ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಬಾಗಲಕೋಟೆ
Pralhad Joshi: ಕಾಂಗ್ರೆಸ್‌ ಶಾಸಕರ ಖರೀದಿಗೆ ಕಾಂಗ್ರೆಸ್‌ನಲ್ಲೇ ಪೈಪೋಟಿ: ಪ್ರಲ್ಹಾದ್‌ ಜೋಶಿ

ಕಾಂಗ್ರೆಸ್‌ ಶಾಸಕರ ಖರೀದಿಗೆ ಕಾಂಗ್ರೆಸ್‌ನಲ್ಲೇ ಪೈಪೋಟಿ: ಪ್ರಲ್ಹಾದ್‌ ಜೋಶಿ

ಬಹುಶಃ ನವೆಂಬರ್‌ ವೇಳೆಗೆ ಸಿಎಂ ಬದಲಾವಣೆ ಆಗಬಹುದು ಎಂಬ ಚರ್ಚೆ ಕಾಂಗ್ರೆಸ್‌ ಶಾಸಕರಲ್ಲಿ ಹರಿದಾಡುತ್ತಿದೆ. ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್‌ನ ಉಭಯ ಗುಂಪಿನವರು ಬಹುಶಃ ಶಾಸಕರ ಖರೀದಿಗೆ ಪ್ರಯತ್ನ ನಡೆಸಿರಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

Pralhad Joshi: ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದ ಪ್ರಲ್ಹಾದ್‌ ಜೋಶಿ

ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು: ಪ್ರಲ್ಹಾದ್‌ ಜೋಶಿ

Pralhad Joshi: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರಂತರ ಸುಳ್ಳುಗಳು ಮತ್ತು ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣವನ್ನು ತೀಕ್ಷ್ಣವಾಗಿ ವಿರೋಧಿಸುತ್ತೇವೆ. ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ ಧರ್ಮಾಧಾರಿತ ಮೀಸಲಾತಿ ನೀಡುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಸಾಮರಸ್ಯ ಮುರಿಯಲು ಶ್ರಮಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

Bagalkot News: ಬೈಕ್‌ ಸೈಡ್‌ಗೆ ಹಾಕುವ ವಿಚಾರಕ್ಕೆ 2 ಗುಂಪುಗಳ ಮಧ್ಯೆ ಮಾರಾಮಾರಿ; ಮೂವರಿಗೆ ಗಾಯ

ಬೈಕ್‌ ಸೈಡ್‌ಗೆ ಹಾಕುವ ವಿಚಾರಕ್ಕೆ ಮಾರಾಮಾರಿ; ಮೂವರಿಗೆ ಗಾಯ

Bagalkot News: ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಘಟನೆ ನಡೆದಿದ್ದು, ಗಾಯಾಳುಗಳನ್ನು ಬಾಗಲಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಬೈಕ್ ಸೈಡ್‌ಗೆ ಹಾಕುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

Fraud case: ಮಗುವಿಗೆ ಜ್ವರ; ದೆವ್ವದ ಕಥೆ ಹೇಳಿ ಮಹಿಳೆಗೆ 17 ಲಕ್ಷ ವಂಚಿಸಿದ ಜ್ಯೋತಿಷಿ!

ಮಗುವಿಗೆ ಜ್ವರ; ದೆವ್ವದ ಕಥೆ ಹೇಳಿ ಮಹಿಳೆಗೆ 17 ಲಕ್ಷ ವಂಚಿಸಿದ ಜ್ಯೋತಿಷಿ!

