೇರ್ ಹೌಸ್) ನಡೆಯುವ ಕೃಷಿ ಉತ್ಪನ್ನಗಳ ಮಾರಾಟದ ಮೇಲೂ ಸೆಸ್ ಪಾವತಿ ಕಡ್ಡಾಯವಾಗಲಿದೆ. ಇದರೊಂದಿಗೆ ಇ- ಪ್ಲಾಟ್‌ಫಾರಂಗಳಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ನೀಡುವ, ಸೆಸ್ ವಿಧಿಸಿ, ವಸೂಲಿ ಮಾಡುವ ಮತ್ತು ಪರವಾನಗಿ ರದ್ದುಪಡಿಸುವ ಅಥವಾ ಅಮಾನತುಪಡಿಸುವ ಅಧಿಕಾರ ಎಪಿಎಂಸಿ ಅಧಿಕಾರಿಗಳಿಗೆ ಲಭಿಸಲಿದೆ. ಈ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಮೇಲ್ಮನವಿಗಳನ್ನು ವಿಚಾರಣೆ ನಡೆಸಿ, ಆದೇಶ ಹೊರಡಿಸುವ ಅಧಿಕಾರ ಕೃಷಿ ಮಾರುಕಟ್ಟೆ ನಿರ್ದೇಶಕರಿಗೆ ದೊರೆಯಲಿದೆ ಎಂದು ವಿವರಿಸಿದರು.

ಇತ್ತೀಚೆಗೆ udaan ಸೆಸ್ ಪಾವತಿಸದಿದ್ದಕ್ಕೆ ರೂ. 25 ಲಕ್ಷ ದಂಡ ಪಾವತಿಸಿದೆ ಎಂದು ತಿಳಿಸಿದ ಸಚಿವರು, E-ಕಾಮರ್ಸ್ ಪ್ಲಾಟ್‌ಫಾರ್ಮ್' ಅನ್ನು ಆನ್‌ಲೈನ್ ಮಾಧ್ಯಮ ಎಂದು ಬಿಲ್ ವ್ಯಾಖ್ಯಾನಿಸುತ್ತದೆ. ಇದು ಮಾರುಕಟ್ಟೆ ಪ್ರದೇಶದ ಪರವಾನಗಿ ಪಡೆದ Retail ವ್ಯಾಪಾರಿಗಳಿಗೆ ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: Cabinet meeting: ಎಪಿಎಂಸಿ ತಿದ್ದುಪಡಿ ಮಸೂದೆ, ಅಧಿಕ ಬಡ್ಡಿ ನಿಷೇಧ ವಿಧೇಯಕ 2025ಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ

ಇ- ಪಾವತಿ ವಿಧಾನದ ಮೂಲಕ ರೈತರು ಹಣ ಪಾವತಿಸಲು ಅವಕಾಶ ಮಾಡಿಕೊಡುತ್ತದೆ. ಹಣ್ಣುಗಳು, ತರಕಾರಿಗಳು ಮತ್ತು ಹೂವುಗಳ ಮಾರಾಟದ ಬೆಲೆಯ ಶೇಕಡಾ ಐದು ಮತ್ತು ಇತರ ಎಲ್ಲಾ ಅಧಿಸೂಚಿತ ಉತ್ಪನ್ನಗಳಿಗೆ ಶೇಕಡಾ 2 ರ ಮಿತಿ ಇರಲಿದೆ. ಉಗ್ರಾಣಗಳಲ್ಲಿ ಮಾರಾಟಗಾರರ ಸರಕುಗಳ ಸುರಕ್ಷಿತ ಶೇಖರಣೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಬೆಂಕಿ, ಕಳ್ಳತನ, ಪ್ರವಾಹ, ಮಳೆ ಅಥವಾ ಇತರ ನೈಸರ್ಗಿಕ ವಿಪತ್ತುಗಳ ವಿರುದ್ಧ ಸಾಕಷ್ಟು ವಿಮಾ ರಕ್ಷಣೆಯನ್ನು ಒದಗಿಸಬೇಕು ಎಂದು ಅವರು ತಿಳಿಸಿದರು.

ಅಲ್ಲದೇ ಉಗ್ರಾಣಗಳಲ್ಲಿ ಅಗ್ನಿಶಾಮಕ ಸೌಲಭ್ಯಗಳು, ಎಲೆಕ್ಟ್ರಾನಿಕ್ ತೂಕ ವ್ಯವಸ್ಥೆಗಳು, ಇ-ವ್ಯಾಪಾರ ಸೌಲಭ್ಯಗಳು, ಗುಣಮಟ್ಟದ ಪ್ರಮಾಣೀಕರಣ, ಮಾರುಕಟ್ಟೆಗಳಲ್ಲಿ ಸರಕುಗಳ ಬೆಲೆ ಪ್ರದರ್ಶನ ಸೇರಿದಂತೆ ಕೃಷಿ ಮಾರುಕಟ್ಟೆ ನಿರ್ದೇಶಕರು ಸೂಚಿಸಿದಂತೆ ಇತರ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಬೇಕು. ಅಂತಹವರಿಗೆ ಸಾಲ ಸೌಲಭ್ಯ ಇರಲಿದೆ. ಅಧಿಸೂಚಿತ ಕೃಷಿ ಉತ್ಪನ್ನಗಳ ವ್ಯಾಪಾರಕ್ಕಾಗಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳನ್ನು ಸ್ಥಾಪಿಸಲು ಮತ್ತು ಕಾರ್ಯನಿರ್ವಹಿಸಲು ಸರ್ಕಾರವು ನಿಯಾಮಾವಳಿಗಳನ್ನು ರೂಪಿಸಿದೆ. ಅಂತಹ ವೇದಿಕೆಗಳು ಅಗತ್ಯ ಪರವಾನಗಿ ಪಡೆದ ನಂತರ ಮಾತ್ರ ಕಾರ್ಯನಿರ್ವಹಿಸುತ್ತವೆ ಎಂದು ಆ ನಿಯಮಾವಳಿಗಳಲ್ಲಿ ಹೇಳಲಾಗಿದೆ.