ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ballari firing: ಶಾಸಕ ಜನಾರ್ದನ ರೆಡ್ಡಿ ನಿವಾಸದಲ್ಲಿ ಇನ್ನೊಂದು ಬುಲೆಟ್‌ ಪತ್ತೆ

ನನ್ನ ಹತ್ಯೆಗೆ ಸಂಚು ನಡೆಸಿದ್ದಾರೆ. 7-8 ಬಾರಿ ಫೈರಿಂಗ್‌ ಆಗಿದೆ. ನಿನ್ನೆ ಒಂದು ಗುಂಡು ಪತ್ತೆಯಾಗಿತ್ತು, ಇಂದು ಮತ್ತೊಂದು ಬುಲೆಟ್‌ ಕ್ಯಾಪ್‌ ಪತ್ತೆಯಾಗಿದೆ. ಜಾತಿ ನಿಂದನೆ, ಕೊಲೆ ಯತ್ನ ಆರೋಪದ ಅಡಿಯಲ್ಲಿ 15 ಜನರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ರೆಡ್ಡಿ ಕಡೆಯವರೂ ಭರತ್‌ ರಡ್ಡಿ ಹಾಗೂ ಬೆಂಬಲಿಗರ ಮೇಲೂ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಶಾಸಕ ಜನಾರ್ದನ ರೆಡ್ಡಿ ನಿವಾಸದಲ್ಲಿ ಇನ್ನೊಂದು ಬುಲೆಟ್‌ ಪತ್ತೆ

ಭರತ್‌ ರೆಡ್ಡಿ, ಜನಾರ್ದನ ರೆಡ್ಡಿ -

ಹರೀಶ್‌ ಕೇರ
ಹರೀಶ್‌ ಕೇರ Jan 3, 2026 8:17 AM

ಬಳ್ಳಾರಿ, ಜ.03: ವಾಲ್ಮೀಕಿ ಪ್ರತಿಮೆ (Valmiki statue) ಅನಾವರಣ ಕಾರ್ಯಕ್ರಮದ ಬ್ಯಾನರ್ ಅಳವಡಿಕೆ ಸಂಬಂಧ ಬಳ್ಳಾರಿಯಲ್ಲಿ ನಡೆದ ಗಲಾಟೆ (Ballari firing) ರಕ್ತಸಿಕ್ತವಾಗಿ ಮಾರ್ಪಟ್ಟಿದ್ದು, ಇದೀಗ ಇನ್ನಷ್ಟು ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhana Reddy) ನಿವಾಸದಲ್ಲಿಯೂ ಒಂದು ಬುಲೆಟ್‌ ಪತ್ತೆಯಾಗಿದ್ದು, ರೆಡ್ಡಿ ಕಡೆಯವರೂ ಭರತ್‌ ರಡ್ಡಿ ಹಾಗೂ ಬೆಂಬಲಿಗರ ಮೇಲೂ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತ (Congress Worker) ರಾಜಶೇಖರ್ ದೇಹ ಹೊಕ್ಕ ಗುಂಡು ಪೊಲೀಸ್ ಇಲಾಖೆಯದ್ದಲ್ಲ. ಇದು ಖಾಸಗಿ ವ್ಯಕ್ತಿಯ ರಿವಾಲ್ವರ್‌ನಿಂದ ಹಾರಿದ ಬುಲೆಟ್ ಎಂದು ಘಟನಾ ಸ್ಥಳದ ಉಸ್ತುವಾರಿ ವಹಿಸಿರುವ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಸ್ಪಷ್ಟನೆ ಕೊಟ್ಟಿದ್ದಾರೆ. ಫೈರಿಂಗ್ ಬಳಿಕ ರಾಜಶೇಖರ್ ಸಾವಾಗಿದೆ. ಪೊಲೀಸರಿಂದ ನಡೆದ ಫೈರಿಂಗ್‌ನಲ್ಲಿ ಹಾರಿದ ಗುಂಡು ಇದಲ್ಲ. ಅದು ಯಾರ ಗನ್‌ನ ಬುಲೆಟ್ ಎಂಬ ಬಗ್ಗೆ ತನಿಖೆ ಮಾಡ್ತೇವೆ ಎಂದಿದ್ದಾರೆ.

