ಬೆಳಗಾವಿ: ಹಸಿವಿನಿಂದ ಬಳಲುತ್ತಿದ್ದ ಮಗು ತಾಯಿಯ ಮೃತದೇಹದ ಮುಂದೆ ಎದೆಹಾಲಿಗೆ ಅಂಗಲಾಚುತ್ತಿತ್ತು. ಆ ಪುಟ್ಟ ಮಗುವಿಗೆ ಕಲ್ಪನೆ ಇರಲಿಲ್ಲ. ತನ್ನ ತಾಯಿ ದುರುಳ ತಂದೆಯ ಕೋಪಕ್ಕೆ ಬಲಿಯಾಗಿದ್ದಾಳೆ ಎಂದು. ಹೌದು, ಇಂತಹ ಅಮಾನವೀಯ ಘಟನೆ ನಡೆದಿದ್ದು, ಬೆಳಗಾವಿ (Belagavi News) ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ. ಪ್ರತಿದಿನ ಮದ್ಯ ಸೇವಿಸಿ ಪತ್ನಿಯ ಜತೆ ಜಗಳ ಮಾಡುತ್ತಿದ್ದ ಆರೋಪಿ ಬಾಲಾಜಿ ಕಬಲಿ (35) ಮಹಾರಾಷ್ಟ್ರದ ಯಾವತ್ಮಾಳ್ ಜಿಲ್ಲೆಯವನು. ಕುಡಿದ ಅಮಲಿನಲ್ಲಿ ಪತ್ನಿ ಮೀರಾಬಾಯಿ ಕಬಲಿ (25) ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಇದೆಲ್ಲದರ ಪರಿವೇ ಇಲ್ಲದ ಪುಟ್ಟ ಕಂದಮ್ಮ ತಾಯಿಯ ಮೃತದೇಹದ ಮುಂದೆ ಕುಳಿತು ಎದೆಹಾಲಿಗೆ ಹಾತೊರೆಯುತ್ತಿದ್ದ ಘಟನೆ ಹೃದಯವಿದ್ರಾವಕವಾಗಿತ್ತು.
ಮಹಾರಾಷ್ಟ್ರದಿಂದ ಕಬ್ಬು ಕಟಾವು ಮಾಡಲು ಜಿಲ್ಲೆಯ ಗೋಕಾಕ್ ತಾಲೂಕಿನ ಉಪ್ಪಾರಟ್ಟಿ ಗ್ರಾಮದ ಮಮದಾಪೂರ ರಸ್ತೆಯಲ್ಲಿ ತಾತ್ಕಾಲಿಕ ಟೆಂಟ್ ನಲ್ಲಿ ವಾಸವಿದ್ದರು. ಮಂಗಳವಾರ ಕುಡಿದು ಪತ್ನಿ ಜೊತೆ ಜಗಳ ಮಾಡಿದ್ದಾನೆ. ಈ ಸಂದರ್ಭದಲ್ಲಿ ಪತ್ನಿ ದುಡಿದ ಹಣ ಕುಡಿಯಲು ಕೊಡುವಂತೆ ಆಗ್ರಹಿಸಿದ್ದಾನೆ. ಈ ಸಂದರ್ಭದಲ್ಲಿ ಪತ್ನಿ ವಿರೋಧ ಮಾಡಿದ್ದಕ್ಕೆ ಆರೋಪಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ್ ಘಟನೆ ಕುರಿತು ಈಗಾಗಲೇ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಮೃತ ಮಹಿಳೆಗೆ ಇಬ್ಬರು ಮಕ್ಕಳಿದ್ದು ಅವುಗಳನ್ನು ಆಕೆಯ ತವರುಮನೆಯವರಿಗೆ ಒಪ್ಪಿಸಲಾಗಿದೆ. ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದರು.
ಈ ಸುದ್ದಿಯನ್ನೂ ಓದಿ | Theft case: ಚಿನ್ನಗಳ್ಳನ ಪ್ರೇಮಕಥೆ; ಪ್ರೇಯಸಿಗೆ 3 ಕೋಟಿ ಮೌಲ್ಯದ ಮನೆ ಗಿಫ್ಟ್ ಕೊಟ್ಟ ಹೈಟೆಕ್ ಕಳ್ಳ!
ಅನೈತಿಕ ಸಂಬಂಧ ಶಂಕೆ; ಪತ್ನಿಯನ್ನು ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಂದ ಪತಿ!

ಬೆಂಗಳೂರು: ಅನೈತಿಕ ಸಂಬಂಧ ಶಂಕೆಯಿಂದ ನಡುರಸ್ತೆಯಲ್ಲೇ ಪತ್ನಿಯನ್ನು ಪತಿ ಏಳೆಂಟು ಬಾರಿ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ (Murder Case) ಮಾಡಿರುವ ಘಟನೆ ಆನೇಕಲ್‌ನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ನಡೆದಿದೆ.
ಶ್ರೀಗಂಗಾಗೆ (29) ಕೊಲೆಯಾದವರು. ಮೋಹನ್ ರಾಜ್ (32) ಆರೋಪಿ. ಬೆಳಗ್ಗೆ ಮಗನನ್ನು ಶಾಲೆಗೆ ಬಿಡಲು ಬಂದಿದ್ದ ಪತ್ನಿಯನ್ನು ಮೋಹನ್ ರಾಜ್ ರಸ್ತೆ ಮಧ್ಯೆ ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ದಂಪತಿಗೆ 7 ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ ಶ್ರೀಗಂಗಾ ತನ್ನ ಸ್ನೇಹಿತನ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಶಂಕೆಯಿಂದಾಗಿ ಮೋಹನ್ ರಾಜ್ ಪದೇ ಪದೇ ಜಗಳ ತೆಗೆಯುತ್ತಿದ್ದ. ಹೀಗಾಗಿ ಶ್ರೀಗಂಗೆ 8 ತಿಂಗಳಿನಿಂದ ಪತಿಯಿಂದ ದೂರವಾಗಿದ್ದಳು. ಆದರೆ ನಿನ್ನೆ ರಾತ್ರಿ ಮೋಹನ್ ರಾಜ್ ತನ್ನ ಮಗುವನ್ನು ನೋಡಲು ಮನೆಗೆ ಬಂದಿದ್ದ. ಆಗ ಕೂಡ ಇಬ್ಬರ ಮಧ್ಯೆ ಜಗಳವಾಗಿತ್ತು.
ಈ ಸುದ್ದಿಯನ್ನೂ ಓದಿ | Assault Case: ಹೋಟೆಲ್‌ನಲ್ಲಿ ಕನ್ನಡದಲ್ಲಿ ಮಾತಾಡಿ ಎಂದಿದ್ದಕ್ಕೆ ಗ್ರಾಹಕನ ಮೇಲೆ ಹಿಂದಿ ಭಾಷಿಕರ ಹಲ್ಲೆ!
ಬುಧವಾರ ಪತ್ನಿಯನ್ನು ಕೊಲ್ಲಲೇಬೇಕೆಂಬ ಉದ್ದೇಶದಿಂದ ಮೋಹನ್ ರಾಜ್ ಚೂರಿ ಸಮೇತ ಹೋಗಿದ್ದಿ, ಪತ್ನಿಯ ಮೇಲೆ ಹಲ್ಲೆ ಮಾಡಿ ಕೊಂದಿದ್ದಾನೆ. ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಶ್ರೀಗಂಗಾಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಹೆಬ್ಬಗೋಡಿ ಪೊಲೀಸರು ಆರೋಪಿ ಮೋಹನ್ ರಾಜ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.