ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ

Bengaluru Power Cut: ಬೆಂಗಳೂರಿನ ಪದ್ಮನಾಭನಗರ ಉಪಕೇಂದ್ರ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ಸೆ.19ರಂದು ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ

-

Profile Siddalinga Swamy Sep 18, 2025 7:14 PM

ಬೆಂಗಳೂರು: ಪದ್ಮನಾಭನಗರ ಉಪಕೇಂದ್ರ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ಸೆ.19ರಂದು ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು

ಬನಗಿರಿನಗರ, ಪಾಪಯ್ಯ ಗಾರ್ಡನ್, ಬಾಲಾಜಿ ಕಲ್ಯಾಣ ಮಂಟಪ ಸುತ್ತಮುತ್ತ, ಸಿದ್ದಮ್ಮ & ಸಿದ್ದಯ್ಯ ರೆಡ್ಡಿ ಏರಿಯಾ, ಜಯನಗರ ವಿಭಾಗ ಕಛೇರಿ, 30ನೇ ಮೇನ್, 30ನೇ ಕ್ರಾಸ್, ಬಿ.ಎನ್. ಎಂ. ಕಾಲೇಜ್, ಬಿ.ಡಿ.ಎ. ಕಾಂಪ್ಲೆಕ್ಸ್, ದೇವಗಿರಿ ದೇವಸ್ಥಾನ, ಬಿ.ಎಸ್.ಎನ್.ಎಲ್. ಕಛೇರಿ, ಬನಶಂಕರಿ 2ನೇ ಹಂತ, ಎಸ್. ಎಲ್.ವಿ ಹೋಟೆಲ್‌ನಿಂದ 24ನೇ ಕ್ರಾಸ್, ಉಪಹಾರ ಹೋಟೆಲ್, 24ನೇ ಕ್ರಾಸ್, ಚನ್ನಮ್ಮನಕೆರೆ ಅಚ್ಚುಕಟ್ಟು, ಮಂಜುನಾಥ ಕಾಲೋನಿ, ಬಿ.ಎಂ.ಟಿ.ಸಿ. ಡಿಪೋ, ರಾಜೀವ್ ನಗರ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಪದ್ಮನಾಭನಗರ, ರಾಘವೇಂದ್ರ ಲೇಔಟ್, 18ನೇ ಮೇನ್ ಟೆಲಿಫೋನ್ ಎಕ್ಸ್‌ಚೇಂಜ್, ಕಿಡ್ನಿ ಫೌಂಡೇಶನ್, ಮಹಾರಾಜ ಆಸ್ಪತ್ರೆ, ಲಕ್ಷೀಕಾಂತ ಕಲ್ಯಾಣ ಮಂಟಪ, ಪುಟ್ಟಲಿಂಗಯ್ಯ ರಸ್ತೆ, ಪದ್ಮನಾಭನಗರ, ಲಕ್ಷೀಕಾಂತ ಕಲ್ಯಾಣ ಮಂಟಪ, ಶ್ರವಂತಿ ಅಪಾರ್ಟ್ಮೆಂಟ್, ಆರ್.ಕೆ. ಲೇಔಟ್, ಕದಿರೇನಹಳ್ಳಿ, ಯಾರಬ್ ನಗರ, 9ನೇ ಮೇನ್, ಮೋನೋ ಟೈಪ್, ಟೀಚರ್ಸ್ ಕಾಲೋನಿ, ಕಾವೇರಿ ನಗರ, ಡಾ. ಅಂಬೇಡ್ಕರ್ ನಗರ, ಎಂ.ಎಂ. ಇಂಡಸ್ಟಿಯಲ್ ಏರಿಯ, ಪೋಸ್ಟ್ ಆಫೀಸ್, ಎಂಎಂಐ, ಇಂಡೋ ಅಮೇರಿಕನ್, ಉಮಾ ಮಹೇಶ್ವರಿ ದೇವಸ್ಥಾನ 15ರಿಂದ 17ನೇ ಡಿ ಕ್ರಾಸ್‌ ವರೆಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಬರೋಬ್ಬರಿ 13,217 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ IBPS

