ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BJP Padayatra: ಬಿಜೆಪಿ ಚುನಾವಣಾ ರಣಕಹಳೆ

ಬಳ್ಳಾರಿ ನಗರದ ಮುನ್ಸಿಪಲ್ ಮೈದಾನದಲ್ಲಿ ಗುರುವಾರ ಸಂಜೆ ಬಳ್ಳಾರಿ ಚಲೋ ಪಾದ ಯಾತ್ರೆಯ ಸಮಾರೋಪ ಸಮಾರಂಭವನ್ನು ಕೇಂದ್ರ ಸಚಿವ ಪ್ರಲ್ಹಾಹ ಜೋಶಿ ಉದ್ಘಾಟಿಸಿದರು. ಇದೇ ಸಂದರ್ಭ ದಲ್ಲಿ 10 ದಿನಗಳ ಬಳ್ಳಾರಿ ಚಲೋ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರನ್ನು ಅಭಿನಂದಿಸಲಾಯಿತು.

ಬಳ್ಳಾರಿ ಚಲೋ ಪಾದಯಾತ್ರೆ ಮುಕ್ತಾಯ, ಸಮಾರೋಪದಲ್ಲಿ 50 ಸಾವಿರ ಮಂದಿ ಯಾತ್ರೆ ಮುಗಿದಿದೆ, ಮುಂದೆ 224 ಕ್ಷೇತ್ರಕ್ಕೆ ಭೇಟಿ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ 10 ದಿನಗಳ ಪಾದಯಾತ್ರೆ ಯಶಸ್ವಿಯಾಗಿ ಪೂರೈಸಿದ ವಿಜಯೇಂದ್ರಗೆ ಅಭಿನಂದನೆ

ಬಳ್ಳಾರಿ: ಬಳ್ಳಾರಿ ನಗರದ ಮುನ್ಸಿಪಲ್ ಮೈದಾನದಲ್ಲಿ ಗುರುವಾರ ಸಂಜೆ ಬಳ್ಳಾರಿ ಚಲೋ ಪಾದ ಯಾತ್ರೆಯ ಸಮಾರೋಪ ಸಮಾರಂಭವನ್ನು ಕೇಂದ್ರ ಸಚಿವ ಪ್ರಲ್ಹಾಹ ಜೋಶಿ ಉದ್ಘಾಟಿಸಿ ದರು. ಇದೇ ಸಂದರ್ಭದಲ್ಲಿ 10 ದಿನಗಳ ಬಳ್ಳಾರಿ ಚಲೋ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರನ್ನು ಅಭಿನಂದಿಸಲಾಯಿತು.

ಕೇಂದ್ರ ಸಚಿವ ಜೋಶಿ ಶಾಲು ಹೊದಿಸಿದರೆ, ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗರ್ವಾಲ್ ಅವರು ಹಾರಹಾಕಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಜಯೇಂದ್ರಗೆ ನೇಗಿಲು ನೀಡಿದರು. ಬಳ್ಳಾರಿ ಜಿಲ್ಲೆಯ ಮುಖಂಡರು ಹೂವಿನ ಹಾರಹಾಕಿ ಅಭಿನಂದಿಸಿದರು. ಈ ವೇಳೆ ಮಾತನಾಡಿದ ವಿಜಯೇಂದ್ರ, ಪಾದಯಾತ್ರೆ ಹತ್ತನೇ ದಿನ ಅಂತ್ಯಆಗಿರ ಬಹುದು. ಆದರೆ ಮುಂದಿನ ದಿನಗಳಲ್ಲಿ ರಾಜ್ಯ ದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಇಲ್ಲಿ ಚಾಲನೆ ನೀಡಲಾಗಿದೆ. ಮುಂದೆ 224 ಕ್ಷೇತ್ರಗಳಿಗೂ ಭೇಟಿ ನೀಡಲಾಗುವುದು. ಸ್ಥಳೀಯ ಸಮಸ್ಯೆಗಳನ್ನು ಚರ್ಚೆಮಾಡಲಾಗುವುದು. ದರಿದ್ರ ಕಾಂಗ್ರೆಸ್ ಸರಕಾರವನ್ನು ತೊಲಗಿಸಲು ಕಂಕಣ ಬದ್ಧರಾಗಿ ರೋಣ ಎಂದು ಕರೆ ನೀಡಿದರು.

ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಕೈಗೊಂಡಿದ್ದ ಪಾದಯಾತ್ರೆ 9 ವಿಧಾನಸಭೆ ಕ್ಷೇತ್ರ ಗಳ ಮೂಲಕ ಬಳ್ಳಾರಿಗೆ ಬಂದಿದೆ. ಪಾದ ಯಾತ್ರೆಯ ವೇಳೆ ರೈತರು, ಕೂಲಿಕಾರರು, ಮಹಿಳೆಯರು ಸಮಸ್ಯೆಗಳನ್ನು ಹೇಳಿಕೊಂಡಿ ದ್ದಾರೆ. ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಸರಕಾರದಿಂದ ಆಗುತ್ತಿರುವ ಸಮಸ್ಯೆ, ಸಂಕಷ್ಟಗಳನ್ನು ಜನರು ತಮ್ಮ ಸಂಕಷ್ಟ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಹತ್ತು ದಿನದ ಪಾದಯಾತ್ರೆ ಕಣ್ಣು, ಹೃದಯವನ್ನು ತೆರೆಸಿದೆ. ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಉತ್ತರ ಕರ್ನಾ ಟಕದ ಅಭಿವೃದ್ಧಿ ಮಾಡಿಲ್ಲ. ಕಲ್ಯಾಣ ಕರ್ನಾಟಕ ವನ್ನು ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: BJP Padayatra: ʼಬಳ್ಳಾರಿ ಚಲೋ' ಪಾದಯಾತ್ರೆ ಸಮಾರೋಪ; ಬಿಜೆಪಿಯಿಂದ 16 ನಿರ್ಣಯಗಳು

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ 100 ದಿನ ಪೂರೈಸಿದ ಸಂಭ್ರಮದಲ್ಲಿದ್ದರೆ, ಬಿಜೆಪಿ ದೀನ ದಲಿತರ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಹತ್ತು ದಿನದ ಯಾತ್ರೆ ಸಮಾರೋಪದಲ್ಲಿದ್ದೇವೆ. ವಂದೇ ಮಾತರಂ ಗೀತೆಯನ್ನು ಕೇಂದ್ರ ಸರಕಾರ ಎಲ್ಲಾ ಕಚೇರಿಗಳಲ್ಲಿ ಎಲ್ಲ 6 ಚರಣಗಳನ್ನು ಹಾಡಲು ಆದೇಶ ನೀಡಿದ್ದರೆ, ಡಿಕೆಶಿ ನೇತೃತ್ವದ ಸರಕಾರ ಕೇವಲ ಎರಡು ಚರಣ ಹಾಡುತ್ತೇವೆಂದು ಆದೇಶ ಹೊರಡಿಸಿದೆ. ವಂದೇ ಮಾತರಂ ಗೀತೆಗೆ ಕತ್ತರಿ ಹಾಕುವ ಮೂಲಕ ಒಂದು ಸಮುದಾಯದ ಓಲೈಕೆಗೆ ಮುದಾಗಿದೆ.

ಮುಂದಿನ ದಿನಗಳಲ್ಲಿ ರಾಜ್ಯದ ಜನರು ನಿಮ್ಮನ್ನು ಮನೆಗೆ ಕಳುಹಿಸುತ್ತಾರೆ ಎಂದು ಗುಡುಗಿದರು. ರಾಜ್ಯದಲ್ಲಿ ಭೀಕರ ಬರಗಾಲವಿದೆ. ವಿದ್ಯುತ್ ಇಲ್ಲದೆ ರೈತರು ಕೃಷಿಗೆ ನೀರಿಲ್ಲದೆ ಕಂಗಾಲಾಗಿದ್ದಾರೆ. ವಾಲ್ಮೀಕಿ ನಿಗಮದ ಹಣ ದೋಚಿ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಲೂಟಿ ಮಾಡಿದ ಹಣ ವಾಪಸ್ ನೀಡಬೇಕು ಎಂದು ಹರಿಹಾಯ್ದರು. ಗೃಹಲಕ್ಷ್ಮೀ ಯೋಜನೆಯಲ್ಲಿ 5 ಸಾವಿರ ಕೋಟಿ ರು. ಹಗರಣವಾಗಿದ್ದರೂ ಇದಕ್ಕೆ ಉತ್ತರ ನೀಡುವ ಯೋಗ್ಯತೆ ಇಲ್ಲ. ಬರ ಇದ್ದರೂ ರಾಜ್ಯದ ಪ್ರವಾಸ ಮಾಡದೆ ಬಿಡದಿ ಟೌನ್‌ಶಿಪ್ ಬಗ್ಗೆ, ಕನಕಪುರ ವಿಮಾನ ನಿಲ್ದಾಣ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.

