ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Padayatra: ಇಂದು ಬಳ್ಳಾರಿಯಲ್ಲಿ ಸಮಾರೋಪ ಯಾತ್ರೆ

ರಾಯಚೂರಿನ ಲಿಂಗಸೂಗೂರಿನಿಂದ ಆರಂಭವಾದ ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಜನರ ಸಮಸ್ಯೆಗಳನ್ನು ಆಲಿಸುತ್ತಾ ಸರಕಾರದ ವಿರುದ್ಧ ಹೋರಾಟ ರೂಪಿಸಿದ್ದಾರೆ. ಗುರುವಾರದ ಸಮಾರೋಪ ದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಸಂಸದರು, ಶಾಸಕರು ಹಾಗೂ 1 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸ ಲಿದ್ದಾರೆ.

ಬಿಜೆಪಿ ಪಾದಯಾತ್ರೆ 9ನೇ ದಿನ ಮುಕ್ತಾಯ, ಬುಧವಾರ ಸಂಜೆ ಬಳ್ಳಾರಿ ನಗರ ಪ್ರವೇಶ, ಎಲ್ಲೆಲ್ಲೂ ಕಟ್ಟೆಚ್ಚರ

ಬಳ್ಳಾರಿ: ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಬುಧವಾರ 9ನೇ ದಿನ ಪೂರೈಸಿದೆ. ಮಂಗಳವಾರ ಕುಡತಿ ನಿಗೆ ತಲುಪಿದ್ದ ಯಾತ್ರೆ ಬುಧವಾರ ಸಂಜೆ ಬಳ್ಳಾರಿ ನಗರಕ್ಕೆ ಪ್ರವೇಶಿಸಿತು. ಇಡೀ ಬಳ್ಳಾರಿಯಲ್ಲಿ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿದೆ. ಗುರುವಾರ ನಗರದ ನಗರಪಾಲಿಕೆ ಶಾಲೆಯಲ್ಲಿ ಬೃಹತ್ ಸಮಾರೋಪ ಸಮಾರಂಭ ನಡೆಯಲಿದೆ. 9ನೇ ದಿನದ ಪಾದಯಾತ್ರೆ ಕುಡತಿನಿ ಗ್ರಾಮದಿಂದ ಆರಂಭವಾಗಿ ಅಲ್ಲೀಪುರ, ಸುಧಾ ಕ್ರಾಸ್, ಕೌಲಬಜಾರ್ ಸೇರಿದಂತೆ ವಿವಿಧ ಪ್ರದೇಶಗಳ ಮೂಲಕ ಬಳ್ಳಾರಿ ನಗರಕ್ಕೆ ಬಂದು ತಲುಪಿತು. ಬುಧವಾರ ಮುಖಂಡರು 13 ಕಿಮೀ ನಡೆದಿದ್ದಾರೆ.

ಇದನ್ನೂ ಓದಿ: Padayatra completes 8th Day: ಪಾದಯಾತ್ರೆ 8ನೇ ದಿನ ಮುಕ್ತಾಯ, 17 ಕಿ.ಮೀ. ನಡಿಗೆ: ಸಂಡೂರಲ್ಲಿ ರಾರಾಜಿಸಿದ ಕೇಸರಿ ಧ್ವಜ

ರಾಯಚೂರಿನ ಲಿಂಗಸೂಗೂರಿನಿಂದ ಆರಂಭವಾದ ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಜನರ ಸಮಸ್ಯೆಗಳನ್ನು ಆಲಿಸುತ್ತಾ ಸರಕಾರದ ವಿರುದ್ಧ ಹೋರಾಟ ರೂಪಿಸಿದ್ದಾರೆ. ಗುರುವಾರದ ಸಮಾರೋಪ ದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಸಂಸದರು, ಶಾಸಕರು ಹಾಗೂ 1 ಲಕ್ಷಕ್ಕೂ ಅಧಿಕ ಕಾರ್ಯ ಕರ್ತರು ಭಾಗವಹಿಸಲಿದ್ದಾರೆ.

