ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MLA Annapurna Tukaram: ಪ್ರಜಾ ಸೇವಾ ಇಲಾಖೆಯ ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಿ

ನಮ್ಮ ಸಂಡೂರು ತಾಲೂಕಿನಲ್ಲಿ ಮೊದಲು ಪ್ರಜಾ ಸೇವಾ ಕಾರ್ಯಕ್ರಮ ವಿಠಲಪುರದಲ್ಲಿ ಎರಡನೆ ಯದು ತೋರಣಗಲ್ಲಿನಲ್ಲಿ ಹಾಗೂ ಇದೀಗ ಮೂರನೇ ಕಾರ್ಯಕ್ರಮ ಸಂಡೂರು ಪಟ್ಟಣದಲ್ಲಿ ಆಯೋಜಿಸಲಾಗಿದ್ದು ಮುಖ್ಯವಾಗಿ ನಮ್ಮ ತಾಲೂಕಿನಲ್ಲಿ ಬಾಲ್ಯ ವಿವಾಹದಂತಹ ಮೂಢನಂಬಿಕೆ ಗಳು ಆಚರಣೆಯಲ್ಲಿದ್ದು ಇದಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳು ಕಡಿವಾಣ ಹಾಕಬೇಕಾಗಿದೆ ಎಂದರು.

ಸಂಡೂರು: ಸಾರ್ವಜನಿಕರು ತಮ್ಮ ಕಾರ್ಯಗಳಿಗಾಗಿ ಕಚೇರಿಗಳಿಗೆ ಪದೇ ಪದೇ ಅಲೆದಾಡುವು ದನ್ನು ಮತ್ತು ಅರ್ಜಿಗಳನ್ನು ಇತ್ಯರ್ಥ ಪಡಿಸಿಕೊಳ್ಳುವಲ್ಲಿ ಆಗುವ ಅನಗತ್ಯ ವಿಳಂಬ‌ ಧೋರಣೆ ಯನ್ನು ತಡೆಯುವುದಕ್ಕಾಗಿಯೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್(Chief Minister D K Shivakumar) ಅವರು ಪ್ರಜೆಗಳ ಸೇವೆ ಗಾಗಿಯೇ ಪ್ರಜಾ ಸೇವಾ(Praja Seva)ಇಲಾಖೆ ಎಂಬ ಪ್ರತ್ಯೇಕವಾದ ಸಚಿವಾಲಯವನ್ನೇ ರಚಿಸಿದ್ದಾರೆ ಎಂದು ಎಂದು ಶಾಸಕಿ ಅನ್ನಪೂರ್ಣ ತುಕಾರಾಂ (MLA Annapurna Tukaram) ತಿಳಿಸಿದರು.

ಪಟ್ಟಣದ ಶ್ರೀ ಛತ್ರಪತಿ ಶಿವಾಜಿ ವಿದ್ಯಾ ಮಂದಿರದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತಿ, ತಾಲೂಕು ಆಡಳಿತ ಹಾಗೂ ಪಂಚಾಯತ್ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಪ್ರಜಾ ಸೇವಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಜಾ ಸೇವಾ ಇಲಾಖೆಯಿಂದ ಕೈಗೊಂಡಿರುವ ಅಭಿಯಾನ ಅಭೂತಪೂರ್ವ ಐತಿಹಾಸಿಕ ಹಾಗೂ ಮಹತ್ವಾಕಾಂಕ್ಷಿ ವಿಚಾರವಾಗಿದೆ. ಸರ್ಕಾರವನ್ನು ವಿಭಿನ್ನ ವಿನೂತನ ಹಾಗೂ ಅಸಾಮಾನ್ಯ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿರುವುದಕ್ಕೆ ಇದೇ ಸಾಕ್ಷಿ ಎಂದರು.

