ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮದುವೆ ದಿನವೇ ಅಂಗಾಂಗ ದಾನ; ಅಥಣಿಯಲ್ಲೊಂದು‌ ಮಾದರಿ ಜೋಡಿ

Belagavi News: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸಿದ್ದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ (ಫೆಬ್ರವರಿ 11) ನಡೆದ ವಿವಾಹ ಸಮಾರಂಭದಲ್ಲಿ ನವಜೋಡಿಯು ದೇಹ ದಾನ ಮಾಡುವ ಮೂಲಕ ಮಾದರಿ ಎನಿಸಿಕೊಂಡಿದೆ. ವಾಗೇಶ್ ಹಾಗೂ ಕೋಮಲ್ ಅಂಗಾಂಗ ಮಾಡಿದವರು.

ಮದುವೆ ದಿನವೇ ಅಂಗಾಂಗ ದಾನ ಮಾಡಿದ ನವಜೋಡಿ.

ಅಥಣಿ, ಫೆ. 12: ತಮ್ಮ ಮದುವೆಯ ದಿನವೇ ದೇಹ ದಾನ ಮಾಡುವ ಮೂಲಕ ಜನರಲ್ಲಿ ದೇಹದಾನದ ಮಹತ್ವ ತಿಳಿಸಿಕೊಡುವ ಮಹತ್ವ ಕೆಲಸವನ್ನು ನವಜೋಡಿ ಮಾಡಿದೆ. ಬೆಳಗಾವಿ ಜಿಲ್ಲೆಯ (Belagavi News) ಅಥಣಿ ಪಟ್ಟಣದ ಸಿದ್ದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಅಥಣಿ ತಾಲೂಕಿನ ಕೊಕಟನೂರು ಗ್ರಾಮದ ವಾಗೇಶ್‌ ಕಾಡದೇವರಮಠ ಮತ್ತು ಕೋಮಲ ಹಿರೇಮಠ ಇವರ ವಿವಾಹ ಸಮಾರಂಭ ಬುಧವಾರ (ಫೆಬ್ರವರಿ 11) ಸಂಪ್ರದಾಯದಂತೆ ಜರುಗಿತು.

ಈ ವೇಳೆ ವಾಗೇಶ್ ಹಾಗೂ ಕೋಮಲ್ ಇಬ್ಬರೂ ಅಂಗಾಂಗ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ, ಸಾವಯುವ ಕೃಷಿ, ಸ್ವದೇಶಿ ವಸ್ತುಗಳ ಬಳಕೆಗೆ ಆದ್ಯತೆ ನೀಡಬೇಕು ಎಂಬ ಸಮಾಜಮುಖಿ ಚಿಂತನೆಯನ್ನೂ ವ್ಯಕ್ತಪಡಿಸಿದ್ದಾರೆ‌.‌

ಈ ರೋಡ್‌ನಲ್ಲಿ ಸಂಚರಿಸಿದ್ರೆ ಸಾಕು ತಾನಾಗೇ ಮ್ಯೂಸಿಕ್‌ ನುಡಿಸುತ್ತೆ! ಏನಿದರ ವಿಶೇಷತೆ?

ಇದೊಂದು ವಿಶೇಷ ಮದುವೆ, ಸಾಮಾಜಿಕ ಸೇವೆಯ ಪ್ರತಿಜ್ಞೆ ಮೂಲಕ ಅನೇಕ ಜೋಡಿಗಳಿಗೆ ಪ್ರೇರಣೆಯಾದ ಮದುವೆ. ಮದುವೆಯ ಸಂಪ್ರದಾಯದ ವಿಧಿವಿಧಾನಗಳ ಮಧ್ಯ ಸಪ್ತಪದಿ ತುಳಿದ ನವಜೋಡಿ ಸಾರ್ವಜನಿಕವಾಗಿ ತಮ್ಮ ಅಂಗಾಂಗ ದಾನದ ಪ್ರತಿಜ್ಞೆ ಮಾಡಿ ಗಮನ ಸೆಳೆಯಿತು.

ಮದುಮಗ ವಾಗೀಶ ಗುರುಮೂರ್ತಯ್ಯ ಕಾಡದೇವರಮಠ ಮಾತನಾಡಿ, 'ʼಗೋವಿಗೆ ವೀರಶೈವರಲ್ಲಿ ಉನ್ನತ ಸ್ಥಾನವನ್ನು ನೀಡಲಾಗಿದೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ಗೋವಿಗೆ ಮೊದಲನೆ ಆದ್ಯತೆ. ದಿನದಿಂದ ದಿನಕ್ಕೆ ಗೋವುಗಳ ಸಂಖ್ಯೆ ಕಡಿಮೆ ಆಗುತ್ತಿರುವ ಜತೆಗೆ ಈಗಿನ ಪೀಳಿಗೆಗೆ ಗೋವಿನ ಮಹತ್ವ ಗೊತಿಲ್ಲ. ಹೀಗಾಗಿ, ಸಮಾಜದಲ್ಲಿ ದೇಶಿ ಆಕಳು ರಕ್ಷಣೆ, ಅದರ ಉಪಯೋಗದ ಬಗ್ಗೆ ಮದುವೆಯಲ್ಲಿ ಜಾಗೃತಿ ಮೂಡಿಸಲಾಯಿತು'ʼ ಎಂದರು.

'ʼಭಾರತ ಸರ್ಕಾರದ ಆರೋಗ್ಯ ಇಲಾಖೆ ವೆಬ್ ಸೈಟ್​ನಲ್ಲಿ ಅಂಗಾಂಗ ದಾನದ ಒಪ್ಪಿಗೆ ಪತ್ರಕ್ಕೆ ಸಹಿಯನ್ನು ಹಾಕಿದ್ದೇವೆ. ನಮ್ಮ ಮನೆಯ ಹಿರಿಯರು ಹಾಗೂ ಗುರುಗಳ ಮಾರ್ಗದರ್ಶನದಂತೆ ನಾವು ಅಂಗಾಂಗ ದಾನಕ್ಕೆ ಒಪ್ಪಿದ್ದೇವೆ. ನಾವಿಬ್ಬರೂ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆಂಬ ನಿಟ್ಟಿನಲ್ಲಿ ಈ ಕಾರ್ಯವನ್ನು ಮಾಡಿದ್ದೇವೆ. ನಾವು ಎಲ್ಲ ಸುತ್ತೋಲೆಗಳನ್ನು ದಾಟಿ ಅಂಗಾಂಗ ದಾನಕ್ಕೆ ಸಹಿಯನ್ನು ಹಾಕಿದ್ದೇವೆ'ʼ ಎಂದು ತಿಳಿಸಿದರು.

image

ಎಷ್ಟೋ ಜನರ ಬಾಳಿಗೆ ನಾವು ಬೆಳಕಾಗುವ ನಿಟ್ಟಿನಲ್ಲಿ ಈ ಕಾರ್ಯಕ್ಕೆ ಸಹಿ ಮಾಡಿದ್ದೇವೆ. ಮದುವೆ ದಿನವೇ ಈ ಪುಣ್ಯ ಕಾರ್ಯ ಮಾಡಿದರೆ ಅದು ಸದಾ ನೆನಪಿನಲ್ಲಿ ಉಳಿಯುತ್ತದೆ. ಬೇರೆಯವರಿಗೂ ಇದು ಪ್ರೇರಣೆಯಾಗಲಿ ಎಂದು ಈ ನಿರ್ಧಾರ ಮಾಡಿದ್ದೇವೆ.

ವಾಗೀಶ ಗುರುಮೂರ್ತಯ್ಯ ಕಾಡದೇವರಮಠ, ವರ