ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕನ್ನಡ ನಾಡಿನ ಬಗ್ಗೆ ಅವಹೇಳನಕಾರಿ ಹೇಳಿಕೆ; ಎಂಇಎಸ್‌ ಮುಖಂಡ ಶುಭಂ ಶೆಳಕೆ ಗಡಿಪಾರಿಗೆ ಕರವೇ ಒತ್ತಾಯ

Savadatti News: ಕನ್ನಡ ನಾಡಿನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಎಂಇಎಸ್‌ ಮುಖಂಡ ಶುಭಂ ವಿಕ್ರಾಂತ್‌ ಶೆಳಕೆಯನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಗ್ರೇಡ್ 2 ತಹಸೀಲ್ದಾರ್ ಎಂ.ಎನ್. ಮಠದ ಅವರ ಮೂಲಕ ಗೃಹ ಸಚಿವರಿಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕದಿಂದ ಮನವಿ ಸಲ್ಲಿಸಲಾಗಿದೆ.

ಶುಭಂ ಶೆಳಕೆ ಗಡಿಪಾರಿಗೆ ಆಗ್ರಹಿಸಿ ಸವದತ್ತಿ ತಹಸೀಲ್ದಾರ್‌ಗೆ ಕರವೇಯಿಂದ ಮನವಿ ಸಲ್ಲಿಕೆ.

ಸವದತ್ತಿ, ಜ.13: ಕನ್ನಡ ನಾಡಿನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಎಂಇಎಸ್‌ ಮುಖಂಡ ಶುಭಂ ವಿಕ್ರಾಂತ್ ಶೆಳಕೆಯನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಗ್ರೇಡ್ 2 ತಹಸೀಲ್ದಾರ್ ಎಂ.ಎನ್. ಮಠದ ಅವರು ಮೂಲಕ ಗೃಹ ಸಚಿವರಿಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕದಿಂದ (Savadatti News) ಮನವಿ ಸಲ್ಲಿಸಲಾಗಿದೆ.

ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಗಂಗಪ್ಪ ಇನಾಮತಿ ಮಾತನಾಡಿ, ಕನ್ನಡ, ನಾಡು, ನುಡಿ, ನೆಲ, ಜಲ, ಭಾಷೆ ಕುರಿತು ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಖಂಡನಾರ್ಹ. ಬೆಳಗಾವಿಯಲ್ಲಿ ಶುಭಂ ವಿಕ್ರಾಂತ ಶೆಳಕೆ ಕುಮ್ಮಕ್ಕಿನಿಂದ ಎಂ.ಇ.ಎಸ್‌ನ ಪುಂಡರು ಕನ್ನಡ ನಾಡು, ನುಡಿ ಹಾಗೂ ಕನ್ನಡ ಹೋರಾಟಗಾರರ ವಿಚಾರದಲ್ಲಿ ಪ್ರಚೋದನೆ ಹೇಳಿಕೆ ನೀಡಿಕೊಂಡು ಕನ್ನಡ ಮತ್ತು ಮರಾಠಿ ಜನರಲ್ಲಿ ದ್ವೇಷದ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇಂತಹವರ ಮೇಲೆ ರೌಡಿ ಶೀಟರ್ ಪ್ರಕರಣ ದಾಖಲು ಮಾಡಿ, ಕರ್ನಾಟಕ ರಾಜ್ಯದಿಂದ ಗಡಿಪಾರು ಮಾಡಬೇಕು. ಇಲ್ಲವಾದರೆ ಇಡೀ ರಾಜ್ಯಾದಂತ ಕರ್ನಾಟಕ ರಕ್ಷಣಾ ವೇದಿಕೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಾಮಾಜಿಕ ಹೋರಾಟಗಾರ ಮಲ್ಲು ಬೀಳಗಿ ಮಾತನಾಡಿ, ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗೆ ಅವಹೇಳನ ಮಾಡುವವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

Tumkur News: ಸರ್ಕಾರಿ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನೀಡಿ: ರಾಜ್ಯಾಧ್ಯಕ್ಷ ಸುಧಾಕರ್ ಆಗ್ರಹ

ಈ ಸಂದರ್ಭದಲ್ಲಿ ಮಂಜು ಚಿಕ್ಕಣ್ಣವರ, ಈರಪ್ಪ ಸೂಳೆಬಾವಿ, ಪ್ರಕಾಶ್ ಕತಲಿ, ಶಿವಾನಂದ ಮಾಯನ್ನವರ, ವಿಠಲ ಪಾಟೀಲ, ಈರಪ್ಪ ಸವದತ್ತಿ, ಪ್ರಕಾಶ್ ಕಮತರ ಸೇರಿ ಇತರರು ಇದ್ದರು.