ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಕಿತ್ತೆಸೆಯಲು ಬಳ್ಳಾರಿ ನೆಲದಲ್ಲೇ ಬಿಜೆಪಿ ಸಂಕಲ್ಪ: ಪ್ರಲ್ಹಾದ್‌ ಜೋಶಿ

Pralhad Joshi: ಬಳ್ಳಾರಿಯಲ್ಲಿ ಗುರುವಾರ ಸಂಜೆ ಬಿಜೆಪಿ ಹಮ್ಮಿಕೊಂಡಿದ್ದ ʼಬಳ್ಳಾರಿ ಚಲೋʼ ಪಾದಯಾತ್ರೆ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿ, ಮಿತಿ ಮೀರಿದ ಭ್ರಷ್ಟಾಚಾರ, ತುಷ್ಟೀಕರಣದ ಕಾಂಗ್ರೆಸ್‌ ಪಕ್ಷಕ್ಕೆ ಈ ಬಳ್ಳಾರಿ ನೆಲದಿಂದಲೇ ಉತ್ತರ ಕೊಡುವ ಸಂಕಲ್ಪ ಮಾಡಿದೆ ಬಿಜೆಪಿ ಎಂದು ಹೇಳಿದ್ದಾರೆ.

ಬಳ್ಳಾರಿ, ಸೆ.10: ದಕ್ಷಿಣ ಭಾರತದಲ್ಲಿ ಮತ್ತೊಂದು ರಾಜ್ಯವನ್ನು ಬಿಜೆಪಿ ಗೆಲ್ಲಲಿದೆ. 2028ಕ್ಕೆ ಕರ್ನಾಟಕದ ಭ್ರಷ್ಟ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೆಸೆಯಲು ಬಳ್ಳಾರಿ ನೆಲದಲ್ಲೇ ಸಂಕಲ್ಪ ಮಾಡಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಘೋಷಿಸಿದರು. ಬಳ್ಳಾರಿಯಲ್ಲಿ ಗುರುವಾರ ಸಂಜೆ ಬಿಜೆಪಿ ಹಮ್ಮಿಕೊಂಡಿದ್ದ ʼಬಳ್ಳಾರಿ ಚಲೋʼ ಪಾದಯಾತ್ರೆ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿ, ಮಿತಿ ಮೀರಿದ ಭ್ರಷ್ಟಾಚಾರ, ತುಷ್ಟೀಕರಣದ ಕಾಂಗ್ರೆಸ್‌ ಪಕ್ಷಕ್ಕೆ ಈ ಬಳ್ಳಾರಿ ನೆಲದಿಂದಲೇ ಉತ್ತರ ಕೊಡುವ ಸಂಕಲ್ಪ ಮಾಡಿದೆ ಬಿಜೆಪಿ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷ ಯುಪಿಎ ಕಾಲದಿಂದಲೂ ವ್ಯಾಪಕ ಭ್ರಷ್ಟಾಚಾರ, ಹಗರಣಗಳನ್ನು ಮಾಡಿಕೊಂಡೇ ಬಂದಿದೆ. ಈಗಲೂ ಆಡಳಿತದಲ್ಲಿ ಇರುವ ಕಡೆಯೆಲ್ಲಾ ಎಲ್ಲದರಲ್ಲೂ ದುಡ್ಡು ಹೊಡೆಯುತ್ತಿದೆ. ಮಿತಿ ಮೀರಿದ ಭ್ರಷ್ಟಾಚಾರ ನಡೆಸುತ್ತಿದೆ. ರಾಜ್ಯದಲ್ಲಿ ಅದ್ಹೇಗೋ ಅಧಿಕಾರಕ್ಕೆ ಬಂದು ಸಿಕ್ಕಸಿಕ್ಕಲ್ಲಿ ಹಣ ದೋಚುತ್ತಿರುವ ಹಾಗೂ ಭಯೋತ್ಪಾದಕರನ್ನು ಬ್ರದರ್ಸ್‌ ಎನ್ನುವ ಈ ಮತಾಂಧ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೆಸೆಯಲೇಬೇಕಿದೆ ಎಂದು ಹೇಳಿದರು.

