ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sandur News: ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಚಂದ್ರಶೇಖರ್ ಆಜಾದ್: ಕುಮಾರ್ ಎಸ್.ನಾನಾವಟೆ

​ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ತಮ್ಮ ಹೆಸರು 'ಆಜಾದ್' (ಸ್ವಾತಂತ್ರ್ಯ), ತಂದೆಯ ಹೆಸರು 'ಸ್ವಾತಂತ್ರ್ಯ' ಮತ್ತು ವಿಳಾಸ 'ಜೈಲು' ಎಂದು ಉತ್ತರಿಸಿ ಬ್ರಿಟಿಷ್ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದ್ದರು. ಈ ದಿಟ್ಟತನಕ್ಕಾಗಿ ಅವರಿಗೆ 14 ಚಾಟಿಯೇಟಿನ ಶಿಕ್ಷೆ ವಿಧಿಸಲಾಯಿತು. ಅದೇ ಸಂದರ್ಭದಲ್ಲಿ 'ತಾನು ಎಂದಿಗೂ ಬ್ರಿಟಿಷರಿಗೆ ಜೀವಂತವಾಗಿ ಬಂಧಿಯಾಗುವುದಿಲ್ಲ' ಎಂದು ಪ್ರತಿಜ್ಞೆ ಮಾಡಿದ್ದರು," ಎಂದು ನಾನಾವಟೆ ಸ್ಮರಿಸಿದರು.

​ಸಂಡೂರು: ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ತಮ್ಮ ಹೆಸರಿನ ಮುಂದೆ ‘ಸ್ವಾತಂತ್ರ್ಯ’ ಮತ್ತು ‘ಆಜಾದ್’ ಎಂದು ಸೇರಿಸಿಕೊಂಡ ಏಕೈಕ ಧೀಮಂತ ನಾಯಕ ಹಾಗೂ ಕ್ರಾಂತಿ ಕಾರಿ ಚಂದ್ರಶೇಖರ್ ಆಜಾದ್," ಎಂದು ಶ್ರೀ ಶೈಲೇಶ್ವರ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಕುಮಾರ್ ಎಸ್. ನಾನಾವಟೆ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀಮತಿ ಲಕ್ಷ್ಮಿ ಎಸ್.ನಾನಾವಟೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

​ಚಿಕ್ಕ ವಯಸ್ಸಿನಲ್ಲೇ ಮಧ್ಯಪ್ರದೇಶದ ಭಾಬ್ರಾ ಗ್ರಾಮದಲ್ಲಿ ಸೀತಾರಾಮ್ ತಿವಾರಿ ಹಾಗೂ ಜಗರಾಣಿ ದೇವಿ ದಂಪತಿಯ ಮಗನಾಗಿ ಜನಿಸಿದರು. ಬಾಲ್ಯದಲ್ಲಿ ಬಿಲ್ ಕೃಷಿಕರ ಬಳಿ ಬೆಳೆದಿದ್ದರಿಂದ ಅವರಿಗೆ ನಿಖರ ಗುರಿ ಇಡುವ ಕೌಶಲ ಒಲಿದಿತ್ತು. ಕೇವಲ 14ನೇ ವಯಸ್ಸಿನಲ್ಲಿಯೇ ಗಾಂಧೀಜಿಯವರ ಅಸಹಕಾರ ಚಳವಳಿಗೆ ಧುಮುಕಿದ ಅವರು, ಚಳವಳಿಯ ವೇಳೆ ಬಂಧನಕ್ಕೊಳಗಾದರು ಎಂದರು.

ಇದನ್ನೂ ಓದಿ: Bellary Clash: ಸಿಎಂ ಭೇಟಿಯಾದ ಶಾಸಕ ಭರತ್‌ ರೆಡ್ಡಿ; ಬಳ್ಳಾರಿ ಗಲಭೆ ಬಗ್ಗೆ ಚರ್ಚೆ

​ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ತಮ್ಮ ಹೆಸರು 'ಆಜಾದ್' (ಸ್ವಾತಂತ್ರ್ಯ), ತಂದೆಯ ಹೆಸರು 'ಸ್ವಾತಂತ್ರ್ಯ' ಮತ್ತು ವಿಳಾಸ 'ಜೈಲು' ಎಂದು ಉತ್ತರಿಸಿ ಬ್ರಿಟಿಷ್ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದ್ದರು. ಈ ದಿಟ್ಟತನಕ್ಕಾಗಿ ಅವರಿಗೆ 14 ಚಾಟಿಯೇಟಿನ ಶಿಕ್ಷೆ ವಿಧಿಸಲಾಯಿತು. ಅದೇ ಸಂದರ್ಭದಲ್ಲಿ 'ತಾನು ಎಂದಿಗೂ ಬ್ರಿಟಿಷರಿಗೆ ಜೀವಂತವಾಗಿ ಬಂಧಿಯಾಗುವುದಿಲ್ಲ' ಎಂದು ಪ್ರತಿಜ್ಞೆ ಮಾಡಿದ್ದರು," ಎಂದು ನಾನಾವಟೆ ಸ್ಮರಿಸಿದರು.