ಉತ್ತರ ಕರ್ನಾಟಕ ಭಾಗದ ಬಳ್ಳಾರಿ, ವಿಜಯನಗರ, ಕೊಪ್ಪಳ ರಾಯಚೂರು ಭಾಗದ ರೈತರ ಸಮಸ್ಯೆಗೆ ಸ್ಪಂದಿಸಿಲ್ಲ. ತುಂಗಭದ್ರಾ ಜಲಾಶಯ ಕ್ಕೆ ಸಮಾನಾಂತರವಾಗಿ ನವಲಿ ಜಲಾಶಯದ ಬೇಡಿಕೆಗೆ ಸ್ಪಂದನೆ ಇಲ್ಲ. ರಾಜ್ಯ ಸರಕಾರಕ್ಕೆ, ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಕಿಡಿಕಾರಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಸೋನಿಯಾ, ರಾಹುಲ್ ಬೇಲ್ ಮೇಲ್ ಇದ್ದಾರೆ. ಭ್ರಷ್ಟಾಚಾರ ಪಾರ್ಟಿ ಕಾಂಗ್ರೆಸ್ ಪಾರ್ಟಿ, ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಕಾಶ್ಮೀರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಲಿನ ಸರಕಾರ ವಂದೇ ಮಾತರಂಗೆ ಗೌರವ ನೀಡಿದರೆ, ಕಾಂಗ್ರೆಸ್ ಮುಖಂಡರು ಅದಕ್ಕೆ ವಿರೋಧ ಮಾಡಬೇಕು ಎಂದು ಹೇಳುತ್ತಾರೆ. ವಂದೇ ಮಾತರಂ ಕತ್ತರಿಸಿದ ಕಾಂಗ್ರೆಸ್ ಈ ಹಿಂದೆ ದೇಶವನ್ನು ಕತ್ತರಿಸಿದರು. ಮುಂದಿನ 2028ರಲ್ಲಿ ಜನರು ನಿಮ್ಮನ್ನು ಆಡಳಿತದಿಂದ ಕತ್ತರಿಸಲಿದ್ದಾರೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ರೈತ ಜನ ವಿರೋಧಿ ದುರಾಡಳಿತ ವಿರುದ್ಧ ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಹತ್ತು ದಿನದ ಪಾದಯಾತ್ರೆಯಲ್ಲಿ ರಸ್ತೆಯುದ್ಧಕ್ಕೂ ಜನರು ಆಶೀರ್ವಾದ ಮಾಡಿದ್ದು ಇದು ಐತಿಹಾಸಿಕವಾಗಿದೆ ಎಂದರು. ಈ ಹೋರಾಟ ಇಲ್ಲಿಗೆ ಮುಗಿದಿಲ್ಲ. ಇಲ್ಲಿಂದ ಆರಂಭವಾಗಿದೆ. ಭ್ರಷ್ಟಾಚಾರದ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಡೆಯಲಿದೆ. ರಾಯಚೂರಿಂದ ಬಳ್ಳಾರಿ ವರೆಗೆ ನಡೆದ ಪಾದಯಾತ್ರೆ ಪ್ರತಿ ಹೆಜ್ಜೆಯೂ ಮುಂದಿನ ರಾಜಕೀಯದ ದಿಕ್ಸೂಚಿಯಾಗಲಿದೆ ಎಂದು ಭವಿಷ್ಯ ನುಡಿದರು.

ಮಾಜಿ ಸಿಎಂ ಬಸವರಾಜ ಎಸ್.ಬೊಮ್ಮಾಯಿ, ರಾಜ್ಯ ಉಸ್ತುವಾರಿ ಡಾ.ರಾಧಾ ಮೋಹನ್‌ದಾಸ್ ಅಗರ್ವಾಲ್, ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಸಂಸದ ಗೋವಿಂದ ಕಾರಜೋಳ, ಮುಖಂಡರಾದ ರವಿಕುಮಾರ್, ಶ್ರೀರಾಮುಲು, ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ, ಬಿ.ಸಿ.ಪಾಟೀಲ್. ಸಿ.ಟಿ.ರವಿ, ರೇಣುಕಾಚಾರ್ಯ, ಜಗ್ಗೇಶ್, ಸೋಮಶೇಖರ್ ರೆಡ್ಡಿ, ಸುರೇಶ್ ಬಾಬು, ಫಕ್ಕೀರಪ್ಪ, ಅರುಣಾ ಲಕ್ಷ್ಮೀ, ರಾಜುಗೌಡ, ರಾಜೀವ್, ಎಂ.ವೈ. ಸತೀಶ್ ಇತರರು ಭಾಗವಹಿಸಿದ್ದರು.