BJP

ಪಂಚ ಗ್ಯಾರೆಂಟಿಗಳೆಲ್ಲ ಪಂಚರ್‌

ರಾಜ್ಯ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳೆಲ್ಲ ಪಂಚರ್‌ ಆಗಿಬಿಟ್ಟಿವೆ. ಬಸ್‌ಗಳೆಲ್ಲಾ ಹಿಂದೂ ಹೋಗದೆ, ಮುಂದೂ ಹೋಗಲಾಗದೆ ಅಲ್ಲಲ್ಲೇ ನಿಲ್ಲುವ ಸ್ಥಿತಿ ತಲೆದೋರಿದೆ. ಇನ್ನು, ₹5700 ಕೋಟಿ ಗೃಹಲಕ್ಷ್ಮಿ ಹಣ ಗುಳುಂ ಮಾಡಿದ್ದಾರೆ. ಇನ್ನೂವರೆಗೂ ಇದರ ಲೆಕ್ಕ ಕೊಟ್ಟಿಲ್ಲ. ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆ ಹಣವನ್ನೇ ಕೊಟ್ಟಿಲ್ಲ. ಯುವ ನಿಧಿ ಸೇರಿ ಇನ್ನೆರೆಡು ಗ್ಯಾರೆಂಟಿಗಳನ್ನು ಇವರಿನ್ನೂ ಕೊಟ್ಟೇಯಿಲ್ಲ ಎಂದು ಆರೋಪಿಸಿದರು.‌

BJP Padayatra: ರಾಜ್ಯದಲ್ಲಿ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ತರುವವರೆಗೆ ಹೋರಾಟ ಮುಂದುವರಿಯಲಿದೆ: ವಿಜಯೇಂದ್ರ

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯ ವೇತನ ಕೊಟ್ಟರು. ಆದರೆ, ಕಾಂಗ್ರೆಸ್‌ ಸರ್ಕಾರ ಅವನ್ನೆಲ್ಲ ಇನ್ನಿಲ್ಲದಂತೆ ಮಾಡಿದೆ. ವಿಧವೆಯರ ಹಣ ಸಹ ಬಿಟ್ಟಿಲ್ಲ. ಅದನ್ನೂ ತಿನ್ನುತ್ತಿದ್ದಾರೆ. ಜನಕ್ಕೆ ಅನ್ನಭಾಗ್ಯ 10 ಕೆಜಿ ಕೊಡುತ್ತೇವೆಂದರು. ಆದರೆ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ 5 ಕೆಜಿ ಅಕ್ಕಿ ಕೊಡುತ್ತಿದೆಯೇ ಹೊರತು ರಾಜ್ಯ ಸರ್ಕಾರವಲ್ಲ ಎಂದು ಜೋಶಿ ಹೇಳಿದರು.

ಪಾಲಿಕೆಗಳಲ್ಲಿನ ಜನಸಾಮಾನ್ಯರ ಹಣ ದೋಚುತ್ತಿದೆ

ರಾಜ್ಯದಲ್ಲಿನ ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಮುನ್ಸಿಪಾಲ್ಟಿ ಹಣ ದೋಚುತ್ತಿದೆ. ಮಹಾನಗರ ಪಾಲಿಕೆಗಳಲ್ಲಿನ ಜನಸಾಮಾನ್ಯರ ಹಣ ಹೊಡೆಯುವ ಕೆಲಸ ಮಾಡುತ್ತಿದೆ. ಇಂದಿರಾ ಕ್ಯಾಂಟೀನ್‌ಗೆ, ಭಾರತ್‌ ಜೋಡೋಗೆ ಪಾಲಿಕೆ ಹಣ ಹೊಂದಿಸುತ್ತಿದ್ದಾರೆ. ಭಾರತ್‌ ಜೋಡೋಗೆ ಪಾಲಿಕೆ ಹಣವೇಕೆ? ಎಂದು ಪ್ರಶ್ನಿಸಿದ ಪ್ರಲ್ಹಾದ್‌ ಜೋಶಿ, ಇದರ ನೆಪದಲ್ಲಿ ಜನಸಾಮಾನ್ಯರ ತೆರಿಗೆ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಬಂದ ಮೇಲೇ ವಾಲ್ಮೀಕಿ ಹಣ ವಾಪಸ್‌