​ ​ಅಸಹಕಾರ ಚಳವಳಿಯನ್ನು ಹಿಂಪಡೆದ ನಂತರ, ಆಜಾದ್ ಅವರು ತೀವ್ರಗಾಮಿ ಹೋರಾಟದ ಹಾದಿ ತುಡಿದರು. ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (HSRA) ಮೂಲಕ ಭಗತ್ ಸಿಂಗ್, ರಾಜ್‌ಗುರು, ಸುಖ್‌ದೇವ್ ಹಾಗೂ ಅಶ್ಫಾಕುಲ್ಲಾ ಖಾನ್ ಅವರಂತಹ ಅಪ್ರತಿಮ ದೇಶಭಕ್ತರನ್ನು ಸಂಘಟಿಸಿದರು.

ಕಾಕೋರಿ ರೈಲು ದರೋಡೆ ಸೇರಿದಂತೆ ಬ್ರಿಟಿಷ್ ಖಜಾನೆಯನ್ನು ಲೂಟಿ ಮಾಡುವ ಮೂಲಕ ಬ್ರಿಟಿಷ್ ಸರ್ಕಾರಕ್ಕೆ ಸಿಂಹಸ್ವಪ್ನವಾಗಿದ್ದರು.

​"ಬ್ರಿಟಿಷರಿಗೆ ಎಂದಿಗೂ ಸಿಗದ ಆಜಾದ್ ಅವರನ್ನು, ಅವರ ಆಪ್ತನಾಗಿದ್ದ ವೀರಭದ್ರ ತಿವಾರಿ ಎಂಬಾತನ ದ್ರೋಹದಿಂದಾಗಿ ಅಲಹಾಬಾದ್‌ನ ಆಲ್ಫ್ರೆಡ್ ಉದ್ಯಾನವನದಲ್ಲಿ ಬ್ರಿಟಿಷ್ ಸೈನ್ಯ ಸುತ್ತುವರಿಯಿತು. ಸುತ್ತಲೂ 80ಕ್ಕೂ ಹೆಚ್ಚು ಪೊಲೀಸರು ಗುಂಡಿನ ಮಳೆ ಸುರಿಸಿದಾಗ, ನೀಲಗಿರಿ ಮರದ ಮರೆಯಲ್ಲಿ ನಿಂತು ಏಕಾಂಗಿಯಾಗಿ ಹೋರಾಡಿದರು. ಅಂತಿಮವಾಗಿ ಬಂದೂಕಿನಲ್ಲಿ ಒಂದೇ ಗುಂಡು ಸಿಡಿದಾಗದಾಗ, ಬ್ರಿಟಿಷರ ಕೈಗೆ ಜೀವಂತವಾಗಿ ಸಿಗಬಾರದೆಂಬ ಬಾಲ್ಯದ ಪ್ರಮಾಣ ದಂತೆ ತಮ್ಮ ಹಣೆಗೆ ತಾವೇ ಗುಂಡಿಟ್ಟುಕೊಂಡು ವೀರಮರಣ ಅಪ್ಪಿದರು.

​"ಅವರು ಹುತಾತ್ಮರಾದ ಮೇಲೆಯೂ ಹತ್ತಿರ ಹೋಗಲು ಬ್ರಿಟಿಷ್ ಸೈನಿಕರು ಹೆದರುತ್ತಿದ್ದರು. ಅಂತಹ ಮಹಾನ್ ದೇಶಭಕ್ತನ ತ್ಯಾಗ ಮತ್ತು ಬದುಕಿನ ಯಶೋಗಾಥೆಯನ್ನು ಇಂದಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅರಿತುಕೊಳ್ಳುವುದು ಅತ್ಯಗತ್ಯ," ಎಂದು ಕರೆ ನೀಡಿದರು.

​ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಯು. ದೇವರಾಜ್, ಶರಣಬಸಪ್ಪ ಎಂಜಿ ಹಾಗೂ ಉಪನ್ಯಾಸಕ ವೃಂದದವರು ಹಾಗೂ ಬಿ.ಎಡ್. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.