ಬೆಂಗಳೂರು: ಬೆಂಗಳೂರಿನ (Bengaluru Crime news) ವರ್ತೂರು ಪೊಲೀಸರು ಪಶ್ಚಿಮ ಬಂಗಾಳ (West Bengal) ಮೂಲದ ಮಹಿಳೆಯೊಬ್ಬರ ಖಾಸಗಿ ಅಂಗಗಳಿಗೆ ಒದ್ದು ಮನಸೋ ಇಚ್ಛೆ ಹಲ್ಲೆ (Assault case) ಮಾಡಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಪಶ್ಚಿಮ ಬಂಗಾಳದ ಮಹಿಳೆ ಸುಂದರಿ ಬೀಬಿ (34) ಹಲ್ಲೆಗೊಳಗಾದ ಮಹಿಳೆ. ಬೇಬಿಯ ತಲೆ, ಬೆನ್ನು, ಕೈ- ಕಾಲು ಹಾಗೂ ಖಾಸಗಿ ಅಂಗಗಳ ಮೇಲೆ ಮೇಲೆ ವರ್ತೂರು ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ರಕ್ತ ಹೆಪ್ಪುಗಟ್ಟಿ ನಡೆದಾಡಲೂ ಆಗದ ಪರಿಸ್ಥಿತಿಯಲ್ಲಿದ್ದಾರೆ.
ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ಒಂದರಲ್ಲಿ ಸುಂದರಿ ಬೀಬಿ ಮನೆ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಹಣ ಬಿದ್ದಿರುವುದನ್ನು ತೆಗೆದುಕೊಂಡು ಮನೆ ಮಾಲೀಕರಿಗೆ ಕೊಡಲು ಹೋಗಿದ್ದಾರೆ. ಇದನ್ನ ಸಿಸಿಟಿವಿಯಲ್ಲಿ ಗಮನಿಸಿದ ಅಪಾರ್ಟ್ಮೆಂಟ್ ಫ್ಲ್ಯಾಟ್‌ನ ಮಾಲೀಕರು ಬೀಬಿ ಮೇಲೆ ಹಲ್ಲೆ ಮಾಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಠಾಣೆಯಲ್ಲಿ ಪೊಲೀಸರು ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆಯ ಕುರಿತು ಹಲ್ಲೆಗೊಳಗಾದ ಕುಟುಂಬ, ಪಶ್ಚಿಮ ಬಂಗಾಳದ ರಾಜ್ಯಸಭಾ ಸದಸ್ಯ ಹಾಗೂ ಪ. ಬಂಗಾಳದ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧ್ಯಕ್ಷ ಸಮೀರ್ ಉಲ್‌ಗೆ ವಿಚಾರ ತಿಳಿಸಿದ್ದಾರೆ. ಕೂಡಲೇ ಪಶ್ಚಿಮ ಬಂಗಾಳದ ಸಿಎಂ ಕಚೇರಿಗೆ ಸಮೀರ್ ಉಲ್ ಬೆಂಗಳೂರು ಪೊಲೀಸರ ಕ್ರೌರ್ಯದ ವಿಷಯವನ್ನು ಮುಟ್ಟಿಸಿದ್ದಾರೆ. ಬೆಂಗಳೂರು ಪೊಲೀಸರ ಈ ವರ್ತನೆಗೆ ಪಶ್ಚಿಮ ಬಂಗಾಳದ ಸಿಎಂ ಕಚೇರಿ ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನೂ ಓದಿ: Assault Case: ಚಿಕ್ಕಮಗಳೂರಿನಲ್ಲಿ ಅಮಾನವೀಯ ಘಟನೆ, ಶಿಕ್ಷಕಿಯ ನಗ್ನಗೊಳಿಸಿ ಮರಕ್ಕೆ ಕಟ್ಟಿಹಾಕಿ ಹಲ್ಲೆ
ಯುವತಿ ಅನುಮಾನಾಸ್ಪದ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ
ಬೆಂಗಳೂರು: 25 ವರ್ಷದ ಯುವತಿ ಅನುಮಾನಾಸ್ಪದ ಸಾವನ್ನಪ್ಪಿದ್ದು, ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಮೃತಳನ್ನು ದಾವಣಗೆರೆ ಜಿಲ್ಲೆಯ ಮೂಲದ ಸುಪ್ರಿಯಾ ಎಂದು ಗುರುತಿಸಲಾಗಿದೆ. ಎಂಬಿಎ ಪದವಿ (Self Harming) ಪಡೆದಿದ್ದ ಸುಪ್ರಿಯಾ, ಬೈಕ್ ರೈಡಿಂಗ್ ತರಬೇತಿ ಪಡೆಯುತ್ತಿದ್ದಳು ಎನ್ನಲಾಗಿದೆ. ಈ ಘಟನೆ ಸುಬ್ರಹ್ಮಣ್ಯನಗರದ ಮಿಲ್ಕ್ ಕಾಲೋನಿಯಲ್ಲಿರುವ ಬಾಡಿಗೆ ಮನೆಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುಪ್ರಿಯಾ ಕಳೆದ ಎರಡು ವರ್ಷಗಳಿಂದ ಹೆಚ್ಚು ಕಾಲ ಸುಬ್ರಹ್ಮಣ್ಯನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು.
ಕಳೆದ ಎರಡು ದಿನಗಳಿಂದ ಆಕೆಯ ಕೋಣೆಯ ಬಾಗಿಲು ಲಾಕ್ ಆಗಿತ್ತು. ಇದರಿಂದ ಅನುಮಾನಗೊಂಡ ಮನೆ ಮಾಲೀಕರು ಇಂದು ಬಾಗಿಲು ತೆರೆದಾಗ ದಾರುಣ ದೃಶ್ಯ ಕಂಡುಬಂದಿತು. ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ತುಂಡಾಗಿ ಬಿದ್ದಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Supreme Court: ವೃದ್ಧೆಯ ಅತ್ಯಾಚಾರ, ಕೊಲೆ: ಸರಿಯಾದ ಸಾಕ್ಷಿ ಇಲ್ಲ ಎಂದ ಸುಪ್ರೀಂ ಕೋರ್ಟ್, ಆರೋಪಿ ಖುಲಾಸೆ
ದಾವಣಗೆರೆಯಿಂದ ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದಿದ್ದ ಸುಪ್ರಿಯಾ, ಕಳೆದ ಎರಡು ದಿನಗಳಿಂದ ತಮ್ಮ ಪೋಷಕರ ಕರೆಗಳಿಗೆ ಸ್ಪಂದಿಸಿಲ್ಲ. ಮೊದಲ ದಿನ ಸುಮ್ಮನಿದ್ದ ಪೋಷಕರು ಎರಡನೇ ದಿನ ಆತಂಕಕ್ಕೀಡಾದರು. ತಕ್ಷಣ ಮನೆ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಮನೆ ಮಾಲೀಕರು ಸ್ಥಳಕ್ಕೆ ತೆರಳಿ ಬಾಗಿಲು ತೆರೆದಾಗಲೇ ಘಟನೆ ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.