ಬೆಳಗಾವಿ: ಮುಗಳಖೋಡ ಪಟ್ಟಣ ಸಮೀಪದ ಖಣದಾಳ ಗ್ರಾಮದ ಹುಲಿಕಾಂತೇಶ್ವರ ದೇವರ ಹುಂಡಿಯಲ್ಲಿ ವಿಚಿತ್ರ ಹರಕೆಯ ಚೀಟಿಯೊಂದು ಪತ್ತೆಯಾಗಿದೆ. ಕಾಗದದ ಮೇಲೆ 'ದೇವರೇ ನನ್ನ ಕಷ್ಟ ದೂರ ಮಾಡಿ, ಮುಂದಿನ ಜಾತ್ರೆಯೊಳಗೆ ನನ್ನ ಅತ್ತೆ ಸಾಯಲಿ' ಎಂಬ ಹರಕೆ ಬರೆದು, ಅದಕ್ಕೆ 100ರ ನೋಟು ಅಂಟಿಸಿ ಹುಂಡಿಗೆ ಹಾಕಿದ್ದಾರೆ. ಸದ್ಯ ಈ ಹರಕೆ ಚೀಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಖಣದಾಳದ ಹುಲಿಕಾಂತೇಶ್ವರ ಜಾತ್ರೆ ಫೆ.13ರಿಂದ 17ರವರೆಗೆ ಜರುಗಿದೆ. ಬಳಿಕ ದೇವಸ್ಥಾನ ಸಮಿತಿಯವರು ಹುಂಡಿ ಎಣಿಕೆ ಮಾಡಿದ್ದು, ಈ ವೇಳೆ ವಿಚಿತ್ರ ಹರಕೆಯ ಚೀಟಿ ಪತ್ತೆಯಾಗಿದೆ. ಇದನ್ನು ಸೊಸೆ ಬರೆದಿದ್ದಾಳೋ, ಅಳಿಯ ಬರೆದಿದ್ದಾನೋ ಗೊತ್ತಿಲ್ಲ. ಇದೇ ಮೊದಲಬಾರಿಗೆ ಇಂಥ ವಿಚಿತ್ರ ಮನಸ್ಥಿತಿಯ ಚೀಟಿ ಹುಂಡಿಯಲ್ಲಿ ಸಿಕ್ಕಿದೆ' ಎಂದು ಹುಲಿಕಾಂತೇಶ್ವರ ಕಮಿಟಿ ಅಧ್ಯಕ್ಷ ರಾಮಕೃಷ್ಣ ದಳವಾಯಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಭೀಕರ ಕೊಲೆ
ಬೆಳಗಾವಿ: ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಿರೇನಂದಿಹಳ್ಳಿ ಗ್ರಾಮದ ಕಲ್ಮೇಶ ಕೋಟಿ (50) ಹತ್ಯೆಯಾದ ವ್ಯಕ್ತಿ. ನಾಲ್ಕು ದಿನದ ಹಿಂದೆ ಮೆಕ್ಕೆಜೋಳದ ಗದ್ದೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಆದರೆ, ಹಣಕಾಸು, ಆಸ್ತಿ ಮತ್ತು ಹೆಣ್ಣಿನ ವಿಚಾರಕ್ಕೆ ಕೊಲೆ ಆಗಿರಬಹುದು. ಹೀಗಾಗಿ, ಈ ಮೂರು ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ. ಆದಷ್ಟು ಬೇಗನೇ ಆರೋಪಿಗಳನ್ನು ಬಂಧಿಸುತ್ತೇವೆ ಅಂತಾ ಪೊಲೀಸರು ತಿಳಿಸಿದ್ದಾರೆ.
ರಟ್ಟೀಹಳ್ಳಿಯಲ್ಲಿ ದನದ ಕೊಟ್ಟಿಗೆಗೆ ಬೆಂಕಿ; ಎಮ್ಮೆ, ಎರಡು ಎತ್ತು, ಮೂರು ಆಕಳು ಸಜೀವ ದಹನ
ಕಲ್ಮೇಶ ತುಮಕೂರಿನಲ್ಲಿ ಹೋಮ್ಕೇರ್ನಲ್ಲಿ ಕೆಲಸ ಮಾಡುತ್ತಿದ್ದರು. 15 ದಿನಗಳ ಹಿಂದೆಯಷ್ಟೇ ಗ್ರಾಮದಲ್ಲಿ ಜಾತ್ರೆ ಇದ್ದ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು. ಕಲ್ಮೇಶ ತಾಯಿ ಹಿರೇನಂದಿಹಳ್ಳಿಯಲ್ಲಿ ಇರುತ್ತಿದ್ದರು. ಇನ್ನು, ಹತ್ತು ವರ್ಷದ ಹಿಂದೆ ಪತ್ನಿ ಮತ್ತು ಮಗ ಕಲ್ಮೇಶ ಅವರನ್ನು ಬಿಟ್ಟು ಹೋಗಿದ್ದರು. ಈಗ ಕೊಲೆ ವಿಚಾರ ತಿಳಿದು ಪತ್ನಿ ಹಾಗೂ ಮಗ ಮರಳಿದ್ದರು.