ಇದನ್ನೂ ಓದಿ: CM DK Shivakumar: ಸಿಎಂ ಡಿ.ಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು; ವಿಧಾನಸೌಧದಲ್ಲೇ ಚಿಕಿತ್ಸೆ

ಸಾರ್ವಜನಿಕರು ತಮ್ಮ ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ವಿನಾಕಾರಣ ಅಲೆದಾಡುವ ಬದಲು ಸರ್ಕಾರವೇ ನಿಮ್ಮ ಮನೆಗಳ ಬಾಗಿಲಿಗೆ ಬರುತ್ತಿದೆ ತಾವೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ನಮ್ಮ ಸಂಡೂರು ತಾಲೂಕಿನಲ್ಲಿ ಮೊದಲು ಪ್ರಜಾ ಸೇವಾ ಕಾರ್ಯಕ್ರಮ ವಿಠಲಪುರದಲ್ಲಿ ಎರಡನೆ ಯದು ತೋರಣಗಲ್ಲಿನಲ್ಲಿ ಹಾಗೂ ಇದೀಗ ಮೂರನೇ ಕಾರ್ಯಕ್ರಮ ಸಂಡೂರು ಪಟ್ಟಣದಲ್ಲಿ ಆಯೋಜಿಸಲಾಗಿದ್ದು ಮುಖ್ಯವಾಗಿ ನಮ್ಮ ತಾಲೂಕಿನಲ್ಲಿ ಬಾಲ್ಯ ವಿವಾಹದಂತಹ ಮೂಢ ನಂಬಿಕೆಗಳು ಆಚರಣೆಯಲ್ಲಿದ್ದು ಇದಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳು ಕಡಿವಾಣ ಹಾಕ ಬೇಕಾಗಿದೆ ಎಂದರು.

ಅಲ್ಲದೆ ವೃದ್ಧಾಪ್ಯ ವೇತನಕ್ಕೆ ಹಲವಾರು ವೃದ್ಧರು ಅಲೆದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ನೆರೆದಂತಹ ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ ನೂರಾರು ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇ‌ ಮಾಡಲಾಗಿದ್ದು ಇನ್ನುಳಿದ ಅರ್ಜಿ ಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುವುದು. ಇದು ನಿಮ್ಮದೇ ಸರ್ಕಾರ. ಯಾವುದೇ ಹಿಂಜರಿಕೆ ಹಾಗೂ ಸಂಕೋಚವಿಲ್ಲದೇ ಅರ್ಜಿ ಸಲ್ಲಿಸಿ ಇತ್ಯರ್ಥ ಮಾಡಿಕೊಳ್ಳಲು ಮನವಿ ಮಾಡಿದರು.

ಬಳ್ಳಾರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಪ್ರಸಾದ್ ಮಾತನಾಡಿ, ಜಿಲ್ಲಾ ಹಾಗೂ ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳು ಈ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು,ಅಹವಾಲುಗಳನ್ನು ಹಾಗೂ ನ್ಯಾಯಸಮ್ಮತವಾದ ಸಂವಿಧಾನಾ ತ್ಮಕ ಬೇಡಿಕೆಗಳಿಗೆ ಅರ್ಜಿ ಸಲ್ಲಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಲಾಗಿದ್ದು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.

ನಮ್ಮ ಈ ಕಾರ್ಯಕ್ರಮವು‌ ಸಮಾಜದ ಕಟ್ಟ ಕಡೆಯ ನಾಗರಿಕರಿಗೂ ತಲುಪಬೇಕು ಎಂಬ ಆಶಯ ಹೊಂದಿದೆ ಎಂದು ನುಡಿದರು.

ಸಮಾರಂಭದ ಮೈದಾನದಲ್ಲಿ ವಿವಿಧ ಇಲಾಖೆಗಳಾದ ಪುರಸಭೆ, ಲೋಕೋಪಯೋಗಿ ಇಲಾಖೆ, ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾ.ಪಂ,ಜಿಪಂ ಇಲಾಖೆಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಪ್ರತ್ಯೇಕ ಸ್ಟಾಲ್ ಗಳಲ್ಲಿ ನೂರಾರು ಸಾರ್ವಜನಿಕರಿಂದ ಅಧಿಕಾರಿಗಳು ಅರ್ಜಿ ಸ್ವೀಕರಿಸುತ್ತಿರುವುದು ಕಂಡು ಬಂದಿತು.

ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್, ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಮೊಹಮ್ಮದ ಹ್ಯಾರಿಸ್ ಸುಮೇರ್, ಪೋಲೀಸ್ ಉಪಾಧೀಕ್ಷಕ ಪ್ರಸಾದ್ ಗೋಖಲೆ, ಸಹಾಯಕ ಆಯುಕ್ತ ರಾಜೇಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನೂರುಲ್ಲಾ, ತಾಲೂಕು ಅಧ್ಯಕ್ಷೆ ಆಶಾಲತಾ ಸೋಮಪ್ಪ, ತಹಶಿಲ್ದಾರ್ ಅನಿಲ್ ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ‌ ಬಸಪ್ಪ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.