ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Padayatra completes 8th Day: ಪಾದಯಾತ್ರೆ 8ನೇ ದಿನ ಮುಕ್ತಾಯ, 17 ಕಿ.ಮೀ. ನಡಿಗೆ: ಸಂಡೂರಲ್ಲಿ ರಾರಾಜಿಸಿದ ಕೇಸರಿ ಧ್ವಜ

ಸಂಡೂರು ಕ್ಷೇತ್ರದ ಹಳೆ ದರೋಜಿ, ಹೊಸ ದರೋಜಿಯಿಂದ ಆರಂಭವಾದ 8ನೇ ದಿನದ ಪಾದ ಯಾತ್ರೆ, ಇಡೀ ದಿನ ಸಂಡೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂದುವರಿಯಿತು. ಸಂಜೆ ಕುಡುತಿನಿ ಗ್ರಾಮ ದಲ್ಲಿ ಬಹಿರಂಗ ಸಭೆ ನಡೆಯಿತು. ರಾಯಚೂರಿನ ಲಿಂಗಸೂಗೂರಿ ನಿಂದ ಸೆ.1ರಂದು ಆರಂಭವಾದ ಪಾದಯಾತ್ರೆ ಕೊನೆಯ ಹಂತ ತಲುಪಿದೆ.

ಬಳ್ಳಾರಿ: ಕಾಂಗ್ರೆಸ್ ಸರಕಾರದ ವೈಫಲ್ಯಗಳ ವಿರುದ್ಧದ ಬಿಜೆಪಿಯ ಬಳ್ಳಾರಿ ಚಲೋ ಪಾದ ಯಾತ್ರೆ ಮಂಗಳವಾರ 8ನೇ ದಿನ ಪೂರೈಸಿದೆ. ಮಂಗಳವಾರ ಸಂಡೂರಿನ ಹಳೇ ದರೋಜಿಯಿಂದ ತಿಮ್ಮಾಪುರ ಮಾರ್ಗವಾಗಿ ಕುಡುತಿನಿ ಯವರೆಗೆ ಯಾತ್ರೆ ನಡೆಯಿತು. ಸರಿಸುಮಾರು 17 ಕಿಮೀ ದೂರವನ್ನು ಪಾದಯಾತ್ರೆಯಲ್ಲಿ ಕ್ರಮಿಸಿದ ಮುಖಂಡರಿಗೆ ಪ್ರತಿ ಗ್ರಾಮಗಳಲ್ಲೂ ಆತ್ಮೀಯ ಸ್ವಾಗತ ಲಭಿಸಿತು.

ಸಂಡೂರು ಕ್ಷೇತ್ರದ ಹಳೆ ದರೋಜಿ, ಹೊಸ ದರೋಜಿಯಿಂದ ಆರಂಭವಾದ 8ನೇ ದಿನದ ಪಾದ ಯಾತ್ರೆ, ಇಡೀ ದಿನ ಸಂಡೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂದುವರಿಯಿತು. ಸಂಜೆ ಕುಡುತಿನಿ ಗ್ರಾಮದಲ್ಲಿ ಬಹಿರಂಗ ಸಭೆ ನಡೆಯಿತು. ರಾಯಚೂರಿನ ಲಿಂಗಸೂಗೂರಿ ನಿಂದ ಸೆ.1ರಂದು ಆರಂಭವಾದ ಪಾದಯಾತ್ರೆ ಕೊನೆಯ ಹಂತ ತಲುಪಿದೆ. ಗುರುವಾರದ ಸಮಾರೋಪಕ್ಕೆ ಸಿದ್ಧತೆ ಶುರುವಾಗಿದೆ. ರಸ್ತೆ ಯುದ್ದಕ್ಕೂ ಕಾರ್ಯಕರ್ತರ ಉತ್ಸಾಹ ಜೋರಾಗಿತ್ತು. ನಾಯಕರು ಸಾಗುವ ಮಾರ್ಗದಲ್ಲಿ ಹೂವುಗಳನ್ನು ಸುರಿಸಲಾಗಿತ್ತು.

ಇದನ್ನೂ ಓದಿ: Padayatra Completes Seven Days: ಏಳು ದಿನ ಪೂರೈಸಿದ ಬಳ್ಳಾರಿ ಪಾದಯಾತ್ರೆ: ಕೇಸರಿ ಪಡೆಯಲ್ಲಿ ರಣೋತ್ಸಾಹ

