ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bagalakote news: ಜೀವ ನೀಡಿದ ರೋಡ್‌ ಹಂಪ್‌! ರಸ್ತೆ ಉಬ್ಬಿನ ಮೇಲೆ ವಾಹನ ಚಲಿಸಿದಾಗ ಎದ್ದು ಕುಳಿತ ಮೃತ ವ್ಯಕ್ತಿ!

ಕುಟುಂಬಸ್ಥರು ಅಂತ್ಯಸಂಸ್ಕಾರದ ಸಿದ್ಧತೆಯೊಂದಿಗೆ ಮೃತದೇಹವನ್ನು ವಾಹನದ ಮೂಲಕ ಸ್ವಗ್ರಾಮಕ್ಕೆ ತೆಗೆದುಕೊಂಡು ಬರುತ್ತಿದ್ದರು. ವಾಹನವು ಲೋಕಾಪುರ ಸಮೀಪ ಬರುತ್ತಿದ್ದಂತೆ ರಸ್ತೆ ಉಬ್ಬು (ರೋಡ್ ಹಂಪ್ಸ್) ಹತ್ತಿ ಇಳಿಯಿತು. ವಾಹನ ಜೋರಾಗಿ ಅಲುಗಾಡಿದ ರಭಸಕ್ಕೆ, ಮೃತಪಟ್ಟಿದ್ದರು ಎನ್ನಲಾಗಿದ್ದ ಮುಬಾರಕ್ ಅವರು ಏಕಾಏಕಿ ಉಸಿರಾಡಲು ಆರಂಭಿಸಿದ್ದಾರೆ.

ಮರಳಿ ಜೀವ ಪಡೆದ ಮುಬಾರಕ್ ಆವಟಿ

ಬಾಗಲಕೋಟೆ, ಮಾರ್ಚ್‌ 7: ಎಲ್ಲ ಕಡೆ ರೋಡ್‌ ಹಂಪ್‌ಗಳು (Road hump) ಸವಾರರ ಜೀವ ತೆಗೆಯುತ್ತವೆ. ಈ ಘಟನೆಯಲ್ಲಿ ಒಬ್ಬರಿಗೆ ಜೀವ ನೀಡಿದೆ. ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ ಬಳಿಕ, ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯುತ್ತಿದ್ದಾಗ ಮಾರ್ಗಮಧ್ಯೆ ವಾಹನ ಹಂಪ್ಸ್‌ ಮೇಲೆ ಅಲುಗಾಡಿದ ರಭಸಕ್ಕೆ ವ್ಯಕ್ತಿಯೊಬ್ಬರು ಎದ್ದು ಕುಳಿತು ಮಾತನಾಡಿದ ಅಚ್ಚರಿಯ ಹಾಗೂ ಪವಾಡಸದೃಶ ಘಟನೆ ಬಾಗಲಕೋಟೆ (Bagalakote news) ಜಿಲ್ಲೆಯ ಜಮಖಂಡಿಯಲ್ಲಿ (Jamakhandi) ನಡೆದಿದೆ.

ಜಮಖಂಡಿ ನಗರದ ಮೊಮಿನ್ ಗಲ್ಲಿಯ ನಿವಾಸಿ ಮುಬಾರಕ್ ಆವಟಿ (65) ಎಂಬವರೇ ಮರಳಿ ಜೀವ ಪಡೆದು ಬಂದ ವ್ಯಕ್ತಿ. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಇವರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮುಬಾರಕ್ ಅವರು ಮೃತಪಟ್ಟಿರುವುದಾಗಿ ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದರು.

ವೈದ್ಯರ ಮಾತು ಕೇಳಿ ಕಣ್ಣೀರು ಹಾಕುತ್ತಲೇ ಕುಟುಂಬಸ್ಥರು ಅಂತ್ಯಸಂಸ್ಕಾರದ ಸಿದ್ಧತೆಯೊಂದಿಗೆ ಮೃತದೇಹವನ್ನು ವಾಹನದ ಮೂಲಕ ಸ್ವಗ್ರಾಮಕ್ಕೆ ತೆಗೆದುಕೊಂಡು ಬರುತ್ತಿದ್ದರು. ವಾಹನವು ಲೋಕಾಪುರ ಸಮೀಪ ಬರುತ್ತಿದ್ದಂತೆ ರಸ್ತೆ ಉಬ್ಬು (ರೋಡ್ ಹಂಪ್ಸ್) ಹತ್ತಿ ಇಳಿಯಿತು. ವಾಹನ ಜೋರಾಗಿ ಅಲುಗಾಡಿದ ರಭಸಕ್ಕೆ, ಮೃತಪಟ್ಟಿದ್ದರು ಎನ್ನಲಾಗಿದ್ದ ಮುಬಾರಕ್ ಅವರು ಏಕಾಏಕಿ ಉಸಿರಾಡಲು ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಕುಟುಂಬದವರ ಜೊತೆಗೆ ಮಾತನಾಡಲು ಶುರು ಮಾಡಿದ್ದಾರೆ.

Bagalakote news: ಮಸೀದಿ ಗೋಡೆಯಲ್ಲಿ ʼಜೈ ಶ್ರೀರಾಮ್‌ʼ ಎಂದು ಮಗನಿಂದ ಬರೆಸಿದ ವ್ಯಕ್ತಿ, ಬಾಗಲಕೋಟೆ ಮತ್ತೆ ಪ್ರಕ್ಷುಬ್ಧ

ಹೆಣವಾಗಿ ಮಲಗಿದ್ದ ವ್ಯಕ್ತಿ ತಮ್ಮ ಮುಂದೆಯೇ ಇದ್ದಕ್ಕಿದ್ದಂತೆ ಉಸಿರಾಡುತ್ತಾ ಮಾತನಾಡಿದ್ದನ್ನು ಕಂಡು ಕುಟುಂಬಸ್ಥರಿಗೆ ಒಮ್ಮೆಲೆ ಶಾಕ್ ಹಾಗೂ ಅಚ್ಚರಿಯಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಅವರು, ವಿಜಯಪುರದ ಖಾಸಗಿ ಆಸ್ಪತ್ರೆಗೆ ಮುಬಾರಕ್ ಅವರನ್ನು ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಈ ಅಚ್ಚರಿಯ ಘಟನೆ ಇಡೀ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸಾವನ್ನೇ ಗೆದ್ದು ಬಂದ ಈ ವೃದ್ಧನ ಕಥೆ ಕೇಳಿ ಜನರು ಬೆರಗಾಗಿದ್ದಾರೆ.

ಹರೀಶ್‌ ಕೇರ

View all posts by this author