Bagalkot News: ಮಗುವಿಗೆ ಜ್ವರ ಬರಲು ದೆವ್ವ ಕಾರಣ ಎಂದು ನಂಬಿಸಿ ಮಹಿಳೆಯೊಬ್ಬರಿಗೆ ಜ್ಯೋತಿಷಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಮೋಸ ಹೋದ ಮಹಿಳೆ, ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Shocking News: ರಾಜ್ಯದಲ್ಲಿ ಮತ್ತೆ ಗೋವಿನ ಮೇಲೆ ಕಿಡಿಗೇಡಿತನ, ಕೆಚ್ಚಲು ಕೊಯ್ದು ವಿಕೃತಿ

ರಾಜ್ಯದಲ್ಲಿ ಮತ್ತೆ ಗೋವಿನ ಮೇಲೆ ಕಿಡಿಗೇಡಿತನ, ಕೆಚ್ಚಲು ಕೊಯ್ದು ವಿಕೃತಿ

shocking News: ಹಸುವಿನ ಕೆಚ್ಚಲಿನಿಂದ ರಕ್ತಸ್ರಾವ ಆಗುತ್ತಿರುವುದನ್ನು ಗಮನಿಸಿದ ಭರಮಪ್ಪ ಅವರು ತಕ್ಷಣವೇ ಹಸುವನ್ನು ಪಶು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆ ನಡೆದ ವ್ಯಾಪ್ತಿಯ ಕುಳಗೇರಿ ಉಪಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Bagalkot News: ಡಾಕ್ಟ್ರೇ ಇಲ್ಲಿ ನೋವಿದೆ; ತಾನಾಗಿಯೇ ಪಶು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದ ಕೋತಿ!

ತಾನಾಗಿಯೇ ಪಶು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದ ಕೋತಿ!

Bagalkot News: ಬಾಗಲಕೋಟೆ ಜಿಲ್ಲೆಯ ಗೂಡೂರಿನ ಪಶು ಆಸ್ಪತ್ರೆಗೆ ಹೋದ ಮಂಗ, ಪಶು ವೈದ್ಯರ ಬಳಿ ತೆರಳಿ ತನ್ನ ಗುದದ್ವಾರದ ಕಡೆ ಕೈ ತೋರಿಸಿ, ಸಮಸ್ಯೆಯನ್ನು ತಿಳಿಸಿದೆ. ತಕ್ಷಣ ಕೋತಿಯ ನೋವನ್ನು ಅರ್ಥ ಮಾಡಿಕೊಂಡ ಪಶುವೈದ್ಯರು ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

PM Narendra Modi: ಇಂದು ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣ ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ

ಇಂದು ಬಾಗಲಕೋಟೆ ಸೇರಿ 5 ರೈಲು ನಿಲ್ದಾಣ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಬಾಗಲಕೋಟೆ ರೈಲು ನಿಲ್ದಾಣ ಒಟ್ಟು 16.06 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿದ್ದು, ಪ್ರಧಾನಿ ಮೋದಿ ವರ್ಚುವಲ್‌ ಆಗಿ ಉದ್ಘಾಟಿಸಲಿದ್ದಾರೆ. ಲೋಕಾರ್ಪಣೆಗೆ ರೈಲ್ವೆ ನಿಲ್ದಾಣ ಸಜ್ಜಾಗಿದ್ದು, ಬಾಗಲಕೋಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ಭಾಗಿಯಾಗಲಿದ್ದಾರೆ.

Groom Dies: ಜಮಖಂಡಿಯಲ್ಲಿ ಘೋರ ಘಟನೆ; ತಾಳಿ ಕಟ್ಟಿದ ಹದಿನೈದು ನಿಮಿಷದಲ್ಲೇ ವರ ಸಾವು!

ಜಮಖಂಡಿಯಲ್ಲಿ ಘೋರ ಘಟನೆ; ತಾಳಿ ಕಟ್ಟಿದ ಹದಿನೈದು ನಿಮಿಷದಲ್ಲೇ ವರ ಸಾವು!

Groom Dies: ಜಮಖಂಡಿಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ವೇದಿಕೆಯ ಮೇಲೆ ಅಕ್ಷತೆ ಬಿದ್ದ ಕೆಲವೇ ಹೊತ್ತಿನಲ್ಲಿ ಹೃದಯಾಘಾತವಾಗಿ ವರ ಕುಸಿದುಬಿದ್ದಿದ್ದಾನೆ. ಇದರಿಂದ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

Double Murder Case: ಆಸ್ತಿಗಾಗಿ ಅವಳಿ ಕೊಲೆ, ತಾಯಿ- ಮಗನ ಹತ್ಯೆ

ಆಸ್ತಿಗಾಗಿ ಅವಳಿ ಕೊಲೆ, ತಾಯಿ- ಮಗನ ಹತ್ಯೆ

ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿ ಕಲಹ ಉಲ್ಬಣಿಸಿ ತಾಯಿ- ಮಗನ ಕೊಲೆ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್‌ ತಾಲೂಕಿನಲ್ಲಿ ಆರೋಪಿಯೊಬ್ಬ ಅವಳಿ ಕೊಲೆ (Double Murder Case) ಮಾಡಿ ಪರಾರಿಯಾಗಿದ್ದಾನೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಆರೋಪಿಯನ್ನು ಶೋಧಿಸುತ್ತಿದ್ದಾರೆ.

Road Accident: ಭೀಕರ ಅಪಘಾತ, ಲಾರಿಗೆ ಕಾರು ಡಿಕ್ಕಿಯಾಗಿ 6 ಜನ ಸಾವು

ಭೀಕರ ಅಪಘಾತ, ಲಾರಿಗೆ ಕಾರು ಡಿಕ್ಕಿಯಾಗಿ 6 ಜನ ಸಾವು

Road Accident: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಬಳಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಆರು ಮಂದಿ ಹರಿಯಾಣ ಮೂಲದ ಆಡಿ ಎ6 ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರಿನಲ್ಲಿದ್ದ ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

SSLC Results 2025: 6 ವಿಷಯಗಳಲ್ಲಿ ಫೇಲ್ ಆದ ಮಗನಿಗೆ ಕೇಕ್ ತಿನ್ನಿಸಿ ಧೈರ್ಯ ಹೇಳಿದ ಪೋಷಕರು

ಫೇಲ್ ಆದ ಮಗನಿಗೆ ಕೇಕ್ ತಿನ್ನಿಸಿ ಧೈರ್ಯ ಹೇಳಿದ ಪೋಷಕರು

SSLC Results 2025: ಬಾಗಲಕೋಟೆ ನಗರದ ವಿದ್ಯಾರ್ಥಿಯೊಬ್ಬ ಎಸ್‌ಎಸ್‌ಎಲ್‌ಸಿಯಲ್ಲಿ 6 ವಿಷಯಗಳಲ್ಲಿ ಫೇಲ್ ಆಗಿದ್ದಾನೆ. ಆದರೆ, ಮಗ ದುಖಃದಲ್ಲಿರುವುದನ್ನು ಕಂಡ ಪೋಷಕರು, ಆತನಿಗೆ ಕೇಕ್ ತಿನ್ನಿಸಿ ಧೈರ್ಯ ಹೇಳಿದ್ದಾರೆ. ಮುಂದಿನ ಪ್ರಯತ್ನದಲ್ಲಿ ಪಾಸ್‌ ಆಗುವ ವಿಶ್ವಾಸವನ್ನು ವಿದ್ಯಾರ್ಥಿ ವ್ಯಕ್ತಪಡಿಸಿದ್ದಾನೆ.

CM Siddaramaiah: ಭಯೋತ್ಪಾದನೆ ಮೂಲದಿಂದಲೇ ನಾಶವಾಗಬೇಕು: ಸಿದ್ದರಾಮಯ್ಯ

ಭಯೋತ್ಪಾದನೆ ಮೂಲದಿಂದಲೇ ನಾಶವಾಗಲಿ: ಸಿದ್ದರಾಮಯ್ಯ

CM Siddaramaiah: ಅನಿವಾರ್ಯವಾದರೆ ಪಾಕಿಸ್ತಾನದ ಮೇಲೆ ಯುದ್ಧ ಮಾಡಬೇಕು. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಭಯೋತ್ಪಾದನೆ ಮೂಲದಿಂದಲೇ ನಾಶವಾಗಬೇಕು. ಎಲ್ಲರಿಗೂ ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಾಗಲಕೋಟೆಯ ಕೂಡಲ ಸಂಗಮ ಸಭಾಭವನದ ಬಳಿ ಅವರು ಮಾತನಾಡಿದರು.