ಇನ್ನು ರಾಜಶೇಖರ್ ಸಾವಿಗೆ ಶಾಸಕ ನಾರಾ ಭರತ್ ರೆಡ್ಡಿ (Bharath Reddy) ಬೆಂಬಲಿಗ ಸತೀಶ್ ರೆಡ್ಡಿ ಹಾರಿಸಿದ ಗುಂಡೇ ಕಾರಣ ಅಂತ ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ರೆಡ್ಡಿ ಟಾರ್ಗೆಟ್ ಮಾಡಿಕೊಂಡೇ ಈ ದಾಳಿ ನಡೆಸಲಾಗಿದೆ ಅಂತ ರಾಮುಲು ದೂರಿದ್ದಾರೆ. ಮಾಜಿ ಶಾಸಕ ಸೋಮಶೇಖರ ರೆಡ್ಡಿ ಕೂಡ ನನ್ನ ತಮ್ಮನಿಗೆ ಬುಲೆಟ್ ಬಿದ್ದಿದ್ದರೆ ಏನ್ ಮಾಡ್ಬೇಕಿತ್ತು? ನಾವೇ ಫೈರಿಂಗ್ ಮಾಡಿ ನಾವೇ ಬುಲೆಟ್ ತೋರಿಸ್ತೀವಾ? ಬೇಕಂತಲೇ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಆರೋಪಿಸಿದ್ದಾರೆ. ರಾಜಶೇಖರ್ ಸಾವಿಗೆ ನಾವು ಕಾರಣರಲ್ಲ. ಗುಂಡೇಟೇ ಕಾರಣವಾಗಿದ್ದು, ಈ ಬಗ್ಗೆ ತನಿಖೆ ನಡೆಯಬೇಕು ಅಂತ ಆಗ್ರಹಿಸಿದ್ದಾರೆ.

Bellari Firing: ಬಳ್ಳಾರಿ ಗಲಾಟೆ: ಹತ್ತು ಜನರ ಮೇಲೆ ಪ್ರಕರಣ ದಾಖಲು, ಬುಲೆಟ್‌ ಖಾಸಗಿ ರಿವಾಲ್ವರ್‌ನದ್ದು

ರೆಡ್ಡಿ & ಟೀಂ ವಿರುದ್ಧ ಎಫ್‌ಐಆರ್

ಇನ್ನು, ರೆಡ್ಡಿ ನಿವಾಸದ ಬಳಿ ಫೈರಿಂಗ್ ಪ್ರಕರಣ (Ballari Firing Case) ಸಂಬಂಧ ಬಳ್ಳಾರಿ ಬ್ರೂಸ್‌ಫೇಟೆ ಪೊಲೀಸ್ ಠಾಣೆಯಲ್ಲಿ 11 ಜನರ ಮೇಲೆ ಕೇಸ್ ದಾಖಲು ಮಾಡಲಾಗಿದೆ. ಶಾಸಕ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಶ್ರೀರಾಮುಲು, ಅಲಿಖಾನ್, ದಮ್ಮೂರ ಶೇಖರ್, ಮೋತ್ಕರ್ ಶ್ರೀನಿವಾಸ್, ಪ್ರಕಾಶ್ ರೆಡ್ಡಿ, ರಮಣ, ಪಾಲನ್, ದಿವಾಕರ್, ಮಾರುತಿ ಪ್ರಸಾದ್ ವಿರುದ್ದ ಎಫ್‌ಐಆರ್ ದಾಖಲು ಮಾಡಲಾಗಿದೆ.

ಜನಾರ್ದನ ರೆಡ್ಡಿ ಆಪ್ತರು ಸಹ ಭರತ್‌ ರೆಡ್ಡಿ ಸೇರಿದಂತೆ ಹಲವರ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ. ಜನಾರ್ದನ ರೆಡ್ಡಿ 2 ಪ್ರತ್ಯೇಕ ದೂರು ದಾಖಲಿಸಿದ್ದಾರೆ. ನನ್ನ ಹತ್ಯೆಗೆ ಸಂಚು ನಡೆಸಿದ್ದಾರೆ. 7-8 ಬಾರಿ ಫೈರಿಂಗ್‌ ಆಗಿದೆ. ನಿನ್ನೆ ಒಂದು ಗುಂಡು ಪತ್ತೆಯಾಗಿತ್ತು, ಇಂದು ಮತ್ತೊಂದು ಬುಲೆಟ್‌ ಕ್ಯಾಪ್‌ ಪತ್ತೆಯಾಗಿದೆ. ಜಾತಿ ನಿಂದನೆ, ಕೊಲೆ ಯತ್ನ ಆರೋಪದ ಅಡಿಯಲ್ಲಿ 15 ಜನರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

Bellari Firing: ಬಳ್ಳಾರಿ ಗಲಾಟೆ: ಜನಾರ್ದನ ರೆಡ್ಡಿ ಮೇಲೇ ಫೈರಿಂಗ್, ಪೆಟ್ರೋಲ್‌ ಬಾಂಬ್‌ ತಂದಿದ್ರು:‌ ಶ್ರೀರಾಮುಲು ಆರೋಪ