ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಭಿಷೇಕ್ ಶರ್ಮಾರ ಬ್ಯಾಟಿಂಗ್‌ ಸಕ್ಸಸ್‌ನ ಶ್ರೇಯ ರೋಹಿತ್‌ ಶರ್ಮಾಗೆ ಸಲ್ಲಬೇಕೆಂದ ಅಜಯ್‌ ಜಡೇಜಾ!

ಪ್ರಸ್ತುತ ಟೀಮ್ ಇಂಡಿಯಾದ ಸ್ಟಾರ್ ಓಪನರ್ ಅಭಿಷೇಕ್ ಶರ್ಮಾ ಅವರು ಏಷ್ಯಾ ಕಪ್ ಟೂರ್ನಯಲ್ಲಿ ಅದ್ಭುತ ಪ್ರದರ್ಶನವನ್ನು ತೋರುತ್ತಿದ್ದಾರೆ. ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ಅಜಯ್ ಜಡೇಜಾ ಅವರು ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್‌ ಯಶಸ್ಸಿನ ಹಿಂದೆ ರೋಹಿತ್‌ ಶರ್ಮಾರ ಕೊಡುಗೆ ಇದೆ ಎಂದು ಹೇಳಿದ್ದಾರೆ.

ಅಭಿಷೇಕ್‌ ಶರ್ಮಾರ ಯಶಸ್ಸಿನ ಶ್ರೇಯ ರೋಹಿತ್‌ಗೆ ಸಲ್ಲಬೇಕು: ಅಜಯ್‌ ಜಡೇಜಾ!

ಅಭಿಷೇಕ್‌ ಶರ್ಮಾ ಅವರ ಯಶಸ್ಸಿನ ಶ್ರೇಯ ರೋಹಿತ್‌ ಶರ್ಮಾಗೆ ಸಲ್ಲಬೇಕೆಂದ ಅಜಯ್‌ ಜಡೇಜಾ. -

Profile Ramesh Kote Sep 18, 2025 7:56 PM

ದುಬೈ: ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಭಾರತ ತಂಡದ ಪರ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುತ್ತಿರುವ ಆರಂಭಿಕ ಅಭಿಷೇಕ್‌ ಶರ್ಮಾ (Abhishek Sharma) ಅವರನ್ನು ಮಾಜಿ ಕ್ರಿಕೆಟಿಗ ಅಜಯ್‌ ಜಡೇಜಾ (Ajay Jadeja) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಟಿ20ಐ ಕ್ರಿಕೆಟ್‌ನಲ್ಲಿ ಅಭಿಷೇಕ್‌ ಶರ್ಮಾ ಈ ರೀತಿಯ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಲು ಟೀಮ್‌ ಇಂಡಿಯಾ ಮಾಜಿ ನಾಯಕ ರೋಹಿತ್‌ ಶರ್ಮಾ ಕಾರಣ ಎಂದು ಜಡೇಜಾ ಅಭಿಪ್ರಾಯ ಪಟ್ಟಿದ್ದಾರೆ. ರೋಹಿತ್‌ ನಾಯಕನಾಗಿದ್ದಾಗ ತಂಡದಲ್ಲಿ ಆಕ್ರಮಣಕಾರಿ ಪ್ರವೃತ್ತಿಯಲ್ಲಿ ಆಟಗಾರರಲ್ಲಿ ಅಭ್ಯಾಸ ಮಾಡಿಸಿದ್ದಾರೆ. ಇದರ ಫಲವಾಗಿ ಅಭಿಷೇಕ್‌ ಸ್ಪೋಟಕ ಆಟವನ್ನು ಆಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಸೋನಿ ಸ್ಪೋರ್ಟ್ಸ್ ವಾಹಿನಿಲ್ಲಿ ಮಾತನಾಡಿದ ಅಜಯ್ ಜಡೇಜಾ, "ಅವರು (ಅಭಿಷೇಕ್ ಶರ್ಮಾ) ಪ್ರಭಾವಶಾಲಿ ಆಟಗಾರ. ನಾನು ಹೇಳುವುದೇನೆಂದರೆ, ಇಡೀ ತಂಡವು ಅವರ ಯಶಸ್ಸಿನಲ್ಲಿ ಪಾತ್ರ ವಹಿಸಿದೆ ಏಕೆಂದರೆ ನಾವು ಈ ರೀತಿ ಆಡುತ್ತೇವೆ ಎಂದು ಒಪ್ಪಿಕೊಳ್ಳಲು, ರೋಹಿತ್ ಶರ್ಮಾ ಇದನ್ನು ಹುಟ್ಟುಹಾಕಿದರು. ಅವರು ಇದೀಗ ತಂಡದಲ್ಲಿಲ್ಲ. ಆದರೆ ಅವರು ಈ ಅಭ್ಯಾಸವನ್ನು ತಂಡದಲ್ಲಿ ಮಾಡಿಸಿದ್ದಾರೆ," ಎಂದು ತಿಳಿಸಿದ್ದಾರೆ.

Asia Cup 2025: ಈ ಬಾರಿ ಪ್ರಶಸ್ತಿ ಗೆಲ್ಲುವ ತಮ್ಮ ನೆಚ್ಚಿನ ತಂಡವನ್ನು ಆರಿಸಿದ ಜೋನಾಥನ್‌ ಟ್ರಾಟ್!