ವಾಲ್ಮೀಕಿ ನಿಗಮದ ಭ್ರಷ್ಟಾಚಾರದಲ್ಲಿ ಅಮ್ಮ, ಮಗ, ತಂಗಿ ಎಲ್ಲರದ್ದೂ ಪಾಲಿದೆ. ವಾಲ್ಮೀಕಿ ನಿಗಮದ ಹಣ ಡಿ.ಕೆ. ಶಿವಕುಮಾರ್‌ ಇರೋವರೆಗೂ ವಾಪಸ್‌ ಬರುವುದಿಲ್ಲ. 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಾಪಸ್‌ ತಂದೇ ತರುತ್ತದೆ ಎಂದರು.

ವಾಲ್ಮೀಕಿ ನಿಗಮದ ಹಗರಣದ ರೂವಾರಿ, ಸಚಿವ ನಾಗೇಂದ್ರ ರಾಜೀನಾಮೆ ಕೇಳಿದರೆ ಕಾಂಗ್ರೆಸ್‌ ಪಕ್ಷ ಅದೇಕೆ? ಎನ್ನುತ್ತಿದೆ. ಆದರೆ, ಎಸ್‌ಟಿ ಸಮಾಜದ ಹಣವನ್ನು ತಿಂದ ಪಾಪಕ್ಕೆ ರಾಜೀನಾಮೆ ಕೇಳಿದ್ದ ಬಿಜೆಪಿ, ವಾಲ್ಮೀಕಿ ನಿಗಮದ ಹಣ ಬಡವರಿಗೆ, ಜನಸಾಮಾನ್ಯರಿಗೆ ಸಂದಾಯವಾಗಬೇಕು. ಅದಕ್ಕಾಗಿ ಬಿಜೆಪಿ ವಿಧಾನಸಭೆ ಒಳ-ಹೊರಗೆ ಹೋರಾಟ ನಡೆಸುತ್ತಿದೆ. ವಿಜಯೇಂದ್ರ ನೇತೃತ್ವದಲ್ಲಿ ಬಳ್ಳಾರಿ ಪಾದಯಾತ್ರೆ ನಡೆಸಿದೆ ಎಂದರು.

ರಾಜಣ್ಣ ಅದೇ ಸಮಾಜದವರಲ್ಲವೇ?

ಎಸ್ಸಿ, ಎಸ್ಟಿ ಸಮುದಾಯದವರ ಮೇಲೆ ಅಷ್ಟೊಂದು ಕಾಳಜಿ ಇದ್ದಿದ್ದರೆ ರಾಜಣ್ಣ ಅವರನ್ನು ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರನ್ನಾಗಿ ಮಾಡಬೇಕಿತ್ತು. ಆದರೆ, ವೈಯಕ್ತಿಕ ದ್ವೇಷದ ಕಾರಣಕ್ಕೆ ಡಿ.ಕೆ. ಶಿವಕುಮಾರ್‌ ಇದನ್ನು ಮಾಡಲಿಲ್ಲ. ರಾಜಣ್ಣ ಸಹ ಅದೇ ಸಮಾಜದವರಲ್ಲವೇ? ಎಂದು ಜೋಶಿ ಪ್ರಶ್ನಿಸಿದರು.

ಯುಪಿಎ ಕಾಲದಲ್ಲಿ ಸತತ ಭ್ರಷ್ಟಾಚಾರ, ಹಗರಣ ಮಾಡಿಕೊಂಡೇ ಬಂದವರು ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಸ್ವತಃ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಬೇಲ್‌ ಮೇಲಿದ್ದಾರೆ. ಸತತವಾಗಿ ಸೋತ ರಾಹುಲ್‌ ಅಂಕಲ್‌, 25 ವರ್ಷಗಳಿಂದ ನಿರಂತರವಾಗಿ ಗೆಲ್ಲುತ್ತಾ ಬಂದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಜೋಶಿ ಕಿಡಿಕಾರಿದರು.