ಕಟ್ಟೆಚ್ಚರ: ಈ ವರ್ಷ ಜನವರಿಯಲ್ಲಿ ಬಳ್ಳಾರಿ ಶಾಸಕ ಭರತ್ ರೆಡ್ಡಿ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನಡುವೆ ಬ್ಯಾನರ್‌ಗೆ ಸಂಬಂಧಿಸಿದಂತೆ ಭಾರೀ ಗಲಾಟೆ ನಡೆದು, ಒಬ್ಬ ವ್ಯಕ್ತಿಯ ಹತ್ಯೆಯಾಗಿತ್ತು. ನಗರದಲ್ಲಿನ ಸೂಕ್ಷ್ಮ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು, ಹಿರಿಯ ಐಪಿಎಸ್ ಅಧಿಕಾರಿ ಸುಮನ್ ಡಿ.ಪನ್ನೇಕ್ಕರ್ ನೇತೃತ್ವದಲ್ಲಿ ಬಿಗಿಭದ್ರತೆ ಏರ್ಪಡಿಸಲಾಗಿದೆ. 3 ಜಿಲ್ಲೆಗಳ ಎಸ್‌ಪಿಗಳು ಸೇರಿದಂತೆ ಒಟ್ಟು 1200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸ ಲಾಗಿದ್ದು, ಗುರುವಾರದವರೆಗೆ ಭದ್ರತೆ ಯನ್ನು ದುಪ್ಪಟ್ಟುಗೊಳಿಸಲಾಗಿದೆ.

BJP in B

ಪಾದಯಾತ್ರೆಯ ಅಂತಿಮ ಹಂತದಲ್ಲಿ ಮುರುಗೇಶ್ ನಿರಾಣಿ, ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲ್, ಎಸ್.ಸುರೇಶ್ ಕುಮಾರ್, ಬಿ.ಸಿ.ಪಾಟೀಲ, ಕ್ಯಾ.ಬ್ರಿಜೇಶ್ ಚೌಟ, ರೂಪಾಲಿ ನಾಯ್ಕ್, ಸಿ.ಕೆ.ರಾಮ ಮೂರ್ತಿ, ಭಾಗೀರಥಿ ಮುರುಳ್ಯ ಸೇರಿದಂತೆ ಹಲವು ಪ್ರಮುಖ ನಾಯಕರು ಹೆಜ್ಜೆ ಹಾಕಿದ್ದಾರೆ.

ಕುಡತಿನಿ ಭೂಸಂತ್ರಸ್ಥರ ಪರ ನಿಲ್ಲುತ್ತೇನೆ: ಬಿವೈವಿ ಭರವಸೆ ಕುಡತಿನಿ ಭೂಸಂತ್ರಸ್ತರ ಪರವಾಗಿ ನಿಲ್ಲುವುದಾಗಿಯೂ, ಸದನದಲ್ಲಿ ರೈತರ ಪರ ದನಿ ಎತ್ತುವುದಾಗಿಯೂ ಬಿಜೆಪಿ ನಾಯಕರು ಹೋರಾಟ ನಿರತರಿಗೆ ಭರವಸೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹಮ್ಮಿ ಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆಯು ಬುಧವಾರ ಕುಡತಿನಿ ಮೂಲಕ ಬಳ್ಳಾರಿ ಕಡೆಗೆ ಸಾಗಿತು. ಮಾರ್ಗ ಮಧ್ಯೆ ರೈತರ ಧರಣಿ ಸ್ಥಳಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿದರು.

2012ರಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರವು ಕೈಗಾರಿಕೆ ಉದ್ದೇಶಕ್ಕೆ ಕುಡತಿನಿ ಬಳಿ ಸಾವಿರಾರು ಎಕರೆ ಭೂಮಿಯನ್ನು ಕೆಐಎಡಿಬಿ ಮೂಲಕ ವಶಕ್ಕೆ ಪಡೆಯಿತು. ಆಗ ಅವೈಜ್ಞಾ ನಿಕ ಭೂಬೆಲೆ ನಿಗದಿ ಮಾಡಲಾಗಿತ್ತು. ಈ ಮಧ್ಯೆ ಭೂಮಿಯನ್ನು ಬೇರೆಯವರಿಗೆ ವರ್ಗಾಯಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ರೈತರು ಬಿಜೆಪಿ ನಾಯಕರಿಗೆ ದೂರಿದರು.