"ಇಲ್ಲದಿದ್ದರೆ, ಎರಡು ವರ್ಷಗಳ ಹಿಂದೆ, ಆರು ವರ್ಷಗಳ ಹಿಂದೆ, ಅಥವಾ 10 ವರ್ಷಗಳ ಹಿಂದೆ ಅವರು ಔಟ್ ಆದ ರೀತಿಯನ್ನು ನೋಡಿದರೆ, ಅವರು 30 ರನ್ ಗಳಿಸಿ ಔಟ್ ಆದ ಬಗ್ಗೆ ಪ್ರಶ್ನಿಸಲ್ಪಟ್ಟಿರಬಹುದು. ಮುಖ್ಯ ವಿಷಯವೆಂದರೆ ಅವರು ಹೊಡೆಯಲು ನೋಡಿದಾಗ ಮಾತ್ರ ಅವರು ಔಟ್ ಆಗುತ್ತಿದ್ದರು. ಅವರು ಪಡೆಯುತ್ತಿರುವ ಆತ್ಮವಿಶ್ವಾಸ, ತಂಡವು ಅವರ ಆಟದ ಶೈಲಿಯನ್ನು ಮೆಚ್ಚುತ್ತಿದೆ ಮತ್ತು ತಂಡದ ಎಂಟನೇ ಬ್ಯಾಟ್ಸ್‌ಮನ್ ಅವರನ್ನು ಈ ರೀತಿ ಬ್ಯಾಟಿಂಗ್ ನಡೆಸಲು ಅವಕಾಶವನ್ನು ನೀಡುತ್ತಿದೆ," ಎಂದಿದ್ದಾರೆ.

ಅಭಿಷೇಕ್ ಶರ್ಮಾ ಪರ ಬ್ಯಾಟ್ ಬೀಸಿದ ಅಭಿಷೇಕ್ ನಾಯರ್

ಭಾರತ ತಂಡದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಮಾತನಾಡಿ, ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ರಾಷ್ಟ್ರೀಯ ತಂಡದಲ್ಲಿಲ್ಲದಿದ್ದರೂ, ಭಾರತದ ಯಾವುದೇ ಪಂದ್ಯಗಳನ್ನು ಆಡಲು ಸದಾ ಎದುರು ನೋಡುತ್ತಿದ್ದರು. ಅಭಿಷೇಕ್‌ ಶರ್ಮಾ ಪ್ರತಿಭೆಯನ್ನು ಹೊಂದಿದ್ದರು ಮಾತ್ರವಲ್ಲದೆ, ಅದನ್ನು ಮುಂದುವರಿಸುವ ಶ್ರದ್ಧೆಯನ್ನೂ ಹೊಂದಿದ್ದರು ಎಂದು ಕೋಲ್ಕತಾ ನೈಟ್‌ ರೈಡರ್ಸ್‌ ಕೋಚ್‌ ತಿಳಿಸಿದ್ದಾರೆ.

Asia Cup 2025: ಭಾರತ vs ಪಾಕ್‌ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಮತ್ತೆ ವೇದಿಕೆ ಸಜ್ಜು

ಈ ಕುರಿತು ಸುದೀರ್ಘವಾಗಿ ಮಾಹಿತಿ ಹಂಚಿಕೊಂಡಿರುವ ಅಭಿಷೇಕ್ ನಾಯರ್, "ಅವರು ಪಂದ್ಯಗಳನ್ನು ಆಡಲು ಎಲ್ಲೆಡೆ ಹೋಗುತ್ತಾರೆ. ಅವರು ಭಾರತಕ್ಕಾಗಿ ಆಡದಿದ್ದಾಗ, ಅದು ದೆಹಲಿಯಾಗಲಿ, ಡೆಹ್ರಾಡೂನ್ ಆಗಲಿ, ರಾಜಸ್ಥಾನವಾಗಲಿ, ಮುಂಬೈ ಆಗಲಿ, ಕ್ರಿಕೆಟ್ ಮೈದಾನವಿರಲಿ ಅವಕಾಶ ಸಿಗುವಲ್ಲೆಲ್ಲಾ ಅಭಿಷೇಕ್ ಶರ್ಮಾ ಅಭ್ಯಾಸ ಮಾಡಲು ಅಲ್ಲಿಗೆ ಹೋಗುತ್ತಾರೆ. ಅವರಲ್ಲಿ ಪ್ರತಿಭೆ ಇಲ್ಲ, ಆದರೆ ಅವರು ಶ್ರದ್ಧೆಯುಳ್ಳವರೂ ಆಗಿದ್ದಾರೆ. ಕ್ರಿಕೆಟಿಗನಾಗಬೇಕೆಂಬ ಮನಸ್ಥಿತಿ ಅವರಿಗೆ ಅತ್ಯಂತ ಮುಖ್ಯವಾಗಿದೆ," ಎಂದು ಹೇಳಿದ್ದಾರೆ.

ಬ್ಯಾಟರ್ ಆಗಿ ಅಭಿಷೇಕ್ ಶರ್ಮಾ ಅವರ ವಿಕಾಸದ ಬಗ್ಗೆ ಅಭಿಷೇಕ್ ನಾಯರ್ ಮಾತನಾಡಿದ್ದು, ಅಭಿಷೇಕ್ ಶರ್ಮಾ ಇಂದಿನ ಬ್ಯಾಟ್ಸ್‌ಮನ್ ಆಗಿ ಹೇಗೆ ಬೆಳೆದರು ಎನ್ನುವುದನ್ನು ವಿವರಿಸಿದರು. 25 ವರ್ಷದ ಆಟಗಾರ ದೊಡ್ಡ ಬೌಂಡರಿಗಳ ಮೇಲೆ ಅಭ್ಯಾಸ ಮಾಡುವ ಬಗ್ಗೆ ಮತ್ತು ಮುಖ್ಯವಾಗಿ ಸಿಕ್ಸರ್‌ಗಳನ್ನು ಹೊಡೆಯುವ ತನ್ನ ಕೌಶಲದ ಗುಟ್ಟನ್ನು ನಾಯರ್ ಬಹಿರಂಗಪಡಿಸಿದ್ದಾರೆ