ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Belagavi News: ಇನ್ಶೂರೆನ್ಸ್‌ ಹಣದ ಆಸೆಗಾಗಿ ಚಿನ್ನದಂಗಡಿಯಲ್ಲಿ ಕಳ್ಳತನದ ನಾಟಕ; ಮಾಲೀಕ ಅರೆಸ್ಟ್‌

ಬೆಳಗಾವಿಯ ಚಿನ್ನದಂಗಡಿಯಲ್ಲಿ ಕಳ್ಳತನವಾಗಿದೆ ಎಂದು ಮಾಲೀಕ ದೂರು ನೀಡಿದ್ದರು. 65.95 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ನಗದು ಹಣ ಕಳ್ಳತನವಾಗಿದೆ ಎಂದು ಖಡೇಬಜಾರ್ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ಅಂಗಡಿ ಮಾಲೀಕನೇ ಆರೋಪಿ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಬೆಳಗಾವಿ: ಇನ್ಶೂರೆನ್ಸ್‌ ಹಣದ ಆಸೆಗಾಗಿ ಚಿನ್ನದಂಗಡಿಗೆ ತಾನೇ ಕನ್ನ ಹಾಕಿ ಕಳ್ಳತನದ ಕತೆ ಕಟ್ಟಿದ್ದ ಅಂಗಡಿ ಮಾಲೀಕನನ್ನು ಬೆಳಗಾವಿಯ (Belagavi) ಖಡೇಬಜಾರ್ ಪೊಲೀಸರು ಬಂಧಿಸಿದ್ದಾರೆ. ವಿ.ಪಿ.ವೇರ್ಣೇಕರ್ ಅಂಡ್ ಸನ್ಸ್ ಚಿನ್ನದಂಗಡಿ ಮಾಲೀಕ ಕೃಷ್ಣಾನಂದ ವೇರ್ಣೇಕರ್‌ ಬಂಧಿತ ಆರೋಪಿ.

ಈತ 65.95 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ನಗದು ಹಣ ಕಳ್ಳತನವಾಗಿದೆ ಎಂದು ಖಡೇಬಜಾರ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದ. ಈ ಪ್ರಕರಣದ ತನಿಖೆಗೆ ಇಳಿದ ಪೊಲೀಸರು ದೂರು ನೀಡಿದ ಅಂಗಡಿ ಮಾಲೀಕನೇ ಆರೋಪಿ ಎಂದು ತಿಳಿದು ಬೆಚ್ಚಿಬಿದ್ದಿದ್ದಾರೆ.

ಕದ್ದ ಹಣ, ಚಿನ್ನಾಭರಣವನ್ನು ಆರೋಪಿ ತನ್ನದೇ ಸ್ಕೂಟಿ ಡಿಕ್ಕಿಯಲ್ಲಿ ಬಚ್ಚಿಟ್ಟಿದ್ದ ಎಂದು ತಿಳಿದು ಬಂದಿದೆ. ಆರೋಪಿಯಿಂದ 45,000 ರೂ. ಮೌಲ್ಯದ ಬೈಕ್, 62,60,990 ರೂ. ಮೌಲ್ಯದ 519.8 ಗ್ರಾಂ ಚಿನ್ನಾಭರಣ, 6000 ರೂ. ಮೌಲ್ಯದ 31 ಗ್ರಾಂ ಬೆಳ್ಳಿ ಆಭರಣ, 2,83010 ರೂ. ನಗದು ಹಣ ಸೇರಿ ಒಟ್ಟು 65.95 ಲಕ್ಷ ರೂ. ಮೌಲ್ಯದ ಸ್ವತ್ತನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ; ಗಂಭೀರ ಗಾಯ

ರಾಯಚೂರು: ಮನೆಮುಂದೆ ಆಟವಾಡುತ್ತಿದ್ದ ವೇಳೆ ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರಿನ (Raichur) ಮಲಿಯಾಬಾದ್ ಗ್ರಾಮದಲ್ಲಿ ನಡೆದಿದೆ. 4 ವರ್ಷದ ಬಾಲಕ ವೇಣುಗೋಪಾಲ್ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ.

ಶಿವಾಜಿನಗರದಲ್ಲಿ ಫುಟ್‌ಪಾತ್ ತೆರವು ಮಾಡಲು ಹೋದ ಜಿಬಿಎ ಅಧಿಕಾರಿಗಳ ಮೇಲೆ ಭೀಕರ ಹಲ್ಲೆ!

ದಾಳಿ ವೇಳೆ ನಾಯಿಗಳು ಬಾಲಕನ ತಲೆಯ ಭಾಗವನ್ನು ಕಚ್ಚಿದೆ. ಇದರಿಂದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಬಾಲಕನನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.