CM Siddaramaiah: ಮನ್‌ ಕಿ ಬಾತ್‌ನಲ್ಲಿ ಚರ್ಚೆ ಇಲ್ಲ, ಏಕಮುಖವಾಗಿ ಹೇಳಿದ್ದನ್ನು ಕೇಳಬೇಕು ಎನ್ನುವ ಧೋರಣೆ ಇದೆ: ಸಿದ್ದರಾಮಯ್ಯ

ಮನುವಾದಿಗಳು ಬಸವತತ್ವದ ವಿರೋಧಿಗಳು: ಸಿದ್ದರಾಮಯ್ಯ

ಪ್ರಜಾಪ್ರಭುತ್ವದಲ್ಲಿ ಚರ್ಚೆ ಇರುತ್ತದೆ. ಸರ್ವಾಧಿಕಾರದಲ್ಲಿ ಚರ್ಚೆಗೆ ಅವಕಾಶ ಇಲ್ಲ. ಏಕಮುಖವಾಗಿ ʼನಾನು ಹೇಳಿದ್ದನ್ನು ನೀವು ಕೇಳಿʼ ಎನ್ನುವುದಷ್ಟೆ. ʼಮನ್ ಕಿ ಬಾತ್ʼ ರೀತಿ ನಾನು ಹೇಳ್ತೀನಿ, ನೀವು ಕೇಳಿ ಅನ್ನೋದು ಸರ್ವಾಧಿಕಾರಿ ಧೋರಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

Mann Ki Baat: ಬಿಸಿಲ ನಾಡಿನಲ್ಲಿ ಸೇಬು ಕೃಷಿ; ಮುಧೋಳ ರೈತನನ್ನು ಹೊಗಳಿದ ಪ್ರಧಾನಿ ಮೋದಿ

ಮುಧೋಳದ ಸೇಬು ಬೆಳೆಗಾರನನ್ನು ಹೊಗಳಿದ ಪ್ರಧಾನಿ ಮೋದಿ

Mann Ki Baat: ಹಿಮದ ಪ್ರದೇಶದಲ್ಲಷ್ಟೇ ಭರಪೂರ ಸೇಬು ಬೆಳೆಬಹುದು ಎಂಬ ಕಲ್ಪನೆಯಿದೆ. ಆದರೆ, ಬಿಸಿಲ ನಾಡಿನಲ್ಲಿ ಸೇಬು ಬೆಳೆಯುವ ಮೂಲಕ ಅಚ್ಚರಿ ಮೂಡಿಸಿರುವ ಮುಧೋಳದ ರೈತ ಶ್ರೀಶೈಲ ತೇಲಿ ಅವರು, ಕಳೆದ ಎರಡೂವರೆ ವರ್ಷದಲ್ಲಿ ಸೇಬು ಬೆಳೆದು 15 ಲಕ್ಷ ರೂ.ಗಳ ಲಾಭ ಮಾಡಿದ್ದಾರೆ.

UPSC Result 2024: ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾದ ಬಾಗಲಕೋಟೆ ರೈತನ ಮಗ!

ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾದ ಬಾಗಲಕೋಟೆ ರೈತನ ಮಗ!