ಪಾದಯಾತ್ರೆಯ ನಿರ್ಣಯಗಳು

ವಾಲ್ಮೀಕಿ ನಿಗಮದ ರು. 187 ಕೋಟಿ ರು. ಹಣ ವಾಪಸ್ ನಿಗಮ ಸೇರಬೇಕು.

ಬರಪ್ರದೇಶ ಘೋಷಣೆಯಲ್ಲಿ ತಾರತಮ್ಯವಾಗಿದೆ. ವಾಸ್ತವ ಆಧರಿಸಿ ಬರ ಘೋಷಿಸಲಿ.

ರೈತರು ಪಡೆದಿರುವ 5 ಲಕ್ಷ ರು.ವರೆಗೆ ಕೃಷಿಸಾಲ ಪೂರ್ಣ ಮನ್ನಾ ಮಾಡಬೇಕು.

ದುರ್ಬಳಕೆಯಾಗಿರುವ ಎಸ್ ಇಎಸ್‌ಪಿ-ಟಿಎಸ್ಪಿ ಪರಿಶಿಷ್ಟರ ಹಣದ ಬಗ್ಗೆ ಸರಕಾರ ಶ್ವೇತ ಪತ್ರ ಹೊರಡಿಸಬೇಕು.

ನವಿಲೆ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿರಿಸಿ, ಅತೀ ಜರೂರಾಗಿ ನಿರ್ಮಾಣ ಕಾರ್ಯ ಕೈಗೊಳ್ಳಬೇಕು.

ನಿರುದ್ಯೋಗ ಸಮಸ್ಯೆ ನಿವಾರಿಸಲು 2.5 ಲಕ್ಷ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು.

ಕೆಪಿಎಸ್‌ಸಿ ಕರ್ಮಕಾಂಡಕ್ಕೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಭ್ರಷ್ಟ ತಪ್ಪಿತಸ್ಥರಿಗೆ ಶಿಕ್ಷೆ ಯಾಗುವಂತೆ ತನಿಖೆ ಚುರುಕುಗೊಳಿಸಬೇಕು. ಯುಪಿಎಸ್ಸಿ ಮಾದರಿಯಲ್ಲಿ ಕೆಪಿಎಸ್‌ಸಿಯನ್ನು ಸುಧಾರಣೆ ಮಾಡಬೇಕು.

ಗೃಹಲಕ್ಷ್ಮೀ ಯೋಜನೆಯ 5000 ಕೋಟಿ ರು. ಹಗರಣ ಮಹಿಳೆಯರಿಗೆ ಮಾಡಿದ ವಿದ್ರೋಹ. ಈ ಕೂಡಲೇ ಈ ಸಂಬಂಧ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದರಲ್ಲಿ ರಾಜಿಯಾಗಬಾರದು

image

ಬಳ್ಳಾರಿಯಲ್ಲಿ ಇಂದು ನಮ್ಮ ಪಾದಯಾತ್ರೆ ಮುಕ್ತಾಯವಾಗಿದೆ. ಆದರೆ ನಮ್ಮ ಹೋರಾಟ ಭ್ರಷ್ಟ ಕಾಂಗ್ರೆಸ್ ಸರಕಾರ ಕಿತ್ತೊಗೆಯುವವರೆಗೆ ಮುಂದುವರಿಯಲಿದೆ.

-ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
image

ಸೋನಿಯಾ, ರಾಹುಲ್ ಬೇಲ್ ಮೇಲ್ ಇದ್ದಾರೆ. ಕಾಶ್ಮೀರದಲ್ಲಿ ಅಲ್ಲಿನ ಸರಕಾರ ವಂದೇ ಮಾತರಂಗೆ ಗೌರವ ನೀಡಿದರೂ, ಕಾಂಗ್ರೆಸ್ ವಿರೋಧ ಮಾಡಬೇಕು ಎಂದು ಹೇಳುತ್ತದೆ.

-ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
image

ಗೃಹಲಕ್ಷ್ಮೀ ಯೋಜನೆಯಲ್ಲಿ 5 ಸಾವಿರ ಕೋಟಿ ರು. ಹಗರಣವಾಗಿದ್ದರೂ ಇದಕ್ಕೆ ಉತ್ತರ ನೀಡುವ ಯೋಗ್ಯತೆ ಸರಕಾರಕ್ಕೆ ಇಲ್ಲ. ಬರ ಇದ್ದರೂ ಶಿವಕುಮಾರ್ ತಲೆಕೆಡಿಸಿಕೊಂಡಿಲ್ಲ.

-ವಿಜಯೇಂದ್ರ, ಬಿಜೆಪಿ ರಾಜಾಧ್ಯಕ್ಷ