ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Belagavi News: ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ 9 ಜನರ ವಿರುದ್ಧ ಪ್ರಕರಣ ದಾಖಲು

Belagavi News: ಬೆಳಗಾವಿ ತಾಲೂಕಿನ ಕೊಂಡುಸಕೊಪ್ಪ ಗ್ರಾಮದಲ್ಲಿ ವೈಯಕ್ತಿಕ ಕಾರಣ ಹಾಗೂ ದೇವಸ್ಥಾನದ ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬವೊಂದನ್ನು ಸಾಮಾಜಿಕವಾಗಿ ಬಹಿಷ್ಕಾರ ಹಾಕಿದ ಘಟನೆಗೆ ಸಂಬಂಧಿಸಿದಂತೆ 9 ಜನರ ಮೇಲೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಳಗಾವಿ, ಮೇ 1: ಬೆಳಗಾವಿ ತಾಲೂಕಿನ ಕೊಂಡುಸಕೊಪ್ಪ ಗ್ರಾಮದಲ್ಲಿ (Belagavi News) ವೈಯಕ್ತಿಕ ಕಾರಣ ಹಾಗೂ ದೇವಸ್ಥಾನದ ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬವೊಂದನ್ನು ಸಾಮಾಜಿಕವಾಗಿ ಬಹಿಷ್ಕಾರ ಹಾಕಿದ ಘಟನೆಗೆ ಸಂಬಂಧಿಸಿದಂತೆ 9 ಜನರ ಮೇಲೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನರಸೋಬಾ ಕರೆಪ್ಪ ಸಾಂಬ್ರೇಕರ ಕುಟುಂಬದೊಂದಿಗೆ ಯಾರೂ ಮಾತನಾಡಬಾರದು ಎಂದು ಗ್ರಾಮ ಪಂಚಾಯತ್‌ನ ಪಂಚರು ಬಹಿಷ್ಕಾರ ಹಾಕಿದ ಆರೋಪ ಕೇಳಿಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೀರೆ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಒಟ್ಟು 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮಲ್ಲಪ್ಪ ಸಾಂಬ್ರೇಕರ, ವಿಠ್ಠಲ ಸಾಂಬ್ರೇಕರ, ಬಾಗಣ್ಣ ಸಾಂಬ್ರೇಕರ, ರಮೇಶ್ ಸಾಂಬ್ರೇಕರ, ಮಾಳಿಂಗ ಸಾಂಬ್ರೇಕರ, ಗಂಗಪ್ಪ ಸಾಂಬ್ರೇಕರ, ವೈಜು ಸಾಂಬ್ರೇಕರ, ಪಿರಾಜಿ ಸಾಂಬ್ರೇಕರ ಹಾಗೂ ಯಲ್ಲಪ್ಪ ಸಾಂಬ್ರೇಕರ ಮೇಲೆ ರೇಣುಕಾ ಸಾಂಬ್ರೇಕರ್ ದೂರು ದಾಖಲಿಸಿದ್ದಾರೆ.

ನಿಧಿಗಾಗಿ ಹೆತ್ತ ತಾಯಿಯನ್ನೇ ಬಲಿ ಕೊಡಲು ಮುಂದಾಗಿದ್ದ ಪುತ್ರ ಅರೆಸ್ಟ್

ನರಸೋಬಾ ಕುಟುಂಬದವರೊಂದಿಗೆ ಗ್ರಾಮಸ್ಥರು ಮಾತನಾಡಿದರೆ 5,000 ದಂಡ ವಿಧಿಸುವುದಾಗಿ ಹಾಗೂ ಮಾತನಾಡಿದವರ ಬಗ್ಗೆ ಮಾಹಿತಿ ನೀಡಿದವರಿಗೆ 1,000 ಬಹುಮಾನ ನೀಡುವುದಾಗಿ ಪಂಚರು ಘೋಷಣೆ ಮಾಡಿದ್ದರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ರೇಣುಕಾ ಅವರು ಕಳೆದ ತಿಂಗಳ 6ರಂದು ದೂರು ನೀಡಿದ್ದು, ಅದರ ಅನ್ವಯ ಇದೀಗ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಹೀರೆ ಬಾಗೇವಾಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ದಲಿತರ ಮನೆಯಲ್ಲಿ ಊಟ ಮಾಡಿದ ಯುವಕ; ಕುಟುಂಬಕ್ಕೆ ಬಹಿಷ್ಕಾರ

ಭೋಪಾಲ್‌: ದಲಿತ ಕುಟುಂಬವೊಂದು ನಡೆಸಿದ ತಿಥಿ ಕಾರ್ಯಕ್ರಮದಲ್ಲಿ ಊಟ ಮಾಡಿದಕ್ಕೆ ಯುವಕ ಹಾಗೂ ಆತನ ಕುಟುಂಬವನ್ನು ಗ್ರಾಮದಿಂದ ಬಹಿಷ್ಕರಿಸಿದ ಘಟನೆ ಕೆಲವು ದಿನಗಳ ಹಿಂದೆ ಮಧ್ಯ ಪ್ರದೇಶ ಉದಯಪುರದ ಪಿಪಾರಿಯಾ ಪುರಿಯಾ ಗ್ರಾಮದಲ್ಲಿ ನಡೆದಿತ್ತು. ಭರತ್ ಸಿಂಗ್ ಧಕಾಡ್ ಎಂಬಾತ ದಲಿತ ಕುಟುಂಬವೊಂದು ನಡೆಸಿದ ತಿಥಿ ಸಮಾರಂಭದಲ್ಲಿ ಊಟ ಮಾಡಿದ್ದಕ್ಕಾಗಿ ತಮ್ಮ ಕುಟುಂಬವನ್ನು ಗ್ರಾಮ ಪಂಚಾಯತ್ ಬಹಿಷ್ಕರಿಸಲಾಗಿತ್ತು ಎಂದು ಆರೋಪಿಸಲಾಗಿತ್ತು. ದಲಿತ ವ್ಯಕ್ತಿಯ ಮನೆಯಲ್ಲಿ ಊಟ ಮಾಡಿದ್ದಕ್ಕಾಗಿ ಗ್ರಾಮ ಪಂಚಾಯತ್ ಮೇಲ್ಜಾತಿಯ ಸಮುದಾಯದ ಮೂವರು ಸದಸ್ಯರಿಗೆ ಸಾಮಾಜಿಕವಾಗಿ ಬಹಿಷ್ಕಾರ ಹಾಕಿತ್ತು ಎನ್ನಲಾಗಿದೆ. ಈ ಸುದ್ದಿ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.