UPSC Result 2024: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಅಕ್ಕಿಮರಡಿ ಗ್ರಾಮದ ಪಾಂಡುರಂಗ ಸದಾಶಿವ ಕಂಬಳಿ ಅವರು ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 529ನೇ ರ‍್ಯಾಂಕ್ ಪಡೆದಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ಪಾಂಡುರಂಗ ಕಂಬಳಿ, ಯುಪಿಎಸ್‌ಸಿ ಪರೀಕ್ಷೆಗೆ ಸಂದರ್ಶನ ನೀಡಿ ಕೆಎಎಸ್ ಪರೀಕ್ಷೆ ತಯಾರಿ ನಡೆಸುತ್ತಿದ್ದರು. ಇದೀಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

BY Vijayendra: ಜನಾಕ್ರೋಶ ಯಾತ್ರೆಯ ಮೊದಲ ಹಂತ ಯಶಸ್ವಿ: ಬಿ.ವೈ.ವಿಜಯೇಂದ್ರ

ಜನಾಕ್ರೋಶ ಯಾತ್ರೆಯ ಮೊದಲ ಹಂತ ಯಶಸ್ವಿ: ಬಿ.ವೈ.ವಿಜಯೇಂದ್ರ

BY Vijayendra: ಜನಾಕ್ರೋಶ ಯಾತ್ರೆಯ ಮೊದಲ ಹಂತ ಯಶಸ್ವಿಯಾಗಿ ಮುಗಿದಿದೆ. ಸಿದ್ದರಾಮಯ್ಯನವರೇ ನೀವು ಮುಖ್ಯಮಂತ್ರಿಗಳಾದ ಬಳಿಕ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಹಿಂದೂ ಹೆಣ್ಮಕ್ಕಳ ಮೇಲೆ ಅಪಮಾನ, ಲವ್ ಜಿಹಾದ್ ಹೆಚ್ಚಾಗಿದೆ. ಗೋಹತ್ಯೆಗಳು ಜಾಸ್ತಿ ಆಗಿದೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

Panchamasali Trust: ಪಂಚಮಸಾಲಿ ಟ್ರಸ್ಟ್ ಅಸಮಾಧಾನ; ಏ.20ಕ್ಕೆ ರಾಜ್ಯ‌ಮಟ್ಟದ ಸಭೆ ಕರೆದ ಜಯ ಮೃತ್ಯುಂಜಯ ಸ್ವಾಮೀಜಿ

ಏ.20ಕ್ಕೆ ರಾಜ್ಯ‌ಮಟ್ಟದ ಪಂಚಮಸಾಲಿ ಸಮಾಜ ಸಭೆ: ಜಯ ಮೃತ್ಯುಂಜಯ ಸ್ವಾಮೀಜಿ

Panchamasali Trust: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರ ಬೆಂಬಲಕ್ಕೆ ನಿಂತ ಕಾರಣ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಪದಾಧಿಕಾರಿಗಳು ಅಸಮಾಧಾನ ಹೊರಹಾಕಿದ್ದರು. ಇದೀಗ ಭಿನ್ನಮತ ಶಮನಗೊಳಿಸಲು, ಜಯ ಮೃತ್ಯುಂಜಯ ಸ್ವಾಮೀಜಿ ಅವರು ಏ. 20ಕ್ಕೆ ಸಭೆ ಕರೆದಿದ್ದಾರೆ.

Bagalkot News: ಮಲಪ್ರಭಾ ನದಿಯಲ್ಲಿ ಮುಳುಗಿ ಯೋಧ ಸೇರಿ ಇಬ್ಬರ ಸಾವು; ಬಾಲಕನ ರಕ್ಷಿಸಲು ಹೋಗಿ ನೀರುಪಾಲು

