ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bellari Firing: ಬಳ್ಳಾರಿ ಗಲಾಟೆ: ಹತ್ತು ಜನರ ಮೇಲೆ ಪ್ರಕರಣ ದಾಖಲು, ಬುಲೆಟ್‌ ಖಾಸಗಿ ರಿವಾಲ್ವರ್‌ನದ್ದು

ರಾಜಶೇಖರ್‌ಗೆ ತಾಗಿದ ಬುಲೆಟ್ ಸರ್ಕಾರಿ ಗನ್ ಮ್ಯಾನ್‌ನದ್ದಲ್ಲ. ಬುಲೆಟ್ ಹಾರಿದ್ದು ಖಾಸಗಿ ಗನ್ ಮ್ಯಾನ್‌ನ ರಿವಾಲ್ವರ್‌ನಿಂದ ಎಂದು ಘಟನಾ ಸ್ಥಳದ ಉಸ್ತುವಾರಿ ಎಸ್ಪಿ ರಂಜಿತ್ ಕುಮಾರ್ ಖಚಿತ ಪಡಿಸಿದ್ದಾರೆ. ನಿನ್ನೆ ಗಲಾಟೆ ವೇಳೆ ರಾಜಶೇಖರ್‌ ಸಾವಾಗಿದೆ. ಅದು ಪೊಲೀಸರು ಫೈರ್ ಮಾಡಿದಾಗ ತಗುಲಿರುವ ಬುಲೆಟ್ ಅಲ್ಲ. ಅದು ಖಾಸಗಿ ರಿವಾಲ್ವರ್ ಬುಲೆಟ್. ಇದರ ಬಗ್ಗೆ ತನಿಖೆ ಮಾಡ್ತೇವೆ ಎಂದಿದ್ದಾರೆ.

ಮೃತ ಕಾರ್ಯಕರ್ತ ರಾಜಶೇಖರ

ಬಳ್ಳಾರಿ, ಜ.02: ಬಳ್ಳಾರಿಯಲ್ಲಿ (Bellari Firing) ನಿನ್ನೆ ರಾತ್ರಿ ನಡೆದ ಗುಂಪುಗಲಭೆ, ಫೈರಿಂಗ್‌ನಲ್ಲಿ ಕಾಂಗ್ರೆಸ್‌ ಕಾರ್ಯಕರ್ತನೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ಜನಾರ್ದನ ರೆಡ್ಡಿ (Janardhana reddy), ಶ್ರೀರಾಮುಲು (Sriramulu) , ಸೋಮಶೇಖರ್ ರೆಡ್ಡಿ ಸೇರಿದಂತೆ ಹತ್ತಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ್‌ಗೆ ತಾಗಿದ ಬುಲೆಟ್ ಸರ್ಕಾರಿ ಗನ್‌ಮ್ಯಾನ್‌ದಲ್ಲ, ಅದು ಖಾಸಗಿ ಗನ್ ಮ್ಯಾನ್‌ನದ್ದು ಎಂದು ಎಸ್ಪಿ ರಂಜಿತ್ ಕುಮಾರ್ ಖಚಿತಪಡಿಸಿದ್ದಾರೆ.

ಶಾಸಕ ಭರತ್ ರೆಡ್ಡಿ ಆಪ್ತ ಚಾನಾಳ್‌ ಶೇಖ‌ರ್ ನೀಡಿದ ದೂರಿನನ್ವಯ ಪ್ರಕರಣ ದಾಖಲು ಮಾಡಲಾಗಿದೆ. ಬ್ಯಾನರ್ ಹಾಕುವ ವಿಚಾರದಲ್ಲಿ ಗಲಾಟೆ ಮಾಡಿದ್ದಾರೆ. ಹಾಕಿರುವ ಬ್ಯಾನರ್ ಕಿತ್ತು ಹಾಕಿ ಬೈದು ದೌರ್ಜನ್ಯ ಮಾಡಿದ್ದಾರೆ. ಗುಂಪು ಗುಂಪಾಗಿ ಕಲ್ಲು, ಕಟ್ಟಿಗೆ, ಮಚ್ಚು ಮತ್ತು ಸೋಡ ಬಾಟಲಿ ಹಿಡಿದುಕೊಂಡು ಬಂದು ದಾಳಿ ಮಾಡಿದ್ದಾರೆ ಎಂದು ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಶ್ರೀರಾಮುಲು, ಮೋತ್ಕರ್ ಶ್ರೀನಿವಾಸ್, ಪ್ರಕಾಶ್ ರೆಡ್ಡಿ, ರಮಣ, ಪಾಲಣ್ಣ, ದಿವಾಕರ್, ಮಾರುತಿ ಪ್ರಸಾದ್, ದಮ್ಮೂರ್ ಶೇಖರ್, ಅಲಿಖಾನ್ ಆರೋಪಿತರಾಗಿದ್ದಾರೆ.

