ಬೆಂಗಳೂರು: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಟಿ-20 ವಿಶ್ವಕಪ್ ಫೈನಲ್‌ನಲ್ಲಿ (T20 World Cup final) ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ (India vs New Zealand) ಜಯಿಸಲಿ ಎಂದು ಪ್ರಾರ್ಥಿಸಿ ಬೆಳಗಾವಿ, ಮೈಸೂರು ಸೇರಿ ರಾಜ್ಯದ ವಿವಿಧೆಡೆ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬೆಳಗಾವಿ ಗಣೇಶ ದೇವಸ್ಥಾನದಲ್ಲಿ ಕರವೇ ಪೂಜೆ

ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದ ಬಳಿಯ ಗಣೇಶ ದೇವಸ್ಥಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ಕಾರ್ಯಕರ್ತರು, ಜಿಲ್ಲಾಧ್ಯಕ್ಷರಾದ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಇಂದು ಭಾರತ ತಂಡದ ಭಾವಚಿತ್ರ ಹಿಡಿದು ಗಣಪತಿ ದೇವರಿಗೆ ಪೂಜೆ ಸಲ್ಲಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೀಪಕ ಗುಡಗನಟ್ಟಿ ಅವರು, ಭಾರತ ಗೆಲುವಿಗಾಗಿ ಗಣಪತಿ ದೇವರಿಗೆ ಪೂಜೆ ಸಲ್ಲಿಸಿ ಶುಭ ಕೋರಲಾಗಿದೆ. ಭಾರತ ಗೆದ್ದು ಟಿ20 ವಿಶ್ವಕಪ್ ಮುಡಿಗೇರಿಸಿಕೊಳ್ಳಲಿದೆ. ನಮ್ಮಲ್ಲಿ ಅತ್ಯುತ್ತಮ ಆಟಗಾರರು ಇದ್ದಾರೆ, ಸೂರ್ಯಕುಮಾರ್ ಯಾದವ್ ತಂಡ ಬಹಳಷ್ಟು ಬಲಿಷ್ಠವಾಗಿದೆ. ಈ ಬಾರಿ ಎದುರಾಳಿಗಳನ್ನು ಕಟ್ಟಿಹಾಕುವುದು ಶತಸಿದ್ಧ, ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಸುರೇಶ ಗವನ್ನವರ , ಜಿಲ್ಲಾ ಉಪಾಧ್ಯಕ್ಷರಾದ ಗಣೇಶ್ ರೋಖಡೆ, ಮಹಾಂತೇಶ ರಣಗಟ್ಟಿಮಠ, ಹೊಳೆಪ್ಪ ಸುಲದಾಳ ಅಡಿವೆಪ್ಪ ತಳ್ಳೋರಿ, ಸತೀಶ್ ಗುಡದವರ, ಲೋಕೆಶ ರಾಠೋಡ್, ಅರ್ಜುನ ಕಾಂಬಳೆ, ಕಾರ್ತಿಕ್ ಪಾಟೀಲ ನಾಗರಾಜ ಲಕ್ಕಪ್ಪಗೊಳ , ಸಂತೋಷ ಚಕ್ರಯಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
ಮೈಸೂರಿನಲ್ಲಿ ನೂರೊಂದು ಗಣಪತಿ ದೇವಸ್ಥಾನದಲ್ಲಿ ಅಭಿಮಾನಿಗಳ ಪ್ರಾರ್ಥನೆ

ಮೈಸೂರು: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳು, ಮೈಸೂರಿನಲ್ಲಿ ನೂರೊಂದು ಗಣಪತಿ ದೇವಸ್ಥಾನದಲ್ಲಿ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ 101 ತೆಂಗಿನಕಾಯಿ ಒಡೆದು ದೇವರಿಗೆ ಪೂಜೆ ಸಲ್ಲಿಸಲಾಗಿದೆ.
T20 World Cup final: ಮೋದಿ ಫೈನಲ್ ಮ್ಯಾಚ್ ನೋಡಲು ಹೋಗದಿದ್ರೆ ಭಾರತ ಗೆಲ್ಲುತ್ತೆ ಎಂದ ಪ್ರಿಯಾಂಕ್ ಖರ್ಗೆ
ಗುಡ್ ಲಕ್ ಇಂಡಿಯಾ, ಬ್ಲ್ಯಾಕ್ ಕ್ಯಾಪ್ಸ್ ಮಣಿಸಿ ಗೆದ್ದು ಬರಲಿ ಬ್ಲೂ ಬಾಯ್ಸ್ ಎಂದು ತಮ್ಮ ಮುಖದ ಮೇಲೆ ತ್ರಿವರ್ಣ ಧ್ವಜದ ಬಣ್ಣ ಹಾಕಿಸಿ, ಘೋಷಣೆ ಕೂಗಿದರು. ಈ ವೇಳೆ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಉತ್ತಮ ಪ್ರದರ್ಶನ ನೀಡುವ ಮೂಲಕ ಜಯಗಳಿಸಲಿ ಎಂದು ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಶುಭ ಕೋರಿದರು.