ಮಲಪ್ರಭಾ ನದಿಯಲ್ಲಿ ಮುಳುಗಿ ಯೋಧ ಸೇರಿ ಇಬ್ಬರ ಸಾವು

Bagalkot News: ಬಾಗಲಕೋಟೆ ಜಿಲ್ಲೆಯ ಮಣ್ಣೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಸ್ನಾನ ಮಾಡಲು ಬಾಲಕನೊಬ್ಬ ಮೊದಲು ನದಿಗೆ ಇಳಿದಿದ್ದ. ಈ ವೇಳೆ ಈಜು ಬಾರದೇ ಆತನ ಮುಳುಗುತ್ತಿದ್ದಾಗ ರಕ್ಷಣೆಗೆ ಯೋಧ ತೆರಳಿದ್ದಾರೆ. ನೀರಿನ ಮಧ್ಯೆ ಯೋಧನ ಕೊರಳು ಹಿಡಿದು ಬಾಲಕ ಒದ್ದಾಡಿದ್ದಾನೆ. ಹೀಗಾಗಿ ಇಬ್ಬರೂ ದಡ ಸೇರಲಾಗದೆ ನೀರಿನಲ್ಲಿ ಮುಳುಗಿದ್ದಾರೆ.

Drown in River: ಯುಗಾದಿ ಹಬ್ಬದ ದಿನವೇ ದುರಂತ; ಕೃಷ್ಣಾ ನದಿಯಲ್ಲಿ ಮುಳುಗಿ ಮೂವರು ಬಾಲಕರ ಸಾವು

ಕೃಷ್ಣಾ ನದಿಯಲ್ಲಿ ಮುಳುಗಿ ಮೂವರು ಬಾಲಕರ ಸಾವು

Drown in River: ಬಾಗಲಕೋಟೆ ತಾಲೂಕಿನ ಸೀತಿಮನಿ ಗ್ರಾಮದ ಬಳಿ ನಡೆದಿದೆ. ಮೂವರು ಬಾಲಕರ ಪೈಕಿ ಒಬ್ಬನ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಬಾಗಲಕೋಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Road Accident: ಬಸ್‌-ಬೈಕ್‌ ಡಿಕ್ಕಿಯಾಗಿ ದಂಪತಿ ದುರ್ಮರಣ, ಹಲವರಿಗೆ ಗಾಯ

ಬಸ್‌-ಬೈಕ್‌ ಡಿಕ್ಕಿಯಾಗಿ ದಂಪತಿ ದುರ್ಮರಣ, ಹಲವರಿಗೆ ಗಾಯ

Road Accident: ಬಾಗಲಕೋಟೆ ಜಿಲ್ಲೆಯ ಮುಧೋಳ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಪಘಾತದಲ್ಲಿ ಬಸ್‌ ಡಿಕ್ಕಿಯಾಗಿದ್ದರಿಂದ ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಅಡ್ಡ ಬಂದ ಬೈಕ್ ತಪ್ಪಿಸಲು ಹೋಗಿ ಕೆಎಸ್‌ಆರ್‌ಟಿಸಿ ಬಸ್ ಕೂಡ ಪಲ್ಟಿಯಾಗಿದ್ದು, ಬಸ್‌ನಲ್ಲಿದ್ದ ಹಲವರಿಗೆ ಗಾಯಗಳಾಗಿವೆ.

Viral News: ಯುನಿಫಾರ್ಮ್‌ನಲ್ಲೇ ಸ್ವಾಮೀಜಿ ಕಾಲಿಗೆ ಬಿದ್ದ 6 ಪೊಲೀಸರಿಗೆ ಇಲಾಖೆಯಿಂದ ಟ್ರಾನ್ಸ್‌ಫರ್‌ ಆಶೀರ್ವಾದ!

ಖಾಕಿಯಲ್ಲೇ ಸ್ವಾಮೀಜಿ ಕಾಲಿಗೆ ಬಿದ್ದ ಪೊಲೀಸರಿಗೆ ಟ್ರಾನ್ಸ್‌ಫರ್‌ ಆಶೀರ್ವಾದ!

ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ 6 ಜನ ಪೊಲೀಸರನ್ನು ವರ್ಗಾವಣೆ ಮಾಡಿ ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಬಾಗಲಕೋಟೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರು 6 ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಬಾದಾಮಿ ಪಟ್ಟಣದ ಪೊಲೀಸ್ ಠಾಣೆಯಿಂದ ಜಿಲ್ಲೆಯ ವಿವಿಧ ಗ್ರಾಮೀಣ ಠಾಣೆಗಳಿಗೆ ವರ್ಗಾವಣೆ ಮಾಡಿದ್ದಾರೆ.

Upper Krishna Project: ರೈತರಿಗೆ ಸಿಹಿಸುದ್ದಿ; ನಾಳೆಯಿಂದ ಆಲಮಟ್ಟಿ, ನಾರಾಯಣಪುರ ಡ್ಯಾಂನಿಂದ ನೀರು ಬಿಡುಗಡೆ

ನಾಳೆಯಿಂದ ಆಲಮಟ್ಟಿ, ನಾರಾಯಣಪುರ ಡ್ಯಾಂನಿಂದ ನೀರು ಬಿಡುಗಡೆ

Upper Krishna Project: ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ 2024-25ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆ ನಡೆದಿದೆ. ಆಲಮಟ್ಟಿ, ನಾರಾಯಣಪುರ ಡ್ಯಾಂನಿಂದ ಸೇರಿ ಪ್ರತಿ ದಿನ 0.8ಂಟಿ.ಎಂ.ಸಿ ದರದಂತೆ ಹರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

Bird Flu: ರಾಜ್ಯದಲ್ಲಿ ಹಕ್ಕಿ ಜ್ವರದ ಹಾಹಾಕಾರ, 17000 ಕೋಳಿಗಳ ಹತ್ಯೆ

ರಾಜ್ಯದಲ್ಲಿ ಹಕ್ಕಿ ಜ್ವರದ ಹಾಹಾಕಾರ, 17000 ಕೋಳಿಗಳ ಹತ್ಯೆ

ಬಳ್ಳಾರಿ ಜಿಲ್ಲೆಯಲ್ಲಿ ಈ ವರೆಗೆ 17400 ಕೋಳಿಗಳು ಸತ್ತಿವೆ. ಅಸಿಲ್ ಹಾಗೂ ಕಾವೇರಿ ತಳಿ ಕೋಳಿಗಳೇ ಹಕ್ಕಿಜ್ವರಕ್ಕೆ ಟಾರ್ಗೆಟ್ ಆಗಿವೆ. ಬಳ್ಳಾರಿಯ ದರೋಜಿ ಕೆರೆಗೆ ಸಾವಿರಾರು ವಲಸೆ ಪಕ್ಷಿಗಳು ಬರುತ್ತವೆ. ಇದೇ ಪಕ್ಷಿಗಳಿಂದ ಹಕ್ಕಿಜ್ವರ ಜಿಲ್ಲೆಗೆ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್‌ ಮಿಶ್ರಾ ಅನುಮಾನ ವ್ಯಕ್ತಪಡಿಸಿದ್ದಾರೆ.

Road Accident: ಆಲಮಟ್ಟಿ ಡ್ಯಾಂ ಬಳಿ ಟೆಂಪೋ-ಟ್ರ್ಯಾಕ್ಟರ್ ಡಿಕ್ಕಿ; 10 ಜನರಿಗೆ ಗಂಭೀರ ಗಾಯ

ಆಲಮಟ್ಟಿ ಡ್ಯಾಂ ಬಳಿ ಟೆಂಪೋ-ಟ್ರ್ಯಾಕ್ಟರ್ ಡಿಕ್ಕಿ; 10 ಜನರಿಗೆ ಗಂಭೀರ ಗಾಯ

Road Accident: ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಜಲಾಶಯದ ಬಲಭಾಗದ ಕೆಎಸ್‌ಐಎಸ್‌ಎಫ್ ಸಿಬ್ಬಂದಿಗಳ ವಸಾಹತು ಸಮೀಪ ಸೋಮವಾರ ಸಂಜೆ ಅಪಘಾತ ನಡೆದಿದೆ. ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್‌ಗೆ ಡಿಕ್ಕಿಯಾಗಿ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.