ಜೆನ್‌ಜೀ ಯುವಕರೊಂದಿಗೆ ನಡೆದ ಸಂವಾದ ಪಾದ ಯಾತ್ರೆಯ ಪ್ರಮುಖ ಆಕರ್ಷಣೆಯಾಗಿವೆ. ಗ್ರಾಮಗಳ ಪ್ರವೇಶದ್ವಾರದಿಂದ ಹಿಡಿದು ಪ್ರಮುಖ ರಸ್ತೆಗಳಲ್ಲಿ ಬ್ಯಾನರ್, ಧ್ವಜಗಳನ್ನು ಹಾಕಿ ಬಿಜೆಪಿ ನಾಯಕರನ್ನು ಭವ್ಯವಾಗಿ ಜನರು ಸ್ವಾಗತಿಸಿದರು. ಹಳೆ ದರೋಜಿ, ಹೊಸ ದರೋಜಿ, ಕುಡುತಿನಿ ಸೇರಿದಂತೆ ವಿವಿಧ ಕಡೆ ಗಳಲ್ಲಿ ಜನಸಾಗರವೇ ಸೇರಿತ್ತು. ಹಗಲುವೇಷ, ಕಹಳೆ ವಾದ್ಯ, ತಾಷಾ ರಾಂಡೋಲ್ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಗಮನ ಸೆಳೆದವು.

ಕೈ ವಿರುದ್ಧ ವಾಗ್ದಾಳಿ: ಹಳೆ ದರೋಜಿ ಗ್ರಾಮದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಅಭಿವೃದ್ಧಿ ಕುಂಠಿತಗೊಂಡಿದೆ. ರಾಜ್ಯದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಜನೌಷಧ ಕೇಂದ್ರಗಳನ್ನು ಸರಕಾರ ಮುಚ್ಚುತ್ತಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಮುಖ್ಯಮಂತ್ರಿ ಬೆಂಗಳೂರಿನಲ್ಲಿ ಕುಳಿತ್ತಿದ್ದಾರೆ ಎಂದು ಆರೋಪಿಸಿದರು. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಇತರ ಬಿಜೆಪಿ ನಾಯಕರು ಕೂಡ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ಕೌರವರ ಸ್ಥಾನದಲ್ಲಿದೆ ಎಂದು ಸಿ.ಟಿ. ರವಿ ಕಿಡಿಕಾರಿದರು. ಬರ ನಿರ್ವಹಣೆ ಸರಕಾರ ಸೋತಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹಾಗೂ ಸಂಸದ ಬಿ.ವೈ.ರಾಘವೇಂದ್ರ ಕಿಡಿಕಾರಿದರು.

ಸಮಾರೋಪ: ಬಳ್ಳಾರಿ ಶಾಲಾ ಮೈದಾನ ಬಳಸಲು ಅಂತೂ ಅನುಮತಿ, ಬಿಜೆಪಿ ನಿಟ್ಟುಸಿರು

ಪಾದಯಾತ್ರೆ ಸಮಾರೋಪ ಸಮಾರಂಭಕ್ಕಿದ್ದ ಇದ್ದ ವಿಘ್ನ ನಿವಾರಣೆಯಾಗಿದೆ. ಕಾರ್ಯಕ್ರಮಕ್ಕೆ ಬಳ್ಳಾರಿಯ ಎಕ್ಸ್ ನಗಪಾಲಿಕೆ ಶಾಲಾ ಮೈದಾನವನ್ನು ಬಳಸಲು ಷರತ್ತುಗಳನ್ನು ವಿಧಿಸಿ ಜಿಲ್ಲಾಡಳಿತ ಅನುಮತಿ ನೀಡಿದೆ. ಈ ಹಿಂದೆ ಇದೇ ಮೈದಾನದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಧನಾ ಸಮಾವೇಶವೂ ನಡೆದಿತ್ತು. ಬಿಜೆಪಿಗೆ ಸಮಾವೇಶಕ್ಕೆ ಮಾತ್ರ ಯಾಕೆ ಅನುಮತಿ ನೀಡುತ್ತಿಲ್ಲ ವಿಜಯೇಂದ್ರ ಸೇರಿ, ರಾಜಕೀಯ ನಾಯಕರು ಕೆಂಡವಾಗಿ ದ್ದರು. ಇದು ಶಾಲಾ ಮೈದಾನವಾಗಿರುವುದರಿಂದ ರಾಜಕೀಯ ಸಮಾವೇಶ ಬೇಡವೆಂದು ಶಿಕ್ಷಣ ಇಲಾಖೆ ಹೇಳಿತ್ತು. ಅಂತೂ ಮಧ್ಯಾಹ್ನ 3ರಿಂದ ರಾತ್ರಿ 8ರವರೆಗೆ ಸಮಾರಂಭ ನಡೆಸಲು ಅವಕಾಶ ನೀಡಲಾಗಿದೆ.

image

ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಅಭಿವೃದ್ಧಿ ಕುಂಠಿತಗೊಂಡಿದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಜನೌಷಧ ಕೇಂದ್ರ ಗಳನ್ನು ಸರಕಾರ ಮುಚ್ಚುತ್ತಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಮುಖ್ಯಮಂತ್ರಿ ಶಿವಕುಮಾರ್ ಬೆಂಗಳೂರಿನಲ್ಲಿ ಕುಳಿತಿದ್ದಾರೆ.

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