ಖಾಸಗಿ ಗನ್‌ ಮ್ಯಾನ್‌ ಕೃತ್ಯ

ರಾಜಶೇಖರ್‌ಗೆ ತಾಗಿದ ಬುಲೆಟ್ ಸರ್ಕಾರಿ ಗನ್ ಮ್ಯಾನ್‌ನದ್ದಲ್ಲ. ಬುಲೆಟ್ ಹಾರಿದ್ದು ಖಾಸಗಿ ಗನ್ ಮ್ಯಾನ್‌ನ ರಿವಾಲ್ವರ್‌ನಿಂದ ಎಂದು ಘಟನಾ ಸ್ಥಳದ ಉಸ್ತುವಾರಿ ಎಸ್ಪಿ ರಂಜಿತ್ ಕುಮಾರ್ ಖಚಿತ ಪಡಿಸಿದ್ದಾರೆ. ನಿನ್ನೆ ಗಲಾಟೆ ವೇಳೆ ರಾಜಶೇಖರ್‌ ಸಾವಾಗಿದೆ. ಅದು ಪೊಲೀಸರು ಫೈರ್ ಮಾಡಿದಾಗ ತಗುಲಿರುವ ಬುಲೆಟ್ ಅಲ್ಲ. ಅದು ಖಾಸಗಿ ರಿವಾಲ್ವರ್ ಬುಲೆಟ್. ಇದರ ಬಗ್ಗೆ ತನಿಖೆ ಮಾಡ್ತೇವೆ, ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಸಿಸಿ ಕ್ಯಾಮರಾಗಳ ಪರಿಶೀಲನೆಯನ್ನೂ ಮಾಡುತ್ತೇವೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಭರತ್ ರೆಡ್ಡಿ ಬೆಂಬಲಿಗರು ನಾಲ್ಕು ಕೇಸ್ ದಾಖಲಿಸಿದ್ದಾರೆ ಎಂದು ರಂಜಿತ್ ಕುಮಾರ್ ತಿಳಿಸಿದ್ದಾರೆ.

Bellari Firing: ಬಳ್ಳಾರಿ ಗಲಾಟೆ: ಜನಾರ್ದನ ರೆಡ್ಡಿ ಮೇಲೇ ಫೈರಿಂಗ್, ಪೆಟ್ರೋಲ್‌ ಬಾಂಬ್‌ ತಂದಿದ್ರು:‌ ಶ್ರೀರಾಮುಲು ಆರೋಪ

ಘಟನೆ ನಡೆದ ಬಳಿಕ ಬಂದಿರುವ ಎಲ್ಲಾ ವಿಡಿಯೋಗಳನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದು, ಯಾವ ಪಿಸ್ತೂಲಿನಿಂದ ಹಾರಿದ ಗುಂಡಿನಿಂದ ರಾಜಶೇಖರ ಮೃತನಾದ ಎನ್ನುವ ಯಕ್ಷ ಪ್ರಶ್ನೆಯ ಬೆನ್ನು ಹತ್ತಿದ್ದಾರೆ. ಮಾಧ್ಯಮದಲ್ಲಿ ಬಂದಿರುವ ವಿಡಿಯೋ ಸೇರಿದಂತೆ ಎಲ್ಲೆಡೆ ಹರಿದಾಡುತ್ತಿರುವ ವಿಡಿಯೋಗಳನ್ನು ಪೊಲೀಸರು ಸಂಗ್ರಹಿಸಿ ಪರಿಶೀಲಿಸುತ್ತಿದ್ದಾರೆ.

ನಿನ್ನೆ ನಡೆದ ಘಟನೆ ಬಳಿಕ ಪರಿಸ್ಥಿತಿ ತಿಳಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ಕು ಪ್ರಕರಣ ದಾಖಲಾಗಿವೆ. ರಾಜಶೇಖರ ಕೊಲೆ ಸಂಬಂಧಿಸಿದಂತೆ 302 ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಎಸ್ಸಿ ಎಸ್ಟಿ ಅಟ್ರಾಸಿಟಿ ಪ್ರಕರಣ, ಜನಾರ್ದನ ರೆಡ್ಡಿಯಿಂದ ಕೊಲೆ ಬೆದರಿಕೆ ಕುರಿತು ಭರತ್ ರೆಡ್ಡಿ ಬೆಂಬಲಿಗ ಚಾನಾಳ್ ಶೇಕರ್ ನೀಡಿದ ದೂರು ದಾಖಲಾಗಿವೆ.

Bellari Firing: ಬಳ್ಳಾರಿ ಗಲಾಟೆ ಪ್ರಕರಣ: ಜನಾರ್ದನ ರೆಡ್ಡಿ, ಶ್ರೀರಾಮುಲು ಮೇಲೆ ಎಫ್‌ಐಆರ್

ಹರೀಶ್‌ ಕೇರ

View all posts by this author