ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Belagavi Blood Donation Camps: ನಾಳೆ ಬೆಳಗಾವಿ ಜಿಲ್ಲೆಯ 22 ಸ್ಥಳಗಳಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ; ಜಿಪಂನಿಂದ ಆಯೋಜನೆ

Belagavi News: ಶಿಕ್ಷಕರ ದಿನಾಚರಣೆ ಅಂಗವಾಗಿ ಸೆ.3 ರಂದು ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳ ಒಟ್ಟು 22 ಸ್ಥಳಗಳಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ “ಸ್ವಯಂ ಪ್ರೇರಿತ ರಕ್ತದಾನ ಶಿಬಿರ”ವನ್ನು ಆಯೋಜಿಸಲಾಗಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ.

ಬೆಳಗಾವಿ, ಸೆ.02: ಜಿಲ್ಲಾ ಪಂಚಾಯತ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಸೆ.3 ರಂದು ಜಿಲ್ಲೆಯ (Belagavi) ಎಲ್ಲ ತಾಲೂಕುಗಳ ಒಟ್ಟು 22 ಸ್ಥಳಗಳಲ್ಲಿ “ಸ್ವಯಂ ಪ್ರೇರಿತ ರಕ್ತದಾನ ಶಿಬಿರ”ವನ್ನು (Belagavi Blood Donation Camps) ಆಯೋಜಿಸಲಾಗಿದೆ. ಹೀಗಾಗಿ, ಸರ್ಕಾರಿ ನೌಕರರು ಸಿಬ್ಬಂದಿ, ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಕ್ತದಾನ ಶಿಬಿರಕ್ಕಾಗಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಎಲ್ಲ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ರಕ್ತದಾನ ನಡೆಯಲಿದೆ. ರಕ್ತದಾನಕ್ಕೆ ಬರುವ ಎಲ್ಲರಿಗೂ ಮೂಲಸೌಕರ್ಯಗಳಾದ ಕುಡಿಯುವ ನೀರು, ಊಟ, ಉಪಹಾರ, ವೈದ್ಯಕೀಯ ತಪಾಸಣೆ, ಆರೋಗ್ಯದ ಮಾರ್ಗದರ್ಶನ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಜತೆಗೆ ದಾನಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.

ಮಕ್ಕಳಿಗೆ ಶಿಕ್ಷಣ ನೀಡಿ ಉತ್ತಮ ಜೀವನ ರೂಪಿಸಿಕೊಳ್ಳಲು ನೆರವಾಗುವ ಶಿಕ್ಷಕರಿಗೆ ಗೌರವ ನಮನ ಸಲ್ಲಿಸುವ ಉದ್ದೇಶದಿಂದ ಜಿಲ್ಲಾದ್ಯಂತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಈ ಒಂದು ಸಮಾಜಮುಖಿ ಕಾರ್ಯಕ್ರಮದಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

ರಕ್ತದಾನ ಶಿಬಿರ ನಡೆಯಲಿರುವ ಕೇಂದ್ರಗಳು:

ತಾಲೂಕು (ಸ್ಥಳ)

  • ಬೆಳಗಾವಿ: ಬಿಮ್ಸ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಕೆ.ಎಲ್.ಇ. ಆಸ್ಪತ್ರೆ, ಎಸ್.ಬಿ.ಜಿ. ಆಯುರ್ವೇದಿಕ ಮೆಡಿಕಲ್ ಕಾಲೇಜ್ ಗಣೇಶಪುರ, ಸರ್ಕಾರಿ ಕನ್ನಡ ಶಾಲೆ (ನಂ.26) ವಿಶ್ವೇಶ್ವರಯ್ಯ ನಗರ ಬೆಳಗಾವಿ.
  • ಅಥಣಿ: ಆರ್.ಎಚ್. ಕುಲಕರ್ಣಿ ಸಭಾಭವನ ಅಥಣಿ
  • ಕಾಗವಾಡ: ಕೆ.ಆರ್.ಇ.ಎಸ್. ಸಭಾಭವನ ಐನಾಪುರ
  • ಬೈಲಹೊಂಗಲ: ತಾಲೂಕಾ ಆಸ್ಪತ್ರೆ ಬೈಲಹೊಂಗಲ
  • ಕಿತ್ತೂರು: ರಾಣಿ ಚನ್ನಮ್ಮ ಸಭಾಭವನ ಕಿತ್ತೂರ.
  • ಖಾನಾಪುರ: ಮಂಗಲ ಕಾರ್ಯಾಲಯ ಪಟ್ಟಣ ಪಂಚಾಯತ ಖಾನಾಪುರ, ಸಮುದಾಯ ಆರೋಗ್ಯ ಕೇಂದ್ರ ನಂದಗಡ
  • ಯರಗಟ್ಟಿ: ಸರ್ಕಾರಿ ಆಸ್ಪತ್ರೆ ಯರಗಟ್ಟಿ
  • ಸವದತ್ತಿ: ಎಂ.ಎಲ್.ಎ. ಮಾಡಲ್ ಹಿರಿಯ ಪ್ರಾಥಮಿಕ ಶಾಲೆ ಗುರ್ಲಹೊಸೂರ
  • ರಾಮದುರ್ಗ: ಗುರುಭವನ ವಿದ್ಯಾಚೇತನ ಶಾಲೆ, ರಾಮದುರ್ಗ, ಬೆಂಬಳಗಿ ಪದವಿ ಕಾಲೇಜ್ ರಾಮದುರ್ಗ
  • ಚಿಕ್ಕೋಡಿ: ಡಯಟ್ ಕಾಲೇಜ್ ಸಭಾಭವನ ಚಿಕ್ಕೋಡಿ
  • ನಿಪ್ಪಾಣಿ: ಸರ್ಕಾರಿ ಆಸ್ಪತ್ರೆ ನಿಪ್ಪಾಣಿ
  • ಗೋಕಾಕ: ತಾಲೂಕಾ ಆಸ್ಪತ್ರೆ ಗೋಕಾಕ,
  • ಮೂಡಲಗಿ: ಕೆ.ಎಸ್. ಸೋನವಾಲಕರ್ ಸರ್ಕಾರಿ ಪ್ರೌಢಶಾಲೆ ಮೂಡಲಗಿ
  • ಹುಕ್ಕೇರಿ: ತಾಲೂಕ ಪಂಚಾಯತ ಸಭಾಭವನ ಹುಕ್ಕೇರಿ, ಸರ್ಕಾರಿ ಆಸ್ಪತ್ರೆ ಸಂಕೇಶ್ವರ, ಸರ್ಕಾರಿ ಆಸ್ಪತ್ರೆ ಯಮಕನಮರಡಿ.
  • ರಾಯಬಾಗ: ಸರ್ಕಾರಿ ಆಸ್ಪತ್ರೆ ರಾಯಬಾಗ, ಸರ್ಕಾರಿ ಆಸ್ಪತ್ರೆ ಹಾರೂಗೇರಿ.