ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ballari Firing: ಬಳ್ಳಾರಿ ಗಲಾಟೆಗೆ ಇನ್ನೊಂದು ತಲೆದಂಡ, ಐಜಿ ವರ್ತಿಕಾ ಕಟಿಯಾರ್‌ ವರ್ಗ

ಬಳ್ಳಾರಿ ರೇಂಜ್ ಐಜಿ ಆಗಿದ್ದ ವರ್ತಿಕಾ ಕಟಿಯಾರ್‌ ಅವರು ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಹೀಗಾಗಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಡಿಜಿ- ಐಜಿಪಿ ಕಡೆಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿತ್ತು. ಹೀಗಾಗಿ ಐಜಿ ವರ್ತಿಕಾ ಕಟಿಯಾರ್‌ ಅವರನ್ನ ಸರ್ಕಾರ ವರ್ಗಾವಣೆಗೊಳಿಸಿದೆ.

ಬಳ್ಳಾರಿ ಗಲಾಟೆಗೆ ಇನ್ನೊಂದು ತಲೆದಂಡ, ಐಜಿ ವರ್ತಿಕಾ ಕಟಿಯಾರ್‌ ವರ್ಗ

ಐಜಿ ವರ್ತಿಕಾ ಕಟಿಯಾರ್ -

ಹರೀಶ್‌ ಕೇರ
ಹರೀಶ್‌ ಕೇರ Jan 7, 2026 1:13 PM

ಬಳ್ಳಾರಿ, ಜ.07: ಬಳ್ಳಾರಿಯಲ್ಲಿ ಗಂಗಾವತಿ (Gangavati) ಶಾಸಕ ಜನಾರ್ದನ ರೆಡ್ಡಿ (Janardhana Reddy) ನಿವಾಸದ ಮುಂದೆ ವಾಲ್ಮೀಕಿ ಬ್ಯಾನರ್‌ ವಿಚಾರವಾಗಿ ನಡೆದ ಘರ್ಷಣೆ (Ballari Firing) ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬರು ಉನ್ನತ ಅಧಿಕಾರಿಯ ತಲೆ ದಂಡವಾಗಿದೆ.‌ ಎಸ್ಪಿ ಪವನ್‌ ನೆಜ್ಜೂರು ಅವರನ್ನು ಅಮಾನತುಗೊಳಿಸಿದ ಬೆನ್ನಲ್ಲೇ ಇದೀಗ ಪೊಲೀಸ್‌ ಐಜಿ ವರ್ತಿಕಾ ಕಟಿಯಾರ್ (Vartika katiyar) ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅಲ್ಲದೇ ಬಳ್ಳಾರಿ ವಲಯಕ್ಕೆ ನೂತನ ಐಜಿ ಆಗಿ ಹರ್ಷ ಗುಪ್ತಾ ಹಾಗೂ ನೂತನ ಎಸ್ಪಿ ಆಗಿ ಡಾ.ಸುಮನ್ ಡಿ ಪೆನ್ನೇಕರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಹೊಸ ವರ್ಷದ ಎರಡನೇ ದಿನ ನಡೆದ ಬಳ್ಳಾರಿ ಫೈರಿಂಗ್‌ ಹಾಗೂ ಗಲಭೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದನ್ನು ರಾಜ್ಯ ಸರ್ಕಾರವೂ ಸಹ ಗಂಭೀರವಾಗಿ ಪರಿಗಣಿಸಿದೆ.

ಜ.1ರಂದು ಬಳ್ಳಾರಿ ಎಸ್‌ಪಿಯಾಗಿ ಪವನ್ ನೆಜ್ಜೂರ್ (Pavan Nejjuru) ಅವರು ಶೋಭಾರಾಣಿ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ಬ್ಯಾನರ್‌ ಗಲಾಟೆ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂಬ ಕಾರಣ ನೀಡಿ ಅಮಾನತು ಮಾಡಲಾಗಿತ್ತು. ನಂತರ ಪವನ್‌ ಅವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆಯೂ ನಡೆದಿತ್ತು.

Ballari Clash Case: ಬಳ್ಳಾರಿ ಗಲಭೆ ವೇಳೆ ಫೈರಿಂಗ್‌; ಬುಲೆಟ್ ಪತ್ತೆ ಹಚ್ಚಲು ಜನಾರ್ದನ ರೆಡ್ಡಿ ಮನೆಗೆ ಬಾಂಬ್ ನಿಷ್ಕ್ರಿಯ ದಳ ಎಂಟ್ರಿ

ಬಳ್ಳಾರಿ ರೇಂಜ್ ಐಜಿ ಆಗಿದ್ದ ವರ್ತಿಕಾ ಕಟಿಯಾರ್‌ ಅವರು ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಹೀಗಾಗಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಡಿಜಿ-ಐಜಿಪಿ ಕಡೆಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿತ್ತು. ಹೀಗಾಗಿ ಐಜಿ ವರ್ತಿಕಾ ಕಟಿಯಾರ್‌ ಅವರನ್ನ ಸರ್ಕಾರ ವರ್ಗಾವಣೆಗೊಳಿಸಿದೆ.

Ballari Firing: ಬಳ್ಳಾರಿ ಘರ್ಷಣೆ: ಗುಂಡು ಹಾರಿಸಿದ ಸತೀಶ್‌ ರೆಡ್ಡಿಯ ಗನ್‌ಮ್ಯಾನ್‌ ಬಂಧನ, ಎಲ್ಲ ಆರೋಪಿಗಳು ಬೆಂಗಳೂರಿಗೆ ಶಿಫ್ಟ್