ಬ್ಯಾಂಕ್‌ ಉದ್ಯೋಗ (Bank Jobs) ಹೊಂದಬೇಕು ಎಂದು ಕನಸು ಕಾಣುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (IBPS) ವಿವಿಧ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಬರೋಬ್ಬರಿ 13,217 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (IBPS Recruitment 2025). ಆಫೀಸ್‌ ಅಸಿಸ್ಟಂಟ್‌, ಆಫೀಸರ್‌ ಮುಂತಾದ ಖಾಲಿ ಇದ್ದು, ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು (Job Guide). ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಸೆಪ್ಟೆಂಬರ್‌ 21.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಆಫೀಸ್‌ ಅಸಿಸ್ಟಂಟ್‌-7,972 ಹುದ್ದೆ, ವಿದ್ಯಾರ್ಹತೆ: ದೇಶದ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ

ಆಫೀಸರ್‌ ಸ್ಕೇಲ್‌-I (ಅಸಿಸ್ಟಂಟ್‌ ಮ್ಯಾನೇಜರ್‌)-3,907 ಹುದ್ದೆ, ವಿದ್ಯಾರ್ಹತೆ: ದೇಶದ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ

ಆಫೀಸರ್‌ ಸ್ಕೇಲ್‌-II (ಮ್ಯಾನೇಜರ್‌)-1,139 ಹುದ್ದೆ, ವಿದ್ಯಾರ್ಹತೆ: ಸಿಎ, ಪದವಿ, ಎಲ್‌ಎಲ್‌ಬಿ, ಎಂಬಿಎ

ಆಫೀಸರ್‌ ಸ್ಕೇಲ್‌-III (ಸೀನಿಯರ್‌ ಮ್ಯಾನೇಜರ್‌)-199 ಹುದ್ದೆ, ವಿದ್ಯಾರ್ಹತೆ: ದೇಶದ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ

ವಯೋಮಿತಿ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 40 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಅರ್ಜಿ ಶುಲ್ಕವಾಗಿ ಜನರಲ್‌ / ಒಬಿಸಿ / ಇಡಬ್ಲ್ಯುಎಸ್‌ ಅಭ್ಯರ್ಥಿಗಳು 850 ರೂ. ಮತ್ತು ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಬಿಡಿ / ಇಎಸ್‌ಎಂ / ಡಿಇಎಸ್‌ಎಂ ಅಭ್ಯರ್ಥಿಗಳು 175 ರೂ. ಪಾವತಿಸಬೇಕು. ಪಾವತಿ ವಿಧಾನ: ಆನ್‌ಲೈನ್‌.

ಆಯ್ಕೆ ವಿಧಾನ

ಪ್ರಿಲಿಮಿನರಿ ಪರೀಕ್ಷೆ, ಮೇನ್‌ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಪ್ರಿಲಿಮಿನರಿ ಪರೀಕ್ಷೆ ನವೆಂಬರ್‌ / ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಮೇನ್‌ ಪರೀಕ್ಷೆ ಡಿಸೆಂಬರ್‌ / ಫೆಬ್ರವರಿಯಲ್ಲಿ ನಡೆಯಲಿದೆ.

IBPS Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

ಆಫೀಸ್‌ ಅಸಿಸ್ಟಂಟ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://ibpsreg.ibps.in/rrbxivaug25/) ಆಫೀಸರ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ (https://ibpsreg.ibps.in/rrbxivscag25 ಹೆಸರು ನೋಂದಾಯಿಸಿ. ಲಾಗಿನ್‌ ಆಗಿ. ಎಚ್ಚರಿಕೆಯಿಂದ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ. ಅಗತ್ಯ ಡಾಕ್ಯುಮೆಂಟ್‌, ಸರಿಯಾದ ಅಳತೆಯಲ್ಲಿ ಫೋಟೊ ಅಪ್‌ಲೋಡ್‌ ಮಾಡಿ. ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ). ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ. ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ ವಿಳಾಸ: https://ibps.in/ಗೆ ಭೇಟಿ ನೀಡಿ.

ಈ ಸುದ್ದಿಯನ್ನೂ ಓದಿ | Navaratri Fashion 2025: ನವರಾತ್ರಿ ಡಿಸೈನರ್‌ವೇರ್ಸ್‌ ಸೆಲೆಕ್ಷನ್‌ಗೆ ಇಲ್ಲಿದೆ 5 ಐಡಿಯಾ