ರಾಹುಲ್‌ ಗಾಂಧಿಗೆ ನೂರು ಸೋಲು

ಮುಖ್ಯುಮಂತ್ರಿ ಡಿ.ಕೆ. ಶಿವಕುಮಾರ್‌ ನೂರು ದಿನ ಆಡಳಿತದ ಸಂಭ್ರಮದಲ್ಲಿದ್ದಾರೆ. ಆದರೆ, ತಮ್ಮ ನಾಯಕ ರಾಹುಲ್‌ ಗಾಂಧಿ ತುಷ್ಟೀಕರಣದ ಪರಮಾವಧಿಯಿಂದಾಗಿ ನೂರನೇ ಚುನಾವಣೆ ಸೋಲುವವರಿದ್ದಾರೆ ಎಂದು ಚಾಟಿ ಬೀಸಿದರು.

ವಂದೇ ಮಾತರಂ ಅಲ್ಲೂ ತುಷ್ಟೀಕರಣ

ʼವಂದೇ ಮಾತರಂʼ ಗೀತೆಯ ಸಂಪೂರ್ಣ ಆರು ನುಡಿ ಹೇಳಲು ಒಮರ್‌ ಅಬ್ದುಲ್ಲಾ ಸರ್ಕಾರ ಸಿದ್ಧವಿದ್ದರೆ, ರಾಹುಲ್‌ ಗಾಂಧಿ ವಿರೋಧಿಸುತ್ತಿದ್ದಾರೆ. ಇದರಲ್ಲೂ ಇವರ ತುಷ್ಟೀಕರಣ ನೀತಿ ತೂರಿಸುತ್ತಿದ್ದಾರೆ ಎಂದು ಆರೋಪಿಸಿದರು ಜೋಶಿ.

ಹಿಂದೆ ವಂದೇ ಮಾತರಂ ಗೀತೆ ತುಂಡರಿಸಿ ದೇಶವನ್ನು ತುಂಡರಿಸಿದ್ದಾರೆ. ಈಗಲೂ ಅದನ್ನೇ ಮಾಡಲು ಹೊರಟಿದ್ದಾರೆ. ಆದರೆ, 2028ರ ಚುನಾವಣೆಯಲ್ಲಿ ಜನ ನಿಮ್ಮ ಆಡಳಿತವನ್ನೇ ಕತ್ತರಿಸಿ ಹಾಕುತ್ತಾರೆ ಎಂದ ಜೋಶಿ ಅವರು, ರೇವಂತ ರೆಡ್ಡಿ, ರಾಯರೆಡ್ಡಿ ಅವರು ಕಾಂಗ್ರೆಸ್‌ ಪಕ್ಷ ಮುಸ್ಲಿಂರಿಂದ ಮುಸ್ಲಿಂರಿಗಾಗೇ ಇರೋ ಪಕ್ಷ ಎನ್ನುವುದನ್ನು ಸಾರಿ ಹೇಳಿದ್ದಾರೆ ಎಂದು ಆರೋಪಿಸಿದರು.

BJP Padayatra: ʼಬಳ್ಳಾರಿ ಚಲೋ' ಪಾದಯಾತ್ರೆ ಸಮಾರೋಪ; ಬಿಜೆಪಿಯಿಂದ 16 ನಿರ್ಣಯಗಳು

ಬರ ಅಧ್ಯಯನ ವಿಮಾನದಲ್ಲಿ ಮಾಡ್ಬೇಕಿತ್ತು!

ರಾಜ್ಯದಲ್ಲಿ ಬರ ಪರಿಸ್ಥಿತಿ ಬಗ್ಗೆ ಹೆಲಿಕಾಪ್ಟರ್‌ ಅಲ್ಲಿ ಅಧ್ಯಯನ ಮಾಡಿದ್ದಾರೆ. ಹೆಲಿಕಾಪ್ಟರ್‌ ಅಲ್ಲ; ವಿಮಾನದಲ್ಲಿ ಮಾಡಬೇಕಿತ್ತು ಎಂದು ವ್ಯಂಗ್ಯವಾಡಿದ ಜೋಶಿ, ಭೌಗೋಳಿಕವಾಗಿ ಸಮೀಕ್ಷೆ ನಡೆಸದೆ, ಆಗಸದಲ್ಲೇ ಬರಿಗಣ್ಣು ಹಾಯಿಸಿದ್ದು, ಇದೀಗ ಬರ ಅಧ್ಯಯನದ ಮತ್ತೊಂದು ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಟೀಕಿಸಿದರು.